ಶುರುವಾಯ್ತು ಬಿಗ್‌ ಬಾಸ್‌ ಚಿತ್ರೀಕರಣ.. ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ಆರು ಸ್ಪರ್ಧಿಗಳು ಇವರೇ ನೋಡಿ‌..

0 views

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಹೆಸರು ಪಡೆದಿರುವ ಬಿಗ್ ಬಾಸ್ ಕನ್ನಡದ ಸೀಸನ್ ಹತ್ತು ಶುರುವಾಗಿದೆ.. ಈ ಬಾರಿ ಸ್ವಲ್ಪ ವಿಭಿನ್ನವಾಗಿ ಪ್ಲಾನ್ ಮಡಿರುವ ವಾಹಿನಿ ಬಿಗ್ ಬಾಸ್ ಮನೆಯನ್ನೂ ಸಹ ಬೇರೆ ಜಾಗಕ್ಕೆ ಬದಲಿಸಿದ್ದು ಈ ಬಾರಿ ಹೊಸ ಮನೆ ಹಾಗೂ ಹೊಸ ರೀತಿಯಾಗಿ ಶೋ ಮೂಡಿ ಬರಲಿದೆ ಎನ್ನಲಾಗಿದೆ.. ಇನ್ನು ಎಂದಿನಂತೆ ಕಿಚ್ಚ ಸುದೀಪ್ ಅವರ ನಿರೂಪಣೆ ಇರಲಿದ್ದು ಶೋ ಇಂದಿನಿಂದ ಅಂದರೆ ಎಂಟನೇ ತಾರೀಕಿನಿಂದ ಟಿವಿ ಗಳಲ್ಲಿ ಪ್ರಸಾರವಾಗಲಿದೆ.. ಆದರೆ ನಿನ್ನೆ ಶನಿವಾರವೇ ಚಿತ್ರೀರಣ ಆರಂಭವಾಗಿದ್ದು ಎಲ್ಲರಿಗೂ ಚಿರಪರಿಚಿತ ಆರು ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ..ಹೌದು ಬಿಗ್ ಬಾಸ್ ಸೀಸನ್ ಹತ್ತರ ಗ್ರ್ಯಾಂಡ್ ಓಪನಿಂಗ್ ಇಂದು ಭಾನುವಾರ ಸಂಜೆ ಆರು ಗಂಟೆಯಿಂದ ಪ್ರಸರವಾಗಲಿದ್ದು ಒಂದೇ ದಿನ ಹದಿನೆಂಟು ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ.. ಇನ್ನು ನಾಳೆಯಿಂದ ಪ್ರತಿ ರಾತ್ರಿ ಒಂಭತ್ತು ಮೂವತ್ತಕ್ಕೆ ಸಂಚಿಕೆಗಳು ಪ್ರಸಾರವಗಲಿದೆ..

ಇನ್ನು ಸಹಜವಾಗಿ ಎಲ್ಲಾ ಸೀಸನ್ ಗಳಂತೆ ಈ ಸೀಸನ್ ನಲ್ಲಿಯೂ ಬಿಗ್ ಬಾಸ್ ಮನೆಗೆ ಕಾಲಿಡುವ ಸ್ಪರ್ಧಿಗಳ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇದೆ.. ಹೌದು ಶನಿವಾರದ ಚಿತ್ರೀಕರಣದಲ್ಲಿ ಅದಾಗಲೇ ಆರು ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಾಗಿದೆ.. ಇನ್ನು ಕಿಚ್ಚ ಸುದೀಪ್ ಅವರೂ ಸಹ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಮನೆಯ ಪರಿಚಯವನ್ನು ಮಾಡಲಾಗಿದೆ.. ಜೊತೆಗೆ ಹೊಸತನದ ಈ ಬಿಗ್ ಬಾಸ್ ಈ ಬಾರಿ ಹೆಚ್ಚು ಟಿ ಆರ್ ಪಿ ತಂದುಕೊಡುವ ನಿರೀಕ್ಷೆಯಲ್ಲಿ ವಾಹಿನಿ ಇದೆ.. ಇನ್ನು ಸ್ಪರ್ಧಿಗಳ ವಿಚಾರಕ್ಕೆ ಬರುವುದಾದರೆ ಮೊದಲಿಗೆ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವವರು ಸ್ನೇಕ್ ಶ್ಯಾಮ್.. ಹೌದು ಮೈಸೂರಿನಲ್ಲಿ ಪ್ರಖ್ಯಾತರಾಗಿರುವ ಉರಗ ತಜ್ಞ ಸ್ನೇಕ್ ಶ್ಯಾಮ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.. ಸ್ನೇಕ್ ಶ್ಯಾಮ್ ಅವರು ಮೈಸೂರು ಹಾಗೂ ಸುತ್ತಮುತ್ತ ಸಾವಿರಾರು ಹಾವುಗಳನ್ನು ಸಂರಕ್ಷಣೆ ಮಾಡಿದ್ದು ಮೈಸೂರಿನಲ್ಲಿ ಕಾರ್ಪೋರೇಟರ್ ಕೂಡ ಆಗಿದ್ದವರು.. ಆದರೆ ಇದೆಲ್ಲದರ ಜೊತೆಗೆ ಸ್ನೇಕ್ ಶ್ಯಾಮ್ ತಮ್ಮ ನೇರ ಮಾತುಗಳಿಗೂ ಹೆಸರುವಾಸಿ.. ಕೆಲ ತಿಂಗಳ ಹಿಂದೆ ಕಲಾಮಾಧ್ಯಮದ ವಾಹಿನಿಯ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಸ್ನೇಕ್ ಶ್ಯಾಮ್ ಅವರ ಡೈಲಾಗ್ ಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು.. ಇದೀಗ ಸ್ನೇಕ್ ಶ್ಯಾಮ್ ಅವರು ಭರ್ಜರಿಯಾಗಿ ಬಿಗ್ ಬಾಸ್ ಸೀಸನ್ ಹತ್ತಕ್ಕೆ ಕಾಲಿಟ್ಟಿದ್ದು ಎಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿರುವರೋ ಕಾದು ನೋಡಬೇಕಿದೆ..

ಇನ್ನು ಎರಡನೆಯದಾಗಿ ಕಿರುತೆರೆಯ ನಟಿ ನಮ್ರತಾ ಗೌಡ ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.. ಹೌದು ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಕಿರುತೆರೆ ಎಂಬ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ನಮ್ರತಾ ಗೌಡ ಸಾಕಷ್ಟು ವರ್ಷಗಳ ಕಾಲ ಅದೇ ಧಾರಾವಾಹಿಯಲ್ಲಿ ಹಿಮ ಎಂಬ ಪಾತ್ರದಲ್ಲಿ ಕಾಣಿಸಿಕೊಂಡು ಮಮೆಮಾತಾಗಿದ್ದರು.. ನಂತರದಲ್ಲಿ ಧಾರಾವಾಹಿ ಮುಗಿದ ಬಳಿಕ ಒಂದಷ್ಟು ದಿನಗಳ ಕಾಲ ಬ್ರೇಕ್ ಪಡೆದುಕೊಂಡಿದ್ದ ನಮ್ರತಾ ನಾಗಿಣಿ 2 ಧಾರಾವಾಹಿ ಮೂಲಕ ಮತ್ತೆ ಎಂಟ್ರಿ ಕೊಟ್ಟರು.. ನಾಗಿಣಿ 2 ಧಾರಾವಾಹಿಯಲ್ಲಿಯೂ ಸಾಕಷ್ಟು ವರ್ಷಗಳ ಅಭಿನಯಿಸಿದ ನಮ್ರತಾ ಇದರ ಜೊತೆಗೆ ತಮ್ಮದೇ ಆದ ಯೂಟ್ಯೂಬ್ ವಾಹಿನಿಯನ್ನು ಹೊಂದಿದ್ದು ಆ ಮೂಲಕವೂ ಆದಾಯದ ಜೊತೆಗೆ ಜನರ ಜೊತೆ ಸತತ ಸಂಪರ್ಕದಲ್ಲಿದ್ದಾರೆ ಎನ್ನಬಹುದು‌.. ಇನ್ನು ಮೊನ್ನೆ ಮೊನ್ನೆಯಷ್ಟು ಹೊಸ ಮನೆ ಕಟ್ಟಿ ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿದ್ದ ನಮ್ರತಾ ಗೌಡ ಇದೀಗ ಬಿಗ್ ಬಾಸ್ ಮನೆಗೆ ಗೃಹ ಪ್ರವೇಶ ಮಾಡಿದ್ದು ಇವರ ಈ ಬಿಗ್ ಬಸ್ ಜರ್ನಿ ಎಷ್ಟು ದಿನ ಇರುವುದೋ ಕಾದು ನೋಡಬೇಕಿದೆ..

ಇನ್ನು ಮೂರನೇಯದಾಗಿ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಾಗಿದೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿ ಹಾಗೂ ಟ್ರೋಲ್ ಆಗುತ್ತಲೇ ಇದ್ದ ರಕ್ಷಕ್ ಬುಲೆಟ್ ಕೂಡ ಬಿಗ್ ಬಾಸ್ ಮನೆಗೆ ಬಂದಿದ್ದು ಒಂದಿಷ್ಟು ಮನರಂಜನೆ ಸಿಗೋದಂತೂ ಖಚಿತ ಎನ್ನಬಹುದಾಗಿದೆ.. ಗುರು ಶಿಷ್ಯರು ಸಿನಿಮಾ ಮೂಲಕ ಚಿತ್ರರಂಗಕ್ಕೆ ಸಹ ಕಲಾವಿದನಾಗಿ ಕಾಲಿಟ್ಟಿದ್ದ ರಕ್ಷಕ್ ಬುಲೆಟ್ ಇನ್ನು ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ.. ಆದರೆ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸ್ಟಾರ್ ಆದ ಹೀರೋ ಮಟ್ಟದಲ್ಲಿಯೇ ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆ ಹಾಗೂ ಮಾತುಗಳು ಪ್ರೆಸ್ ಮೀಟ್ ಗಳು ಇದ್ದವು.. ಈ ಕಾರಣಕ್ಕೆ ರಕ್ಷಕ್ ಸಾಕಷ್ಟು ಟ್ರೋಲ್ ಆಗುತ್ತಿದ್ದರು.. ಈಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು ಜನರ ಮನಸ್ಸು ಗೆಲ್ಲುವರ ಅಥವಾ ಮತ್ತಷ್ಟು ಟ್ರೋಲ್ ಆಗುವರಾ ಕಾದು ನೋಡಬೇಕಿದೆ..

ಇನ್ನು ಇದರ ಜೊತೆಗೆ ರ್ಯಾಪರ್ ಇಶಾನಿ.. ಟ್ರ್ಯಾನ್ಸ್ ಜಂಡರ್ ನೀತು.. ಹಾಗೂ ನಟ ವಿನಯ್ ಗೌಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.. ಎಂದು ತಿಳಿದು ಬಂದಿದ್ದು.. ಇಂದು ಬೆಳಿಗ್ಗೆ ಇಂದಲೇ ಚಿತ್ರೀಕರಣ ನಡೆಯುತ್ತಿದ್ದು ಮುಂದಿನ ವೀಡಿಯೋದಲ್ಲಿ ಮತ್ತಷ್ಟು ಮಾಹಿತಿಗಾಗಿ ಸ್ಟಾರ್ ನ್ಯೂಸ್ ಕನ್ನಡ ವಾಹಿನಿಯನ್ನು ಫಾಲೋ ಮಾಡಿ.. ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.