ಬಿಗ್ ಬಾಸ್ ಸದಸ್ಯರಿಗೆ ಕೊರೊನಾ ಶಾಕ್.. ಇದ್ದಕಿದ್ದ ಹಾಗೆ ವಾಹಿನಿ ತೆಗೆದುಕೊಂಡ ನಿರ್ಧಾರ ನೋಡಿ..

0 views

ರಾಜ್ಯದಲ್ಲಿ ಮಾತ್ರವಲ್ಲ ಸಂಪೂರ್ಣ ದೇಶದಲ್ಲಿ ಕೊರೊನಾ ಅಲೆ ಹೆಚ್ಚಾಗಿದೆ.. ಕಳೆದ ವರ್ಷಕ್ಕಿಂತ ಈ ವರ್ಷ ಕೊರೊನಾದಿಂದಾಗಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.. ಸರಿಯಾದ ಚಿಕಿತ್ಸೆ ಸಿಗದೆ ಜನ ಸಾಮಾನ್ಯರು ಪರದಾಡುವಂತಾಗಿದೆ.. ದೊಡ್ಡ ದೊಡ್ಡ ಮಂದಿ ಗಳೇ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.. ಇನ್ನು ಕಲಾವಿದರು ಮಾದ್ಯಮದ ವಿಚಾರಕ್ಕೆ ಬಂದರೆ ವಾರದ ಹಿಂದಷ್ಟೇ ಮಾಲಾಶ್ರೀ ಅವರು ತಮ್ಮ ಪತಿ ರಾಮು ಅವರನ್ನು ಕಳೆದುಕೊಂಡರು.. ಇತ್ತ ಅನಿರುದ್ಧ್ ಅವರು ತಮ್ಮ ಆಪ್ತರನ್ನು ಕಳೆದುಕೊಂಡರು.. ಇನ್ನು ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೆರ್ ತಮ್ಮ ತಂದೆ ತಾಯಿ ಇಬ್ಬರನ್ನೂ ಸಹ ಕಳೆದುಕೊಂಡರು.. ನಿಜಕ್ಕೂ ತಮ್ಮ ಕುಟುಂಬದ ಅಮೂಲ್ಯ ಜೀವಗಳನ್ನು ಕಳೆದುಕೊಂಡ ನೋವು ಅನುಭವಿಸಿದವರಿಗಷ್ಟೇ ಗೊತ್ತು..

ಇನ್ನು ಇದೆಲ್ಲದರ ನಡುವೆ ಸರ್ಕಾರ ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ ಲಾಕ್ ಡೌನ್ ಮಾಡಿದೆ.. ಬಹಳಷ್ಟು ಮಂದಿ ಲಾಕ್ ಡೌನ್ ಅನ್ನು ಬೆಂಬಲಿಸಿದರಾದರೂ ದಿನಗೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಜನ ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದೂ ಉಂಟು.. ಇನ್ನು ಇದೆಲ್ಲದರ ಜೊತೆಗೆ ಮಾದ್ಯಮ ಹಾಗೂ ಇನ್ನಿತರ ಕೆಲ ಸೇವೆಗಳು ನಿರಂತರವಾಗಿ ಎಂದಿನಂತೆ ನಡೆಯುತ್ತಾ ಬಂದಿದೆ.. ಇನ್ನು ಬಿಗ್ ಬಾಸ್ ನ ವಿಚಾರಕ್ಕೆ ಬಂದರೆ ಅದಾಗಲೇ ಫೆಬ್ರವರಿಯಲ್ಲಿ ಶುರುವಾದ ಬಿಗ್ ಬಾಸಿನಲ್ಲಿ ಸದ್ಯ ಹನ್ನೆರೆಡು ಮಂದಿ ಸದಸ್ಯರು ಒಂಭತ್ತನೇ ವಾರದ ಬಿಗ್ ಬಾಸ್ ಜರ್ನಿಯನ್ನು ಮುಂದುವರೆಸುತ್ತಿದ್ದಾರೆ.. ಇದೀಗ ಬಿಗ್ ಬಾಸಿಗೂ ಸಹ ಕೊರೊನಾದಿಂದ ಸಂಕಷ್ಟ ಎದುರಾಗಿದೆ..

ಹೌದು ಒಳಗೆ ಅವರುಗಳು ಸೇಫ್ ಆಗಿದ್ದಾರೆ.. ಎಂದು ನಾವೆಲ್ಲರೂ ಭಾವಿಸುತ್ತೇವೆ.. ಆದರೆ ಶೋ ನಡೆಯಬೇಕೆಂದರೆ ಅದರ ಹಿಂದೆ ನೂರರಿಂದ ಇನ್ನೂರು ಮಂದಿ ಆ ಶೋಗಾಗಿ ಕೆಲಸ ಮಾಡುತ್ತಿರುತ್ತಾರೆ.. ಹೌದು ನಲವತ್ತೈದು ಕ್ಯಾಮರಾಗಳ ನಿರ್ವಹಣೆ ಜೊತೆಗೆ ಸದಸ್ಯರ ರೇಶನ್.. ಟಾಸ್ಕ್ ನಿರ್ವಹಣೆ.. ಚಟುವಟಿಕೆಗಳನ್ನು ನೀಡುವುದು ಹೀಗೆ ಸಾಕಷ್ಟು ಮಂದಿ ಬಿಗ್ ಬಾಸ್ ಮನೆಯಿಂದ ಹೊರಗೆ ಇದ್ದು ಕೆಲಸ ಮಾಡುತ್ತಿದ್ದಾರೆ.. ಇದೀಗ ಕೊರೊನಾದಿಂದಾಗಿ ಬಿಗ್ ಬಾಸಿಗೂ ಹೊಡೆತ ಬಿದ್ದಿದೆ.. ಹೌದು ಅದಾಗಲೇ ಎಲ್ಲರಿಗೂ ತಿಳಿದಿರುವಂತೆ ಕಿಚ್ಚ ಸುದೀಪ್ ಅವರು ಅನಾರೋಗ್ಯದ ಕಾರಣದಿಂದಾಗಿ ಎರಡು ವಾರಗಳ ಕಾಲ ವಾರಾಂತ್ಯದ ಕಾರ್ಯಕ್ರಮ ವಾರದ ಕತೆ ಕಿಚ್ಚನ ಜೊತೆ.. ಹಾಗೂ ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮವನ್ನು ನಡೆಸಿಕೊಟ್ಟಿರಲಿಲ್ಲ..

ಎರಡೂ ವಾರಗಳು ಸಹ ಇತರ ಚಟುವಟಿಕೆಗಳನ್ನು ನೀಡಿ ಮನೆಯ ಸದಸ್ಯರನ್ನು ಎಲಿಮಿನೇಟ್ ಮಾಡಿ ಕಳುಹಿಸಲಾಗಿತ್ತು.. ಅದರಂತೆ ಏಳನೇ ವಾರ ವಿಶ್ವನಾಥ್.. ಎಂಟನೇ ವಾರ ರಾಜೀವ್ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದರು.. ಇನ್ನು ಇದೀಗ ಚೇತರಿಸಿಕೊಂಡಿರುವ ಸುದೀಪ್ ಅವರು ಈ ವಾರ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತು.. ಸ್ವತಃ ಸುದೀಪ್ ಅವರೂ ಸಹ ಈ ವಾರ ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳುವ ವಿಚಾರವನ್ನು ತಿಳಿಸಿದ್ದರು.. ಆದರೆ ಅಲ್ಲಿ ನಡೆದದ್ದೇ ಬೇರೆಯಾಗಿದೆ.. ಹೌದು ವಾರಾಂತ್ಯದ ಕಾರ್ಯಕ್ರಮ ಮಾಡಬೇಕಾದರೆ ಸಾಕಷ್ಟು ಮಂದಿ ಒಟ್ಟಿಗೆ ಕೆಲಸ ಮಾಡಬೇಕು.. ಬಹಳಷ್ಟು ಪ್ರಾಪರ್ಟಿಗಳನ್ನು ಒದಗಿಸಬೇಕು.. ಹೊರಗೆ ಕೊರೊನಾ ಹೆಗ್ಗಿಲ್ಲದೇ ಹಬ್ಬುತ್ತಿದೆ..

ಇಂತಹ ಸಮಯದಲ್ಲಿ ವಾಹಿನಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.. ಹೌದು ಇಂತಹ ಕಷ್ಟದ ಸಮಯದಲ್ಲಿ ವಾರಾಂತ್ಯದ ಕಾರ್ಯಕ್ರಮವನ್ನು‌ ಮಾಡಿ ಅಪಾಯ ತಂದುಕೊಳ್ಳೂವುದು ಬೇಡ ಎಂದು ನಿರ್ಧರಿಸಿರುವ ವಾಹಿನಿ ಈ ವಾರವೂ ಕಿಚ್ಚ ಸುದೀಪ್ ಅವರ ಕಾರ್ಯಕ್ರಮ ಇರುವುದಿಲ್ಲ ಎಂದು ತಿಳಿಸಿದೆ.. ಹೌದು “ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ನಾಳೆ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ” ಎಂದು ಅಧಿಕೃತವಾಗಿ ತಿಳಿಸಿದ್ದಾರೆ.. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಸೇಫ್ ಎಂದುಕೊಳ್ಳುತ್ತಿರುವಾಗಲೇ ಕೊರೊನಾ ಎಫೆಕ್ಟ್ ಬಿಗ್ ಬಾಸ್ ಕಾರ್ಯಕ್ರಮದ ಮೇಲೂ ತಟ್ಟಿದಂತಾಗಿದೆ..