ನಿಜ ಜೀವನದಲ್ಲಿಯೂ ಒಂದಾಗಲಿದ್ದಾರಾ ಕಿರುತೆರೆಯ ಸೂಪರ್ ಹಿಟ್ ಜೋಡಿ ವಿಜಯ್ ಗೀತಾ.. ಮದುವೆ ಬಗ್ಗೆ ಮಾತನಾಡಿದ ಗೀತಾ..

0 views

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಒಟ್ಟಾಗಿ ಅಭಿನಯಿಸಿ ಸೂಪರ್ ಹಿಟ್ ಆದ ಅನೇಕ ಜೋಡಿಗಳು ನಿಜ ಜೀವನದಲ್ಲಿಯೂ ಒಂದಾದ ಸಾಕಷ್ಟು ಉದಾಹರಣೆಗಳಿವೆ.. ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಕಲಾವಿದರು ನಿಜ ಜೀವನದಲ್ಲಿಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಅನ್ಯೂನ್ಯವಾಗಿ ಸಂಸಾರ ನಡೆಸುತ್ತಿದ್ದಾರೆ.. ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್.. ಕೃಷ್ಣಾ ನಿಲನಾ ನಾಗರಾಜ್.. ಚಂದನ್ ಕವಿತಾ ಗೌಡ.. ಚಂದನ್ ನಿವೇದಿತಾ ಹೀಗೆ ಸಾಕಷ್ಟು ಕಲಾವಿದರು ತೆರೆ ಮೇಲೆ ಹಾಗೂ ನಿಜ ಜೀವನದಲ್ಲಿಯೂ ಜೋಡಿಗಳಾಗಿ ಸಿಕ್ಕಾಪಟ್ಟೆ ಸದ್ದು ಮಾಡಿದರು.. ಇನ್ನು ಸದ್ಯ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಧಾರಾವಾಹಿಗಳಲ್ಲಿ ಒಂದಾಗಿರುವ ಗೀತಾ ಧಾರಾವಾಹಿಯ ಗೀತಾ ಹಾಗೂ ವಿಜಯ್ ಜೋಡಿ ನಿಜ ಜೀವನದಲ್ಲಿಯೂ ಒಂದಾಗ್ತಾರಾ ಎಂಬ ಮಾತು ಕೇಳಿ ಬರುತ್ತಿದೆ..

ಹೌದು ಗೀತಾ ಧಾರಾವಾಹಿ ಪ್ರೇಕ್ಷಕರಿಗೆ ಇಷ್ಟವಾಗಿ ಟಾಪ್ ಹತ್ತು ಧಾರಾವಾಹಿಗಳಲ್ಲಿ ಒಂದಾಗಿರೋದು ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗುತ್ತಿರುತ್ತದೆ.. ಗೀತಾ ಮಾಡುವ ಸಾಹಸಗಳು ಆಕೆಯ ಧೈರ್ಯ ಹೀಗೆ ಹತ್ತು ಹಲವು ಅಂಶಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ಫೇಮಸ್ ಕೂಡ ಹೌದು.. ಅದರಲ್ಲೂ ಕೆಲ ದಿನಗಳ ಹಿಂದೆ ಪಂದ್ಯದಲ್ಲಿ ವಿಜಯ್ ಗೆಲ್ಲಲು ಗೀತಾ ಕೊಟ್ಟ ಟ್ರೈನಿಂಗ್ ಇನ್ನಿಲ್ಲದ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿತ್ತು.. ಮುಂದಿನ ಒಲಂಪಿಕ್ ಗೆ ತರಬೇತುದಾರರಾಗಿ ಕಳುಹಿಸಿಬಿಡಿ ಎಂಬೆಲ್ಲಾ ಮಾತುಗಳು ಕೇಳಿ ಬಂದವು.. ಇನ್ನೂ ಅದೆಲ್ಲವನ್ನು ಹೊರತು ಪಡಿಸಿ ಮೊದಲಿನಿಂದಲೂ ಗೀತಾ ಹಾಗೂ ವಿಜಯ್ ಜೋಡಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದಿತ್ತು.. ಇನ್ನು ಕಳೆದ ತಿಂಗಳು ನಡೆದ ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಈ ಜೋಡಿಯೂ ಸಹ ಭಾಗಿಯಾಗಿದ್ದು ಅಲ್ಲಿಯೂ ಕೂಡ ಇವರಿಬ್ಬರ ನಡುವಿನ ಅನ್ಯೂನ್ಯತೆ ಸದ್ದು ಮಾಡಿತ್ತು..

ಇದೆಲ್ಲವನ್ನು ನೋಡಿದ ಪ್ರೇಕ್ಷಕರ ಮನದಲ್ಲಿ ಈ ಜೋಡಿ ‌ಇಜ ಜೀವನದಲ್ಲಿಯೂ ಮದುವೆ ಆಗಲಿದ್ದಾರಾ ಎಂಬ ಮಾತು ಕೇಳಿ ಬಂದಿತ್ತು.. ಆದರೆ ಇದೀಗ ಮದುವೆ ಬಗ್ಗೆ ಖುದ್ದು ಗೀತಾ ಮಾತನಾಡಿದ್ದು ಎಲ್ಲದಕ್ಕೂ ಉತ್ತರ ನೀಡಿದ್ದಾರೆ.. ಹೌದು ಇನ್ನೇನು ಕೆಲವೇ ದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯ ಕಿರುತೆರೆ ಕಲಾವಿದರ ಸಂಭ್ರಮದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ನಡೆಯಲಿದೆ.. ಕಿರುತೆರೆ ಕಲಾವಿದರಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮಕ್ಕೆ ಅದಾಗಲೇ ಸಕಲ ವ್ಯವಸ್ಥೆ ನಡೆಯುತ್ತಿದ್ದು ಇತ್ತ ಪ್ರತಿಯೊಂದು ಧಾರಾವಾಹಿ ಕುಟುಂಬವನ್ನೂ ಸಹ ಸಂದರ್ಶನ ಮಾಡಲಾಗುತ್ತಿದೆ.. ಆ ಸಮಯದಲ್ಲಿ ಮದುವೆ ಬಗ್ಗೆ ಮಾತನಾಡಿರುವ ಗೀತಾ ನಾಚಿ ನೀರಾದರೆನ್ನಬಹುದು..

ಹೌದು ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಗೀತಾ ತಂಡ ತಮ್ಮ ಧಾರಾವಾಹಿಯ ಕುರಿತು ಮಾತನಾಡುವಾಗ ಗೀತಾ ಎಲ್ಲರ ಪರಿಚಯ ಮಾಡಿದರು.. ಪಿ ಬಿ ಶ್ರೀನಿವಾಸ್ ಇವರು ನನ್ನ ತಂದೆ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.. ಇವರ ಜೊತೆ ಅಭಿನಯಿಸುವ ಅವಕಾಶ ಬಂದದ್ದು ನಿಜಕ್ಕೂ ಪುಣ್ಯ.. ಧಾರಾವಾಹಿಯಲ್ಲಿ ಮಾತ್ರ ತಂದೆಯಲ್ಲ.. ನಿಜ ಜೀವನದಲ್ಲಿಯೂ ಮಗಳೇ ಮಗಳೇ ಅಂತಾನೇ ಅವರು ನನ್ನನ್ನು ಕರೆಯೋದು.. ಅಷ್ಟೇ ಪ್ರೀತಿ ನೀಡ್ತಾರೆ ಎಂದರು.. ಇನ್ನು ವಿಜಯ್ ಬಗ್ಗೆ ಮಾತನಾಡುವ ಮುಖ ಕೆಂಪಾಗಿಸಿಕೊಂಡ ಗೀತಾ ಧಾರಾವಾಹಿಯಲ್ಲಿ ವಿಜಯ್.. ನಿಜ ಜೀವನದಲ್ಲಿ ಧನುಷ್ ಗೌಡ.. ಬಹಳ ಸಪೋರ್ಟಿವ್ ಆಗಿರ್ತಾರೆ.. ಮೊದಲೆಲ್ಲಾ ಕಿಕಿರಿಯಾಗಿತ್ತು ಈಗೀಗ ಇಬ್ಬರ ನಡುವೆ ಹೊಂದಾಣಿಕೆಯಿದೆ ಎಂದರು.. ಇತ್ತ ಧಾರಾವಾಹಿ ತಂಡದ ಮತ್ತೊಬ್ಬ ಕಲಾವಿದರು ಮಾತನಾಡಿ ಈಗೀಗ ಪ್ರೀತಿ ಮೂಡಿದೆ ಎಂದರು..

ತಕ್ಷಣ ಪ್ರತಿಕ್ರಿಯೆ ನೀಡಿದ ಧನುಷ್ ಆನ್ ಸ್ಕ್ರೀನ್ ನಲ್ಲಿ ಅಂತ ಹೇಳಿ ಸರ್ ಎಂದರು.. ಇತ್ತ ಸಂದರ್ಶನ ಮಾಡುತ್ತಿದ್ದ ನಿರೂಪಕಿ ನಿಜ ಜೀವನದಲ್ಲಿಯೂ ಮದುವೆ ಆಗ್ತೀರಾ ಎಂದು ನೇರವಾಗಿಯೇ ಪ್ರಶ್ನೆ ಕೇಳಲಾಗಿ ಇಲ್ಲ ಇಲ್ಲ ನಿಜ ಜೀವನದಲ್ಲಿ ಸ್ನೇಹಿತರಷ್ಟೇ ಎಂದು ಹೇಳಿದರು.. ಸಧ್ಯ ತಮ್ಮಿಬ್ಬರ ನಡುವೆ ಇರೋದು ಸ್ನೇಹ ಮಾತ್ರ ಎಂದಿರುವ ಜೋಡಿ ನಿಜಕ್ಕೂ ಸ್ನೇಹಿತರು ಮಾತ್ರವೋ ಅಥವಾ ಇದೇ ರೀತಿ ಸ್ನೇಹಿತರು ಎನ್ನುತ್ತಿದ್ದ ಲಕ್ಷ್ಮ್ಕಿ ಬಾರಮ್ಮ ಧಾರಾವಾಹಿಯ ಚಂದು ಕವಿತಾ ಜೋಡಿಯಂತೆ ಮುಂದೊಂದು ದಿನ ದಾಂಪತ್ಯ ಜೀವನಕ್ಕೆ ಕಾಲಿಡುವರೋ ಕಾದು ನೋಡಬೇಕಷ್ಟೇ..