ಭಿಕ್ಷೆ ಇಂದ ಇದ್ದೀಯಾ..‌ ಸ್ನೇಹಿತ್ ಗೆ ಚುಚ್ಚಿದ ಸಂಗೀತಾ.. ಹೋಗೇ ಲೇ ಎಂದ ಸ್ನೇಹಿತ್..

0 views

ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಯಾವ ದಿನ ಜಗಳ ಇಲ್ಲ ಹೇಳಿ.. ಪ್ರತಿದಿನವೂ ಒಂದಲ್ಲಾ ಒಂದು ಜಗಳವೇ.. ಒಬ್ಬರ ಮೇಲೊಬ್ಬರು ಎಗರೋದು ಚುಚ್ಚಿ ಮಾತನಾಡೋದು.. ತಿರುಗಿಸಿ ಹೀಯಾಳಿಸೋದು ಇದ್ದದ್ದೇ.. ಅದೇ ರೀತಿ ನಿನ್ನೆ ಟಾಸ್ಕ್ ಮಾಡುವ ಸಮಯದಲ್ಲಿ ಸಂಗೀತಾ ಹಾಗೂ ಸ್ನೇಹಿತ್ ನಡುವೆ ಕೊಂಚ ಅತಿರೇಕವೇ ಆಗಿದೆ.. ಹೋಗೇ ಲೇ.. ಹೋಗೋ ಲೋ.. ಎನ್ನುವ ಮಾತಿಗೆ ಬಂದು ನಿಂತಿದೆ..

ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಮನೆಯ ಸದಸ್ಯರಿಗೆ ಚಟುವಟಿಕೆಯೊಂದನ್ನು ನೀಡಲಾಗಿತ್ತು.. ಮನೆಯಲ್ಲಿರುವ ನೆಗಟಿವ್ ವ್ಯಕ್ತಿಗಳಿಗೆ ಕಪ್ಪು ಹೂ.. ಪಾಸಿಟಿವ್ ವ್ಯಕ್ತಿಗಳಿಗೆ ಬಿಳಿ ಹೂವನ್ನು ನೀಡಬೇಕಾಗಿತ್ತು.. ಆ ಸಮಯದಲ್ಲಿ ಅತಿ ಹೆಚ್ಚು ಬಿಳಿ ಹೂ ಬಂದದ್ದು ವರ್ತೂರು ಸಂತೋಷ್ ಅವರಿಗೆ.. ಹಾಗೂ ಅತಿ ಹೆಚ್ಚು ಕಪ್ಪು ಹೂ ಕೊಟ್ಟು ನೆಗಟಿವ್ ಸದಸ್ಯ ಎಂಬ ಬಿರುದು ಬಂದದ್ದು ಸಂಗೀತಾಗೆ..

ನಂತರ ಟಾಸ್ಕ್ ಗಾಗಿ ಮನೆಯಲ್ಲಿ ಎರಡು ತಂಡಗಳ ರಚನೆಯಾಗಿ ಸಂಗೀತಾ ರಾಕ್ಷಸರ ತಂಡದ ನಾಯಕಿಯಾದರೆ ಅತ್ತ ವರ್ತೂರು ಸಂತೋಷ್ ಗಂದರ್ವರ ತಂಡದ ನಾಯಕನಾದರು.. ಈ ಸಮಯದಲ್ಲಿ ತಂಡಗಳಿಗೆ ಸದಸ್ಯರನ್ನು ಸ್ನೇಹಿತ್ ಕಳುಹಿಸಬೇಕಾಗಿದ್ದು ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳದೇ ನಮ್ರತಾ ಹೇಳಿದಂತೆಯೇ ವರ್ತೂರು ತಂಡಕ್ಕೆ ವಿನಯ್ ಮೈಕಲ್ ಎಲ್ಲರನ್ನೂ ಕಳುಹಿಸಿದರು.. ಹಾಗೆ ನಮ್ರತಾ ಮಾವುತ ನಮಗೆ ಬೇಡ ಎಂದಿದ್ದಕ್ಕೆ ಇತ್ತ ಸಂಗೀತಾ ತಂಡಕ್ಕೆ ಅವಿನಾಶ್ ರನ್ನ ಕಳುಹಿಸಲಾಯಿತು.. ಇದಕ್ಕೊಪ್ಪದ ಸಂಗೀತಾ ತಂಡ ಸ್ನೇಹಿತ್ ಜೊತೆ ಒಂದಷ್ಟು ಮಾತಿನ ಚಕಮಕಿಯನ್ನು ನಡೆಸಿದರು.. ಆದರೆ ಸ್ನೇಹಿತ್ ಯಾವುದೇ ಬದಲಾವಣೆ ಮಾಡದೇ ಸುಮ್ಮನಾದರು..

ಕೊನೆಗೆ ರಾಕ್ಷಸರ ಉಪಟಳ ಜಾಸ್ತಿ ಆದಾಗ.. ಗಲಾಟೆ ಮಾಡಿಕೊಳ್ಳದೆ ಆಟ ಆಡೋಣ ಎನ್ನುವ ಮಾತು ಶುರು ಮಾಡಿದ ಸ್ನೇಹಿತ್ ಗೆ ಸಂಗೀತಾ ತಿರುಗಿ ಬಿದ್ದರು.. ನಾವು ರಾಕ್ಷಸರು ನಮ್ಮ ಕೆಲಸವೇ ಹೀಗೆ ಎಂದರು.. ಆಗ ಸ್ನೇಹಿತ್ ಕೂಡ ಒಂದೇ ಪಕ್ಷಕ್ಕೆ ಸೇರಿದವನಂತೆ ಮಾತನಾಡುತ್ತಿದ್ದು ಇದು ಕೊನೆಗೆ ಏಕವಚನದಲ್ಲಿ ಮಾತನಾಡುವಷ್ಟು ಮಟ್ಟಕ್ಕೆ ಬಂದು ನಿಂತಿತು.. ಸ್ನೇಹಿತ್ ಅವರ ಪಕ್ಷಪಾತ ನಿರ್ಣಯಗಳ ಬಗ್ಗೆ ಸಂಗೀತಾ ಕೆರಳಿದರು.. ಇಬ್ಬರ ನಡುವೆ ಮಾತಿಗೆ ಮಾತು ಜೋರಾಗಿತ್ತು.. ಭಿಕ್ಷೆ ತಗೊಂಡು ಕ್ಯಾಪ್ಟನ್ ಆಗಿದ್ದೀಯಾ ಎಂದು ಸಂಗೀತಾ ಸ್ನೇಹಿತ್ ಗೆ ಚುಚ್ಚಿದರು.. ಅತ್ತ ಸ್ನೇಹಿತ್ ಕೋಪಗೊಂಡು “ಹೋಗೇ” ಎಂದಿದ್ದು.. ಇದು ಸಂಗೀತಾಳನ್ನು ಮತ್ತಷ್ಟು ಕೆರಳಿಸಿ ಆಕೆಯೂ ಹೋಗೋ ಲೋ ಎಂದರು.. ಪ್ರತಿಯಾಗಿ ಸ್ನೇಹಿತ್ ಕೂಡ ಹೋಗೇ ಲೇ ಎಂದಿದ್ದು ಸಿರಿ ಅವರು ಮಧ್ಯ ಪ್ರವೇಶಿಸಿ ಈ ಮಾತುಗಳನ್ನು ಆಡಬೇಡಿ ಎಂದು ಇಬ್ಬರಿಗೂ ತಿಳಿಸಿ ಹೇಳಿದರು..