ಏನೋ‌ ಮಾಡಲು ಹೋಗಿ ಏನೋ ಆಯ್ತು.. ಕನ್ನಡತಿ ತಂಡಕ್ಕೆ ಬೇಕಿತ್ತಾ ಇದು?

0 views

ಕನ್ನಡತಿ ಕನ್ನಡ ಕಿರುತೆರೆಯ ಒಂದೊಳ್ಳೆ ಧಾರಾವಾಹಿ ಎಂದು ಸಾಕಷ್ಟು ಗಮನ ಸೆಳೆದಿತ್ತು.. ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದ ಕನ್ನಡತಿ ಧಾರಾವಾಹಿ ಭಾಷೆಯನ್ನು ಬಳಸುತ್ತಿದ್ದ ರೀತಿ ಹರ್ಷ ಭುವಿ ನಡುವಿನ ಪ್ರಬುದ್ಧ ಪ್ರೀತಿ, ಅಮ್ಮಮ್ಮ ಹಾಗೂ ಹರ್ಷನ ನಡುವಿನ ಅಮ್ಮ ಮಗನ ಬಾಂಧವ್ಯ ಹಾಗೂ ಇನ್ನಿತರ ಅಂಶಗಳಿಂದ ಜನರ ಮನಸ್ಸಿಗೆ ಬಹಳ ಹತ್ತಿರವಾಗಿತ್ತು.. ಆದರೆ ಈಗ ಕನ್ನಡತಿ ಧಾರಾವಾಹಿ ತಂಡ ಏನೋ ಮಾಡಲು ಹೋಗಿ ಏನೋ ಆದಂತೆ ಕಾಣುತ್ತಿದೆ..

ಹೌದು ಕನ್ನಡತಿ ಧಾರಾವಾಹಿಯ ಕತೆಯಲ್ಲಿ ಸಧ್ಯ ಹರ್ಷ ಹಾಗೂ ಭುವಿಯ ನಡುವಿನ ನಿಶ್ಚಿತಾರ್ಥ ನೆರವೇರಿದ್ದು ವರೂಧಿನಿ ಸಾನಿಯಾ ಎಲ್ಲರ ಸಂಚಿನ ನಡುವೆಯೂ ನಿಶ್ಚಿತಾರ್ಥ ಏನೋ ನೆರವೇರಿತು.. ಇನ್ನೇನು ಸಂಭ್ರಮದಿಂದ ಮದುವೆ ನೆರವೇರುವುದು ಸಂತೋಷದ ಸಂಚಿಕೆಗಳು ಪ್ರಸಾರವಾಗುವುದು ಎಂದು ಪ್ರೇಕ್ಷಕರು ಕಾತುರದಿಂದ ಕಾದಿದ್ದರು.. ಮತ್ತೊಂದು ಕಡೆ ಹರ್ಷ ಹಾಗೂ ಭುವಿಯ ಪ್ರೀತಿಯ ಸಂಚಿಕೆಗಳು ಸಹ ಪ್ರಸಾರವಾಗಬಹುದು ಎಂಬ ನಿರೀಕ್ಷೆ ಇತ್ತು.. ಆದರೆ ನಡೆದದ್ದೇ ಬೇರೆ.. ಹೌದು ಕನ್ನಡತಿ ಧಾರಾವಾಹಿ ತಂಡ ಮಾಡಿದ ಯಡವಟ್ಟಿಗೆ ಇದೀಗ ಪ್ರೇಕ್ಷಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ..

ಹೌದು ಕಳೆದ ಒಂದು ವಾರದಿಂದ ಮುಖ್ಯ ವಿಚಾರವನ್ನು ಬಿಟ್ಟು ವರೂಧಿನಿ ವಿಚಾರ ಇಟ್ಟುಕೊಂಡು ಧಾರಾವಾಹಿಯನ್ನು ಎಳೆಯುತ್ತಿರುವುದ ಕಂಡು ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮೂಲಕ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.. ಅಷ್ಟೇ ಅಲ್ಲದೇ ಭುವಿಯ ಪಾತ್ರವನ್ನು ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡಲಾಗುತ್ತಿದ್ದು.. ಈ ಹಿಂದೆ ಪುಟ್ಟ ಗೌರಿ ಮದುವೆಯಲ್ಲಿಯೂ ಭುವಿಗೆ ಇದೇ ಕತೆಯಾಗಿದ್ದು ಇದೀಗ ಮತ್ತೆ ಕನ್ನಡತಿಯಲ್ಲಿಯೂ ಸಹ ಟ್ರೋಲ್ ಆಗುವಂತಾಗಿದೆ..

ಹೌದು ಅತ್ತ ಆರೋಗ್ಯ ಸರಿ ಇಲ್ಲದ ಅಮ್ಮಮ್ಮ.. ಮತ್ತೊಂದು ಕಡೆ ನಿಶ್ಚಿತಾರ್ಥ ಆಗಿರುವ ಹುಡುಗ ಎಲ್ಲರನ್ನೂ ಬಿಟ್ಟು ಭುವಿ ವರೂಧಿನಿ ಹಿಂದಿಂದೆ ಓಡುತ್ತಿರುವುದು ನಿಜಕ್ಕೂ ಕಿರಿಕಿರಿಯನ್ನುಂಟು ಮಾಡುತ್ತಿದೆ.. ಅಷ್ಟೂ ಬೇಕಿದ್ದರೆ ಎಲ್ಲರೂ ಒಟ್ಟಿಗೆ ಬೆಟ್ಟ ಹತ್ತಬಹುದಾಗಿತ್ತು.. ಅದೂ ಸಹ ಇಲ್ಲ.. ಕಳೆದ ಒಂದು ವಾರದಿಂದ ಆ ಬೆಟ್ಟದಲ್ಲಿ ಭುವಿ ವರುವನ್ನು ನೋಡಿ ನೋಡಿ ನಿಜಕ್ಕೂ ಪ್ರೇಕ್ಷಕರು ತಮ್ಮ ತಾಳ್ಮೆಯನ್ನು ಕಳೆದುಕೊಂಡಿದ್ದು ಮೊದಲು ಆ ಭುವಿ ಪಾತವನ್ನು ಮುಗಿಸ್ರಪ್ಪಾ ನೋಡೋಕಾಗ್ತಿಲ್ಲ ಎಂದಿದ್ದಾರೆ..

ಇನ್ನು‌ ಇತ್ತ ಅದೇ ಹಳೆ ಕಾಲದ ಧಾರಾವಾಹಿಗಳಂತೆ ಭುವಿಯನ್ನು ಮುಗಿಸಲು ಮೇಲಿಂದ ಮೇಲೆ ಪ್ರಯತ್ನಗಳು ಅದೂ ಸಹ ಈ ರೀತಿ ಬೆಟ್ಟದಿಂದ ತಳ್ಳೋದು ಬಾವಿಗೆ ಹಾಕೋದು ಇವೆಲ್ಲವೂ ಧಾರಾವಾಹಿಯ ದಿಕ್ಕನ್ನೇ ಬದಲಿಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ಬೇಡದ ವಿಚಾರಗಳೇ ತುಂಬಿ ಹೋಗುತ್ತಿದೆ ಎನ್ನುತ್ತಿದ್ದಾರೆ.. ಇನ್ನಾದರೂ ನಿರ್ದೇಶಕರು ಎಚ್ಚೆತ್ತುಕೊಂಡು ಕನ್ಮಡತಿಯನ್ನು‌ ಮೊದಲ ರೀತಿ ಮನಸ್ಸಿಗೆ ಸಂತೋಷ ನೀಡುವ ರೀತಿ ತೆಗೆದುಕೊಂಡು ಹೋಗುವತ್ತ ಗಮನ ಹರಿಸಬೇಕಿದೆ.. ಇಲ್ಲವಾದರೆ ಕನ್ನಡತಿ ಪ್ರಿಯರು ಬೇರೆ ಧಾರಾವಾಹಿಯ ಮೇಲೆ ಪ್ರೀತಿ ಮೂಡಿಸಿಕೊಂಡರೂ ಆಶ್ಚರ್ಯ ಪಡಬೇಕಿಲ್ಲ..