ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ಈ ಇಬ್ಬರು ನಿಜಕ್ಕೂ ಯಾರು ಗೊತ್ತಾ? ಸ್ಪರ್ಧಿಗಳು ಶಾಕ್..

0 views

ಬಿಗ್‌ ಬಾಸ್‌ ಕನ್ನಡ ಸೀಸನ್‌ ಹತ್ತು ಸಾಕಷ್ಟು ವಿಚಾರಗಳಿಗೆ ಸದ್ದು ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಕಳೆದ ಏಳು ಸೀಸನ್‌ ಗಳಲ್ಲಿ ಈ ಸೀಸನ್‌ ಬರೋಬ್ಬರಿ ಒಂಭತ್ತು ಟಿ ಆರ್‌ ಪಡೆಯುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ ಎನ್ನಬಹುದು.. ಇನ್ನು ಇತ್ತ ಪ್ರತಿದಿನ ಬಿಗ್‌ ಬಾಸ್‌ ಮನೆಯಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಜಗಳಗಳು ಆಗುತ್ತಲೇ ಇದ್ದು ಶುರುವಿನಲ್ಲಿ ಒಳ್ಳೆಯವರು ಎನಿಸಿಕೊಂಡವರು ಇದೀಗ ಜನರ ಕಣ್ಣಿಗೆ ಕೆಟ್ಟವರಾಗಿಯೂ ಕಾಣುತ್ತಿದ್ದು, ಬಿಗ್‌ ಬಾಸ್‌ ಮನೆಯೊಳಗೆ ಹೋಗುವ ಮುನ್ನ ಬಹಳಷ್ಟು ನೆಗಟಿವ್‌ ಆಗಿ ಕಾಣಿಸಿಕೊಂಡಿದ್ದ ಒಂದಿಷ್ಟು ಜನ ಮನೆಯೊಳಗೆ ಹೀರೋ ಆಗಿರೋದು ಉಂಟು.. ಇನ್ನು ಬಿಗ್‌ ಬಾಸ್‌ ಈ ಸೀಸನ್‌ ಆರಂಬವಾಗಿ ಐವತ್ತು ದಿನಗಳು ಕಳೆದಿದ್ದು ನೋಡು ನೋಡುತ್ತಿದ್ದಂತೆ ಅರ್ಧ ಸೀಸನ್‌ ಮುಕ್ತಾಯವೇ ಆಗಿ ಹೋಗಿದೆ.. ಇನ್ನು ಮನೆಯಲ್ಲಿಯೂ ಸದಸ್ಯರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು ಮನೆ ಖಾಲಿ ಎನಿಸಲು ಆರಂಬವಾಗುತ್ತಿದೆ.. ಈ ಸಮಯದಲ್ಲಿಯೇ ಬಿಗ್‌ ಬಾಸ್‌ ತನ್ನ ಟಿಆರ್‌ ಉಳಿಸಿಕೊಳ್ಳುವ ಸಲುವಾಗಿ ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿಯನ್ನು ನೀಡಿದ್ದಾರೆ.. ಅದೂ ಸಹ ಒಂದಲ್ಲಾ ಒಟ್ಟೊಟ್ಟಿಗೆ ಎರೆಡೆರೆಡು ವೈಲ್ಡ್‌ ಕಾರ್ಡ್‌ ಎಂಟ್ರಿಗಳನ್ನು ನೀಡಿದ್ದು ಬಿಗ್‌ ಬಾಸ್‌ ಮನೆಯಲ್ಲಿ ಉಳಿದ ಸದಸ್ಯರಿಗೆ ಶಾಕ್‌ ನೀಡಿದ್ದಾರೆ..

ಹೌದು ಬಿಗ್‌ ಬಾಸ್‌ ಸೇಸನ್‌ ಹತ್ತಾರಲ್ಲಿ ಶುರುವಿನಲ್ಲಿ ಹದಿನೇಳು ಸದಸ್ಯರು ಆಗಮಿಸಿದ್ದು ಪ್ರತಿ ವಾರ ಎಲಿಮಿನೇಟ್‌ ಆಗಿ ಇದೀಗ ಹನ್ನೊಂದು ಸದಸ್ಯರು ಮಾತ್ರ ಬಿಗ್‌ ಬಾಸ್‌ ನಲ್ಲಿ ಉಳಿಯಲು ಯಶಸ್ವಿಯಾಗಿದ್ದು ಇದೀಗ ಇಬ್ಬರು ಸದಸ್ಯರ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿದೆ.. ಹೌದು ಬಿಗ್‌ ಬಾಸ್‌ ಸೇಸನ್‌ ಹತ್ತರಲ್ಲಿ ವಿಶೇಷವಾಗಿ ಕಾರ್‌ ಮೂಲಕ ಗ್ರ್ಯಾಂಡ್‌ ಆಗಿ ಪುರುಷ ಸದಸ್ಯರೊಬ್ಬರು ಎಂಟ್ರಿ ಕೊಟ್ಟರೆ ಇತ್ತ ಸರ್ಪ್ರೈಸ್‌ ಆಗಿ ಮತ್ತೊಬ್ಬ ಮಹಿಳಾ ಸ್ಪರ್ಧಿ ಕೂಡ ಎಂಟ್ರಿ ನೀಡಿದ್ದಾರೆ.. ಇನ್ನು ಈ ಸದಸ್ಯರು ಯಾರು ಎಂದು ಪ್ರೇಕ್ಷಕರಿಗೆ ಕುತೂಹಲ ಮೂಡಿದ್ದು ಆ ಸ್ಪರ್ಧಿಗಳು ಮತ್ಯಾರು ಅಲ್ಲ ಪವಿ ಪೂವಪ್ಪ ಹಾಗೂ ಅವಿನಾಶ್‌ ಶೆಟ್ಟಿ.. ಹೌದು ಪವಿ ಪೂವಪ್ಪ ಒಬ್ಬ ಮಾಡೆಲ್‌ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕೊಂಚ ಫೇಮಸ್‌ ಕೂಡ ಹೌದು.. ಸದಾ ಹಸಿಬಿಸಿಯಾಗಿ ಕಾಣಿಸಿಕೊಳ್ಳುವ ಪವಿ ಪೂವಪ್ಪ ಈ ಬಾರಿೊಯ ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ನೀಡಿದ್ದು ಎಷ್ಟು ದಿನ ಬಿಗ್‌ ಬಾಸ್‌ ಮನೆಯಲ್ಲಿ ಈ ಮಾಡೆಲಿಂಗಹ್‌ ಚೆಲುವೆ ಉಳಿದುಕೊಳ್ಳುವರು ಕಾದು ನೋಡಬೇಕಿದೆ..

ಇನ್ನು ಇತ್ತ ಇದೇ ಮೊದಲ ಬಾರಿಗೆ ಬಿಗ್‌ ಬಾಸ್‌ ಮನೆಯೊಳಕ್ಕೆ ಕಾರ್‌ ಮೂಲಕ ಎಂಟ್ರಿ ಕೊಟ್ಟಿರುವ ಮತ್ತೊಬ್ಬ ಸ್ಪರ್ಧಿ ಅವಿನಾಶ್‌ ಶೆಟ್ಟಿ.. ಹೌದು ಈ ಅವಿನಾಶ್‌ ಶೆಟ್ಟಿ ಕೂಡ ಮಾಡೆಲ್‌ ಆಗಿದ್ದು ನಟನಾಗಿಯೂ ಗುರುತಿಸಿಕೊಂಡಿದ್ದಾರೆ.. ತುಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ಅವಿನಾಶ್‌ ಶೆಟ್ಟಿ ಸಾಕಷ್ಟು ಜಾಹಿರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.. ಫಿಟ್ನೆಸ್‌ ಮೂಲಕ ಬಿಗ್‌ ಬಾಸ್‌ ಮನೆಯಲ್ಲಿ ಬಲಿಷ್ಟರಾಗಿ ಗುರುತಿಸಿಕೊಂಡಿರುವ ವಿನಯ್‌ ಕಾರ್ತಿಕ್‌ ಹಾಗೂ ಮೈಕಲ್‌ ಅವರಿಗೆ ಇದೀಗ ಅವಿನಾಶ್‌ ಶೆಟ್ಟಿ ಪ್ರಬಲ ಪೈಪೋಟಿಯಾಗಿ ನಿಲ್ಲುವರ ಕಾದು ನೋಡಬೇಕಿದೆ.. ಇನ್ನು ಬಿಗ್‌ ಬಾಸ್‌ ಮನೆಗೆ ಈ ಎರಡು ವೈಲ್ಡ್‌ ಕಾರ್ಡ್‌ ಎಂಟ್ರಿಯಾಗುತ್ತಿದ್ದಂತೆ ಮನೆಯ ಸದಸ್ಯರು ನಗುಮುಖದಿಂದಲೇ ಇಬ್ಬರನ್ನು ಸ್ವಾಗತಿಸಿದರೂ ಕೂಡ, ಇನ್ನು ಮುಂದೆ ಬಿಗ್‌ ಬಾಸ್‌ ನಾಲ್ಲಿ ನಿಜವಾದ ಆಟ ಶುರುವಾಗುತ್ತದೆ ಎನ್ನುವ ಮಾತುಗಳನ್ನು ಆಡಿದ್ದಾರೆ.. ಇನ್ನು ಈಗಾಗಲೇ ಬಲಿಷ್ಟ ಸ್ಪರ್ಧಿಗಳು ಎಂದು ಗುರುತಿಸಿಕೊಂಡ ಸ್ಪರ್ಧಿಗಳು ಕೂಡ ಹೊಸ ಎಂಟ್ರಿ ನೋಡಿ ಕೊಂಚ ಶಾಕ್‌ ಆಗಿದ್ದೂ ಉಂಟು.. ಇರೋರನ್ನೇ ಹೇಗೆ ಮನೆಯಿMದ ಹೊರಗೆ ಕಳುಹಿಸೋದು ಅಂತ ನೋಡುತ್ತಿರುವಾಗ ಇವರು ಬೇರೆ ಹೊಸ ಎಂಟ್ರಿ ಎನ್ನುವಂತೆ ಕೆಲವರ ಮುಖ ಬಾವವಿದ್ದು ಇನ್ನು ಮುಂದಾದರೂ ಯಾರಿಗೂ ಬಕೆಟ್‌ ಸ್ಪೂನ್‌ ಹಿಡಿಯದೇ ಸ್ವಂತ ಆಟ ಆಡಿ ಬಿಗ್‌ ಬಾಸ್‌ ಮನೆಯಲ್ಲಿ ಉಳಿಯಲು ಪ್ರಯತ್ನ ಪಡುವರಾ ಕಾದು ನೋಡಬೇಕಿದೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.