ಡ್ರಾಮಾ ಜೂನಿಯರ್ ಶೋಗೆ ಹೋಗ್ತೀವಿ ಎಂದು ಮನೆ ಬಿಟ್ಟು ಬೆಂಗಳೂರಿಗೆ ಬಂದ ನಾಲ್ಕು ಹೆಣ್ಣು ಮಕ್ಕಳು ಎಂತಹ ಸ್ಥಿತಿಯಲ್ಲಿ ಸಿಕ್ಕರು ಗೊತ್ತಾ.. ದಯವಿಟ್ಟು ಇಂತಹ ಕೆಲಸ ಮಾಡ್ಬೇಡಿ..

0 views

ಸಿನಿಮಾಗಳು ಹಾಗೂ ಕಿರುತೆರೆಯಲ್ಲಿ ಬರುವ ಕಾರ್ಯಕ್ರಮಗಳು ಮಕ್ಕಳ ಮನಸ್ಸಿನಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದಕ್ಕೆ ನೈಜ್ಯ ಉದಾಹರಣೆ ಈ ಘಟನೆ.. ಸಿನಿಮಾಗಳು ನಮ್ಮ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರಿದರೂ ಸಿನಿಮಾದ ಹೀರೋವಿನಂತೆ ಏಮಾದರೂ ಸಾಧನೆ ಮಾಡಬೇಕು ಎಂದು ಕೊಂಡು ನಂತರ ಒಂದಿಷ್ಟು ಸಮಯ ಕಳೆದ ಬಳಿಕ ನಮ್ಮ ಜವಾಬ್ದಾರಿಗಳೇ ನಮಗೆ ದೊಡ್ಡದಾಗಿ ಅದು ಸಿನಿಮಾ ಮಾತ್ರ ಎಂದುಕೊಂಡು ಸುಮ್ಮನಾಗುತ್ತೇವೆ.. ಆದರೆ ಮಕ್ಕಳ ಮನಸ್ಸು ಹಾಗಲ್ಲ ಬಹಳ. ಸೂಕ್ಷ್ಮವಾಗಿರುತ್ತದೆ.. ಹೌದು ಕಿರುತೆರೆಯ ರಿಯಾಲಿಟಿ ಶೋನಿಂದ ಸ್ಪೂರ್ತಿಗೊಂಡ ಮಕ್ಕಳು ಮನೆಯಲ್ಲಿ ಜಗಳ ನಡೆದ ಸಮಯದಲ್ಲಿ ಡ್ರಾಮಾ ಜೂನಿಯರ್ ಶೋನಲ್ಲಿ ಸಾಧನೆ ಮಾಡ್ತೀವಿ ಅಂತ ಮನೆ ಬಿಟ್ಟು ಬಂದ ನಾಲ್ಕು ಮಕ್ಕಳ ಸ್ಥಿತಿ ನೋಡಿ ಇದೀಗ ಬೆಚ್ಚಿಬೀಳುವಂತಾಗಿದೆ..

ಹೌದು ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಡ್ರಾಮಾ ಜೂನಿಯರ್ ಸಧ್ಯ ಮೂರು ವಾರಗಳಿಂದ ಜೀ ಕನ್ಮಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ನಾಡಿನಾದ್ಯಂತ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದು‌ ಒಳ್ಳೆಯ ರೇಟಿಂಗ್ ಪಡೆದು ಮುನ್ನುಗ್ಗುತ್ತಿದೆ.. ಇನ್ನು ಡ್ರಾಮಾ ಜೂನಿಯರ್ ಶೋ ದೊಡ್ಡವರಿಗೆ ಮಾತ್ರವಲ್ಲ ಮಕ್ಕಳ ನೆಚ್ಚಿನ ಶೋ ಆಗಿದೆ.. ವಾರಾಂತ್ಯದಲ್ಲಿ ಪುಟಾಣಿ ಮಕ್ಕಳ ಪ್ರತಿಭೆಯನ್ನು ತೆರೆ ಮೇಲೆ ನೋಡುವುದೇ ಒಂದು ಚೆಂದವೆನಿಸುತ್ತದೆ.. ಆದರೆ ಈ ಕಾರ್ಯಕ್ರಮ‌ ನೋಡಿ ನಾವೂ ಸಹ ಇದೇ ರೀತಿ ಸಾಧನೆ ಮಾಡಬೇಕೆಂದುಕೊಂಡು ಮನೆ ಬಿಟ್ಟು ನಾಲ್ಕು ಹೆಣ್ಣು ಮಕ್ಕಳು ಬೆಂಗಳೂರಿನ ಕಡೆಗೆ ಬಸ್ ಹತ್ತಿ ಬಂದಿದ್ದಾರೆ.. ಆದರೆ ಕೊನೆಗೆ ನಡೆದದ್ದೇ ಬೇರೆ..

ಹೌದು ಬಳ್ಳಾರಿಯ ಪಾರ್ವತಿ ನಗರದ ನಿವಾಸಿಗಳಾದ ವೀರೇಶ್ ಹಾಗೂ ಚಂದ್ರಶೇಖರ್ ಎಂಬುವವರ ನಾಲ್ಕು ಹೆಣ್ಣು ಮಕ್ಕಳೇ ಮನೆ ಬಿಟ್ಟು ಬಂದವರು.. ಹೌದು ಮನೆಯ ಮುಂದೆ ಆಟವಾಡಿಕೊಂಡಿದ್ದ ಈ ನಾಲ್ಕು ಹೆಣ್ಣು ಮಕ್ಕಳಿಗೆ ಹೆತ್ತವರ ಬೈದು ಹೋಗಿ ಓದಿಕೊಳ್ಳಿ ಎಂದಿದ್ದರಂತೆ. ಇದರಿಂದ ಬೇಸರಕೊಂಡ ನಾಲ್ವರು ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರ ಹೋಗುವ ನಿರ್ಧಾರ ಮಾಡಿದ್ದಾರೆ.. ಅದಾಗಲೇ ಡ್ರಾಮಾ ಜೂನಿಯರ್ ಶೋ ಬಹಳಷ್ಟು ಪರಿಣಾಮ ಬೀರಿದ್ದ ಕಾರಣ.. ನಾಲ್ವರೂ ಸಹ ಬೆಂಗಳೂರಿಗೆ ಬರುವ ನಿರ್ಧಾರ ಮಾಡುತ್ತಾರೆ.. ದೇವರಿಗಾಗಿ ಇಟ್ಟಿದ್ದ 800 ರೂಪಾಯಿ ಹಣವನ್ನು ಬಸ್ ಚಾರ್ಜಿಗೆಂದು ತೆಗೆದುಕೊಂಡು ಮಮೆಯಲ್ಲಿನ ಮೊಬೈಲ್ ನಲ್ಲಿ ಆಡಿಯೋ ರೆಕಾರ್ಡ್ ಮಾಡಿ.. ನಮ್ಮನ್ನು ಯಾರೂ ಹುಡುಕಬೇಡೀ.. ನಾವು ಏನಾದರೂ ಸಾಧನೆ ಮಾಡಿ ಆನಂತರ ಮನೆಗೆ ಮರಳಿ ಬರುತ್ತೇವೆ ಎಂದು ರೆಕಾರ್ಡ್ ಮಾಡಿದ್ದಾರಂತೆ..

ನಂತರ ಏಪ್ರಿಲ್ 26ರಂದು ಮಧ್ಯಾಹ್ನ ಮೂರು ಗಂಟೆಗೆ ಮನೆ ಬಿಟ್ಟು ಬಂದ ಹೆಣ್ಣು ಮಕ್ಕಳು ಬೆಂಗಳೂರಿಗೆ ಹೋಗುವ ಬಸ್ ಹತ್ತಿ ಹಣ ಕೊಟ್ಟು ಬೆಂಗಳೂರಿಗೆ ಟಿಕೆಟ್ ತೆಗೆದುಕೊಂಡಿದ್ದಾರೆ.. ಮಕ್ಕಳು‌ ಮಾತ್ರವೇ ಇದ್ದದ್ದನ್ನು ಕಂಡ ಕಂಡಕ್ಟರ್ ವಿಚಾರಿಸಿದಾಗ ಬೆಂಗಳೂರಿನಲ್ಲಿ ತಮ್ಮ ಸಂಬಂಧಿಕರ ಮನೆಗೆ ಎಂದು ಹೇಳಿ ಸುಮ್ಮನಾಗಿದ್ದಾರೆ.. ಆದರೆ ರಾತ್ರಿ ಹನ್ನೊಂದು ಮೂಬತ್ತಕ್ಕೆ ಬಸ್ ಬೆಂಗಳೂರು ತಲುಪಿದಾಗ ಮಕ್ಕಳು ಬಸ್ ನಿಂದ ಇಳಿಯಲು ಹೆದರಿದ್ದಾರೆ.. ಆಗ ಮತ್ತೊಮ್ಮೆ ವಿಚಾರಿಸಿದಾಗ ಮಕ್ಕಳು ಇರೋ ವಿಚಾರವನ್ನು ಒಪ್ಪಿಕೊಂಡಿದ್ದಾರೆ.. ತಕ್ಷಣ ಅವರನ್ನು ಉಪ್ಪಾರಪೇಟೆಯ ಪೊಲೀಸ್ ಠಾಣೆಗೆ ಚಾಲಕ ಹಾಗೂ ನಿರ್ವಾಹಕ ಕರೆದುಕೊಂಡು ಹೋಗಿದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.. ಆದರೆ ಅಲ್ಲಿಯೂ ಸಹ ಮಕ್ಕಳು ಪೋಷಕರ ಮೊಬೈಲ್ ನಂಬರ್ ಕೊಡಲು ನಿರಾಕರಿಸಿದ್ದಾರೆ..

ಇತ್ತ ಅದಾಗಲೇ ಮಕ್ಕಳ ವಾಯ್ಸ್ ಮೆಸೆಜ್ ನೋಡಿ ಬೆಚ್ಚಿಬಿದ್ದಿದ್ದ ಪೋಷಕರು ಮಕ್ಕಳಿಗಾಗಿ ಹುಡುಕಾಡಲು ಶುರು ಮಾಡಿದ್ದರು..‌ ಕೊನೆಗೆ ಮಧ್ಯ ರಾತ್ರಿ‌ ಒಂದು‌ಮೂವತ್ತಕ್ಕೆ ಮಕ್ಕಳು‌ ಪೋಷಕರ ನಂಬರ್ ಕೊಟ್ಟಿದ್ದು ಆ ಸಮಯದಲ್ಲಿಯೇ ಪೋಷಕರಿಗೆ ಫೋನ್‌ ಮಾಡಿ ವಿಚಾರ ತಿಳಿಸಿದ್ದಾರೆ.. ಅದೇ ಸಮಯದಲ್ಲಿ ಬೆಂಗಳೂರಿನ ಬಸ್ ಹಿಡಿದು ಮಕ್ಕಳನ್ನು‌ ಮರಳಿ‌ ಮನೆಗೆ ಕರೆದುಕೊಂಡು ಬಂದಿದ್ದಾರೆ.. ಒಟ್ಟಿ‌ನಲ್ಲಿ ಡ್ರಾಮಾ ಜೂನಿಯರ್ ನಲ್ಲಿಸಾಧನೆ ಮಾಡ್ತೀವಿ ಎಂದು ಮನೆ ಬಿಟ್ಟು ಬಂದ ಮಕ್ಕಳು ಉಪ್ಪಾರಪೇಟೆ ಪೊಲೀಸ್ ಠಾಣೆ ಮೋಡಿ ಬರುವಂತಾಯಿತು..

ಪೋಷಕರು ದಯವಿಟ್ಟು ಟಿವಿ ಶೋಗಳಲ್ಲಿ ಬರುವ ಕಾರ್ಯಕ್ರಮಗಳನ್ನು‌ ಕಂಡು ತಮ್ಮ ಮಕ್ಕಳೂ ಸಹ ಅದೇ ರೀತಿ ಆಗಬೇಕು ಎಂದು ಆಸೆ ಪಡುವುದು ಸಹಜ.. ಆದರೆ ಅದಕ್ಕೂ ಮೀರಿ ಅವರಂತೆ ಆಗಿಲ್ಲ ಇವರಂತೆ ಆಗಿಲ್ಲ ಎಂದು ಮಕ್ಕಳ‌ ಮೇಲೆ ದಯವಿಟ್ಟು ಒತ್ತಡ ಹೇರಬೇಡಿ.. ಒತ್ತಡ ಹೇರಿದರೆ ಕೊನೆಗೆ ಇದೇ ಸ್ಥಿತಿ ಅಷ್ಟೇ.. ತೆರೆ ಮೇಲೆ ಬರುವ ಕಾರ್ಯಕ್ರಮಗಳ ಹಿಂದೆ ಬೇರೆ ಬೇರೆ ರೀತಿಯ ಶ್ರಮವಿರುತ್ತದೆ.. ಜೊತೆಗೆ ಟಿ ಆರ್ ಪಿ ಗಾಗಿ ಬೇರೆಯದ್ದೇ ರೀತಿಯಲ್ಲಿ ಕೆಲವೊಂದು ವಿಚಾರಗಳನ್ನು ತೋರಿರುತ್ತಾರೆ.. ಅದನ್ನು ನೋಡಿ ನಾವು ಸಹ ಅದೇ ಕಷ್ಟದಿಂದ ಬಂದವರು‌ನಾವೂ ಸಹ ಹಾಗೆಯೇ ಶೋನಲ್ಲಿ ಬರಬೇಕಿ ಎಂದುಕೊಳ್ಳಬೇಡಿ.. ಸಾಧನೆ ಮಾಡುವುದು ಮುಖ್ಯ.. ಆದರೆ ಅವರಂತೆ ಇವರಂತೆ ಅನ್ನುವುದಲ್ಲ..