ಮನೆಯಿಂದ ಹೊರ ಬರುತ್ತಿದ್ದಂತೆ ಬಿಗ್‌ ಬಾಸ್‌ ವಿನ್ನರ್‌ ಯಾರು ಎಂಬುದನ್ನು ತಿಳಿಸಿದ ನೀತು ವನಜಾಕ್ಷಿ.. ಅದಾಗಲೇ ಎಲ್ಲಾ ಸದಸ್ಯರಿಗೂ ವಿನ್ನರ್ ಯಾರೆಂದು ಗೊತ್ತಾಗಿದೆ..

0 views

ಬಿಗ್‌ ಬಾಸ್‌ ಸೀಸನ್‌ ಹತ್ತು ನೋಡು ನೋಡುತ್ತಲೇ ಐವತ್ತು ದಿನಗಳನ್ನು ಪೂರೈಸಿದ್ದು ಐವತ್ತನೇ ದಿನದ ಆಟ ಮುಗಿಸಿ ನೀತು ವನಜಾಕ್ಷಿ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದಿದ್ದಾರೆ.. ಇನ್ನು ಬಿಗ್‌ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ ಈ ಸೇಸನ್‌ ನ ಬಿಗ್‌ ಬಾಸ್‌ ವಿನ್ನರ್‌ ಯಾರೆಂದು ತಿಳಿಸಿದ್ದು ಅದಾಗಲೇ ಎಲ್ಲರಿಗೂ ವಿನ್ನರ್‌ ಯಾರೆಂದು ಗೊತ್ತಿದೆ ಎಂದಿದ್ದಾರೆ.. ಹೌದು ಬಿಗ್‌ ಬಾಸ್‌ ಸೇಸನ್‌ ಹತ್ತರಲ್ಲಿ ಹದಿನೇಳು ಸ್ಪರ್ಧಿಗಳು ಎಂಟ್ರಿ ನೀಡಿದ್ದು ಮಂಗಳಮುಖಿಯಾಗಿದ್ದಂತಹ ನೀತು ವನಜಾಕ್ಷಿ ಅವರಿಗೂ ಸಹ ಈ ಸೇಸನ್‌ ನಲ್ಲಿ ಬಿಗ್‌ ಬಾಸ್‌ ನಲ್ಲಿ ಪಾಲ್ಗೊಳಲು ಅವಕಾಶ ದೊರೆತಿತ್ತು.. ಮಂಗಳಮುಖಿಯಾದರೂ ಸಹ ಸ್ವಂತ ಹೊಟೆಲ್‌ ಉದ್ಯಮ ನಡೆಸುತ್ತಾ ಸ್ವಾಭಿಮಾನದಿಂದ ಬದುಕುತ್ತಿದ್ದ ನೀತು ಅವರು ಬಿಗ್‌ ಬಾಸ್‌ ಮನೆಗೆ ಬಂದಾಗ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.. ‌

ಇನ್ನು ದಿನ ಕಳೆದಂತೆ ನೀತು ಸಹ ಬಿಗ್‌ ಬಾಸ್‌ ಎಲ್ಲಾ ಸದಸ್ಯರಂತೆ ಜಗಳಗಳಲ್ಲಿ ಪಾಲ್ಗೊಂಡಿದ್ದು ಕೆಲವೊಮ್ಮೆ ಟ್ರೋಲ್‌ ಕೂಡ ಆಗಿದ್ದುಂಟು.. ಆದರೂ ಸಹ ಐವತ್ತು ದಿನಗಳ ಕಾಲ ಬಿಗ್‌ ಬಾಸ್‌ ಮನೆಯಲ್ಲಿ ಉಳಿಯುವಲ್ಲಿ ಯಶಸ್ವಿಯೂ ಆದರು.. ಎರಡು ಬಾರಿ ಕ್ಯಾಪ್ಟನ್‌ ಕೂಡ ಆದರು.. ಎರಡನೇ ಬಾರಿಗೆ ಕ್ಯಾಪ್ಟನ್‌ ಆದರೂ ಸಹ ಎಲಿಮಿನೇಷನ್‌ ನಿಂದ ಪಾರಾಗಲು ಸಾಧ್ಯವಾಗದ ಕಾರಣ ಬಿಗ್‌ ಬಾಸ್‌ ಮನೆಯಿಂದ ಹೊರ ನಡೆಯುವಂತಾಯಿತು.. ಇತ್ತ ಬಿಗ್‌ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ ತಾವು ಬಿಗ್‌ ಬಾಸ್‌ ನಿಂದ ಎಲಿಮಿನೇಟ್‌ ಆಗಲು ನಿಜವಾದ ಕಾರಣ ಏನು ಎಂಬುದನ್ನು ತಿಳಿಸಿದ್ದು ಈ ಸೀಸನ್‌ ನ ವಿನ್ನರ್‌ ಯಾರೆಂಬುದನ್ನು ಸಹ ತಿಳಿಸಿದ್ದಾರೆ.. ಹೌದು ಬಿಗ್ ಬಾಸ್ ನಿಂದ ಹೊರ ಬಂದಿದ್ದು ಬಹಳ ಬೇಸರ ಇದೆ.. ಆದರೆ ಐವತ್ತು ದಿನಗಳ ಕಾಲ ಬಿಗ್ ಬಾಸ್ ನಲ್ಲಿ ಇದ್ದದ್ದು ನನಗೆ ಖುಷಿ ಇದೆ.. ಹಾಗೆಯೇ ಆ ಎಲ್ಲಾ ಸ್ಪರ್ಧಿಗಳ ನಡುವೆ ಅಷ್ಟು ದಿನಗಳ ಕಾಲ ನಾನು ಇದ್ದದ್ದಕ್ಕೆ ನನಗೆ ಹೆಮ್ಮೆ ಇದೆ.. ಬಹಳಷ್ಟು ಅನುಭವಗಳ ಜೊತೆಗೆ ನಾನು ಮನೆಗೆ ಹೋಗುತ್ತಿದ್ದೇನೆ.. ಇವೆಲ್ಲವನ್ನೂ ನಾನು ನನ್ನ ಜೀವನದಲ್ಲಿ ಒಳ್ಳೆಯ ರೀತಿ ಬಳಸಿಕೊಳ್ಳುತ್ತೇನೆ ಎಂದಿದ್ದಾರೆ..

ಅಷ್ಟೇ ಅಲ್ಲದೇ ನಾನು ಕೆಲ ವಿಚಾರಗಳಲ್ಲಿ ಹಿಂದೇಟು ಹಾಕಿದೆ.. ಶುರುವಿನಲ್ಲಿ ನಾನು ಸಹ ಜಗಳ ಮಾಡುತ್ತಿದ್ದೆ.. ಸರಿಯಾದ ವಿಚಾರಕ್ಕೆ ನಾನು ಆ ರೀತಿ ಮಾಡುತ್ತಿದ್ದೆ.. ಆದರೆ ನಾನು ಹೊರಗೆ ಬೇರೆ ರೀತಿ ಬಿಂಬಿತವಾಗ್ತಾ ಇದ್ದೇನಾ ಎಂದು ನನಗೆ ಅನಿಸೋಕೆ ಶುರುವಾಯ್ತು.. ಆಗ ನಾನು ಜಗಳ ಆಡೋದನ್ನು ನಿಲ್ಲಿಸಿದೆ.. ಆ ಸಮಯದಿಂದ ನನ್ನ ನಿಜವಾದ ವ್ಯಕ್ತಿತ್ವ ತೋರಿಸಲು ಸಾಧ್ಯವಾಗಲಿಲ್ಲ.. ಟಾಸ್ಕ್ ಅಂತ ಬಂದರೂ ಕೂಡ ಅವರೆಲ್ಲರೂ ಹೇಳಿದ್ದನ್ನೇ ನಾನಿ ಒಪ್ಪಿಕೊಳ್ಳುತ್ತಿದ್ದೆ.. ಅಲ್ಲಿ ನಾನು ಇನ್ನು ಸ್ವಲ್ಪ ಚುರುಕಾಗಿದ್ದರೆ ಮತ್ತಷ್ಟು ದಿನ ಬಿಗ್ ಬಾಸ್ ನಲ್ಲಿ ಉಳಿಯಬಹುದಾಗಿತ್ತು.. ನನಗೆ ಈಗ ಇನ್ನೊಂದು ಅವಕಾಶ ಕೊಟ್ಟರೆ ಖಂಡಿತ ಇನ್ನೂ ಚೆನ್ನಾಗಿ ಆಡುತ್ತೇನೆ ಎಂದಿದ್ದಾರೆ.. ಇನ್ನು ನಾನು ಎಲಿಮಿನೇಟ್ ಆಗುತ್ತೇನೆ ಎಂದು ನನಗೆ ಮೊದಲೇ ಗೊತ್ತಿತ್ತು.. ಎರಡು ವಾರಗಳಿಮ್ದ ನನ್ನ ಆಟ ಅಷ್ಟು ಸ್ಟ್ರಾಂಗ್ ಇರಲಿಲ್ಲ.. ಏನೂ ಮಾಡೋಕೆ ಸಾಧ್ಯವಿಲ್ಲ‌‌.. ಹೊರಗೆ ಬಂದೆ ಅಷ್ಟೇ‌‌.. ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಬಹಳ ಖುಷಿ ಇದೆ‌‌.. ಅದೇ ನನಗೆ ಟ್ರೋಫಿ ಸಿಕ್ಕಷ್ಟು ಸಂತೋಷ ಆಗಿತ್ತು‌..

ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ನಿಜವಾದ ಆಟ ಆಡ್ತಾ ಇದ್ದಾನೆ.. ಅವನು ನಾಟಕ ಆಡೋದಿಲ್ಲ.. ಸ್ನೇಹಿತ್ ತುಂಬಾ ಫೇಕ್ ಆಗಿ ಆಡ್ತಾ ಇದ್ದಾನೆ.. ಅವನು ಕ್ಯಾಮರಾಗಾಗಿಯೇ ಒಂದಲ್ಲಾ ಒಂದು ಚಟುವಟಿಕೆ ಮಾಡ್ತಾನೆ ಅನ್ಸತ್ತೆ.. ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಅರ್ಥ ಆಗಿದೆ.‌ ಟಾಪ್ ಐದು ಸ್ಪರ್ಧಿಗಳಾಗಿ ಡ್ರೋನ್ ಪ್ರತಾಪ್.. ತುಕಾಲಿ ಸಂತು.. ಸಂಗೀತಾ.. ಕಾರ್ತಿಕ್‌‌.. ತನಿಷಾ ಬರ್ತಾರೆ.. ಅದರಲ್ಲಿ ಡ್ರೋನ್ ಪ್ರತಾಪ್ ವಿನ್ ಆಗ್ತಾನೆ.. ಡ್ರೋನ್ ಪ್ರತಾಪ್ ನೇ ಈ ಸೀಸನ್ ನ ವಿನ್ನರ್ ಎಂದು ಎಲ್ಲರಿಗೂ ಅನಿಸಿದೆ ಎಂದಿದ್ದಾರೆ.. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬರುವ ಎಲ್ಲರೂ ಸಹ ಡ್ರೋನ್ ಪ್ರತಾಪ್ ವಿನ್ನರ್ ಎನ್ನುವ ಮಾತುಗಳನ್ನು ಆಡುತ್ತಿದ್ದು ಇನ್ನು ಐವತ್ತು ದಿನಗಳಲ್ಲಿ ಯಾರು ಯಾವ ರೀತಿ ಆಡುವರೋ ಕಾದು ನೋಡಬೇಕಿದೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.