ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯ.. ಮನೆಯಿಂದ ಹೊರ ಹೋದವರು ಯಾರು ಗೊತ್ತಾ? ಶಾಕ್‌ ಆದ ಸ್ಪರ್ಧಿಗಳು..

0 views

ಬಿಗ್ ಬಾಸ್ ಸೀಸನ್ ಎಂಟರ ಒಂಭತ್ತನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ.. ಆದರೆ ಮನೆಯವರೆಲ್ಲಾ ಶಾಕ್ ಆಗಿದ್ದಾರೆ.. ಹೌದು ಬಿಗ್ ಬಾಸ್ ಈ ಸೀಸನ್ನಿನ ಹಣೆ ಬರಹವೇ ಅದ್ಯಾಕೋ ಸರಿ ಇಲ್ಲ ಎನ್ನುವಂತೆ ಕಾಣುತ್ತಿದೆ.. ಹೌದು ಕಳೆದ ವರ್ಷ ಅಕ್ಟೋಬರ್ ನಲ್ಲಿಯೇ ಶುರುವಾಗಬೇಕಿದ್ದ ಬಿಗ್ ಬಾಸ್ ಸೀಸನ್ ಎಂಟು ಕೊರೊನಾ ಕಾರಣದಿಂದಾಗಿ ಮುಂದಕ್ಕೆ ಹೋಯಿತು.. ಈ ವರ್ಷ ಫೆಬ್ರವರಿ 28 ರಂದು ಆರಂಭವಾದ ಶೋ ಹೊಸದರಲ್ಲಿ ಬಹಳಷ್ಟು ಗಮನವೂ ಸೆಳೆಯಿತು.. ಜೊತೆಗೆ ಒಳ್ಳೆಯ ಟಿ ಆರ್ ಪಿ ಕೂಡ ಪಡೆದುಕೊಂಡಿತ್ತು.. ಆದರ್ವ್ ಬರುಬರುತ್ತಾ ತನ್ನ ದಿಕ್ಕನ್ನೇ ಬದಲಿಸಿಬಿಟ್ಟಿತು.. ಹೌದು ಒಂದು ಕಡೆ ಐಪಿಎಲ್ ಶುರುವಾಯಿತು..

ಮತ್ತೊಂದು ಕಡೆ ಕಿಚ್ಚ ಸುದೀಪ್ ಅವರಿಗೆ ಅನಾರೋಗ್ಯದ ಕಾರಣ ಬಿಗ್ ಬಾಸ್ ನ ಎರಡು ವಾರಾಂತ್ಯದ ಕಾರ್ಯಕ್ರಮಗಳನ್ನು ನಡೆಸಿಕೊಡಲು ಸಾಧ್ಯವಾಗಲಿಲ್ಲ.. ಬಿಗ್ ಬಾಸ್ ಕನ್ನಡದ ಎಂಟು ಸೀಸನ್ ಗಳಲ್ಲಿ ಇದೇ ಮೊದಲು ಕಿಚ್ಚ ಸುದೀಪ್ ಅವರು ಈ ರೀತಿ ಗೈರಾಗಿರುವುದು.. ಇನ್ನು ಮೂರನೇ ವಾರ ಬಿಗ್ ಬಾಸ್ ವೀಕೆಂಡ್ ಕಾರ್ಯಕ್ರಮದಲ್ಲಿ ಭಾಗವಹಿಸುವೆ ಎಂದು ಸುದೀಪ್ ಅವರು ತಿಳಿಸಿದರೂ ಸಹ ಪ್ರಸ್ತುತ ಸಂಧರ್ಭದಲ್ಲಿ ವಾರಾಂತ್ಯದ ಕಾರ್ಯಕ್ರಮ ಮಾಡುವುದು ಬೇಡ ಎಂದು ವಾಹಿನಿ ತೀರ್ಮಾನಿಸಿ ಈ ವಾರವೂ ಸುದೀಪ್ ಅವರ ಶೋ ಇರುವುದಿಲ್ಲ ಎಂದು ತಿಳಿಸಿತ್ತು..

ಇನ್ನು ಇದೆಲ್ಲದರ ಜೊತೆಗೆ ಕೊರೊನಾ ದೊಡ್ಡ ಹೊಡೆತ ಕೊಟ್ಟಿದೆ.. ಹೊರಗೆ ಕೊರೊನಾ ಎರಡನೇ ಅಲೆಯ ಕಾರಣ ಜನಜೀವನ ತತ್ತರಿಸಿ ಹೋಗಿದೆ.. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಸೇಫ್ ಎಂದು ಭಾವಿಸಿದರೂ ಸಹ ಶೋ ಗಾಗಿ ನೂರಾರು ಮಂದಿ ಹೊರಗೆ ಕೆಲಸ ಮಾಡಬೇಕಿರುವುದು ಇಕ್ಕಟ್ಟಿನ ಪರಿಸ್ಥಿತಿಯಾಗಿದೆ.. ಇನ್ನು ಹೇಗೋ ಶೋ ನಡೆಯಲೇ ಬೇಕಿರುವ ಕಾರಣ ಈ ವಾರಾಂತ್ಯದಲ್ಲಿಯೂ ಕಳೆದ ಎರಡು ವಾರಗಳಂತೆ ಮನೆಯ ಇತರ ಸದಸ್ಯರಿಗೆ ಚಟುವಟಿಕೆಗಳನ್ನು ನೀಡಲಾಗಿದೆ.. ಜೊತೆಗೆ ಎಲಿಮಿನೇಷನ್ ಪ್ರಕ್ರಿಯೆ ಕೂಡ ಮುಕ್ತಾಯ ಗೊಂಡಿದೆ..

ಹೌದು ಬಿಗ್ ಬಾಸ್ ಸೀಸನ್ ಎಂಟರ ಒಂಭತ್ತನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮನೆಯ ಸದಸ್ಯರು ನಿಜಕ್ಕೂ ಶಾಕ್ ಆಗಿದ್ದಾರೆ.. ಹೌದು ಮೊದಲ ವಾರ ಧನುಶ್ರೀ.. ಎರಡನೇ ವಾರ ನಿರ್ಮಲಾ ಚೆನ್ನಪ್ಪ.. ಮೂರನೇ ವಾರ ಗೀತಾ ಭಾರತಿ ಭಟ್.. ನಾಲ್ಕನೇ ವಾರ ಚಂದ್ರಕಲಾ.. ಐದನೇ ವಾರ ಶಂಕರ್ ಅಶ್ವತ್ಥ್ ಅವರು.. ಆರನೇ ವಾರ ವೈಜಯಣ್ತಿ ಅಡಿಗ.. ಏಳನೇ ವಾರ ವಿಶ್ವನಾಥ್.. ಎಂಟನೇ ವಾರ ರಾಜೀವ್.. ಮನೆಯಿಂದ ಎಲಿಮಿನೇಟ್ ಆಗಿ ಹೊರ ನಡೆದಿದ್ದರು..

ಇದೀಗ ಒಂಭತ್ತನೇ ವಾರದ ಎಲಿಮಿನೇಷನ್ ಕೂಡ ಮುಕ್ತಾಯವಾಗಿದ್ದು ಮನೆಯ ಸದಸ್ಯರಿಗೆ ಸರ್ಪ್ರೈಸ್ ನೀಡಿದ್ದಾರೆ.. ಹೌದು ಈ ವಾರ ಬಿಗ್ ಬಾಸ್ ಮನೆಯಲ್ಲಿ ಆಗಬೇಕಿದ್ದ ಎಲಿಮಿನೇಷನ್ ಅನ್ನು ರದ್ದು ಮಾಡಲಾಗಿದೆ.. ಆದ ಕಾರಣ ಮನೆಯಿಂದ ಯಾವ ಸ್ಪರ್ಧಿಯೂ ಹೊರ ಹೋಗುತ್ತಿಲ್ಲ.. ಆದರೆ ಅದಾಗಲೇ ಇಂತವರೇ ಮನೆಯಿಂದ ಹೋಗ್ತಾರೆ ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದ ಕೆಲ ಸದಸ್ಯರಿಗೆ ತಾವು ಅಂದುಕೊಂಡದ್ದೆಲ್ಲಾ ತಲೆಕೆಳಗಾಗಿ ಹೋಯ್ತು ಎಂದು ಶಾಕ್ ಆಗಿರುವುದಂತೂ ಸತ್ಯ..