ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯ.. ಮನೆಯಿಂದ ಹೊರ ಬಂದವರು ಯಾರು ಗೊತ್ತಾ? ಶಾಕ್‌ ಆದ ಸ್ಪರ್ಧಿಗಳು..

0 views

ಬಿಗ್ ಬಾಸ್ ಸೀಸನ್ ಎಂಟರ ಎರಡನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯವಾಗಿದ್ದು ಮನೆಯಿಂದ ಒಬ್ಬ ಸದಸ್ಯ ಎಲಿಮಿನೇಟ್ ಆಗಿದ್ದಾರೆಂದು ಕಿಚ್ಚ ಸುದೀಪ್ ಅವರು ತಿಳಿಸಿದ್ದಾರೆ.. ಆದರೆ ಮುಂದೆ ನಡೆದದ್ದೇ ಬೇರೆ.. ಹೌದು ಬಿಗ್ ಬಾಸ್ ಸೀಸನ್ ಎಂಟು ಮತ್ತೆ ಪುನರಾರಂಭವಾಗಿದ್ದು ಇದೀಗ ಮೊದಲನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಕೂಡ ಮುಕ್ತಾಯಗೊಂಡಿದೆ.. ನಿನ್ನೆಯಷ್ಟೇ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ವಿಚಾರವಾಗಿ ಸಾಕಷ್ಟು ಚರ್ಚೆಗಳು ವಾದ ವಿವಾದಗಳು ನಡೆದು ಕೊನೆಗೆ ಒಬ್ಬರ ಮಾತಿನ ನಡುವೆಯೇ ಮತ್ತೊಬ್ಬರು ಮಾತನಾಡುತ್ತಿದ್ದದ್ದನ್ನು ಕಂಡು ಟವಲ್ ಸುತ್ತಿಕೊಂಡು ಹೊಡೆದಷ್ಟೇ ನಯವಾಗಿ ಸುದೀಒ ಅವರು ಎಲ್ಲಾ ಸ್ಪರ್ಧಿಗಳಿಗೂ ಗ್ರಹಚಾರ ಬಿಡಿಸಿದ್ದರು..

ಇನ್ನು ಇದೇ ಸೀಸನ್ ನ ಮೊದಲ ಇನ್ನಿಂಗ್ಸಿನಲ್ಲಿ ಮೊದಲ ವಾರ ಧನುಶ್ರೀ.. ಎರಡನೇ ವಾರ ನಿರ್ಮಲಾ ಚೆನ್ನಪ್ಪ.. ಮೂರನೇ ವಾರ ಗೀತಾ ಭಾರತಿ ಭಟ್.. ನಾಲ್ಕನೇ ವಾರ ಚಂದ್ರಕಲಾ.‌. ಐದನೇ ವಾರ ಶಂಕರ್ ಅಶ್ವತ್ಥ್.. ಆರನೇ ವಾರ ವೈಜಯಂತಿ ಅಡಿಗ.. ಏಳನೇ ವಾರ ಶಂಕರ್ ಅಶ್ವತ್ಥ್.. ಎಂಟನೇ ವಾರ ರಾಜೀವ್ ಬಿಗ್ ನಾಸ್ ಮನೆಯಿಂದ ಹೊರ ನಡೆದಿದ್ದರು.. ಅದಾದ ಬಳಿಕ ಕೊರೊನಾ ಕಾರಣದಿಂದ ಆದ ಲಾಕ್ ಡೌನ್ ಬಳಿಕ ಚಿತ್ರೀಕರಣಕ್ಕೆ ಅವಕಾಶವಿಲ್ಲದೇ ಶೋವನ್ನು ಅರ್ಧಕ್ಕೆ ನಿಲ್ಲಿಸಿ ಮನೆಯಲ್ಲಿ ಉಳಿದಿದ್ದ ಹನ್ನೊಂದು ಸ್ಪರ್ಧಿಗಳನ್ನೂ ಹೊರಗೆ ಕಳುಹಿಸಲಾಗಿತ್ತು.. ಜೊತೆಗೆ ಅನಾರೋಗ್ಯದಿಂದ ಎರಡು ದಿನ ಮುನ್ನವೇ ದಿವ್ಯಾ ಉರುಡುಗ ಸಹ ಮನೆಯಿಂದ ಹೊರ ಬಂದಿದ್ದರು..

ಇನ್ನು ನಲವತ್ತೈದು ದಿನದ ನಂತರ ಇದೀಗ ಬಿಗ್ ಬಾಸ್ ಶೋ ಮತ್ತೆ ಪ್ರಾರಂಭವಾಗಿದ್ದು ಮಂಜು ಪಾವಗಡ ದಿವ್ಯಾ ಸುರೇಶ್ ಅರವಿಂದ್ ದಿವ್ಯಾ ಉರುಡುಗ ವೈಷ್ಣವಿ ರಘು ಪ್ರಶಾಂತ್ ಸಂಬರ್ಗಿ ಚಕ್ರವರ್ತಿ ಚಂದ್ರಚೂಡ.. ಶುಭಾ ಪೂಂಜಾ ನಿಧಿ ಸುಬ್ಬಯ್ಯ.. ಶಮಂತ್ ಪ್ರಿಯಾಂಕ ಸೇರಿದಂತೆ ಒಟ್ಟು ಹನ್ನೆರೆಡು ಮಂದಿ ಬಿಗ್ ಬಾಸ್ ಮನೆಗೆ ರೀಎಂಟ್ರಿ ನೀಡಿದ್ದರು.. ಆದರೆ ಎರಡನೇ ಇನ್ನಿಂಗ್ಸಿನ ಮೊದಲ ದಿನವೇ ನಾಮಿನೇಷನ್ ಪ್ರಕ್ರಿಯೆ ನಡೆದು ಬಹಿರಂಗವಾಗಿ ಸ್ಪರ್ಧಿಗಳು ನಾಮಿನೇಟ್ ಮಾಡಿ ಆ ಸದಸ್ಯರ ಫೋಟೋವನ್ನುಬೆಂ ಕಿಗೆಹಾಕಬೇಕಿತ್ತು..

ಅದೇ ರೀತಿ ಅತಿ ಹೆಚ್ಚು ವೋಟ್ ಪಡೆದ ಚಕ್ರವರ್ತಿ ಚಂದ್ರಚೂಡ ಪ್ರಶಾಂತ್ ಸಂಬರ್ಗಿ ಮಂಜು ಪಾವಗಡ ದಿವ್ಯಾ ಸುರೇಶ್ ರಘು ಪ್ರಿಯಾಂಕ ಈ ವಾರದ ಎಲಿಮಿನೇಷನ್ನಿಗೆ ನಾಮಿನೇಟ್ ಆಗಿದ್ದರು.. ಅದೇ ರೀತಿ ಇಂದು ಸುದೀಪ್ ಅವರು ಭಾನುವಾರದ ಕಾರ್ಯಕ್ರಮದಲ್ಲಿ ಎಲಿಮಿನೇಷನ್ ಪ್ರಕ್ರಿಯಯನ್ನೂ ಸಹ ಮುಗಿಸಿದ್ದು ಮನೆಯಿಂದ ಹೊರ ಹೋಗುವ ಒಬ್ಬ ಸದಸ್ಯರ ಹೆಸರನ್ನು ತಿಳಿಸಿದರು..ಹೌದು ಆ ಸ್ಪರ್ಧಿ ಮತ್ಯಾರೂ ಅಲ್ಲ.. ಪ್ರಶಾಂತ್ ಸಂಬರ್ಗಿ.. ಹೌದು ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ನ ಮೊದಲ ವಾರದಲ್ಲಿ ಮನೆಯಿಂದ ಹೊರ ಹೋಗುವ ಸ್ಪರ್ಧಿ‌ ಪ್ರಶಾಂತ್ ಸಂಬರ್ಗಿ ಎಂದು ಸುದೀಪ್ ಅವರು ತಿಳಿಸಿದರು.. ಇತ್ತ ತಾನು ಎಲಿಮಿನೇಟ್‌ ಆಗೋದಿಲ್ಲ ಎಂದು ಬಹಳ ನಂಬಿಕೆಯಲ್ಲಿದ್ದ ಪ್ರಶಾಂತ್‌ ಅವರಿಗೆ ಶಾಕ್‌ ಆಗಿದ್ದು ಸತ್ಯ.. ಇನ್ನ ಬಿಗ ಬಾಸ್‌ ನ ಉಳಿದ ಸ್ಪರ್ಧಿಗಳೂ ಸಹ ಪ್ರಶಾಂತ್‌ ಸಂಬರ್ಗಿ ಅವರು ಎಲಿಮಿನೇಟ್‌ ಆಗಿದ್ದಕ್ಕೆ ಆಶಚರ್ಯ ವ್ಯಕ್ತಪಡಿಸಿದರು.. ಅದೇ ರೀತಿ ಪ್ರಶಾಂತ್ ಅವರು ತಮ್ಮ ವಿದಾಯದ ಮಾತುಗಳನ್ನು ಆಡಿ ನಂತರ ಬಿಗ್ ಬಾಸ್ ಮನೆಯ ಮುಖ್ಯ ದ್ವಾರದ ಬಳಿ ಬಂದರು..

ಆದರೆ ಇತ್ತ ಸುದೀಪ್ ಅವರು ಎಲಿಮಿನೇಷನ್ನಿನಲ್ಲಿ ಟ್ವಿಸ್ಟ್ ಒಂದನ್ನು ನೀಡಿ ಮನೆಯಲ್ಲಿ ಉಳಿದ ಸದಸ್ಯರಿಗೆ ಪ್ರಶಾಂತ್ ಸಂಬರ್ಗಿ ಅವರು ಎಲಿಮಿನೇಟ್ ಆಗಿಲ್ಲ.. ಅವರು ಮತ್ತೆ ಬರ್ತಾರೆ.. ಆದರೆ ನೀವುಗಳು ನಿಮ್ಮ ಕಣ್ಣಿಗೆ ಅವರು ಕಾಣುತ್ತಿಲ್ಲ ಎಂಬಂತೆ ನಡೆದುಕೊಳ್ಳಬೇಕೆಂದರು.. ಇತ್ತ ಪ್ರಶಾಂತ್ ಸಂಬರ್ಗಿ ಅವ್ರಿಗೂ ಸಹ ಅವ್ರು ಎಲಿಮಿನೇಟ್ ಆಗದ ವಿಚಾರವನ್ನು ತಿಳಿಸಿ ಮನೆಯ ಒಳಗೆ ಕಳುಹಿಸಿದರು.. ಆದರೆ ಯಾರೊಬ್ಬರೂ ಸಹ ಪ್ರಶಾಂತ್ ಅವರನ್ನು ಮಾತನಾಡಿಸದೇ ಇದ್ದ ರೀತಿ ಪ್ರಶಾಂತ್ ಅವರಿಗೆ ಸಾಕಷ್ಟು ಗೊಂದಲಗಳನ್ನು ಉಂಟು ಮಾಡಿತಾದರೂ ಸಹ ಸದ್ಯ ನಾನು ಸೇಫ್ ಆದನಲ್ಲ ಎಂದುಕೊಂಡು ಸಮಾಧಾನ ಪಟ್ಟರು.. ಇನ್ನು ಬಿಗ್ ಬಾಸ್ ಜರ್ನಿ ಮೂರು ವಾರಗಳ ಕಾಲ ಮಾತ್ರ ನಡೆಯಬೇಕಿತ್ತು.. ಆದರೆ ಬಿಗ್ ಬಾಸ್ ಮನೆಯಲ್ಲಿ ಹನ್ನೆರೆಡು ಸದಸ್ಯರಿರುವ ಕಾರಣ ಬಿಗ್ ಬಾಸ್ ಶೋವನ್ನು ಮತ್ತಷ್ಟು ದಿನಗಳ ಕಾಲ ಹೆಚ್ಚಿಸಬಹುದಾಗಿದ್ದು ಇನ್ನೂ ಎರಡು ತಿಂಗಳ ಕಾಲ ಬಿಗ್ ಬಾಸ್ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ..