ಜೀವ ಕಳೆದುಕೊಂಡ ಕಿರುತೆರೆಯ ಮತ್ತೊಬ್ಬ ಖ್ಯಾತ ನಟಿ

0 views

ಇತ್ತೀಚೆಗೆ ಎಲ್ಲಿ ನೋಡಿದರೂ ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಲೇ ಇದೆ. ದಿನೇ ದಿನೇ ಬಣ್ಣದ ಲೋಕದಲ್ಲಿ ಒಬ್ಬರಾದ ಮೇಲೆ ಒಬ್ಬರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಮ್ಮ ಕನ್ನಡ ಕಿರುತೆರೆಯ ಒಬ್ಬ ನಟಿಯನ್ನು ನಾವು ಕಳೆದುಕೊಂಡೆವು. ಕಿರುತೆರೆ ನಟಿ ಚೇತನಾ ರಾಜ್ ತಮ್ಮ ದೇಹ ತೂಕ ಕಡಿಮೆ ಗೊಳಿಸಲು, ಕೊಬ್ಬನ್ನು ತೆಗೆಯುವ ಸರ್ಜರಿ ಮಾಡಿಸಿಕೊಂಡು, ಚಿಕಿತ್ಸೆ ಫಲಕಾರಿಯಾಗದೆ ನಟಿ ಚೇತನಾ ರಾಜ್ ಸಾವನ್ನಪ್ಪಿದ್ದರು. ಇದೀಗ ಮತ್ತೊಬ್ಬ ಕಿರುತೆರೆಯ ನಟಿ ಇದೀಗ ತಮ್ಮ ಜೀವ ಕಳೆದುಕೊಂಡಿದ್ದಾರೆ. ಹೌದು ಇದೀಗ ಕಿರುತೆರೆಯ ಮತ್ತೊಬ್ಬ ಖ್ಯಾತ ನಟಿ ತಮ್ಮ ಮನೆಯಲ್ಲೆಯೇ ಜೀವ ಕಳೆದುಕೊಂಡಿದ್ದು ಹೆತ್ತವರ ಸಂಕಟ ಮತ್ಯಾರಿಗೂ ಬೇಡವೆನ್ನುವಂತಾಗಿದೆ..

ಕೋಲ್ಕತಾ ಬಣ್ಣದ ಲೋಕ ಎಂದರೆ ತಪ್ಪಾಗುವುದಿಲ್ಲ, ಮಾಡಲಿಂಗ್ ನಟನೆ ಹಾಗೂ ಇನ್ನು ಮುಂತಾದವುಗಳು ಹೆಚ್ಚಾಗಿ ನಡೆಯುವ ಸ್ಥಳ. ಇದೀಗ ಕೋಲ್ಕತಾದಲ್ಲಿ ಒಂದಾದ ಮೇಲೆ ಒಂದು ಸಾವಾಗುತ್ತಿದೆ. ಒಬ್ಬರಾದ ಮೇಲೆ ಒಬ್ಬ ಮಾಡಲ್ ಗಳು ಹಾಗೂ ನಟಿಯರು ಜೀವ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗುತ್ತಿದ್ದಾರೆ. ಕಳೆದ 2 ವಾರಗಳಲ್ಲಿ ನಾಲ್ಕು ಮಾಡಲ್ ಗಳ ಪಾರ್ಥೀವಗಳು ಪತ್ತೆಯಾಗಿದೆ. 2 ವಾರಗಳ ಹಿಂದೆ ಬೆಂಗಾಲಿಯ ಖ್ಯಾತ ಕಿರುತೆರೆ ನಟಿ ಪಲ್ಲವಿ ಡೇ ಅವರು ಸಾವನ್ನಪ್ಪಿದ್ದರು. ಕೋಲ್ಕತಾದ ಅವರ ಅಪಾರ್ಟ್ಮೆಂಟ್ ನಲ್ಲಿ ನಟಿ ಪಲ್ಲವಿ ಅವರು ಜೀವ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಮತ್ತೊಂದು ಮಾಡಲ್ ನ ಪಾರ್ಥೀವ ಕೋಲ್ಕತಾದಲ್ಲಿ ಪತ್ತೆಯಾಗಿತ್ತು.

ಕೋಲ್ಕತಾದ ಜನಪ್ರಿಯ ಮಾಡಲ್ ಬಿದಿಶಾ ಡಿ ಮಜುಂಧಾರ್ ಅವರು ಸಾವನ್ನಪ್ಪಿದ್ದರು. ಬಿದಿಶಾ ಅವರ ನಿವಾಸದಲ್ಲಿ ಸ್ಥಿತಿಯಲ್ಲಿ ಅವರ ಪಾರ್ಥೀವ ದೊರಕಿತ್ತು. ಅಲ್ಲದೆ ಬಿದಿಶಾ ಅವರ ಪಾರ್ಥೀವದ ಬಳಿ ಒಂದು ಪತ್ರ ಕೂಡ ದೊರಕಿತ್ತು. ಆ ಪತ್ರದಲ್ಲಿ ಏನು ಸರಿಯಾಗಿ ತಿಳಿಯುತ್ತಿಲ್ಲ ಎಲ್ಲಾ ಗೊಂದಲಮಯವಾಹಿದೆ ಎಂದು ಪೊಲೀಸರು ತಿಳಿಸಿದ್ದರು. ನಂತರ ಹೆಚ್ಚಿನ ತನಿಖೆ ನಡೆಸಲು ಮುಂದಾಗಿದ್ದರು ಕೋಲ್ಕತಾದ ಪೊಲೀಸರು. ಇದೀಗ ಅದೇ ರೀತಿಯಲ್ಲಿ ಕೋಲ್ಕತಾದಲ್ಲಿ ಮತ್ತೊಬ್ಬ ನಟಿ ಜೀವ ಕಳೆದುಕೊಂಡಿದ್ದಾರೆ.. ಒಬ್ಬರಾದ ಮೇಲೆ ಒಬ್ಬರು ನಟಿಯರು ಜೀವ ಕಳೆದುಕೊಳ್ಳುತ್ತಿದ್ದು ಅನುಮಾನ ಹಾಗೂ ಆತಂಕವನ್ನುಂಟು ಮಾಡಿದೆ..

ಹೌದು ಇದೀಗ ಬಂಗಾಳದ ಮತ್ತೊಬ್ಬ ಖ್ಯಾತ ಮಾಡಲ್ ಮಂಜುಶಾ ನಿಯೋಗಿ ಸಾವನ್ನಪ್ಪಿದ್ದಾರೆ. ಬಿದಿಶಾ ಸಾವನಪ್ಪಿದ್ದ ಎರಡನೇ ದಿನದಲ್ಲಿ ಮಂಜುಶಾ ನಿಯೋಗಿ ಸಾವನಪ್ಪಿದ್ದಾರೆ. ಮಂಜುಶಾ ಅವರು ಕೋಲ್ಕತಾದ ಪುತೌಲಿ ಏರಿಯಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ತಮ್ಮ ನಿವಾಸದಲ್ಲೇ ಮಂಜುಶಾ ಕೂಡ ಫ್ಯಾನ್ ನಲ್ಲಿ ಜೀವ ಕಳೆದುಕೊಂಡಿದ್ದಾರೆ.. ಈ ವಿಷಯ ತಿಳಿಯುತ್ತಿದ್ದಂತೆ ಮಂಜುಶಾ ನಿವಾಸಕ್ಕೆ ತೆರಳಿದ ಪೊಲೀಸರು ಪಾರ್ಥೀವವನ್ನು ಪರೀಕ್ಷೆ ನಡೆಸಲು ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಮೂರು ಘಟನೆಗಳ ಹಿಂದಿನ ರಹಸ್ಯ ಏನು ಎಂಬುದರ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಿದಿಶಾ ಹಾಗೂ ಮಂಜುಶಾ ಇಬ್ಬರೂ ಪ್ರಖ್ಯಾತ ಮಾಡಲ್ ಗಳಾಗಿದ್ದರು, ಅಲ್ಲದೆ ಇಬ್ಬರೂ ಒಳ್ಳೆಯ ಸ್ನೇಹಿತರು ಸಹ ಹೌದು. ಬಿದಿಶಾ ಅವರ ಘಟನೆಯ ನಂತರ ಮಂಜುಶಾ ಅವರು ತಮ್ಮ ಗೆಳತಿಯನ್ನು ಕಳೆದುಕೊಂಡ ನೋವಿಗೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಮಂಜುಶಾ ತಾಯಿ ನನ್ನ ಮಗಳು ಹಾಗೂ ಬಿದಿಶಾ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಬಿದಿಶಾ ನನ್ನ ಮಗಳು ಬಹಳ ನೊಂದಿದ್ದಳು, ನನ್ನ ಹತ್ತಿರ ಹೆಚ್ಚಾಗಿ ಬಿದಿಶಾಳ ಬಗ್ಗೆ ಮಾತನಾಡುತ್ತಿದ್ದಳು. ಇದೀಗ ಬಿದಿಶಾ ಇರುವ ಜಾಗಕ್ಕೆ ಅವಳು ಹೋಗಿದ್ದಾಳೆ ಎಂದು ಮಂಜುಶಾ ಅವರ ತಾಯಿ ಕಣ್ಣೀರು ಹಾಕಿದ್ದಾರೆ. ಈ ಹಿರಿಯ ಜೀವ ತನ್ನ ಮಗಳನ್ನು ಕಳೆದುಕೊಂಡ ನೋವಿನಿಂದ ಆದಷ್ಟು ಬೇಗ ಚೇತರಿಸಿಕೊಳ್ಳುವಂತಾಗಲಿ..