ಒಂದೇ ವಾರದಲ್ಲಿ ಸರ್ಪ್ರೈಸ್ ಕೊಟ್ಟ ವಾಹಿನಿ.. ಮತ್ತೆ ಶುರುವಾಯ್ತು ಬಿಗ್ ಬಾಸ್ ಕನ್ನಡ.. ಹೊಸ ಸ್ಪರ್ಧಿಗಳು ಇವರೇ ನೋಡಿ..

0 views

ಮೊನ್ನೆ ಮೊನ್ನೆಯಷ್ಟೇ ಬಿಗ್ ಬಾಸ್ ಸೀಸನ್ 8 ಮುಗಿದಿದೆ. ಈ ಸೀಸನ್ ನಲ್ಲಿ ಮಂಜು ಪಾವಗಡ ವಿನ್ನರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಜನರು ಕೂಡ ಇನ್ನೂ ಫಿನಾಲೆ ರೌಂಡ್ ಗುಂಗಲ್ಲೇ ಇದ್ದಾರೆ. ಮಂಜು ಪಾವಗಡ, ಅರವಿಂದ್ ಕೆಪಿ, ದಿವ್ಯಾ ಉರುಡುಗ ತಮ್ಮ ಬಿಗ್ ಬಾಸ್ ಮನೆಯಲ್ಲಿ ಕಳೆದ ದಿನಗಳ ಮೆಲುಕು ಹಾತುತ್ತಿದ್ದಾರೆ. ಉಳಿದ ಸ್ಪರ್ಧಿಗನು ಕೂಡ ಬಿಗ್ ಬಾಸ್ ಸಂಬಂಧವನ್ನು ಮರೆಯಲಾಗದೇ ನಿತ್ಯ ಒದ್ದಾಡುತ್ತಿದ್ದಾರೆ. ವೀಕ್ಷಕರಿಗೆ ಒಂದು ಕಡೆ ಮಂಜು ವಿನ್ ಆದ ಎಂಬ ಖುಷಿಯಲ್ಲಿದ್ದರೆ, ಮತ್ತೊಂದು ಕಡೆ ಇನೇನು ಬಿಗ್ ಬಾಸ್ ಸೀಸನ್ 9 ಯಾವಾಗ ಶುರುವಾಗುತ್ತಪ್ಪ ಅಂತ ಕಾಯ್ತಿದ್ದಾರೆ. 

ಇದೆಲ್ಲದರ ನಡುವೆ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸೀಸನ್ 9 ಶೀಘ್ರದಲ್ಲೇ ಶುರುವಾಗುತ್ತೆ ಅಂತ ಹೇಳಿಕೆಯನ್ನು ಕೊಟ್ಟಿದ್ದರು. ಈ ಮಾತಿನಿಂದ ಹುಳ ಬಿಟ್ಟುಕೊಂಡಿರುವ ವೀಕ್ಷಕರು. ಯಾವಾಗ ಶುರುವಾಗಬಹುದು..? ಸದ್ಯಕ್ಕಂತೂ ಇಲ್ಲ ಎಂದುಕೊಳ್ಳುವಷ್ಟರಲ್ಲಿ ಬಿಗ್ ಬಾಸ್ ಸೀಸನ್ 9 ರ ಪ್ರೋಮೋ ಎಲ್ಲೆಡೆ ಹರಿದಾಡುತ್ತಿದೆ. ಇದನ್ನು ಕಂಡು ಬಿಗಾ ಬಾಸ್ ಅಭಿಮಾನಿಗಳು ಸಿಕ್ಕಾಬಟ್ಟೆ ಖುಷಿಯಾಗಿದ್ದಾರೆ. ಜೊತೆ ಜೊತೆಗೆ ಶಾಕ್ ಕೂಡ ಆಗಿದ್ದಾರೆ. 

ಹೌದು.. ಖಾಸಗಿ ವಾಹಿನಿ ಕಲರ್ಸ್ ಕನ್ನಡ ಚಾನೆಲ್ ನ ಫೋಸ್ಬುಕ್ ಪೇಜ್ ನಲ್ಲಿ ಬಿಗ್ ಬಾಸ್ ಪ್ರೋಮೋ ಅಪ್ ಲೋಡ್ ಆಗಿದೆ. ಪ್ರೋಮೋದಲ್ಲಿ ಹಳೆ ಬಿಗ್ ಬಾಸ್  ಸ್ಪರ್ಧಿ ಅಕುಲ್ ಕಾಣಿಸಿಕೊಂಡಿದ್ದು, ಎಲ್ಲರಲ್ಸೂ ಕುತೂಹಲ ಕೆರಳಿಸಿದೆ. ಅಲ್ಲದೇ ಈ ಪ್ರೋಮೋದಲ್ಲಿ ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್ ಎಂದು ಶೀರ್ಷಿಕೆ ನೀಡಿರುವುದು ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಇನ್ನು ಈ ಪ್ರೋಮೋದಲ್ಲಿ ಧಾರಾವಾಹಿಗಳ ನಟ-ನಟಿಯರು ಕಾಣಿಸಿಕೊಂಡಿದ್ದಾರೆ. ನನ್ನರಸಿ ರಾಧೆ, ಕನ್ನಡತಿ, ಮಂಗಳ ಗೌರಿ ಮದುವೆ ಸೀರಿಯಲ್ ನಟ-ನಟಿಯರು ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. 

ಗಗನ್ ಚಿನ್ನಪ್ಪ, ಕೌಸ್ತುಭಮಣಿ, ಅಭಿನವ್ ವಿಶ್ವನಾಥನ್, ಕಿರಣ್ ರಾಜ್ ಬಿಗ್ ಬಾಸ್ ಪ್ರೋಮೋದಲ್ಲಿದ್ದಾರೆ. ಈ ಸೀಸನ್ ಕೇವಲ ಆರು ದಿನಗಳಿಗಷ್ಟೇ ಎಂದು ಕೂಡ ಹೇಳಲಾಗಿದೆ. ಇನ್ನು ಇದೇ ಶನಿವಾರ ಮತ್ತು ಭಾನುವಾರ ರಿಯಾಲಿಟಿ ಶೋ ಪ್ರಸಾರವಾಗಲಿದೆ ಎಂದು ತಿಳಿಸಿದೆ. ಪ್ರೋಮೋದಲ್ಲಿ ಬಿಗ್​ ಬಾಸ್​ಗಾಗಿ ಬಿಡದಿಯಲ್ಲಿ ಅದ್ದೂರಿಯಾಗಿ ಮನೆಯ ಸೆಟ್​ ಹಾಕಲಾಗಿತ್ತು. ಅದೇ ಸೆಟ್​ನಲ್ಲಿ ಈಗ ‘ಬಿಗ್​ ಬಾಸ್​ ಫ್ಯಾಮಿಲಿ ಅವಾರ್ಡ್ಸ್​​’ ಕಾರ್ಯಕ್ರಮ ನಡೆಯಲಿದೆ. ಇದು 6 ಆರು ದಿನಗಳ ಕಾಲ ನಡೆಯಲಿದ್ದು, 15 ಸೆಲೆಬ್ರಿಟಿಗಳು ಅದಕ್ಕಾಗಿ ಸಜ್ಜಾಗಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಅವರು ಈ ಕಾರ್ಯಕ್ರಮದ ಪ್ರೋಮೋ ಹಂಚಿಕೊಂಡಿದ್ದಾರೆ. ಆ ಮೂಲಕ ಅಭಿಮಾನಿಗಳಲ್ಲಿ ಕೌತುಕ ಹುಟ್ಟುಹಾಕಿದ್ದಾರೆ. 100 ದಿನದ ಬಿಗ್​ ಬಾಸ್​ ಮನೆಯಲ್ಲಿ ಕೇವಲ 6 ದಿನದ ಹೊಸ ಜರ್ನಿ. ಅದೇ ಅರಮನೆ, ಅದೇ ಕ್ಯಾಮರಾ ಮತ್ತು ನೀವು ಮೆಚ್ಚಿರುವ 15 ತಾರೆಯರು ಎಂದು ಧ್ವನಿ ನೀಡಲಾಗಿದೆ.