ವಿನಯ್‌ ಬಿಗ್‌ ಬಾಸ್‌ ಮನೆಯಲ್ಲಿ ಇರುವಾಗ ಹೊರಗೆ ಪತ್ನಿ ಅಕ್ಷತಾ ಹಾಗೂ ಮಗನಿಗೆ ಏನಾಗಿದೆ ನೋಡಿ..

0 views

ಬಿಗ್‌ ಬಾಸ್‌ ಸೇಸನ್‌ ಹತ್ತರ ಸ್ಪರ್ಧಿ ವಿನಯ್‌ ಗೌಡ ಬಿಗ್‌ ಬಾಸ್‌ ಗೆ ಬಂದ ಮೊದಲ ವಾರದಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ.. ವಿನಯ್‌ ಬಿಗ್‌ ಬಾಸ್‌ ಮನೆಯೊಳಗೆ ನಡೆದುಕೊಳ್ಳುತ್ತಿರುವ ರೀತಿ ಬಹಳಷ್ಟು ಜನರಿಗೆ ಇಷ್ಟವಾಗದೇ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದೂ ಉಂಟು.. ಇತ್ತ ಕಲರ್ಸ್‌ ಕನ್ನಡ ವಾಹಿನಿಯ ವೀಡಿಯೋಗಳಿಗೆ ಪ್ರೇಕ್ಷಕರು ವಿನಯ್‌ ನನ್ನು ಆಚೆ ಕಳಿಸಿ ಎಂದು ಕಮೆಂಟ್‌ ಮಾಡುತ್ತಿರೋದು ಉಂಟು.. ಆದರೆ ಈ ಎಲ್ಲದರ ನಡುವೆ ಬಿಗ್‌ ಬಾಸ್‌ ಮನೆಯಿಂದ ಹೊರಗೆ ವಿನಯ್‌ ಗೌಡ ಅವರ ಕುಟುಂಬದಲ್ಲಿ ಬೇರೆಯದ್ದೇ ರೀತಿಯ ಬೆಳವಣಿಗೆಗಳು ನಡೆದಿದೆ.. ಹೌದು ವಿನಯ್‌ ಬಿಗ್‌ ಬಾಸ್‌ ಮನೆಯಲ್ಲಿ ಅತಿ ಕೋಪಿಷ್ಟನ ರೀತಿ ಬಿಂಬಿತವಾಗುತ್ತಿರೋದು ಎಲ್ಲರಿಗೂ ತಿಳಿದಿದೆ.. ಆದರೆ ಇತ್ತ ಅವರ ಪತ್ನಿ ಹಾಗೂ ಮಗನ ಮೇಲೆ ಅದರ ಪರಿಣಾಮ ಬೀರುತ್ತಿದ್ದು ಇಂತವನ ಜೊತೆ ಹೇಗೆ ಸಂಸಾರ ಮಾಡ್ತೀಯಾ ಅವನನ್ನು ಬಿಟ್ಟು ಬಿಡು.. ಡಿವೋರ್ಸ್‌ ಕೊಟ್ಟುಬಿಡು ಎಂದು ಸಾಕಷ್ಟು ಜನರು ಪೋನ್‌ ಹಾಗೂ ಮೆಸೆಜ್‌ ಮೂಲಕ ಅಕ್ಷತಾಗೆ ಹೇಳುತ್ತಿದ್ದಾರಂತೆ.. ಅಷ್ಟೇ ಅಲ್ಲದೇ ಮಗನಿಗೂ ಕೂಡ ಆತನ ಸ್ನೇಹಿತರು ನಿಮ್ಮ ಅಪ್ಪ ಸರಿ ಇಲ್ಲ.. ತುಂಬಾ ಕೆಟ್ಟವರು ಎಂದೆಲ್ಲಾ ಮಾತುಗಳನ್ನು ಆಡುತ್ತಿದ್ದು ಅಕ್ಷತಾ ಹಾಗೂ ವಿನಯ್‌ ಅವರ ಮಗ ಕೂಡ ಮನೆಯಿಂದ ಹೊರ ಹೋಗಲು ಆಗುತ್ತಿಲ್ಲವಂತೆ.. ಬಿಗ್‌ ಬಾಸ್‌ ಮನೆಯೊಳಗೆ ವಿನಯ್‌ ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಖುದ್ದು ಮಾತನಾಡಿರುವ ಅಕ್ಷತಾ ಕಣ್ಣೀರಿಟ್ಟು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಕಲರ್ಸ್‌ ಕನ್ನಡ ವಾಹಿನಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ.. ನನ್ನ ಗಂಡನನ್ನು ತೋರುತ್ತಿರುವ ರೀತಿ ಸರಿ ಇಲ್ಲ ಎಂದಿದ್ದಾರೆ.. ಇಲ್ಲಿದೆ ನೋಡಿ ಅವರ ಮಾತುಗಳು..

ನನ್ನ ಗಂಡ ವಿನಯ್‌ ಬಹಳ ಒಳ್ಳೆಯವರು.. ಅವರ ಒಳ್ಳೆಯ ಗುಣಗಳನ್ನು ಶೋನಲ್ಲಿ ತೋರುತ್ತಿಲ್ಲ.. ಆದರೆ ಇಪ್ಪತ್ತ ನಾಲ್ಕು ಗಂಟೆ ಲೈವ್‌ ನೋಡುವವರಿಗೆ ನನ್ನ ಗಂಡನ ಬಗ್ಗೆ ತಿಳಿದಿದೆ.. ಬಿಗ ಬಾಸ್‌ ಮನೆಯಲ್ಲಿ ಎರಡನೇ ವಾರ ಪ್ರತಾಪ್ ಗೆ ಕಟಿಂಗ್ ಮಾಡಿದ್ದು ವಿನಯ್ ಆದರೆ ಅದನ್ನು ಶೋ ನಲ್ಲಿ ತೋರಲಿಲ್ಲ.. ಇನ್ನು ಸಂಗೀತಾ ವಿಚಾರ ಮಾತನಾಡುವುದಾದರೆ ಸಂಗೀತಾ ಬಗ್ಗೆ ಅವರು ಎಂದೂ ಯಾವ ವಿಚಾರವನ್ನೂ ನನಗೆ ಹೇಳಿಲ್ಲ.. ಸಾಮಾನ್ಯವಾಗಿ ಯಾವುದೇ ಧಾರಾವಾಹಿಯಾಗಲಿ ಹೀರOೈಿನ್‌ ಗಳ ಬಗ್ಗೆ ನಾನೇ ಕೇಳ್ತೀನಿ.. ಆ ಹುಡುಗಿ ಹೇಗೆ ಎಂದು.. ಆಗ ಸಂಗೀತಾ ಬಗ್ಗೆ ಮಾತನಾಡಿದ್ದ ವಿನಯ್‌ ಒಳ್ಳೆ ಹುಡುಗಿ ಪರವಾಗಿಲ್ಲ.. ಎಂದು ಹೇಳಿದ್ದರು.. ಅದನ್ನು ಬಿಟ್ಟು ಬೇರೆ ಯಾವ ವಿಚಾರವನ್ನು ಸಹ ನನಗೆ ಹೇಳಿಲ್ಲ.. ವಿನಯ್ ಸಂಗೀತಾ ವಿಚಾರ ನನಗೆ ತಿಳಿದಿಲ್ಲ.. ಆದರೆ ಸಂಗೀತಾ ಯಾಕ್ ಈ ರೀತಿ ಮಾಡ್ತಿದ್ದಾರೆ ಗೊತ್ತಿಲ್ಲ..ಇನ್ನು ಡ್ರೋನ್‌ ಪ್ರತಾಪ್‌ ಬಗ್ಗೆ ಹೇಳುವುದಾದರೆ ವಿನಯ್‌ ಡ್ರೋನ್‌ ಪ್ರತಾಪ್‌ ನನ್ನು ಟಾರ್ಗೆಟ್‌ ಮಾಡುತ್ತಿಲ್ಲ.. ಅವನು ನೋವಲ್ ಇರ್ತಾನೆ.. ಅದರಿಂದ ಹೊರ ಬರಲಿ ಅಂತಾನೇ ಅವರು ಮಾಡಿದ್ದು.. ಅವನಿಗೆ ಹೇರ್ ಕಟ್ ಮಾಡಿದ್ದು ಕೂಡ ವಿನಯ್.. ಬೇರೆ ಯಾರಾದ್ರು ಮಾಡಿದ್ರಾ? ಇಲ್ವಲ್ಲಾ..  ಅವರು ಜೋರಾಗಿ ಮಾತನಾಡ್ತಾರೆ ಅಂತ ಹೇಳ್ತಾರೆ.. ಆದರೆ ಅವರ ವಾಯ್ಸ್ ಇರೋದೆ ಹಾಗೆ‌ ಅದಕ್ಕೆ ಕೆಟ್ಟೋರು ಅನ್ನೋದಾ.. ಇದೇ ವಿಚಾರವಾಗಿ ಚಾನಲ್ ಗೆ ಫೋನ್ ಮಾಡ್ತಿದ್ದೀನಿ ಆದರೆ ಅವರು ಸಿಗ್ತಿಲ್ಲ.. ಬೇರೆಯವರ ಮೂಲಕವೂ ಫೋನ್‌ ಮಾಡಿಸ್ತಾ ಇದ್ದೀನಿ.. ಅದರೆ ಅವರು ಫೋನ್‌ ರಿಸೀವ್‌ ಮಾಡ್ತಿಲ್ಲ.. ಅವರನ್ನ ಕೆಟ್ಟೋರಾಗಿ ತೋರ್ಸಿದ್ರೆ ಟಿ ಆರ್ ಪಿ ಸಿಗಬಹುದು ಅಂತನಾ.. ಅಥವಾ ಇವರಿಗೆ ಫ್ಯಾನ್ಸ್ ಇಲ್ಲ ಅಂತಾನಾ..

ಶೋನಲ್ಲಿ ವಿನಯ್ ವಾಯ್ಸ್ ಮಾತ್ರನಾ ಜೋರಾಗಿರೋದು.. ಅಲ್ಲಿ ಎಲ್ಲರೂ ರೇಗಿದ್ದಾರೆ ಆದರೆ ಅದನ್ನ ಮಾತ್ರ ರಾತ್ರಿ ಶೋನಲ್ಲಿ ತೋರಿಸಲ್ಲ.. ಸುದೀಪ್ ಸರ್ ಬ್ಲೈಂಡ್ ಆಗಿ ಯಾವ ಜಡ್ಜ್‌ ಮೆಂಟ್‌ ಅನ್ನೂ ಕೊಡೋದಿಲ್ಲ.. ಅವರು ಕೊಟ್ಟಿರೋದು ತಪ್ಪಿಲ್ಲ.. ವಿನಯ್‌ ಗೆ ಫೈನಲಿಸ್ಟ್ ಆಗುವ ಅರ್ಹತೆ ಇದೆ.. ಅದಕ್ಕೆ ಸುದೀಪ್‌ ಅವರು ಹಾಗೆ ಹೇಳಿರೋದು.. ಇನ್ನು ಭಾಗ್ಯಶ್ರೀ ಹಾಗೂ ವಿನಯ್‌ ನಡುವೆ ಜಗಳ ನಡೆಯಿತು.. ಅಲ್ಲಿ ಭಾಗ್ಯಶ್ರೀ ಅವರಿಂದ ಏನೋ ತಪ್ಪ್ ಆಗಿರೋದಕ್ಕೆ ವಿನಯ್‌ ಆ ರೀತಿ ಹೇಳಿದಾರೆ.. ಅಲ್ಲಿ ವಾದ ಮಾಡಿರೋದನ್ನ ಮಾತ್ರ ತೋರ್ಸಿದ್ದಾರೆ.. ಆದರೆ ಭಾಗ್ಯಶ್ರೀ ಅವರು ಮಾಡಿರO ತಪ್ಪನ್ನು ತೋರಿಸಿಲ್ಲ..ವಿನಯ್‌ ಅವರಿಗೆ ಕೆಲಸ ಅನ್ನೋದೇ ದೇವರು.. ಅವರ ಕಣ್ಣಿಗೆ ನಿದ್ರೆ ಇಲ್ಲದೇ ಕಷ್ಟ ಪಟ್ಟಿದ್ದಾರೆ.. ಸರಿಯಾಗಿ ಊಟ ಮಾಡ್ತಿರ್ಲಿಲ್ಲ.. ಅವರನ್ನ ನಾನ್ ನೋಡಕ್ ಆಗ್ತಿಲ್ಲ.. ಅವರು ಅಂತ ಮನುಷ್ಯ ಅಲ್ಲ.. ಅವರನ್ನ ಯಾಕ್ ಈ ರೀತಿ ಪೋಟ್ರೋಟ್ ಮಾಡ್ತಿದ್ದಾರೆ ಗೊತ್ತಿಲ್ಲ.. ಒಂದ್ ಒಂದು ಹೆಜ್ಜೆನೂ ಕಷ್ಟ ಪಟ್ಟು ಬಂದಿರೋದು.. ಅವರಿಗೆ ಅಲ್ಲಿ ಮರ್ಯಾದೆನೇ ಇಲ್ಲದೇ ಇರೋ ತರ ಮಾಡ್ತಿದ್ದಾರೆ..

ಅವರನ್ನ ಯಾಕ್ ಆ ರೀತಿ ತೋರುಸ್ತಾ ಇದ್ದೀರಾ ಅಂತ ಕೇಳೋಕೆ ಫೋನ್ ಮಾಡ್ತಿದ್ದೀನಿ ಆದರೆ ಯಾರು ಕೂಡ ರಿಸೀವ್ ಮಾಡ್ತಿಲ್ಲ.. ಅವರು ಎಲ್ಲಾದರಲ್ಲೂ ಹೀರೋ ಆಗೆ ಆಕ್ಟ್ ಮಾಡಿದ್ದಾರೆ.. ಆದರೆ ಇಲ್ಲಿ ವಿಲನ್ ತರ ಮಾಡಿದ್ದಾರೆ.. ಅವರನ್ನ ಚಿಕ್ಕ ವಯಸ್ಸಿಂದ ನೋಡಿದ್ದೀನಿ ಅವರು ಆ ರೀತಿ ಅಲ್ಲ.. ನನಗೆ ಫೋನು ನನಗೆ ಮೆಸೆಜ್ ಬರ್ತಾ ಇರೋದ್ ನೋಡಿದ್ರೆ ಯಾರದ್ದೋ ತಲೆ ಹೊಡೆದು ಬಂದಿದ್ದಾರೆ ಅಂತ ತೋರುಸ್ತಿದ್ದಾರೆ..ನನಗೆ ತುಂಬಾ ಜನ ದುಡ್ ಕೊಟ್ಟು ಪ್ರಮೋಷನ್ ಮಾಡುಸ್ತಿದ್ದೀರಾ ಅಂತ ಕೇಳ್ತಾ ಇದಾರೆ.. ತುಂಬಾ ಜನ ಫೋನ್ ಮಾಡಿದ್ರು ಟ್ರೋಲ್ ಪೇಜ್ ನಲ್ಲಿ ದುಡ್ ಕೊಟ್ಟು ಪ್ರಮೋಷನ್ ಮಾಡುಸ್ಕೊಡ್ತೀವಿ ಅಂತ.. ಆದರೆ ನಾನೇ ಬೇಡ ಅಂದೆ.. ನಮಗೆ ಅದೆಲ್ಲಾ ಬೇಡ.. ನಮಗೆ ತುಂಬಾ ಮೆಸೆಜ್‌ ಬರ್ತಾ ಇದೆ.. ನನ್ನ್ ಮಗನಿಗೂ ಪ್ರಾಬ್ಲಂ ಆಗ್ತಾ ಇದೆ.. ನಿಮ್ ಅಪ್ಪ ಸರಿ ಇಲ್ಲ ಕಣೋ..ನಿಮ್ ಅಪ್ಪ ಅಂತವನು ಇಂತವನು.. ಅಂತೆಲ್ಲಾ ಅವನ ಸ್ನೇಹಿತರು ಹೇಳ್ತಾ ಇದ್ದಾರೆ.. ನನಗೂ ಕೂಡ ಸಾಕಷ್ಟು ಫೋನ್‌ ಮತ್ತು ಮೆಸೆಜ್‌ ಬರ್ತಾ ಇದೆ.. ನಿನ್ನ ಗಂಡ ಅಷ್ಟ್ ಕೆಟ್ಟವನ ಜೊತೆ ಹೆಂಗ್ ಸಂಸಾರ ಮಾಡ್ತಾ ಇದ್ದೀಯಾ.. ಡಿವೋರ್ಸ್ ಮಾಡು.. ಫ್ಯಾಮಿಲಿ ತನಕ ಅದರಲ್ಲೂ ಮಗನ ತನಕ ಈ ವಿಚಾರ ಬಂದಿದೆ.. ಬೇರೆ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಗೆ ಹೋಗೋ ಮುನ್ನ ದುಡ್ಡು ಕೊಟ್ಟು ಹೋಗಿದ್ದಾರೆ.. ಅದಕ್ಕೆ ನನಗೆ ಈ ರೀತಿ ಮೆಸೆಜ್ ಬರ್ತಾ ಇದೆ.. ಮನೆ ಒಳಗೆ ಯಾವುದೂ ಸ್ಕ್ರಿಪ್ಟೆಡ್ ಅಲ್ಲ.. ಹೊರಗೆ ತೋರುಸ್ತಾ ಇರೋದು ಸ್ಕ್ರಿಪ್ಟೆಡ್ ಅಂತ 200% ನಾನು ಹೇಳ ಬಲ್ಲೆ..

ಇನ್ನು ಕೆಲವರು ವಿನಯ್‌ ತಂದೆ ತಾಯಿ ಜೊತೆ ಬೆಳೆದಿದ್ದರೆ ಈತರ ಇರ್ತಾ ಇರಲಿಲ್ಲ ಅಂತ ಕಮೆಂಟ್‌ ಮಾಡಿದ್ದಾರೆ.. ಆದರೆ ಅದು ತಪ್ಪು.. ನನ್ನ ಗಂಡ ತಂದೆ ತಾಯಿ ಜೊತೆ ರಾಜನ ರೀತಿ ಬೆಳೆದವರು.. ನನ್ನ ಗಂಡ ತುಂಬಾ ಚೆನ್ನಾಗಿ ಬೆಳೆದು ಬಂದವರು.. ಮಧ್ಯದಲ್ಲಿ ಏನೋ ತೊಂದರೆ ಆಗಿ ದೂರ ಆದರು ಅಷ್ಟೇ.. ನನಗೆ ಅವರು ಎಷ್ಟು ರೆಸ್ಪೆಕ್ಟ್ ಕೊಡ್ತಾರೆ ಅಂದಮೇಲೆ ಬೇರೆಯವರಿಗೆ ಎಷ್ಟು ರೆಸ್ಪೆಕ್ಟ್ ಕೊಡ್ತಾರೆ ಅಂತ ನೀವೆ ಅರ್ಥ ಮಾಡ್ಕೋಳಿ..ಬಿಗ್‌ ಬಾಸ್‌ ಗೆ ನನ್ನ ಗಂಡನನ್ನ ಖುಷಿ ಖುಷಿಯಾಗಿ ಕಳುಹಿಸಿ ಕೊಟ್ಟೆ.. ಆದರೆ ಅವರನ್ನ ತೋರುಸ್ತೀರೋ ರೀತಿ ನೋಡಿ ಬಹಳ ಮಿಸ್ ಮಾಡ್ಕೋತಾ ಇದೀನಿ.. ನನ್ನ್ ಮಗನೂ ಆಚೆ ಹೋಗಕ್ ಆಗ್ತಾ ಇಲ್ಲ.. ನನಗೂ ಆಚೆ ಹೋಗೋಕ್ ಆಗ್ತಿಲ್ಲ.. ಹಾನೆಸ್ಟ್ ಆಗಿ ನನ್ನ ಗಂಡ ಮಾತ್ರನೇ ಆಡ್ತಾ ಇರೋದು‌..‌ ಆದರೆ ತೋರುಸ್ತಾ ಇರೋದ್ ಬೇರೆ ರೀತಿ..ಸುದೀಪ್ ಸರ್ ದು ಏನೂ ತಪ್ಪಿಲ್ಲ‌.. ಅವರು ಸರಿಯಾಗಿ ಹೇಳಿದ್ದಾರೆ.. ವಿನಯ್ ಆ ಅನ್ನಂಗಿಲ್ಲ.. ಹೂ ಅನ್ನಂಗಿಲ್ಲ.. ಉಸಿರಾಡೋದು ಕಷ್ಟ ಆಗಿದೆ.. ಹೈಲೈಟ್ ಮಾಡ್ತಿರೋದು ವಿನಯ್ ನ.. ಮಾಡಲಿ.. ಆದರೆ ನೆಗಟಿವ್‌ ಆಗಿ ಮಾಡ್ತಾ ಇದ್ದಾರೆ.. ಅವರ ಒಂದು ಒಳ್ಳೆ ಕೆಲಸವನ್ನು ತೋರಿಸ್ತಾ ಇಲ್ಲ.. ಪ್ರತಾಪ್ ಗೆ ಡ್ಯಾನ್ಸ್ ಹೇಳಿಕೊಟ್ರು.. ಅದನ್ನ ಯಾಕ್ ತೋರುಸ್ತಾ ಇಲ್ಲ.. ಸುತ್ತ ಮುತ್ತ ಕ್ಯಾಮರಾ ಇಲ್ಲ ಅಂದಿದ್ರೆ ವಿನಯ್ ಏನೇನೋ ಮಾಡೋರು.. ಆದರೆ ಕ್ಯಾಮರಾ ಇರೋದ್ರಿಂದ ನಾವ್ ಸೇಫ್ ಆದ್ವಿ.. ಅಂತ ಅಲ್ಲಿರೋರು ಹೇಳಿದ್ರು.. ಅದೆಲ್ಲವೂ ನಾಟಕ.. ಸಂಗೀತಾ ಅವರು ಕ್ಯಾಮರಾ ಮುಂದೆ ಆಡ್ತಿರೋ ನಾಟಕ.. ಅಷ್ಟ್ ಭಯ ಪಟ್ಕೊಂಡ್ ಹರಹರ ಮಹಾದೇವ ಧಾರಾವಾಹಿಯಲ್ಲಿ ಅಷ್ಟ್ ವರ್ಷ ವಿನಯ್ ಜೊತೆ ಕೆಲಸ ಮಾಡಿದ್ರಾ.. ಬಹುಶಃ ಅವರಿಗೆ ಮೆಂಟಲಿ ಏನೋ ತೊಂದರೆ ಇರಬಹುದು..

ವಿನಯ್ ಗೆ‌ ಈಗ 42 ವರ್ಷ.. ಜನರಿಗೆ ಅವರ ಬಗ್ಗೆ ಗೊತ್ತಿಲ್ಲ.. ಇನ್ನ್ ಮುಂದೆ ಗೊತ್ತಾಗತ್ತೆ.. ನನಗೆ ಆ ನಂಬಿಕೆ ಇದೆ.. ಯಾರೇ ಆಗಿದ್ರೂ ಮನಸಾರೆ ವೋಟ್ ಹಾಕಿ.. ನಾನ್ ಯಾರಿಗೂ ಒಂದ್ ರೂಪಾಯಿ ಕೂಡ ಕೊಟ್ಟಿಲ್ಲ.. ಯಾರ್ ಯಾರ್ ಕಮೆಂಟ್ ಮಾಡಿದ್ದೀರೋ ಅವರಿಗೂ ಒಂದು ದಿನ ವಿನಯ್ ಏನು ಅಂತ ಗೊತ್ತಾಗತ್ತೆ.. ಎಂದು ಕಣ್ಣೀರಿಟ್ಟಿದ್ದಾರೆ.. ಕೊನೆಯದಾಗಿ ನಮ್ಮದೊಂದು ಮಾತು.. ವಿನಯ್‌ ಏನೇ ಆಗಿರಲಿ.. ಏನೇ ತಪ್ಪು ಮಾಡಿರಲಿ.. ಅಥವಾ ಏನೇ ಸರಿ ಮಾಡಿರಲಿ.. ವಿಚಾರಗಳನ್ನು ಕುಟುಂಬದ ಸದಸ್ಯರವರೆಗೆ ತಂದು ಅವರಿಗೆ ಕೀಳಾಗಿ ಕಮೆಂಟ್‌ ಮಾಡೋದು ಅಥವಾ ಹೀಯಾಳಿಸೋದು ತಪ್ಪು.. ನಮ್ಮ ನಮ್ಮ ತಪ್ಪುಗಳಿಗೆ ನಾವಷ್ಟೇ ಹೊಣೆಯಾಗಿರುತ್ತೇವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಷ್ಟೇ.. ವಿನಯ್‌ ನ ದುರಹಂಕಾರದ ನಡವಳಿಕೆಗೆ ಈ ವಾರಾಂತ್ಯದಲ್ಲಿ ಸುದೀಪ್‌ ಅವರು ಸರಿಯಾಗಿ ಕ್ಲಾಸ್‌ ತೆಗೆದುಕೊಂಡು ಬುದ್ಧಿ ಕಲಿಸುವಂತಾಗಲಿ.. ಹಾಗೆಯೇ ವಿನಯ್‌ ಸಮಸ್ತ ಹೆಣ್ಣು ಕುಲಕ್ಕೆ ಬಳೆ ತೊಟ್ಟುಕೊ ಎಂದ ವಿಚಾರಕ್ಕೆ ಕ್ಷಮೆ ಕೇಳಲಿ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.