ಬಿಗ್ ಬಾಸ್ ಎಲಿಮಿನೇಷನ್ ಮುಕ್ತಾಯ.. ಮನೆಯಿಂದ ಹೊರ ಬಂದವರು ಇವರೇ ನೋಡಿ..

0 views

ಬಿಗ್ ಬಾಸ್ ಸೀಸನ್ ಹತ್ತರ ನಾಲ್ಕನೇ ವಾರದ ಎಲಿಮಿನೇಷನ್ ಮುಕ್ತಾಯವಾಗಿದ್ದು ಮನೆಯಲ್ಲಿ ಸಿಕ್ಕಾಪಟ್ಟೆ ಹೆಗರಾಡುತ್ತಿದ್ದ ಸ್ಪರ್ಧಿಯೇ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.. ಬಿಗ್ ಬಾಸ್ ಹತ್ತು ಸಾಕಷ್ಟು ವಿಶೇಷಗಳಿಗೆ ಗಮನ ಸೆಳೆದಿತ್ತು.. ಆದರೆ ಬರುಬರುತ್ತಾ ಅದ್ಯಾಕೋ ಜಗಳದ ಸೀಸನ್ ಆದ ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಕೆಲವರು ತಲೆಯಲ್ಲಿಯೇ ನಡೆಯುತ್ತಿದ್ದು ಕಿಚ್ಚ ಸುದೀಪ್ ಅಂತವರಿಗೆ ಸರಿಯಾಗಿಯೇ ಗ್ರಹಚಾರ ಬಿಡಿಸಿದ್ದರು.. ಆದರೀಗ ಒಂದು ಕೈ ಮೇಲೆ ಎನ್ನುವಂತೆ ದೊಡ್ಡ ಬಕೆಟ್ ಆಗಿದ್ದವನನ್ನು ಮನೆಗೆ ಕಳುಹಿಸಿದ್ದಾರೆ..

ಹೌದು ಈ ಸೀಸನ್ ನಲ್ಲಿ ಮೊದಲ ವಾರ ಸ್ನೇಕ್ ಶ್ಯಾಮ್ ಅವರು ಎಲಿಮಿನೇಟ್ ಆಗಿದ್ದರು.. ಎರಡನೇ ವಾರ ಗೌರೀಶ್ ಅಕ್ಕಿ ಅವರು ಎಲಿಮಿನೇಟ್ ಆದರು.. ಆದರೆ ಮೂರನೇ ವಾರ ಭಾಗ್ಯಶ್ರೀ ಅವರು ಎಲಿಮಿನೇಟ್ ಆಗಿದ್ದು ಆದರೆ ದಸರಾ ಉಡುಗೊರೆ ಎಂದು ಆ ವಾರ ಎಲಿಮಿನೇಷನ್ನು ರದ್ದು ಮಾಡಲಾಗಿತ್ತು.. ಇನ್ನು ಈ ವಾರ ಅಂದರೆ ಬಿಗ್ ಬಾಸ್ ಸೀಸನ್ ಹತ್ತರ ನಾಲ್ಕನೇ ವಾರ ಬರೋಬ್ಬರಿ ಒಂಭತ್ತು ಮಂದಿ ನಾಮಿನೇಟ್ ಆಗಿದ್ದು ಈಗ ಎಲಿಮಿನೇಷನ್ ಪ್ರಕ್ರಿಯೆ ಕೂಡ ಮುಕ್ತಾಯ ಗೊಂಡಿದೆ..

ಹೌದು ಈ ವಾರ ಮೈಕಲ್ ಕಾರ್ತಿಕ್ ಮಹೇಶ್ ವಿನಯ್ ರಕ್ಷಕ್ ತುಕಾಲಿ ಸಂತೋಷ್ ಸಿರಿ ನಮ್ರತಾ ವರ್ತೂರು ಸಂತೋಷ್ ಸ್ನೇಹಿತ್ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು.. ಅದರಲ್ಲಿ ನಿನ್ನೆಯೇ ವರ್ತೂರ್ ಸಂತೋಷ್ ಹಾಗೂ ಸಿರಿ ಮತ್ತು ಕಾರ್ತಿಕ್ ಮಹೇಶ್ ಅವರು ಸೇಫ್ ಆದರೆ ಇನ್ನುಳಿದ ಐದು ಸ್ಪರ್ಧಿಗಳು ಇಂದು ಸೇಫ್ ಆಗಿದ್ದು ರಕ್ಷಕ್ ಬುಲೆಟ್ ಮನೆಯಿಂದ ಗೇಟ್ ಪಾಸ್ ಪಡೆದಿದ್ದಾರೆ.. ಹೌದು ಬಿಗ್ ಬಾಸ್ ಮನೆಯಲ್ಲಿ ವಿನಯ್ ಗ್ವ್ ಬಕೆಟ್ ಹಿಡಿದುಕೊಂಡು ಹೊರಗೆ ಹೋದ್ಮೇಲೆ ಹಾಗ್ ಮಾಡಿ ಬಿಡ್ತೀನಿ.. ಹೀಗ್ ಮಾಡಿ ಬಿಡ್ತೀನಿ ಎಂದೆಲ್ಲಾ ವಯಸ್ಸಿಗೆ ಮೀರಿ ಹೆಗರಾಡುತ್ತಿದ್ದ ರಕ್ಷಕ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದು ಅವರುಗಳ ಅಹಂಕಾರಕ್ಕೆ ಸರಿಯಾದ ಪಾಠವನ್ನೇ ಕಲಿಸಿದಂತಾಗಿದೆ..

ಹೌದು ರಕ್ಷಕ್ ಬುಲೆಟ್ ಕಳೆದ ವಾರ ಕೂಡ ಡ್ರೋನ್ ಪ್ರಥಮ್ ನನ್ನು ಗೂಬೆ ಎಂದೆಲ್ಲಾ ಮಾತನಾಡಿದ್ದು ಕಿಚ್ಚ ಸುದೀಪ್ ಅವರು ಸರಿಯಾಗಿತೇ ಕ್ಲಾಸ್ ತೆಗೆದುಕೊಂಡಿದ್ದರು.. ಆದರೆ ಆತನ ವರ್ತನೆ ಮಿತಿ ಮೀರಿತ್ತು.. ಹಾಗ್ ಮಾಡ್ತೀನಿ ಹೀಗ್ ಮಾಡ್ತೀನಿ ಎಂದೆಲ್ಲಾ ಮಾತನಾಡಿದ್ದ ರಕ್ಷಕ್ ಈಗ ತಾನೇ ಮನೆಯಿಂದ ಹೊರನಡೆಯುವಂತಾಯಿತು..

ಅದಕ್ಕೆ ಹೇಳೋದು ಮತ್ತೊಬ್ಬರನ್ನು ಗೆಲ್ಲಿಸಲು.. ಮತ್ತೊಬ್ಬರಿಗೆ ಚಮಚಾಗಿರಿ ಮಾಡಿದರೆ ಹೆಚ್ಚು ದಿನ ಎಲ್ಲೂ ಉಳಿಯಲು ಸಧ್ಯವಿಲ್ಲವೆಂದು.. ಇನ್ನು ನಿನ್ನೆಯೂ ಕೂಡ ಕಿಚ್ಚಸುದೀಪ್ ಅವರು ವಿನಯ್ ಅವರಿಗೆ ಸಾಕಷ್ಟು ವಿಚಾರಗಳಿಗೆ ತರಾಟೆಗೆ ತೆಗೆದುಕೊಂಡಿದ್ದು.. ಬಳೆ ತೊಟ್ಟಿಕೊಳ್ಳುವ ವಿಚಾರವಾಗಿ ವಿನಯ್ ಸಮಸ್ತ ಕರ್ನಾಟಕದ ಜನತೆಗೆ ಕ್ಷಮೆಯನ್ನು ಕೇಳಿದ್ದಾರೆ.. ಇತ್ತ ಇಂದು ಕೂಡ ಒಂದಷ್ಟು ಕ್ಲಾಸ್ ತೆಗೆದುಕೊಂಡಿದ್ದು ಈ ವಾರ ವಿನಯ್ ಡ್ರೋನ್ ಪ್ರತಾಪ್ ಮೇಲೆ ಒಂದು ಗಂಭೀರ ಆರೋಪ ಮಡಿದ್ದು ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಸರಿ ಇಲ್ಲ ಎಂದಿದ್ದರು.. ಆ ವಿಚಾರ ತೆಗೆದ ಸುದೀಪ್ ಅವರು ಮನೆಯ ಸದಸ್ಯರಿಗೇ ಈ ಪ್ರಶ್ನೆಯನ್ನು ಕೇಳಿದ್ದು ಎಲ್ಲರೂ ಸಹ ಪ್ರತಾಪ್ನೋಡುವ ದೃಷ್ಟಿ ಸರಿಯಾಗಿಯೇ ಇದೆ ಎಂದಿದ್ದು ವಿನಯ್ ಗೆ ಮುಖಕ್ಕೆ ಹೊಡೆದಂತಾಗಿದೆ.. ಇನ್ನು ಡ್ರೋನ್ ಪ್ರತಾಪ್ ಗೂ ಕೂಡ ನೇರವಾಗಿ ಕೈ ಮುಗಿದು ಕ್ಷಮೆ ಕೇಳಿರುವ ವಿನಯ್ ಮುಂದಿನ ದಿನಗಳಲ್ಲಿ ತಮ್ಮ ತಪ್ಪನ್ನು ತಿದ್ದಿಕೊಂಡು ನಡೆಯುವರಾ ಕಾದು ನೋಡಬೇಕಿದೆ..

ಒಟ್ಟಿನಲ್ಲಿ ಮಾಸ್ ಡೈಲಾಗ್ ಬಿಡುತ್ತಾ ಮನೆಯಲ್ಲಿ ಚಮಚಾಗಿರಿ ಮಾಡಿಕೊಂಡಿದ್ದ ರಕ್ಷಕ್ ಈಗ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದು ಇನ್ನುಳಿದಂತೆ ಮೈಕಲ್ ತುಕಲೈ ವಿನಯ್ ನಮ್ರತಾ ಸ್ನೇಹಿತ್ ಎಲ್ಲರೂ ಸೇಫ್ ಆಗಿದ್ದು ಐದನೇ ವಾರದ ಬಿಗ್ ಬಾಸ್ ಜರ್ನಿಯನ್ನು ಮುಂದುವರೆಸಿದ್ದಾರೆ..