ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರ ಅಂತ್ಯ ಸಂಸ್ಕಾರ ಮಾಡಲಿಲ್ಲ ಕುಟುಂಬ.. ನಿಜವಾದ ಕಾರಣವೇನು ಗೊತ್ತಾ..

0 views

ಕಳೆದ ಎರಡು ವರ್ಷಗಳಿಂದ ಕನ್ನಡ ಚಿತ್ರರಂಗದ ಸಾಕಷ್ಟು ಅಮೂಲ್ಯ ರತ್ನಗಳನ್ನು ಕಳೆದುಕೊಂಡೆವು.. ನಿಜಕ್ಕೂ ಚಿತ್ರರಂಗದ ಪ್ರಮುಖ ಕೊಂಡಿಗಳು ಸಹ ಕಳಚಿದ್ದು ಎಂದೂ ಸಹ ತುಂಬಲಾರದ ನಷ್ಟವೇ ಸರಿ.. ಹಿರಿಯ ಕಲಾವಿದರು ಹಾಸ್ಯ ಕಲಾವಿದರು ಇದಕ್ಕೂ ಮೀರಿ ಯುವ ಕಲಾವಿದರು ಪುನೀತ್ ರಾಜ್ ಕುಮಾರ್ ಅವರು ಚಿರು ಸರ್ಜಾ ಹೀಗೆ ಸಾಕಷ್ಟು ಕಲಾವಿದರನ್ನು ಕಳೆದುಕೊಂಡು ಒಂದು ರೀತಿ ಚಿತ್ರರಂಗ ಖಾಲಿ ಎನಿಸುವಂತೆ ಭಾಸವಾಗುತ್ತದೆ‌‌.. ಇನ್ನು ಮೊನ್ನೆ ಮೊನ್ನೆಯಷ್ಟೇ ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರು ತಮ್ಮ ಎಂಭತ್ತ ಮೂರನೇ ವರ್ಷ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು ಕನ್ನಡ ಚಿತ್ರರಂಗ ಕಿರುತೆರೆ ಸೇರಿದಂತೆ ಸಿನಿಮಾ ಮಂದಿ ಹಾಗೂ ಕನ್ನಡಿಗರು ಅಗಲಿದ ಹಿರಿತ ಚೇತನಕ್ಕೆ ಕಂಬನಿ ಮಿಡಿದರು..

ಕಳೆದ ಐವತ್ತು ವರ್ಷಗಳಿಂದಲೂ ಕಲಾ ಸೇವೆ ಮಾಡಿಕೊಂಡು ಬರುತ್ತಿದ್ದ ಭಾರ್ಗವಿ ನಾರಾಯಣ್ ಅವರು ನಾಟಕಗಳಲ್ಲಿ ಸಿನಿಮಾಗಳಲ್ಲಿ ಅಷ್ಟೇ ಏಕೆ ಕಿರುತೆರೆಯಲ್ಲಿಯೂ ಪ್ರೇಕ್ಷಕರ ಮೆಚ್ಚಿನ ಕಲಾವಿದೆಯಾಗಿದ್ದರು.. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭಾರ್ಗವಿ ನಾರಾಯಣ್ ಅವರು ಮೊನ್ನೆ ಇಹಲೋಕ ತ್ಯಜಿಸಿದರು.. ಆದರೆ ಭಾರ್ಗವಿ ನಾರಾಯಣ್ ಅವರ ಅಂತಿಮ ಸಂಸ್ಕಾರವನ್ನು ನೆರವೇರಿಸಲಿಲ್ಲ.. ಹೌದು ಭಾರ್ಗವಿ ನಾರಾಯಣ್ ಅವರು ರಂಗಭೂಮಿ‌ ಕಲಾವಿದೆಯಾಗಿ ಸಾಕಷ್ಟು ಹೆಸರು ಮಾಡಿದ್ದವರು.. ತದನಂತರ ಸಿನಿಮಾ ಧಾರಾವಾಹಿಗಳಲ್ಲಿ ಮತ್ತಷ್ಟು ಯಶಸ್ಸು ಪಡೆದರು.. ಇನ್ನು ಭಾರ್ಗವಿ ನರಾಯಣ್ ಅವರು ಮಾತ್ರವಲ್ಲ ಅವರ ಸಂಪೂರ್ಣ ಕುಟುಂಬವೇ ಕಲಾ ಸೇವೆಯನ್ನು ಮಾಡುತ್ತಿದೆ.. ಹೌದು ಭಾರ್ಗವಿ ನಾರಾಯಣ್ ಅವರ ಪತಿ ನಾರಾಯಣ್ ಅವರೂ ಸಹ ಕಲಾಸೇವೆಯನ್ನು ಮಾಡಿ ಕೆಲ ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದರು.. ಸ್ಯಾಂಡಲ್ವುಡ್ ನಲ್ಲಿ ಮೇಕಪ್ ನಾಣಿ ಎಂದೆ ಖ್ಯಾತಿಯನ್ನು ಪಡೆದಿದ್ದರು..

ಇನ್ನು ಭಾರ್ಗವಿ ನಾರಾಯಣ್ ಅವರ ಮಗ ಪ್ರಕಾಶ್ ಬೆಳವಾಡಿ ಅವರೂ ಸಹ ನಟನಾಗಿದ್ದು ರಂಗಭೂಮಿ ಹಾಗೂ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದಾರೆ.. ಇನ್ನು ಅವರ ಮಗಳು ಸುಧಾ ಬೆಳವಾಡಿ ಅವರೂ ಸಹ ಕಲಾವಿದೆಯಾಗಿದ್ದು ಎಲ್ಲರಿಗೂ ಚಿರಪರಿಚಿತರು.. ಇನ್ನು ಭಾರ್ಗವಿ ನಾರಾಯಣ್ ಅವರ ಮೊಮ್ಮಗಳು ಸಂಯುಕ್ತಾ ಹೊರನಾಡು ಅವರು ಸಹ ಸ್ಯಾಂಡಲ್ವುಡ್ ನಲ್ಲಿ ನಾಯಕ ನಟಿಯಾಗಿ ಬಣ್ಣದ ಬದುಕನ್ನೌ ವೃತ್ತಿ ಬದುಕನ್ನಾಗಿಸಿಕೊಂಡಿದ್ದಾರೆ.. ಈ ರೀತಿ ಕಲಾ ಸೇವೆಯನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಕುಟುಂಬ ಇದೀಗ ಭಾರ್ಗವಿ ನರಾಯಣ್ ಅವರು ಅಗಲಿದಾಗಲೂ ದೊಡ್ಡತನ ತೋರಿದೆ..

ಹೌದು ಭಾರ್ಗವಿ ನಾರಾಯಣ್ ಅವರು ಮೊನ್ನೆ ಫೆಬ್ರವರಿ ಹದಿನಾಲ್ಕರಂದು ಸಂಜೆ ಏಳು ಮೂವತ್ತರ ಸಮಯದಲ್ಲಿ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದರು.. ಇನ್ನು ನಿನ್ನೆ ಬೆಳಿಗ್ಗೆ ಹನ್ನೊಂದು ಗಂಟೆಯವರೆಗೂ ಅವರ ನಿವಾಸದಲ್ಲಿಯೇ ಭಾರ್ಗವಿ ನಾರಾಯಣ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.. ಚಿತ್ರರಂಗದ ಗಣ್ಯರು ಕಿರುತೆರೆ ಕಲಾವಿದರು ಎಲ್ಲರೂ ಸಹ ಆಗಮಿಸಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.. ಅದರೆ ಆನಂತರ ಭಾರ್ಗವಿ ನಾರಾಯಣ್ ಅವರ ಅಂತಿಮ ಸಂಸ್ಕರ ನೆರವೇರಲಿದೆ ಎಂದುಕೊಳ್ಳಲಾಗಿತ್ತು.. ಆದರೆ ನಡೆದದ್ದೇ ಬೇರೆ..

ಹೌದು ಭಾರ್ಗವಿ ನಾರಾಯಣ್ ಅವರಿಗೆ ತಮ್ಮ ಸಂಪೂರ್ಣ ದೇಹದಾನ ಮಾಡುವ ಅಸೆ ಇತ್ತಂತೆ.. ಇವರಿಗೆ ಮಾತ್ರವಲ್ಲ‌ ಇವರ ಪತಿ ನರಾಯಣ್ ಅವರಿಗೂ ಸಹ ಅದೇ ಅಸೆ ಇದ್ದ ಕಾರಣ ಅವರ ಅಂತಿಮ ಸಂಸ್ಕಾರವನ್ನೂ ನೆರವೇರಿಸಲಿಲ್ಲ.. ಮೆಡಿಕಲ್ ಕಾಲೇಜೊಂದಕ್ಕೆ ದೇಹದಾನ ಮಾಡಲಾಗಿತ್ತು.. ಇದೀಗ ಭಾರ್ಗವಿ ನಾರಾಯಣ್ ಅವರೂ ಸಹ ಅದೇ ಅಸೆಯನ್ನು ವ್ಯಕ್ತ ಪಡಿಸಿದ್ದು ತವೌ ಹೋದ ಬಳಿಕ ಒಂದಿಷ್ಟು ಜನರಿಗೆ ತಮ್ಮಂದ ನೆರವಾಗಲಿ ಎಂದು ತಮ್ಮ ನೇತ್ರದಾನ ಹಾಗೂ ದೇಹದಾನದ ಬಗ್ಗೆ ಮೊದಲೇ ತಿಳಿಸಿದ್ದರಂತೆ.. ಇದೇ ಕಾರಣಕ್ಕೆ ಕುಟುಂಬ ಭಾರ್ಗವಿ ನಾರಾಯಣ್ ಅವರ ಅಂತಿಮ ಸಂಸ್ಕಾರ ಮಾಡದಿರಲು ತೀರ್ಮಾನಿಸಿತು.. ಅಷ್ಟೇ ಅಲ್ಲದೇ ಭಾರ್ಗವಿ ನಾರಾಯಣ್ ಅವರು ಸಾಕಷ್ಟು ವರ್ಷಗಳ ಹಿಂದೆಯೇ ತಮ್ಮ ದೇಹದಾನ ಮಾಡಲು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಂಡಿದ್ದರಂತೆ..

ಇತ್ತ ಮಗ ಪ್ರಕಾಶ್ ಬೆಳವಾಡಿ ಅವರು ತನ್ನ ತಾಯಿಯ ದೇಹದಾನ ಮಾಡಲು ನಿರ್ಧರಿಸಿ ಅದೆ ರೀತಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಭಾರ್ಗವಿ ನಾರಾಯಣ್ ಅವರ ದೇಹದಾನ ಮಾಡಲಾಗಿದೆ.. ಅದಕ್ಕೂ ಮುನ್ನ ಮೊನ್ನೆ ಭಾರ್ಗವಿ ನಾರಾಯಣ್ ಅವರು ಕೊನೆಯುಸಿರೆಳೆದ ದಿನವೇ ಅವರ ಕಣ್ಣುಗಳನ್ನು ಸಹ ದಾನ ಮಾಡಲಾಗಿದ್ದು ಮತ್ತಿಬ್ಬರ ಬಾಳಿಗೆ ಬೆಳಕಾಗಿದ್ದಾರೆ.. ಈ ಮೂಲಕ ಪತಿಯ ಹಾದಿಯಕ್ಕೇ ಸಾಗಿ ಸಾರ್ಥಕತೆ ತೋರಿದ್ದಾರೆ.. ಇನ್ನು ಈ ಬಗ್ಗೆ ವಿಚಾರ ತಿಳಿಸಿದ ಭಾರ್ಗವಿ ಅವರ ಮೊಮ್ಮಗಳು ನಟಿ ಸಂಯುಕ್ತಾ ಹೊರನಾಡ್ ಅವರು ತನ್ನ ತಾತ 2003 ರಲ್ಲಿ ತಮ್ಮ ದೇಹದಾನ ಮಾಡಿದ್ದರು.. ಇದೀಗ ನಮ್ಮ ಅಜ್ಜಿ ಮೊದಲೇ ನಿರ್ಧಾರ ಮಾಡಿದಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅಜ್ಜಿಯವರ ಪಾರ್ಥೀವವನ್ನು ನೀಡಲಾಗಿದೆ.. ಇಬ್ಬರು ನಿಜಕ್ಕೂ ನನಗೆ ಸ್ಪೂರ್ತಿ.. ನಾನು ನನ್ನ ಅರ್ಜಿಯನ್ನು ತಂದಿರುವೆ ಎಂದಿದ್ದು ತಾವೂಸಹ ದೇಹದಾನ ಮಾಡಲು ನೋಂದಣಿ‌‌ ಮಾಡಿಸಿಕೊಳ್ಳುವ‌ ಮೂಲಕ ಮಾದರಿಯಾಗಿದ್ದಾರೆ..