ಬಿಗ್ ಬಾಸ್ ಮನೆಯಿಂದ ಸಂಗೀತಾ ಹೊರಕ್ಕೆ? ಕಾರಣವೇನು..?

0 views

ಬಿಗ್ ಬಸ್ ಸೀಸನ್ ಹತ್ತರ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ನಟಿ ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮನೆಗೆ ಬಂದ ದಿನದಿಂದಲೂ ಆಗಾಗ ಸುದ್ದಿಯಾಗುತ್ತಿದ್ದಾರೆ.. ಅದರಲ್ಲೂ ಸಂಗೀತಾ ಹಾಗೂ ವಿನಯ್ ಗೌಡ ನಡುವಿನ ಗಲಾಟೆಗಳು ಕೊಂಚ ವಿಪರೀತವೇ ಆಗಿದ್ದು ಜಗಳಗಳ ಮೂಲಕ ಒಂದಿಷ್ಟು ಸದ್ದು ಮಾಡಿದರೆ ಅತ್ತ ಸಂಗೀತಾ ಹಾಗೂ ಕಾರ್ತಿಕ್ ಮಹೇಶ್ ಇಬ್ಬರ ನಡುವಿನ ಅತಿಯಾದ ಅತ್ಮೀಯತೆಯ ಕಾರಣಕ್ಕೂ ಒಂದಿಷ್ಟು ಸುದ್ದಿಯಾದರು.. ಇನ್ನು ಬಿಗ್ ಬಾಸ್ ಮನೆಗೆ ಬಂದಿರುವ ಮಹಿಳಾ ಸ್ಪರ್ಧಿಗಳ ಪೈಕಿ ಸಿನಿಮಾ ನಾಯಕಿಯ ಕೋಟಾದಡಿಯಲ್ಲಿ ಸಂಗೀತಾ ಶೃಂಗೇರಿ ಅವರು ಬಂದಿದ್ದರೂ ಕೂಡ ಕಿರುತೆರೆಯ ಹಿನ್ನೆಲೆ ಇದ್ದ ಕಾರಣ ಈ ಹಿಂದೆ ಹರಹರ ಮಹಾದೇವ ಧಾರಾವಾಹಿಯಲ್ಲಿ ವಿನಯ್ ಗೌಡ ಹಾಗೂ ಸಂಗೀತ ನಡುವೆ ಆಗಿರುವ ಕೆಲ ಮನಸ್ತಾಪಗಳು ಈಗ ಬಿಗ್ ಬಾಸ್ ಮನೆಯೊಳಗೆ ಪರಿಣಾಮ ಬೀರುತ್ತಿದ್ದು ಸಂಗೀತಾ ಹಾಗೂ ವಿನಯ್ ಸಧ್ಯ ಬಿಗ್ ಬಾಸ್ ಗೆ ಕಂಟೆಂಟ್ ನೀಡುಚ ಸರಕುಗಳೆಂದರೂ ತಪ್ಪಾಗಲಾರದು..

ಇನ್ನು ಸಂಗೀತಾ ಶೃಂಗೇರಿ ಅವರು ಆಡುತ್ತಿರುವ ಆಟದ ರೀತಿ ನೋಡಿದರೆ ಸಂಗೀತಾ ಅವರು ಬಿಗ್ ಬಾಸ್ ಈ ಸೀಸನ್ ನಲ್ಲಿ ಕೊನೆಯವರೆಗೂ ಉಳಿಯಬಹುದು ಎಂದು ಸುಲಭವಾಗಿ ಅಂದಾಜಿಸಬಹುದು.. ಆದರೆ ಬಿಗ್ ಬಾಸ್ ಮನೆಯಲ್ಲಿ ಒಬ್ಬ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಗುರುತುಸಿಕೊಂಡಿರುವ ಇದೇ ಸಂಗೀತಾ ಅವರು ಈ ವಾರವೇ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಮಾತನಾಡಿದ್ದಾರೆ.. ಹೌದು ಬಿಗ್ ಬಾಸ್ ಸೀಸನ್ ಹತ್ತು ಶುರುವಾದ ದಿನದಿಂದಲೂ ಸಂಗೀತಾ ಬಿಗ್ ಬಾಸ್ ಮನೆಗೆ ಕಾಲಿಟ್ಟಾಗಿನಿಂದಲೂ ವಿನಯ್ ಗೌಡ ಜೊತೆ ಒಂದಲ್ಲಾ ಒಂದು ವಿಚಾರಕ್ಕೆ ಜಗಳಗಳು ಆಗುತ್ತಿದೆ.. ಮೊದಲು ಅಸಮರ್ಥರಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಸಂಗೀತಾ ಸಾಕಷ್ಟು ಸವಾಲುಗಳನ್ನು ಎದುರಿಸಿದರೂ ಕೂಡ ಯಾವುದಕ್ಕೂ ಕುಗ್ಗಲಿಲ್ಲ.. ಆದರೆ ಈಗ ಇದೊಂದು ಸಣ್ಣ ವಿಚಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದ್ದಾರೆ.. ಕೆಳಗಿನ ವೀಡಿಯೋ ನೋಡಿ..

ಹೌದು ಸಂಗೀತಾ ಮೊದಲ ದಿನದಿಂದಲೂ ಯಾವುದೇ ಟಾಸ್ಕ್ ಆಗಲಿ ಕೊಂಚವೂ ಅಂಜದೆ ಮುಂಚೂಣಿಯಲ್ಲಿ ನಿಂತು ಟಾಸ್ಕ್ ಆಡುವರು.. ಸಾಕಷ್ಟು ಆಟಗಳನ್ನು ಗೆದ್ದಿದ್ದೂ ಉಂಟು.. ಇನ್ನು ಇವರ ಕಾರಣದಿಂದಲೇ ಮೊದಲ ವಾರ ಮನೆಯ ಸದಸ್ಯರಿಗೆ ಆಹಾರ ಸಾಮಾಗ್ರಿಗಳು ದೊರೆತಿದ್ದು‌. ಇಂತಹ ಸಂಗೀತಾ ಅವರು ಮೊನ್ನೆ ನಡೆದ ಆ ಒಂದು ಘಟನೆಯಿಂದ ಸಂಪುರ್ಣವಾಗಿ ಕುಗ್ಗಿ ಹೋಗಿದ್ದು ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಾಗಿ ತಿಳಿಸಿದ್ದಾರೆ..

ಈ ವಾರ ಬಿಗ್ ಬಾಸ್ ಮನೆಯಲ್ಲಿ ಮನೆಯ ಸದಸ್ಯರನ್ನು ಎರಡು ಗುಂಪುಗಳಾಗಿ ಮಾಡಿದ್ದು.. ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಗುಂಪುಗಳ ನಾಯಕರಾಗಿದ್ದರು.. ಇನ್ನು ಸಂಗೀತಾ ಕಾರ್ತಿಕ್ ಮಹೇಶ್ ತಂಡದಲ್ಲಿದ್ದು ಆಟವಾಡಿದರು.. ವಿನಯ್ ಹಾಗೂ ಸಂಗೀತಾ ನಡುವೆ ಅದಾಗಲೇ ಶೀತಲ ಸಮರವಿದ್ದ ಕಾರಣ ಆಗಾಗ ಭಿನ್ನಾಭಿಪ್ರಾಯ ಮೂಡುತ್ತಲೇ ಇತ್ತು.. ಇನ್ನು ಮೊನ್ನೆಯಾಡಿದ ಟಾಸ್ಕ್ ನಲ್ಲಿ ವಿನಯ್ ಗೌಡ ರ ಮಾಣಿಕ್ಯ ತಂಡ ವಿಜಯಿಯಾಗಿ ಸಂಗೀತಾ ಇದ್ದ ರಣ ಶಕ್ತಿ ತಂಡ ಸೋಲನ್ನು ಕಂಡಿತ್ತು.. ಸೋತ ತಂಡದ ಒಬ್ಬ ಸದಸ್ಯರಿಗೆ ಸಗಣಿ ನೀರನ್ನು ಮೈಮೇಲೆ ಹಾಕುವ ಶಿಕ್ಷೆಯನ್ನು ವಿಜಯಿ ತಂಡ ನೀಡಬಹುದಾಗಿತ್ತು.. ಇನ್ನು ಗೆದ್ದ ವಿನಯ್ ಗೌಡ ತಂಡ ಆ ಶಿಕ್ಷೆಗೆ ಸಂಗೀತಾ ಅವರನ್ನು ಆಯ್ಕೆ ಮಾಡಿಕೊಂಡರು‌‌.. ಅದೇ ಅಲ್ಲಾದ ದೊಡ್ಡ ಯಡವಟ್ಟು‌‌.. ಸಂಗೀತಾ ಟಾಸ್ಕ್ ಗಳಲ್ಲಿ ಇತರರಿಗಿಂತ ಉತ್ತಮವಾಗಿ ಆಡಿದ್ದು ರೂಲ್ಸ್ ವಿಚಾರದಲ್ಲಿ ಆಗ ತಮ್ಮ ತಂಡದ ಸದಸ್ಯರು ರೂಲ್ಸ್ ಬ್ರೇಕ್ ಮಾಡದಂತೆ ಎಚ್ಚರ ವಹಿಸುತ್ತಿದ್ದರು.. ಇಷ್ಟಿದ್ದರೂ ಕೂಡ ವಿನಯ್ ಗೌಡ ಅವರ ತಂಡ ಶಿಕ್ಷೆಗೆ ಸಂಗೀತಾ ಅವರನ್ನೇ ಆಯ್ಕೆ ಮಾಡಿಕೊಂಡಿದ್ದು ಸಂಗೀತಾ ಅವರಿಗೆ ನೋವನ್ನುಂಟು ಮಾಡಿತ್ತು.. ಕೆಳಗಿನ ವೀಡಿಯೋ ನೋಡಿ..

ಇನ್ನು ಶಿಕ್ಷೆಯ ಪ್ರಕಾರ ಗೆದ್ದ ತಂಡದ ಎಲ್ಲಾ ಸದ್ಸ್ಯರು ಸಂಗೀತಾ ಅವರ ಮೈ ಮೇಲೆ ಸಗಣಿ ನೀರನ್ನು ಹಾಕಿದರು‌.‌ ತಲೆಯನ್ನೂ ಸಹ ಬಿಡದೆ ತಲೆಯ ಮೇಲಿನಿಂದ ಸ್ಂಪೂರ್ಣ ದೇಹ ಮುಚ್ಚುವಷ್ಟು ಸಗಣಿ ನೀರನ್ನು ಹಾಕಿದರು.. ಇನ್ನು ಇದೇ ಅವಸ್ಥೆಯಲ್ಲಿ ಹದಿನೈದು ನಿನಿಷಗಳ ಕಾಲ ನಿಲ್ಲಬೇಕಾಗಿತ್ತು.. ಎಲ್ಲಾ ಮುಗಿದ ಬಳಿಕ ಸ್ನಾನ ಮುಗಿಸಿ ಶುಚಿಯಾದ ಸಂಗೀತಾ ವಿನಯ್ ಗೌಡ ಅವರೇ ನನ್ನನ್ನು ಟಾರ್ಗೆಟ್ ಮಾಡಿ ಈ ನಿರ್ಧಾರ ತೆಗೆದು ಕೊಂಡಿದ್ದಾರೆ ಎಂದು ಆರೋಪಿಸಿದರು‌‌..

ಇನ್ನು ಆ ರಾತ್ರಿ ಸಂಪೂರ್ಣವಾಗಿ ನಿದ್ರೆ ಮಾಡದ ಸಂಗೀತಾ ಅವರು ಕ್ಯಾಮರ ಮುಂದೆ ಹೋಗಿ ಕಣ್ಣೀರಿಟ್ಟು ಈ ವಾರ ತಮ್ಮನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸುವಂತೆ ಮನವಿ ಮಾಡಿಕೊಂಡರು.. ಇನ್ನು ಈ ವಿಚಾರವನ್ನು ಸ್ನೇಹಿತ ಕಾರ್ತಿಕ್ ಮಹೇಶ್ ಗೂ ಹೇಳಿದ್ದು ನಾನು ಈ ವಾರ ಮನೆಗೆ ಹೊಗುತ್ತೇನೆ ಎಂದು ಕಣ್ಣೀರಿಟ್ಟರು.. ಇದಕ್ಕಾ ನಾನು ಈ ಮನೆಗೆ ಬಂದಿದ್ದು.. ನನಗೆ ಇಲ್ಲಿ ಇರಲು ಸಾಧ್ಯವಿಲ್ಲ ನಾನು ಹೋಗ್ತೀನಿ‌ ಎಂದರು.. ಕೊನೆಗೆ ಆ ದಿನ ಕಾರ್ತಿಕ್ ಮಹೇಶ್ ಒಂದಷ್ಟು ಮಾತುಗಳನ್ನಾಡಿ ಸಮಾಧಾನ ಪಡಿಐದರು..ಆದರೂ ಕೂಡ ಎರಡನೇ ದಿನವೂ ಅಂದರೆ ನಿನ್ನೆಯೂ ಸಹ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ನಿರ್ಧರಾದಲ್ಲಿಯೇ‌ ಇದ್ದ ಸಂಗೀತಾ ಅವರು ಈ ವಾರದ ನಾಮಿನೇಷನ್ ಕೂಡ ಆಗಿದ್ದು ವಾರಾಂತ್ಯದಲ್ಲಿ ತಾವು ಬಿಗ್ ಬಾಸ್ ನಿಂದ ಹೊರ ಹೋಗುವ ನಿರ್ಧಾರಕ್ಕೆ ಬದ್ಧರಾಗಿರುವರಾ.. ಕಿಚ್ಚಾ ಸುದೀಪ್ ಅವರ ಮುಂದೆಯೂ ಮನೆಯಿಂದ ಹೊರ ಹೋಗುವ ಅಭಿಪ್ರಾಯ ತಿಳಿಸುವರಾ ಅಥವಾ ಪ್ರೇಕ್ಷಕರೇ ಬಿಗ್ ಬಾಸ್ ನಿಂದ ಹೊರ ಕಳುಹಿಸುವರಾ ಕಾದು ನೋಡಬೇಕಿದೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.