ಮುಗಿಯಿತು ಕನ್ನಡತಿ‌ ಕತೆ..

0 views

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ಕನ್ನಡತಿ ಧಾರಾವಾಹಿಗೆ ತನ್ನದೇ ಆದ ಪ್ರೇಕ್ಷಕರು ಇದ್ದರು.. ಧಾರಾವಾಹಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಧಾರಾವಾಹಿಯ ಬಗ್ಗೆ ಸಾಕಷ್ಟು ಚರ್ಚೆಯೂ ನಡೆದಿತ್ತು.. ಆದರೀಗ ಕನ್ನಡತಿಯ ಕತೆ ಮುಗಿದಿದೆ.. ಹೌದು ಆಶ್ಚರ್ಯವಾದರೂ ಇದು ಸತ್ಯ.. ಕನ್ನಡತಿ.. ಸರಳತೆಯಿಂದ ಕೂಡಿದ ಕನ್ನಡ ಟೀಚರ್.. ಅಮ್ಮನ ಉದ್ಯಮವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದು ಮಾಲಾ ಕೆಫೆಯ ಓನರ್ ಆಗಿದ್ದ ಪೇಟೆ ಜೀವನ ಶೈಲಿಯ ನಾಯಕ.. ಇತ್ತ ಟೀಚರ್ ಗೊಬ್ಬಳು ಸ್ನೇಹಿತೆ..

ಇಬ್ಬರಿಗೂ ಸಹ ಹೀರೋ ಮೇಲೆ ಪ್ರೀತಿ.. ಅತ್ತ ಎಲ್ಲರ ಜೊತೆಯೂ ಸ್ನೇಹದಿಂದಲೇ ಇದ್ದ ಹೀರೋಗೆ ಕನ್ನಡತಿ ಭಿವಿಯ ಮೇಲೆ ಪ್ರೀತಿ.. ಈ ನಡುವೆ ಆಸ್ತಿ ಅಧಿಮಾರಕ್ಕೆ ಆಗಾಗ ಹೀರೋ ಮನೆಯಲ್ಲಿನ ಸಾನಿಯಾಳಿಂದ ಕಿರಿಕಿರಿ.. ಹೀಗೆ ಚೆನ್ನಾಗಿ ಸಾಗುತಿತ್ತು ಕನ್ನಡತಿ.. ಇತ್ತ ಅಭಿಮಾನಿಗಳಿಗೂ ಸಹ ಬಹಳಷ್ಟು ಇಷ್ಟವಾಗಿತ್ತು.. ಬೇರೆ ಧಾರಾವಾಹಿಗಳಂತೆ ಇಲ್ಲ.. ಕತೆಯೂ ಭಿನ್ನವಾಗಿದೆ.. ಅದರಲ್ಲಿಯೂ ಹರ್ಷ ಹಾಗೂ ಭುವಿಯ ನಡುವಿನ ಪ್ರೀತಿ ಬಹಳ ಮೆಚ್ಯೂರ್ ಆಗಿ ತೋರಿರುವುದು ಮನಸ್ಸಿಗೆ ಮುದ ನೀಡುತ್ತದೆ.. ಇಬ್ಬರ ಸಂಭಾಷಣೆ ಚೆಂದವೆನಿಸುತ್ತಿದೆ.. ಹೀಗೆ ಕನ್ನಡತಿ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿ ಬರುತ್ತಿದ್ದವು..

ಆದರೆ ಬರುಬರುತ್ತಾ ರಾಯರ ಕುದುರೆ ಕತ್ತೆಯಾಯಿತೆನ್ನುವಂತೆ ಕನ್ನಡತಿಯನ್ನು ಹಳ್ಳಕ್ಕೆ ತಳ್ಳಿ‌ಕತೆ ಮುಗಿಸಿದ್ದಾರೆ.. ಹೌದು ಒಂದಷ್ಟು ತಿಂಗಳವರೆಗೂ ಧಾರಾವಾಹಿ ಸರಿಯಾದ ದಿಕ್ಕಿನಲ್ಲಿಯೇ ಸಾಗುತಿತ್ತು.. ಸಾನಿಯಾಳ ನಡವಳಿಕೆ ಅತಿರೇಕವೆನಿಸಿದರೂ ಸಹ ಆಕೆ ಮಾಡುವ ಕೆಲಸಗಳು ಆಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ ಎಂದರೂ ಸಹ ಅದನ್ನು ಹೊರತು ಪಡಿಸಿ ಧಾರಾವಾಹಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು.. ಆದರೆ ಕೆಲ ತಿಂಗಳಿಂದ ಧಾರಾವಾಹಿ ಬೇರೆಯದ್ದೇ ದಿಕ್ಕಿನಲ್ಲಿ ಸಾಗುತ್ತಿದೆ..

ಅದರಲ್ಲೂ ಹರ್ಷ ಭುವಿಯ ನಿಶ್ಚಿತಾರ್ಥವಾದ ನಂತರ ಟಿಆರ್ ಪಿ ಹೆಚ್ಚಿಸಿಕೊಂಡು ಮತ್ತಷ್ಟು ಪ್ರೇಕ್ಷಕರನ್ನು ಸೆಳೆಯಬೇಕಾದ ಧಾರಾವಾಹಿ ಗಟ್ಟಿಯಾದ ಕತೆಯಿಲ್ಲದೇ ಎರಡು ವಾರಗಳಿಂದ ಬೆಟ್ಟವೊಂದರಲ್ಲಿ ಕತೆಯನ್ನು ನಾನು ನೀನು ಎನ್ನುವಂತೆ ಎಳೆದಾಡುತ್ತಲೇ ಇದ್ದಾರೆ.. ಅದಕ್ಕೂ ಮೀರಿ‌ ಎರಡು ದಿನದ ಹಿಂದೆ ಬೆಟ್ಟದಿಂದ ತಳ್ಳಿ ಕನ್ನಡತಿಯ ಕತೆಯನ್ನೇ ಮುಗಿಸಿ ಬಿಟ್ಟಿದ್ದಾರೆ.. ಹೌದು ಕನ್ಮಡತು ಭುವಿಯ ಕತೆಯನ್ನು ಮುಗಿಸಲು ಬೆಟ್ಟದಿಂದ ತಳ್ಳಿದರೂ ಸಹ ಆಕೆ ಮತ್ತೆ ಬದುಕಿ ಬಂದಿದ್ದು ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಆದರೆ ನಿರ್ದೇಶಕರು ಪ್ರೇಕ್ಷಕರಿಗೆ ಒಂದಷ್ಟು ದಿನಗಳಿಂದ ಧಾರಾವಾಹಿಯ ದಿಕ್ಕನ್ನು ಬದಲಿಸಿ ಕೊಡುತ್ತಿರುವ ಅತ್ಯದ್ಭುತ ಶಾಕ್ ಗಳಿಗೆ ಚಿಕಿತ್ಸೆಯೇ ಇಲ್ಲದಂತಾಗಿದ್ದು ಅಭಿಮಾನಿಗಳು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ..

ಹೌದು ಕಲರ್ಸ್ ಕನ್ನಡದ ಸಾಮಾಜಿಕ ಜಾಲತಾಣದಲ್ಲಿ ಕನ್ನಡತಿ ಧಾರಾವಾಹಿಯ ಪ್ರೋಮೋ ಕೆಳಗೆ ಸಾಕಷ್ಟು ಕಮೆಂಟ್ಗಳನ್ನು ಮಾಡುತ್ತುದ್ದು ಮೊದಲು ಆ ಭುವಿಯ ಕತೆಯನ್ನು ಮುಗಿಸಿ ಆಗ ಎಲ್ಲವೂ ಸರಿ ಹೋಗುತ್ತದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.. ಅಷ್ಟೇ ಅಲ್ಲದೇ ಧಾರಾವಾಹಿಯನ್ನು‌ ಮೊದಲಿನಿಂದಲೂ ನೋಡಿಕೊಂಡು ಬಂದ ಪ್ರೇಕ್ಷಕರು ಈಗ ನಾನ್ಸೆನ್ಸ್ ಎನ್ನುವಂತಾಗಿದೆ.. ಸಧ್ಯ ಧಾರಾವಾಹಿಯ ಕತೆಯಲ್ಲಿ ಕನ್ನಡತಿಯ ಕತೆಯನ್ನು ಮುಗಿಸಲು ಹೋಗಿ ಮುಗ್ಗರಿಸಿರುವ ನಿರ್ದೇಶಕರು ಕತೆಯನ್ನು ಹೀಗೆ ಮುಂದುವರೆಸಿದರೆ ನಿಜವಾಗಿಯೂ ಕನ್ನಡತಿಯ ಕತೆ ಮುಗಿದರೆ ಆಶ್ಚರ್ಯ ಪಡಬೇಕಿಲ್ಲ..

ಕನ್ನಡತಿ ಮುಂಚಿನಂತೆಯೇ ಪ್ರಬುದ್ಧವಾಗಿ ಕತೆಯನ್ನು ಕಟ್ಟಿ ಮುಂದುವರೆಸಿದರೆ ಮತ್ತೆ ಅದೇ ಹಳೇ ಫಾರ್ಮ್ ಗೆ ಬರಬಹುದಾಗಿದೆ.. ಅದನ್ನು ಬಿಟ್ಟು ಮತ್ತೆ ವರೂ ಸಾನಿಯಾ ಬಂದು ಭುವಿಯನ್ನು ಇಲ್ಲವಾಗಿಸಲು ಪ್ರಯತ್ನ ಪಡೋದು‌.. ಹೀರೋ ಏನೂ ಮಾಡಲಾಗದೇ ಸುಮ್ಮನೆ ಕೂರೋದು.. ಅತ್ತ ಅಮ್ಮಮ್ಮನ ಕತೆ ಆಗಲೋ ಈಗಲೋ ಎನ್ನೋದು ಹೀಗೆ ಇದನ್ನೇ ಎಳೆದರೆ ನಿಜಕ್ಕೂ ಕನ್ನಡತಿ ಪ್ರೇಕ್ಷಕರು ಮತ್ತಷ್ಟು ಅಸಮಾಧಾನ ಹೊರ ಹಾಕಲಿದ್ದು ನಿರ್ದೇಶಕರು ಎಚ್ಚೆತ್ತುಕೊಳ್ಳಬೇಕಿದೆ..