ಎರಡು ಚಿನ್ನದ ಉಂಗುರ ಒಂದು ಚಿನ್ನದ ಚೈನ್‌ ಕೊಟ್ಟರು.. ತಮಗೆ ಕೊಟ್ಟ ಉಡುಗೊರೆ ಬಗ್ಗೆ ತಿಳಿಸಿದ ಪ್ರಥಮ್..‌

0 views

ಬಿಗ್‌ ಬಾಸ್‌ ಮೂಲಕ ಖ್ಯಾತಿ ಪಡೆದ ಒಳ್ಳೆ ಹುಡುಗ ಪ್ರಥಮ್‌ ಇದೀಗ ದಾಂತ್ಯ ಜೀವನಕ್ಕೆ ಕಾಲಿಟ್ಟಿದ್ದು ನೂತನ ಜೀವನ ಆರಂಭಿಸಿದ್ದಾರೆ.. ಮಂಡ್ಯ ಮೂಲದ ಭಾನುಶರೀ ಎಂಬ ಹುಡುಗಿ ಕೈ ಹಿಡಿದ ನಟ ಪ್ರಥಮ್‌ ಅವರ ವಿವಾಹ ಸಮಾರಂಭ ಬಹಳ ಸರಳವಾಗಿ ನೆರವೇರಿದ್ದು ಚಿತ್ರರಂಗದ ಕೆಲ ಗಣ್ಯರು ಹಾಗೂ ಸಂಬಂಧಿಕರಿಗೆ ಮಾತ್ರ ಆಹ್ವಾನಿಸಿದ್ದು ಅವರುಗಳ ಆಶೀರ್ವಾದ ಪಡೆದಿದ್ದಾರೆ.. ಇನ್ನು ಪ್ರಥಮ್‌ ಹಾಗೂ ಭಾನುಶ್ರೀ ಅವರ ಮದುವೆಗೆ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಅವರು ವಿನಯ್‌ ರಾಜ ಕುಮಾರ್‌, ದೃವ ಸ್ರಜಾ ಸೇರಿದಂತೆ ಕೆಲ ಸಿನಿಮಾ ಪಗ್ರಮುಖರು ಮದುವೆಗೆ ಆಗಮಿಸಿ ಹಾರೈಸಿದ್ದಾರೆ.. ಇನ್ನು ಇದೇ ಸಮಯದಲ್ಲಿ ತಮಗೆ ಬಂದ ಉಡುಗೊರೆ ಬಗ್ಗೆ ತಿಳಿಸಿದ ಪ್ರಥಮ್‌ ತಾವ್ಯಾಕೆ ಈ ರೀತಿ ಮದುವೆಯಾದೆ ಎಂಬುದನ್ನು ತಿಳಿಸಿದ್ದಾರೆ.. ಹೌದು ಬಿಗ್‌ ಬಾಸ್‌ ಸೇಸನ್‌ ನಾಲ್ಕರಲ್ಲಿ ಭಾಗವಹಿಸಿದ್ದ ಪ್ರಥಮ್‌ ತಮ್ಮ ಮಾತಿನ ಮೂಲಕವೇ ಜನರ ಮನಗೆದ್ದಿದ್ದು ಮಾತ್ರವಲ್ಲದೇ ಬಿಗ್‌ ಬಾಸ್‌ ಮನೆಯಲ್ಲಿ ಕೊನೆವರೆಗೂ ಉಳಿಯಲು ಯಶಸ್ವಿಯಾಗಿ ಬಿಗ್‌ ಬಾಸ್‌ ಸೇಸನ್‌ ನಾಲ್ಕರ ವಿಜೇತ ಪಟ್ಟವನ್ನೂ ಕೂಡ ಪಡೆದರು..

ಇನ್ನು ಬಿಗ್‌ ಬಾಸ್‌ ನಿಂದ ಬಂದ ಹಣವನ್ನು ಆ ಸಮಯದಲ್ಲಿಯೇ ಸಮಾಜಕ್ಕೆ ಬಳಸುವುದಾಗಿ ತಿಳಿಸಿದ್ದ ಪ್ರಥಮ್‌ ಅವರು ಮಡಿದ ಯೋಧರ ಕುಟುಂಭಕ್ಕೆ ಹಾಗೂ ಇನ್ನಿತರ ಕೆಲ ಸಾಮಾಜಿಕ ಕಾರ್ಯಗಳಿಗೆ ಬಳಸಿದ್ದರು.. ಇನ್ನು ಬಿಗ್‌ ಬಾಸ್‌ ನಿಂದ ಹೊರ ಬಂದ ನಂತರ ಸಿನಿಮಾಗಳಲ್ಲಿ ಬ್ಯುಸಿ ಆದ ಪ್ರಥಮ್‌ ಅವರು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾದರೂ ಸಹ ಹೇಳಿಕೊಳ್ಳುವಂತಹ ಯಶಸ್ಸು ದೊರೆಯಲಿಲ್ಲ.. ಇನ್ನು ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು ಸುದ್ದಿಯಲ್ಲಿರುವ ಪ್ರಥಮ್‌ ಅವರು ಪ್ರಚಲಿತ ಘಟನೆಗಳ ಬಗ್ಗೆ ಆಗಾಗ ನೀಡುವ ಪ್ರತಿಕ್ರಿಯೆಗಳು ಸುದ್ದಿಯಾಗುತ್ತಲೇ ಇರುತ್ತವೆ.. ಇನ್ನು ತಮ್ಮ ಮದುವೆಯ ಬಗ್ಗೆ ಈ ಹಿಂದೆಯೇ ತಿಳಿಸಿದ್ದ ಪ್ರಥಮ್‌ ನಾನು ಬಹಳ ಸಿಂಪಲ್‌ ಆಗಿ ಮದುವೆ ಆಗ್ತೇನೆ.. ಬೇರೆ ಸ್ಟಾರ್‌ ಗಳ ರೀತಿ ಅದ್ಧೂರಿಯಾಗಿ ಮದುವೆಯಾಗೋದಿಲ್ಲ.. ಅದು ನನಗೆ ಇಷ್ಟವೂ ಇಲ್ಲ ಎಂದಿದ್ದರು..

ಇನ್ನು ಅದೇ ಮಾತಿನಂತೆ ಕೆಲ ತಿಂಗಳ ಹಿಂದೆ ಮಂಡ್ಯ ಮೂಲದ ಭಾನುಶ್ರೀ ಎಂಬುವವರ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಥಮ್‌ ಅವರು ನಿಶ್ಚಿತಾರ್ಥ ಮುಗಿದ ಬಳಿಕ ವಿಚಾರವನ್ನು ಎಲ್ಲರಿಗೂ ತಿಳಿಸಿದ್ದರು.. ಇನ್ನು ಮದಿುಉವೆಯನ್ನು ಸಹ ಬಹಳ ಸರಳವಾಗಿ ಅತಿ ಚಿಕ್ಕ ಚೌಟ್ರಿಯಲ್ಲಿಯೇ ಮಾಡಿಕೊಂಡ ಪ್ರಥಮ್‌ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಧೃವ ಸರ್ಜಾ ಸೇರಿದಂತೆ ಚಿತ್ರರಂಗದ ಕೆಕ ಪ್ರಮುಖರಿಗೆ ಮಾತ್ರವೇ ಆಹ್ವಾನಿಸಿದ್ದರು.. ಇನ್ನು ಮದುವೆಯ ದಿನ ಮಾತನಾಡಿದ ಪ್ರಥಮ್..‌ “ನಿನ್ನೆ ಮದುವೆಯಾಯ್ತು. ಸರಳವಾದ ಮದುವೆ,150 ಜನ ಕೂರಬಹುದಾದ ಪುಟ್ಟ ಚೌಟ್ರಿ, 300-400 ಜನ ಹರಸಿರಬಹುದೇನೋ ,ಆಡಂಬರವಿಲ್ಲದೇ, ಯಾರ ಕಣ್ಣ ಕುಕ್ಕದಂತೆ ಆಯ್ತು.. ನನ್ನ ಕಡೆಯಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೇಡಂ, ಧ್ರುವ ಸರ್ಜಾ ಸರ್ ಸಹಿತ ಕೆಲ ಹೃದಯ ಶ್ರೀಮಂತರ ಆಶೀರ್ವಾದ ಪಡೆದೆವು. ನಿನ್ನೆಯಿಂದ ಕನಿಷ್ಟ 5000 ಕ್ಕೂ ಹೆಚ್ಚು ಜನ ಫೋನ್ ಕಾಲ್, ಮೆಸೇಜ್ ಮಾಡುತ್ತಲೇ ಇದ್ದಾರೆ.

ಪ್ರಥಮ್ ನೀವು ಮಾಡಿದ್ದು ಮೋಸ, ನಾವು ನಿಮ್ಗೆ ಏನೋ ಉಡುಗೊರೆ ಕೊಡಬೇಕು ಅಂತಿದ್ವಿ ಅಂತ ಹೇಳಿದ್ದಾರೆ. ನಾನು ಸಮಾಧಾನ ಹೇಳಿ ಸಾಕಾಗಿದೆ. ಇಲ್ಲೀವರೆಗೆ ಮದುವೆಗೆ ಬಂದಿರೋದು ಸಂಬಂಧದಿಂದ ಎರಡು ಉಂಗುರ, ಒಂದು ಚೈನ್ ಅಷ್ಟೇ, ನಿಮಗೆ ಏನಾದ್ರೂ ಕೊಡಲೇಬೇಕೆಂದವರು ನಿಮ್ಮ ಸುತ್ತಮುತ್ತಲಿನ ನಾಲ್ಕು ಜನರಿಗೆ ಎರಡು ಹೊತ್ತು ಊಟ ಮಾಡಿಸಿ. ಪ್ರಥಮ್‌ಗೆ ಕೊಟ್ಟೆ ಎಂದುಕೊಂಡು ಖುಷಿ ಪಡಿ, ಅದೇ ಆಶೀರ್ವಾದ. ಕಾರ್ತಿಕ ಮಾಸ ಇರುವುದರಿಂದ ಸದ್ಯಕ್ಕೆ ಯಾವುದೇ ಬೀಗರ ಊಟ ಇರುವುದಿಲ್ಲ, ಬೆಂಗಳೂರಿನ ನನ್ನ ಆಪ್ತರಿಗೆ ವಿಶೇಷ ಆರತಕ್ಷತೆ ಇರಲ್ಲ. ಯಾರಿಗೂ ನಾನು ಊಟ ಹಾಕ್ತಾ ಇಲ್ಲ, ನನ್ನ ಬಳಿ ಅಷ್ಟೆಲ್ಲಾ ದುಡ್ಡಿಲ್ಲ, ನನಗೆ ಆಸಕ್ತಿಯೂ ಇಲ್ಲ.. ನಿಮ್ಮವ್ವ ಅಪ್ಪ, ಹೆಂಡ್ತಿಗೆ ಹೇಳ್ಬಿಟ್ಟು ಸಿಹಿ ಮಾಡಿಸಿಕೊಂಡು ತಿನ್ನಿ, ಶುಭ ಹಾರೈಸಬೇಕು ಎಂದರೆ ಮಾಡಿ, ಇಲ್ಲ ಅಂದ್ರೆ ಮಾಮೂಲಿ ಗೊತ್ತಲ್ಲಾ ಯುಟ್ಯೂಬ್ ಅಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಕಾಮೆಂಟ್ ಮಾಡಿಕೊಂಡು ಚೆನ್ನಾಗಿರಿ. ಸದ್ಯಕ್ಕೆ ‘ಕರ್ನಾಟಕದ ಅಳಿಯ’ ಹಾಗೂ ಫಸ್ಟ್‌ನೈಟ್ ವಿಥ್ ದೆವ್ವ ಸಿನಿಮಾ ಮುಗಿಸೋದು ನನ್ನ ಗುರಿ, ನಾಳಿದ್ದಿಂದ ಶೂಟಿಂಗ್ ಶುರು, ಧನ್ಯವಾದಗಳು.. ಎಂದು ತಿಳಿಸಿದ್ದಾರೆ.. ಇನ್ನು ಮದುವೆಯಾದ ಎರಡೇ ದಿನಕ್ಕೆ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದು ತಮ್ಮ ಮುಂದಿನ ಚಿತ್ರದ ಕೆಲಸಗಳಲ್ಲಿ ಬ್ಯಸಿ ಆಗಿದ್ದಾರೆನ್ನಬಹುದು..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.