ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರ ಹೋಗೋ ಸ್ಪರ್ಧಿ ಇವರೇ ನೋಡಿ.. 

0 views

 

ಬಿಗ್‌ ಬಾಸ್‌ ಸೀಸನ್ ಹತ್ತು ಶುರುವಾಗಿ ನೋಡುನೋಡುತ್ತಲೇ ಎಂಟು ವಾರಗಳು ಕಳೆದಿದ್ದು ಹದಿನೇಳು ಸದಸ್ಯರು ಕಾಲಿಟ್ಟಿದ್ದ ಬಿಗ್‌ ಬಾಸ್‌ ಮನೆಯಲ್ಲೀಗ ಮೈಕಲ್ ವಿನಯ್ ಕಾರ್ತಿಕ್ ತುಕಾಲಿ ಸಂತೋಷ್ ವರ್ತೂರು ಸಂತೋಷ್ ಸ್ನೇಹಿತ್ ಡ್ರೋನ್ ಪ್ರತಾಪ್ ಸಂಗೀತಾ ತನಿಷಾ ನಮ್ರತಾ ಸಿರಿ ಸೇರಿದಂತೆ ಒಟ್ಟು ಹನ್ನೊಂದು ಸದಸ್ಯರು ಮಾತ್ರವೇ ಉಳಿದಿದ್ದು ಇವರ ಜೊತೆಗೆ ಅವಿನಾಶ್ ಹಾಗೂ ಪವಿ ಪೂವಪ್ಪ ವೈಲ್ಡ್ ಕಾರ್ಡ್ ಮೂಲಕ ಸೇರಿಕೊಂಡಿದ್ದಾರೆ.. ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಅಲ್ಲಿ ಉಳಿಯುವ ಸಲುವಾಗಿ ಪೈಪೋಟಿ ತೀವ್ರವಾಗಿಯೇ ನಡೆಯುತ್ತಿದ್ದು ಜನರ ಬೆಂಬಲ ಮಾತ್ರ ಬಹುಟೇಕವಾಗಿ ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ಅವರ ಪರವಾಗಿಯೇ ಇದೆ ಎನ್ನಬಹುದು.. ಇನ್ನು ಬಿಗ್ ಬಾಸ್ ಮನೆಯಲ್ಲಿ ಅದರಲ್ಲೂ ಈ ಸೀಸನ್ ನಲ್ಲಿ ಪ್ರತಿ ದಿನ ಒಂದಲ್ಲಾ ಒಂದು ಜಗಳು ಇದ್ದೇ ಇದೆ.. ಒಂದಲ್ಲಾ ಒಂದು ಕಿತ್ತಾಟಗಳು ಇದ್ದೇ ಇದೆ.. ಇದರ ಜೊತೆಗೆ ನಮ್ರತಾ ಹಾಗೂ ಸ್ನೇಹಿತ್ ನ ಲವ್ ಕಹಾನಿ ನೋಡಲು ಎರಡು ಕಣ್ಣು ಸಾಲದು ಎನ್ನುವಂತೆ ಟ್ರೋಲ್ ಕೂಡ ಆಗುತ್ತಿದೆ.. ಇತ್ತ ಸಂಗೀತಾ ಹಾಗೂ ವಿನಯ್ ನ ಜಗಳಗಳು ಮುಗಿಯಲಾರದ ಕತೆ ಎನ್ನಬಹುದು.. ಮೊದಮೊದಲು ಸಂಗೀತಾ ಪರವಾಗಿ ಪ್ರೇಕ್ಷಕರು ಒಲವು ತೋರಿದ್ದರು.. ಆದರೆ ಇತ್ತೀಚೆಗೆ ಸಂಗೀತಾ ಕೂಡ ಬಿಗ್ ಬಾಸ್ ಮನೆಯಲ್ಲಿ ಆ ಗುಂಪು ಈ ಗುಂಪು ಎನ್ನುವಂತೆ ನಡೆದುಕೊಂಡ ಕಾರಣ ವಿನಯ್ ಪರವಾಗಿ ಸಾಕಷ್ಟು ಅಭಿಪ್ರಾಯಗಳು ಕೇಳಿ ಬಂದಿದೆ..

ಇನ್ನು ಎಲಿಮಿನೇಷನ್ ವಿಚಾರಕ್ಕೆ ಬರುವುದಾದರೆ ಕಳೆದ ವಾರ ಘಟಾನುಘಟಿ ಸ್ಪರ್ಧಿಗಳೇ ನಾಮಿನೇಶನ್ ಆಗಿದ್ದು ಕೊನೆಯಲ್ಲಿ ಮೈಕಲ್ ಹಾಗೂ ಸ್ನೇಹಿತ್ ಅಂತಿಮ ಹಂತದಲ್ಲಿ ಕೂರುವಂತಾಯಿತು.. ಆದರೆ ಕಿಚ್ಚ ಸುದೀಪ್ ಅವರು ತಮ್ಮ ವಿಶೇಷ ಅಧಿಕಾರ ಬಳಸಿ ಆ ವಾರದ ಎಲಿಮಿನೇಷನ್ ಅನ್ನು ಕ್ಯಾನ್ಸಲ್ ಮಾಡಿದ್ದು ಸ್ನೇಹಿತ್ ಹಾಗೂ ಮೈಕಲ್ ಇಬ್ಬರನ್ನೂ ಸಹ ನೇರವಾಗಿ ಈ ವಾರಕ್ಕೆ ನಾಮಿನೇಟ್ ಮಾಡಿದ್ದಾರೆ.. ಇನ್ನು ಮನೆಯ ಕ್ಯಾಪ್ಟನ್ ಆಗಿ ಸ್ನೇಹಿತ್ ಅಧಿಕಾರ ಪಡೆದು ಖುಷಿಯಿಂದ ಇದ್ದರೂ ಸಹ ಈ ವಾರ ಮನೆಗೆ ಹೋಗಬಹುದು ಎನ್ನುವ ಆರಂಕ ಇದ್ದೇ ಇದೆ.. ಆದರೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗೋ ಸ್ಪರ್ಧಿಯೇ ಬೇರೆ.. ಕೆಳಗಿನ ವೀಡಿಯೋ ನೋಡಿ..

ಹೌದು ಈ ವಾರ ಮನೆಯ ಸದಸ್ಯರಿಗೆ ಎಂದಿನಂತೆ ನಾಮಿನೇಷನ್ ಮಾಡುವ ಅಧಿಕಾರ ಇರಲಿಲ್ಲ.. ಬದಲಿಗೆ ಕಳೆದ ವಾರ ಟಾಸ್ಕ್ ಗಳಲ್ಲಿ ಗೆದ್ದು ಕ್ಯಾಪ್ಟನ್ ಆದ ಸ್ನೇಹಿತ್ ಅವರಿಗೆ ವಿಶೇಷ ಅಧಿಕಾರವೂ ಇತ್ತು.. ಇನ್ನು ಅದಾಗಲೇ ಮೈಕಲ್ ಸ್ನೇಹಿತ್ ಇಬ್ಬರು ಸದಸ್ಯರು ಈ ವಾರಕ್ಕೆ ನಾಮಿನೇಟ್ ಕೂಡ ಆಗಿದ್ದರು.. ಇನ್ನು ವೈಲ್ಡ್ ಕಾರ್ಡ್ ಎಂಟ್ರಿಯಾದ ಅವಿನಾಶ್ ಹಾಗೂ ಪವಿ ಪೂವಪ್ಪ ಅವರು ಹೊಸಬರಾದ ಕಾರಣ ಕಳೆದ ವಾರ ಅವರನ್ನು ನಾಮಿನೇಷನ್ ಮಾಡಿರಲಿಲ್ಲ.. ಈ ವಾರವೂ ಸಹ ಅವರಿಗೆ ನಾಮಿನೇಷನ್ ನಿಂದ ವಿನಾಯಿತಿ ನೀಡಬೇಕೆ ಎಂದು ಕೇಳಿದಾಗ ಸಿರಿ ಅವರನ್ನು ಹೊರತು ಪಡಿಸಿ ಮನೆಯ ಎಲ್ಲಾ ಸದಸ್ಯರು ವಿನಾಯಿತಿ ಬೇಡ ಎಂದ ಕಾರಣ ಈ ವಾರ ಅವಿನಾಶ್ ಹಾಗೂ ಪವಿ ಪೂವಪ್ಪ ಇಬ್ಬರೂ ಸಹ ನೇರವಾಗಿ ನಾಮಿನೇಟ್ ಆದರು.. ಇನ್ನು ಈ ವಾರ ಉಳಿದ ಯಾವ ಸದಸ್ಯರಿಗೂ ಸಹ ಬೇರೆ ನಾಮಿನೇಷನ್ ಅಧಿಕಾರ ಇರಲಿಲ್ಲ.. ಸ್ನೇಹಿತ್ ಅವರಿಗೆ ಮಾತ್ರವೇ ಈ ವಾರ ನಾಮಿನೇಟ್ ಮಾಡುವ ಅಧಿಕಾರ ನೀಡಿದ್ದು.. ಸ್ನೇಹಿತ್ ಅವರ ಮುಂದೆ ಇಬ್ಬಿಬ್ಬರು ಸದಸ್ಯರು ಬಂದು ತಮ್ಮನ್ನು ನಾಮಿನೇಟ್ ಮಾಡದಂತೆ ಎದುರಾಳಿ ಸದಸ್ಯನನ್ನು ನಾಮಿನೇಟ್ ಮಾಡುವಂತೆ ವಾದ ಮಂಡಿಸಿದರು.. ಆ ಪ್ರಕಾರ ಮೊದಲಿಗೆ ತುಕಾಲಿ ಸಂತೋಷ್ ಹಾಗೂ ಸಂಗೀತ ಅವರು ವೇದಿಕೆಗೆ ಬಂದು ತಮ್ಮ ತಮ್ಮ ವಾದ ಮಂಡಿಸಿದರು.. ಒಬ್ಬರಮೇಲೊಬ್ಬರು ಆರೋಪಗಳನ್ನು ಹೊರಿಸಿದ್ದು ಎಲ್ಲವೂ ಸಾಮಾನ್ಯವಾಗಿತ್ತು.. ಕೊನೆಗೆ ನಿರ್ಧಾರ ತೆಗೆದುಕೊಳ್ಳಬೇಕಾದ ಸ್ನೇಹಿತ್ ಅವರು ಸಂಗೀತಾರನ್ನು ಈ ವಾರ ನಾಮಿನೇಟ್ ಮಾಡಿ ತುಕಾಲಿ ಅವರನ್ನು ಉಳಿಸಿದರು.. ಇನ್ನು ವಿನಯ್ ಹಾಗೂ ಸಿರಿ ಅವರು ಸಹ ತಮ್ಮ ತಮ್ಮ ವಾದಗಳನ್ನು ಮಂಡಿಸಿದ್ದು ಆ ಜೋಡಿಯಲ್ಲಿ ಸ್ನೇಹಿತ್ ವಿನಯ್ ಅವರನ್ನು ಉಳಿಸಿ ಸಿರಿ ಅವರನ್ನು ನಾಮಿನೇಟ್ ಮಾಡಿದರು..

ಇನ್ನು ನಮ್ರತಾ ಹಾಗೂ ಪ್ರತಾಪ್ ಅವರು ವೇದಿಕೆಗೆ ಬಂದಾಗ ಕೇವಲ ಒಂದೇ ನಿಮಿಷಕ್ಕೆ ವಾದ ಮುಕ್ತಾಯವಾಯಿತು.. ಹೇಗಿದ್ದರು ಸ್ನೇಹಿತ್ ನಮ್ರತಾರನ್ನೇ ಸೇವ್ ಮಾಡಲಿದ್ದಾನೆ ಎಂಬ ಸತ್ಯವನ್ನು ಅರಿತಿದ್ದ ಪ್ರತಾಪ್ ಹೆಚ್ಚು ವಾದ ಮಾಡಲೇ ಹೋಗಲಿಲ್ಲ.. ನಾನು ಜನರ ಅಭಿಪ್ರಾಯದ ಪ್ರಕಾರವೇ ಹೋಗುವೆ ಎಂದು ಮಾತು ಮುಗಿಸಿದರು.. ಕೊನೆಗೆ ಅಂದುಕೊಂಡಂತೆ ನಮ್ರತಾ ಅವರನ್ನು ಸೇವ್ ಮಾಡಿ ಪ್ರತಾಪ್ ಅವರನ್ನು ನಾಮಿನೇಟ್ ಮಾಡಿದರು.. ಇನ್ನುಳಿದಂತೆ ವರ್ತೂರು ಸಂತೋಷ್ ತನಿಷಾ ಹಾಗೂ ಕಾರ್ತಿಕ್ ಮೂವರು ಸಹ ಒಟ್ಟಾಗಿ ಬರಬೇಕಾಯಿತು.. ಈ ಮೂವರಲ್ಲಿ ಇಬ್ಬರು ಸದಸ್ಯರನ್ನು ಸ್ನೇಹಿತ್ ನಾಮಿನೇಟ್ ಮಾಡಬೇಕಿದ್ದು ಮೂವರೂ ಸಹ ತಮ್ಮ ತಮ್ಮ ಪರವಾಗಿ ವಾದ ಮಂಡಿಸಿಕೊಂಡರು.. ಅತ್ತ ಕಾರ್ತಿಕ್ ಕೊನೆಗೆ ತನಿಷಾರನ್ನೇ ಸೇವ್ ಮಾಡಿ ಎಂದು ಕೇಳಿಕೊಂಡರು.. ಆದರೆ ವರ್ತೂರು ಸಂತೋಷ್ ಇಲ್ಲಿ ಯಾರೂ ತ್ಯಾಗ ಮಾಡೋಕೆ ಬಂದಿಲ್ಲ.. ಅವರವರ ಆಟ ಆಡಬೇಕು ಎಂದು ಅರ್ರ್ಹಪೂರ್ಣವಾಗಿ ವಾದ ಮಂಡಿಸಿದ್ದು ವರ್ತೂರ್ ಸಂತೋಷ್ ಅವರು ಆಡಿದ ಮಾತಿಗೆ ಮನೆಯ ಮಿಕ್ಕೆಲ್ಲಾ ಸದಸ್ಯರು ಶಿಳ್ಳೆ ಹೊಡೆದು ಸಂಭ್ರಮಿಸಿದರು.. ಸಾಕಷ್ಟು ವಾರಗಳು ಸೈಲೆಂಟ್ ಆಗಿದ್ದ ವರ್ತೂರು ಸಂತೋಷ್ ಅವರು ಈಗ ಸಂಪೂರ್ಣವಾಗಿ ಬಿಗ್ ಬಾಸ್ ನಲ್ಲಿ ಉಳಿಯಲು ಮಂಡಿಸಿದ ವಾದಕ್ಕೆ ಮನೆಯ ಸದಸ್ಯರು ಫಿದಾ ಆದರೆನ್ನಬಹುದು‌.. ಇನ್ನು ಮೂವರ ವಾದವನ್ನು ಕೇಳಿದ ಸ್ನೇಹಿತ್ ವರ್ತೂರು ಸಂತೋಷ್ ಅವರನ್ನು ಉಳಿಸಿ ತನಿಷಾ ಹಾಗೂ ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಿದರು..

ಒಟ್ಟಾಗಿ ಮೈಕಲ್ ಸ್ನೇಹಿತ್ ಅವಿನಾಶ್ ಪವಿ ಪೂವಪ್ಪ ಕಾರ್ತಿಕ್ ತನಿಷಾ ಸಂಗೀತಾ ಸಿರಿ ಹಾಗೂ ಡ್ರೋನ್ ಪ್ರತಾಪ್ ಸೇರಿದಂತೆ ಒಟ್ಟು ಒಂಭತ್ತು ಸದಸ್ಯರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದರು.. ಇನ್ನು ಈ ವಾರ ಯಾರು ಬಿಗ್ ಬಾಸ್ ಮನೆಯಿಂದ ಹೊರ ಹೋಗುವರು ಎನ್ನುವ ಲೆಕ್ಕಾಚಾರಕ್ಕೆ ಬರುವುದಾದರೆ ಈ ವಾರ ಪವಿಪೂವಪ್ಪ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿದ್ದಾರೆ ಎನ್ನಬಹುದು.. ಇದಕ್ಕೆ ಕಾರಣವೂ ಇದೆ.. ಬಿಗ್ ಬಾಸ್ ಮನೆಯಲ್ಲಿ ಸದಸ್ಯರು ಕಡಿಮೆಯಾಗುತ್ತಿದ್ದಾರೆ ಎನ್ನುವ ಕಾರಣಕ್ಕೆ ಮತ್ತಷ್ಟು ಕಂಟೇಂಟ್ ಗಳು ಸಿಗಲಿ ಎಂದು ಅವಿನಾಶ್ ಹಾಗೂ ಪವಿ ಪೂವಪ್ಪ ಅವರನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಅದ್ಧೂರಿಯಾಗಿ ಬಿಗ್ ಬಾಸ್ ಮನೆಗೆ ಕಳುಹಿಸಿದರು.. ಆದರೆ ಅಂದುಕೊಂಡಂತೆ ಇಬ್ಬರ ಆಟವೂ ಯಾವ ನಿರೀಕ್ಷೆಯನ್ನೂ ಹುಟ್ಟುಹಾಕಲಿಲ್ಲ.. ಮೊದಲ ದಿನ ಮಾವುತ ಎನ್ನುತ್ತಾ ಬಿಗ್ ಬಾಸ್ ಗೆ ಹೋದ ಅವಿನಾಶ್ ಮಾರನೇ ದಿನವೇ ಮೈಕಲ್ ವಿನಯ್ ಸ್ನೇಹಿತ್ ಎಲ್ಲರೂ ಇದ್ದ ಬಲಿಷ್ಟ ತಂಡವನ್ನೇ ಸೇರಿಕೊಂಡು ಗುಂಪಿನೊಳಗೊಬ್ಬರಾದರು.. ಇತ್ತ ಪವಿ ಪೂವಪ್ಪ ಬಿಗ್ ಬಾಸ್ ಮನೆಯಿಂದ ಹೊರಗೆ ನಡೆದ ಘಟನೆಗಳನ್ನು ಮನೆಯ ಸದಸ್ಯರಿಗೆ ಹೇಳಿಕೊಂಡು ಅದರಲ್ಲೂ ವಿನಯ್ ಅವರ ಕುಟುಂಬದ ವಿಚಾರ ಟ್ರೋಲ್ ವಿಚಾರ ತಿಳಿಸಿ ಬಿಗ್ ಬಾಸ್ ಮನೆಯ ನಿಯಮ ಮುರಿದರು.. ಅದನ್ನು ಬಿಟ್ಟು ಅವರು ಮತ್ತೆಲ್ಲೂ ಅಷ್ಟಾಗಿ ಕಾಣಿಸಿಯೇ ಕೊಳ್ಳಲಿಲ್ಲ.. ಇತ್ತ ವಾರಾಂತ್ಯದಲ್ಲಿ ಪವಿ ಮಾಡಿದ ತಪ್ಪಿಗೆ ಕಿಚ್ಚ ಸುದೀಪ್ ಅವರು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು.. ಇನ್ನು ಕಳೆದ ವಾರ ಅವಿನಾಶ್ ಹಾಗೂ ಪವಿ ಯಾರೂ ಸಹ ನಾಮಿನೇಟ್ ಆಗದ ಕಾರಣ ಎಲಿಮಿನೇಷನ್ ಅನ್ನೇ ಕ್ಯಾನ್ಸಲ್ ಮಾಡಲಾಯಿತು.. ಈ ವಾರ ಅವಿನಾಶ್ ಹಾಗೂ ಪವಿ ಇಬ್ಬರನ್ನೂ ನೇರವಾಗಿ ನಾಮಿನೇಟ್ ಮಾಡಿದ್ದು ಅವಿನಾಶ್ ಕೊಂಚ ಅಲ್ಲಲ್ಲಿ ಕಾಣಿಸಿಕೊಂಡರೂ ಪವಿ ಮಾತ್ರ ಎಲ್ಲಿಯೂ ಯಾವುದರಲ್ಲಿಯೂ ಗುರುತಿಸಿಕೊಂಡಿಲ್ಲ.. ಇನ್ನು ಉಳಿದ ಹಳೆಯ ಸದಸ್ಯರೆಲ್ಲರೂ ಐವತ್ತಾರು ದಿನಗಳಿಂದ ಕಷ್ಟ ಪಟ್ಟಿದ್ದು ಈ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿಗಳಿಗಿಂತ ಹೆಚ್ಚು ಡಿಸರ್ವ್ ಎನ್ನಬಹುದು.. ಅದೇ ಕಾರಣಕ್ಕೆ ಈ ವಾರ ಪವಿ ಮನೆಯಿಂದ ಹೊರ ಹೋಗಬಹುದು.. ಇದಕ್ಕೂ ಮೀರಿ ಈ ವಾರ ಪವಿ ಚೆನ್ನಾಗಿ ಆಟವಾಡಿದರೆ ಅವಿನಾಶ್ ವಾರಾಂತ್ಯದಲ್ಲಿ ತಮ್ಮ ಬಿಗ್ ಬಾಸ್ ಮನೆಯ ಆಟ ಮುಗಿಸುವುದು ಖಚಿತ ಎನ್ನಬಹುದು..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.