ಬಿಗ್ ಬಾಸ್ ಮೊದಲ ಎಲಿಮಿನೇಷನ್ ಮುಕ್ತಾಯ.. ಮನೆಯಿಂದ ಹೊರ ನಡೆದ ಖ್ಯಾತ ಸ್ಪರ್ಧಿ..

0 views

ಬಿಗ್ ಬಾಸ್ ಸೀಸನ್ ಹತ್ತು ಶುರುವಾಗಿ ಅದಾಗಲೇ ಒಂದು ವಾರ ಕಳೆದಿದ್ದು ನೋಡು ನೋಡುತ್ತಲೇ ಮೊದಲ ಎಲಿಮಿನೇಷನ್ ಕೂಡ ಮುಕ್ತಾಯಗೊಂಡಿದೆ.. ಹೌದು ಬಿಗ್ ಬಾಸ್ ಸೀಸನ್ ಹತ್ತು ಹಲವಾರು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು.. ಅದರಲ್ಲೂ ಈ ಬಾರಿಯ ಸ್ಪರ್ಧಿಗಳ ಆಯ್ಕೆ ಕೊಂಚ ಆಸಕ್ತಿದಯಾಕವಾಗಿತ್ತು.. ಅತಿಯಾದ ಸ್ಟಾರ್ ಗಳನ್ನು ಕರೆತರದೆ ಎಲ್ಲರಿಗೂ ಕನೆಕ್ಟ್ ಆಗುವಂತಹ ಒಂದಿಷ್ಟು ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸಿದ್ದು ಈ ಸೀಸನ್ ಯಶಸ್ವಿಯೂ ಆಯಿತೆನ್ನಬಹುದು.. ಇನ್ನು ಎಂದಿನಂತೆ ಒಂದು ವಾರ ಕಳೆದಿದ್ದು ಇಂದು ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ವಾರದ ಕತೆ ನಡೆದಿದ್ದು ಒಂದಿಷ್ಟು ಜನರಿಗೆ ಉಗಿದು ಉಪ್ಪಾಕಿರೋದೂ ಉಂಟು.. ಡ್ರೋನ್ ಪ್ರತಾಪ್ ನನ್ನು ಹೀಯಾಳಿಸಿದ ಅಷ್ಟೂ ಜನರಿಗೂ ಗ್ರಹಚಾರ ಬಿಡಿಸಿದ ಕಿಚ್ಚ ಸುದೀಪ್ ಅವರು ಎಂದಿನಂತೆ ತಮ್ಮ ಮಾತುಗಳಿಂದ ಜನರಿಗೆ ಮತ್ತಷ್ಟು ಇಷ್ಟ ವಾದರು..

ಇನ್ನು ಎಲಿಮಿನೇಷನ್ ಪ್ರಕ್ರಿಯೆಗೆ ಬರುವುದಾದರೆ ಈ ಬಾರಿ ಸಮರ್ಥ ಸದಸ್ಯರಲ್ಲಿ ಒಂದಿಷ್ಟು ಮಂದಿ.. ಅಸಮರ್ಥ ಸದಸ್ಯರಲ್ಲಿ ಒಂದಿಷ್ಟು ಮಂದಿ ನಾಮಿನೇಟ್ ಆಗಿದ್ದರು.. ಅಸಮರ್ಥ ಸದಸ್ಯರ ಪೈಕಿ ಡ್ರೋನ್ ಪ್ರತಾಪ್.. ತನಿಷಾ.. ಕಾರ್ತಿಕ್ ಮಹೇಶ್.. ವರ್ತೂರ್ ಸಂತೋಷ್.. ನಾಮಿನೇಟ್ ಆದರೆ ಇತ್ತ ಸಮರ್ಥ ಸದಸ್ಯರ ಪೈಕಿ ಮೈಕಲ್.. ಸ್ನೇಕ್ ಶ್ಯಾಮ್.. ಸಿರಿ.. ನೀತು ನಾಮಿನೇಟ್ ಆದರು.. ಮೊದಲ ವಾರ ಮನೆಯಿಂದ ಹೊರ ಹೋಗಲು ಒಟ್ಟು ಎಂಟು ಮಂದಿ ನಾಮಿನೇಟ್ ಆಗಿದ್ದು ಎಂದಿನಂತೆ ನಾಮಿನೇಟ್ ಅದವರನ್ನು ಉಳಿಸಲು ಪ್ರೇಕ್ಷಕರಿಗೆ ವೋಟಿಂಗ್ ಅವಕಾಶ ನೀಡಿದ್ದು ತಮಗೆ ಇಷ್ಟವಾದ ಸದಸ್ಯರನ್ನು ವೋಟ್ ಮೂಲಕ ಬಿಗ್ ಬಾಸ್ ಮನೆಯೊಳಗೆ ಉಳಿಸಬಹುದಾಗಿತ್ತು..

ಇನ್ನು ಇಂದಿನ ವಾರದ ಕತೆಯ ನಂತರ ಎಲಿಮಿನೇಷನ್ ಪ್ರಕ್ರಿಯೆ ಕೂಡ ಮುಕ್ತಾಯಗೊಂಡಿದ್ದು ಬಿಗ್ ಬಾಸ್ ಮನೆಯಿಂದ ಪ್ರಮುಖ ಸದಸ್ಯರೊಬ್ಬರು ಹೊರ ನಡೆದಿದ್ದಾಗಿದೆ.. ಹೌದು ಬಲ್ಲ ಮೂಲಗಳಿಂದ ಮಾಹಿತಿಯ ಪ್ರಕಾರ ಮೈಸೂರಿನ ಹೆಸರಾಂತ ಉರಗ ತಜ್ಞ ಸ್ನೇಕ್ ಶ್ಯಾಮ್‌ಅವರು ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ.. ಹೌದು ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಸ್ನೇಕ್ ಶ್ಯಾಮ್ ಅವರಿಗೆ ಆರೋಗ್ಯ ಸಮಸ್ಯೆ ಕಾಡುತಿತ್ತು.. ಹಾಗೆಯೇ ಮನೆಯ ಸದಸ್ಯರು ಕೂಡ ವಯಸ್ಸಿನ ಕಾರಣ ನೀಡಿಯೇ ಸ್ನೇಕ್ ಶ್ಯಾಮ್ ಅವರನ್ನು ನಾಮಿನೇಟ್ ಮಾಡಿದ್ದರು..

ಜೊತೆಗೆ ಇದೆಲ್ಲಾ ಸಮಸ್ಯೆ ಇದ್ದರೂ ಕೂಡ ಮನೆಯಲ್ಲಿ ಒಂದಿಷ್ಟು ಕಂಟೆಂಟ್ ನೀಡಿದ್ದರೆ ಅಂದರೆ ಸಕ್ರೀಯರಾಗಿ ಮನರಂಜನೆ ನೀಡಿದ್ದರೆ ಬಹುಶಃ ಸ್ನೇಕ್ ಶ್ಯಮ್ ಅವರು ಮತ್ತೊಂದಷ್ಟು ದಿನ ಬಿಗ್ ಬಾಸ್ ಮನೆಯೊಳಗೆ ಉಳಿದುಕೊಳ್ಳುತ್ತಿದ್ದರೆನ್ನಬಹುದು.. ಬಿಗ್ ಬಸ್ ಸೀಸನ್ ಹತ್ತರಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್ ಅವರಾಗಿದ್ದು ನಾಳಿನ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರ ಜೊತೆ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.. ಇನ್ನುಳಿದಂತೆ ಡ್ರೋನ್ ಪ್ರತಾಪ್ ಕರ್ತಿಕ್ ಮಹೇಶ್ ನೀತು ಮೈಕಲ್ ಸಿರಿ ಸೇರಿದಂತೆ ಉಳಿದ ಎಲ್ಲಾ ಸ್ಪರ್ಧಿಗಳು ಸೇಫ್ ಆಗಿದ್ದು ಬಿಗ್ ಬಾಸ್ ಮನೆಯ ಎರಡನೇ ವಾರದ ಜರ್ನಿಯನ್ನು ಮುಂದುವರೆಸಿದ್ದಾರೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.