ಬಿಗ್‌ ಬಾಸ್‌ ಮನೆಗೆ ಮತ್ತೊಂದು ಎಂಟ್ರಿ.. ಬೆಚ್ಚಿಬಿದ್ದ ಮನೆಯ ಸದಸ್ಯರು..

0 views

ಬಿಗ್‌ ಬಾಸ್‌ ಸೇಸನ್‌ ಹತ್ತು ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗಿದ್ದು ಇಷ್ಟೂ ಸೀಸನ್‌ ಗಳಲ್ಲಿ ಈ ಸೀಸನ್‌ ಅತ್ಯಂತ ಕೆಟ್ಟ ಸೀಸನ್‌ ಎಂದು ಕೆಲವರು ವಿಶ್ಲೇಷಿಸಿದರೆ ಮತ್ತೆ ಕೆಲವರು ಇದೇ ಸೀಸನ್‌ ಅತ್ಯಂತ ಮನರಂಜನೆಯಿಂದ ಕೂಡಿರುವುದು ಎನ್ನುತ್ತಿದ್ದಾರೆ..ಇನ್ನು ರೇಟಿಂಗ್ ವಿಚಾರಕ್ಕೆ ಬಂದರೆ ಕಳೆದ ಅಷ್ಟೂ ಸೀಸನ್ ಗಳಿಗಿಂತ ಹೆಚ್ಚು ಟಿ ಆರ್ ಪಿ ಯನ್ನು ಈ ಸೀಸನ್ ಪಡೆದುಕೊಂಡಿದ್ದು.. ವಾರವಾರಕ್ಕೂ ತನ್ನ ರೇಟಿಂಗ್ ಹೆಚ್ಚಿಸಿಕೊಳ್ಳುತ್ತಿದೆ.. ಹೌದು ಕಳೆದ ನಾಲ್ಕೈದು ಸೀಸನ್ ಗಳು ಅದ್ಯಾಕೋ ನಾಲ್ಕರಿಂದ ಐದು ಅಷ್ಟೇ ರೇಟಿಂಗ್ ಪಡೆಯುತ್ತಿತ್ತು‌.. ಆದರೆ ಈ ಸೀಸನ್ ಬರೋಬ್ಬರಿ ಒಂಭತ್ತು ಟಿವಿಆರ್ ಪಡೆಯುವ ಮೂಲಜ ಅತ್ತ ಜೀ ಕನ್ನಡಕ್ಕೆ ಸರಿಯಾದ ಪೈಪೋಟಿಯನ್ನು ನೀಡಿದೆ ಎನ್ನಬಹುದು.. ಇನ್ನು ಇದೆಲ್ಲದಕ್ಕೂ ಮನೆಯಲ್ಲಿ ನಡೆಯುತ್ತಿರುವ ಜಗಳಗಳು ಕಿತ್ತಾಟಗಳು ಸಹ ಒಂದು ರೀತಿಯ ಕಾರಣ ಎಂದರೆ ಸುಳ್ಳಲ್ಲ.. ಅದರಲ್ಲೂ ಪದೇ ಪದೇ ಸ್ಪರ್ಧಿಗಳು ತಪ್ಪು ಮಡುತಿರಲು ಅತ್ತ ವಾರಾಂತ್ಯದಲ್ಲಿ ಸುದೀಪ್ ಅವರು ಬಂದು ಮನೆಯವರನ್ನು ತರಾಟೆಗೆ ತೆಗೆದುಕೊಳ್ಳುವ ರೀತಿ ನೋಡಲೆಂದೇ ಸಾಕಷ್ಟು ಜನ ಬಿಗ್ ಬಾಸ್ ನೋಡುತ್ತಿರೋದುಂಟು..

ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಒಂದಷ್ಟು ಹೊಸ ಹೊಸ ವಿಚಾರಗಳನ್ನು ಸೇರಿಸಿದ್ದು ಕಂಟೆಂಟ್ ಪಡೆಯಲು ಸರಿಯಾದ ಮಾರ್ಗ ಹಿಡಿದಿದ್ದಾರೆನ್ನಬಹುದು‌‌.‌. ಹೌದು ಬಿಗ್ ಬಾಸ್ ಕಳೆದ ಅಷ್ಟೂ ಸೀಸನ್ ಗಳಲ್ಲಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಹೊರಗಿನ ಪ್ರಪಂಚದ ಅರಿವೇ ಗೊತ್ತಾಗದ ಹಾಗೆ ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಳ್ಳುತ್ತಿದ್ದರು.. ಫಿನಾಲೆ ಕೊನೆ ವಾರಗಳಲ್ಲಿ ಮಾತ್ರವೇ ಕುಟುಂಬದವರ ಆಗಮನವಾಗುತಿತ್ತು.. ಅದನ್ನು ಹೊರತು ಪಡಿಸಿ ಬೇರೆ ಯಾವ ಸಮಯದಲ್ಲಿಯೂ ಹೊರಗಿನ ಜನರ ಜೊತೆ ಸಂಪರ್ಕ ಅಸಾಧ್ಯವಾಗಿತ್ತು.. ಆದರೆ ಈ ಸೀಸನ್ ನಲ್ಲಿ ಮಾತ್ರ ವಾರಕ್ಕೊಬ್ಬರು ಸ್ಪೆಷಲ್ ಎಂಟ್ರಿ ಬಿಗ್ ಬಾಸ್ ಮನೆಗೆ ಬರುತ್ತಲೇ ಇದ್ದಾರೆ.. ಹೌದು ಇದು ಬಿಗ್ ಬಾಸ್ ಗೆ ಒಂದಿಷ್ಟು ಟಿ ಆರ್ ಪಿ ತಂದುಕೊಡುವಲ್ಲಿ ಸಹಾಯ ಮಾಡುತ್ತಿರುವುದು ನಿಜವಾದರೂ ಸಹ ಬಿಗ್ ಬಾಸ್ ನ ಮೂಲ ಉದ್ದೇಶ ಅಂದರೆ 98 ದಿನಗಳು ಹೊರಗಿನ ಪ್ರಪಂಚದ ಸಂಪರ್ಕವಿಲ್ಲದೇ ಆ ಮನೆಯೊಳಗೆ ಮಾತ್ರವೇ ಇದ್ದು ಗೆದ್ದು ಬರಬೆಕಿತ್ತು.. ಆದರೆ ಆ ಉದ್ದೇಶ ಇಲ್ಲಿ ಈ ಸೀಸನ್ ನಲ್ಲಿ ಕಾಣುತ್ತಿಲ್ಲ ಎನ್ನಬಹುದು‌‌..

ಬಿಗ್ ಬಾಸ್ ಶುರುವಗುತ್ತಲೇ ಬಿಗ್ ಬಾಸ್ ಮನೆಗೆ ಒಳ್ಲೇ ಹುಡುಗ್ ಪ್ರಥಮ್ ನ ಆಗಮನವಾಯಿತು.. ಅದದ ಬಳಿಕ ಬೃಂದಾವನ ಧರಾವಾಹಿ ತಂಡದವರು ಅತಿಥಿಗಳಾಗಿ ಆಗಮಿಸಿದರು.. ನಂತರ ತಾರಾ ಅವರು ಅದಾದ ಬಳಿಕ ಭಾಗ್ಯಲಕ್ಷ್ಮಿ ಧಾರಾವಾಹಿಯ ಭಾಗ್ಯ ಅವರು ಬಿಗ್ ಬಾಸ್ ಮನೆಗೆ ಬಂದರು.. ಆದರೆ ಸಧ್ಯ ಇದೀಗ ಬಿಗ್ ಬಾಸ್ ಮನೆಗೆ ಮತ್ತೊಂದು ಸ್ಪೆಷಲ್ ಎಂಟ್ರಿ ಆಗಿದೆ. ಹೌದು ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಇಂದು ಬ್ರಹ್ಮಾಂಡ ಗುರೂಜಿ ಎಂಟ್ರಿ ನೀಡುತ್ತಿದ್ದು ಮನೆಯ ಮಿಕ್ಕ ಸದಸ್ಯರನ್ನು ಒಂದು ರೀತಿ ರುಬ್ಬುತ್ತಿದ್ದಾರೆನ್ನಬಹುದು.. ಈ ಹಿಂದೆ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದ ಬ್ರಹ್ಮಾಂಡ ಗುರೂಜಿ ಹಲಾವರು ವಿಚಾರಗಳಿಗೆ ಗಮನ ಸೆಳೆದಿದ್ದರು.. ಅವರು ಬಳಸುವ ಭಾಷೆ ಬಹಳಷ್ಟು ಇರಿಸು ಮುರಿಸು ತಂದರೂ ಕೂಡ ಅವರು ಬಹಳಷ್ಟು ಜ್ನಾರಿಗೆ ಇಷ್ಟವಾಗುತ್ತಿದ್ದರೆನ್ನಬಹುದು‌.

ಇನ್ನು ನಿನ್ನೆ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು.. ಇಶಾನಿ ಹಾಗೂ ಭಾಗ್ಯಶ್ರೀ ಅವರು ಬಿಗ್ ಬಾಸ್ ಮನೆಯಿಂದ ಹೊರ ನಡೆದದ್ದಾಗಿದೆ.. ಇತ್ತ ಉಳಿದವರು ನಾವು ಮತ್ತೊಂದು ವಾರ ಸೇಫ್ ಎಂದುಕೊಳ್ಳುತ್ತಿರುವಾಗಲೇ ಮನೆಯ ಮುಖ್ಯದ್ವಾರದ ಮೂಲಕ ಬ್ರಹ್ಮಾಂಡ ಗುರೂಜಿಯ ಎಂಟ್ರಿಯಾಗಿದ್ದು ಎಲ್ಲಾ ಸದಸ್ಯರು ಶಾಕ್ ಆಗಿರೋದಂತೂ ಸತ್ಯ.. ಇನ್ನು ಮನೆಗೆ ಬಂದ ಬ್ರಹ್ಮಾಂಡ ಗುರೂಜಿ ಅದಾಗಲೇ ಮಸ್ತಿ ಆರಂಭಿಸಿದ್ದು ಮನೆಯ ಸದಸ್ಯರು ಕಕ್ಕಾಬಿಕ್ಕಿಯಾದರು.. ಅಷ್ಟೇ ಅಲ್ಲದೇ ಇವರು ಯಾಕೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ ದಯವಿಟ್ಟು ತಿಳಿಸಿ ಎಂದು ಕ್ಯಾಮರಾ ಮುಂದೆ ಕೇಳಿಕೊಂಡಿದ್ದೂ ಉಂಟು.. ಇನ್ನು ಇತ್ತ ಎಂದಿನಂತೆ ಮುಂಡಾಮೊಛ್ತು ಎಂದುಕೊಂಡೂ ತಮ್ಮ ಬಿಗ್ ಬಾಸ್ ಮನೆ ವಾಸ ಆರಂಭಿಸಿದ್ದು ಮನೆಯ ಸದಸ್ಯರು ಅಂದುಕೊಂಡಂತೆ ಬ್ರಹ್ಮಾಂಡ ಗುರೂಜಿ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಆಗಮಿಸಿಲ್ಲ.. ಬದಲಿಗೆ ಅವರೊಬ್ಬ ಸ್ಪೆಷಲ್ ಎಂಟ್ರಿಯಗಿದ್ದು ಟಿ ಆರ್ ಪಿ ಗಾಗಿ ಈ ರೀತಿ ಮನೆಗೆ ಕಳುಹಿಸಿದ್ದಾರೆನ್ನಬಹುದು‌‌..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.