ಬಿಗ್ ಬಾಸ್ ಈ ವಾರದ ಎಲಿಮಿನೇಷನ್ ಮುಕ್ತಾಯ.. ಮನೆಯಿಂದ ಹೊರ ಬಂದ ಸ್ಪರ್ಧಿ ಇವರೇ ನೋಡಿ..

0 views

ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ನಲ್ಲಿ ಎರಡನೇ ವಾರದ ಎಲಿಮಿನೇಷನ್ ಮುಕ್ತಾಯಗೊಂಡಿದೆ..‌ ಹೌದು ಬಿಗ್ ಬಾಸ್ ನಿಂದ ಮತ್ತೊಬ್ಬ ಪ್ರಮುಖ ಸ್ಪರ್ಧಿ ಮನೆಯಿಂದ ಹೊರ ನಡೆದಿದ್ದಾರೆ.. ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ನಲ್ಲಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಹನ್ನೆರೆಡು ಜನ ಸ್ಪರ್ಧಿಗಳಲ್ಲಿ ಅದಾಗಲೇ ಎರಡನೇ ವಾರದ ಕತೆಯಲ್ಲಿ ನಿಧಿ‌ ಸುಬ್ಬಯ್ಯ ತಮ್ಮ ಬಿಗ್ ಬಾಸ್ ಜರ್ನಿ ಮುಗಿಸಿ ಮನೆಯಿಂದ ಹೊರ ನಡೆದಿದ್ದರೆ.. ಇದೀಗ ಮೂರನೇ ವಾರದ ಕತೆಯಲ್ಲಿ ಮತ್ತೊಬ್ಬ ಸ್ಪರ್ಧಿಯನ್ನು ಬಿಗ್ ಬಾಸ್ ನಿಂದ ಎಲಿಮಿನೇಟ್ ಮಾಡಿ ಹೊರ ಕಳುಹಿಸಲಾಗಿದ್ದು ಇಂದಿನ ಸೂಪರ್ ಸಂಡೇ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ..

ಹೌದು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದದ್ದು ಮತ್ಯಾರೂ ಅಲ್ಲ ಅದು ರಘು.. ಹೌದು ಬಿಗ್ ಬಾಸ್ ಸೀಸನ್ ಎಂಟರಲ್ಲಿ ಅರವಿಂದ್ ದಿವ್ಯಾ ಉರುಡುಗ ವೈಷ್ಣವಿ ರಘು ಪ್ರಶಾಂತ್ ಸಂಬರ್ಗಿ ಚಕ್ರವರ್ತಿ ಚಂದ್ರಚೂಡ ಶುಭಾ ಪೂಂಜಾ ನಿಧಿ ಸುಬ್ಬಯ್ಯ ಮಂಜು ಪಾವಗಡ ದಿವ್ಯಾ ಸುರೇಶ್ ಪ್ರಿಯಾಂಕ ಒಟ್ಟು ಹನ್ನೆರೆಡು ಮಂದಿ ಬಿಗ್ ಬಾಶ್ ಮನೆಗೆ ಮರು ಪ್ರವೇಶ ಮಾಡಿದ್ದರು.. ಮೊದಲ ಮೂರು ದಿನಕ್ಕೆ ನಡೆದ ವಾರದ ಕತೆಯಲ್ಲಿ ಯಾವುದೇ ಎಲಿಮಿನೇಷನ್ ನಡೆಯದ ಕಾರಣ ಕಳೆದ ವಾರ ಎರಡನೇ ವಾರದ ಕತೆಯಲ್ಲಿ ನಟಿ ನಿಧಿ ಸುಬ್ಬಯ್ಯ ಅವರು ತಮ್ಮ ಎಂಭತ್ತು ದಿನಗಳ ಜರ್ನಿ ಮುಗಿಸಿ ಮನೆಯಿಂದ ಹೊರ ನಡೆದರು.. ಇನ್ನು ಈ ವಾರ ಬಿಗ್ ಬಾಸ್ ಮನೆಯಲ್ಲಿ ಮನರಂಜನೆಗಿಂತ ಹೆಚ್ಚಾಗಿ ಬೀಪ್ ಶಬ್ದ ಬರುವಂತಹ ಮಾತುಗಳನ್ನೊಳಗೊಂಡ ಜಗಳಗಳೇ ಹೆಚ್ಚಾಗಿದ್ದವು.. ಈ ವಾರ ಕಿಚ್ಚ ಸುದೀಪ್ ಅವರ ಮಾತಿಗಾಗಿ ಅವರ ಪ್ರತಿಕ್ರಿಯೆಗಾಗಿ ಪ್ರೇಕ್ಷಕರು ಕಾದಿದ್ದು ಸುಳ್ಳಲ್ಲ..

ಇನ್ನು ನಿನ್ನೆ ನಡೆದ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಅದರಲ್ಲೂ ನೇರಾನೇರವಾಗಿ ಸುದೀಪ್ ಅವರಿಗೆ ಸುಳ್ಳು ಹೇಳಿ ತಗಲಾಕ್ಕೊಂಡ ಚಕ್ರವರ್ತಿ ಚಂದ್ರಚೂಡ ಅವರಿಗೆ ಸರಿಯಾಗಿ ಬಟ್ಟೆಯಲ್ಲಿ ಸುತ್ತಿಕೊಂಡು ಹೊಡೆದಂತಿತ್ತು‌ ಕಿಚ್ಚ ಸುದೀಪ್ ಅವರ ಮಾತುಗಳು‌‌.. ಅಷ್ಟೇ ಅಲ್ಲದೇ ಕ್ಯಾಪ್ಟನ್ಸಿ ವೇಳೆ ದಿವ್ಯಾ ಉರುಡುಗ ಮಾಡಿದ ಬೇದಭಾವಕ್ಕೆ ದಿವ್ಯಾ ಉರುಡುಗ ಅವರಿಗೂ ಸಹ ನಯವಾಗಿಯೇ ಗ್ರಹಚಾರ ಬಿಡಿಸಿದ್ದು ಕಿಚ್ಚ ಸುದೀಪ್ ಅವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆಯೂ ವ್ಯಕ್ತವಾಯಿತು..

ಇನ್ನು ವಾರದ ಎಲಿಮಿನೇಷನ್ ಪ್ರಕ್ರಿಯೆ ವಿಚಾರಕ್ಕೆ ಬಂದರೆ ಬಹಳ ನಿರೀಕ್ಷೆ ಇಟ್ಟುಕೊಂಡು ಬಿಗ್ ಬಾಸ್ ಮನೆಗೆ ಕಳುಹಿಸಿದ್ದ ಸ್ಪರ್ಧಿ ಎಂದರೆ ಅದು ರಘು.. ಹೌದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಾಮಿಡಿ ವೀಡಿಯೋಗಳ ಮೂಲಕ ಮನೆ ಮಾತಾಗಿದ್ದ ರಘು ಅವರಿಗೆ ಬಿಗ್ ಬಾಸ್ ಮನೆ ಪ್ರವೇಶ ಮಾಡಲು ಅವಕಾಶ ದೊರೆತಿತ್ತು. ಆದರೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ರಘು ಮನೆಯಲ್ಲಿ ಒಂದು ರೀತಿ ಸಪ್ಪೆ ಮುಖವಾಗಿಯೇ ಇದ್ದರು.. ಎಲ್ಲೋ ಆಗೊಮ್ಮೆ ಹೀಗೊಮ್ಮೆ ಮಾತ್ರವೇ ರಘು ಅವರ ಮಾತುಗಳು ಕೇಳಿಬರುತ್ತಿದ್ದವಷ್ಟೇ..

ಆದರೆ ರಘು ಅವರಿಂದ ಮನರಂಜನೆ ಸಿಗಬಹುದು ಎಂದು ಮತ್ತೆ ಮತ್ತೆ ಅವಕಾಶ ನೀಡುತ್ತಲೇ ಬಂದರು ಬಿಗ್ ಬಾಸ್.. ಆದರೆ ಅದು ಪ್ರಯೋಜನವಾಗಲಿಲ್ಲ.‌ ರಘು ಇಂದ ನಿರೀಕ್ಷಿಸಿದಷ್ಟು ಮನರಂಜನೆ ದೊರೆಯಲಿಲ್ಲ.. ಎರಡನೇ ಇನ್ನಿಂಗ್ಸ್ ನಲ್ಲಿ ಬದಲಾಗ್ತೀನಿ ಎಂದು ಬಂದ ರಘು ಕೊಂಚ ಓಪನ್ ಅಪ್ ಆದರೂ ಸಹ ಮನರಂಜನೆ ವಿಚಾರದಲ್ಲಿ ಹೆಚ್ಚೇನೂ ಬದಲಾವಣೆ ಆಗಲಿಲ್ಲ.. ಇನ್ನು ಸಾಮಾಜಿಕ ಜಾಲತಾಣದಲ್ಲಿ ರಘು ಅವರ ಸಪ್ಪೆ ಮುಖ ಟ್ರೋಲ್ ಆಗಿದ್ದೂ ಉಂಟು. ಸಾಮಾಜಿಕ ಜಾಲಾಣದಲ್ಲಿ ಕಾಮಿಡಿ ವೀಡಿಯೋ ಮೂಲಕ ಜನಮನ ಗೆದ್ದಿದ್ದ ರಘು ಬಿಗ್‌ ಬಾಸ್‌ ಮನೆಯಲ್ಲಿ ರಂಜಿಸುವಲ್ಲಿ ಅದ್ಯಾಆಕೋ ಹಿಂದೆ ಬಿದ್ದುಬಿಟ್ಟರು. ಮೊದಮೊದಲು ರಘು ಅವರಿಗೆ ಅವಕಾಆಶ ದೊರೆತಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದ ನೆಟ್ಟಿಗರು ರಘುವಿನಿಂದ ಯಾವುದೇ ಮನರಂಜನೆ ದೊರೆಯದಿದ್ದಾಗ ಕಾಲೆಳದದ್ದೂ ಉಂಟು..

ಇದೀಗ ಬಿಗ್ ಬಾಸ್‌ ನಿಂದ ರಘು ಹೊರಬಂದಿದ್ದು ಭಾನುವಾರದ ಕಿಚ್ಚನ ಕಾರ್ಯಕ್ರಮದಲ್ಲಿ ರಘು ಅವರನ್ನು ಎಲಿಮಿನೇಟ್ ಮಾಡಲಾಗಿದೆ. ತಮ್ಮ ಎಂಭತ್ತೇಳು ದಿನದ ಬಿಗ್ ಬಾಸ್ ಜರ್ನಿ ಮುಗಿಸಿ ರಘು ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.. ಇನ್ನು ಇಂದು ಸುದೀಪ್ ಅವರ ಜೊತೆ ವೇದಿಕೆ ಹಂಚಿಕೊಳ್ಳಲಿದ್ದು ಬಿಗ್ ಬಾಸ್ ಅನುಭವವನ್ನು ಬಿಚ್ಚಿಡಲಿದ್ದಾರೆ.. ಇನ್ನುಳಿದಂತೆ ಅರವಿಂದ್ ದಿವ್ಯಾ ಉರುಡುಗ ಮಂಜು ಒಆವಗಡ ದಿವ್ಯಾ ಸುರೇಶ್, ಪ್ರಶಾಂತ್ ಸಂಬರ್ಗಿ ಚಕ್ರವರ್ತಿ ಚಂದ್ರಚೂಡ. ವೈಷ್ಣವಿ ಶುಭ ಪೂಂಜಾ, ಪ್ರಿಯಾಂಕ ಶಮಂತ್ ಬಿಗ್ ಬಾಸ್ ಜರ್ನಿಯನ್ನು ಮುಂದುವರೆಸಲಿದ್ದಾರೆ..