ಕನ್ನಡತಿ ನಟಿ ಭುವಿಯ ಲವ್ ಸ್ಟೋರಿ‌‌ ಮಾಧ್ಯಮಗಳಲ್ಲಿ ವೈರಲ್..

0 views

ಕನ್ನಡತಿ.. ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ಕಲರ್ಸ್ ಕನ್ನಡ ವಾಹಿನಿಯ ಕನ್ನಡತಿ ಧಾರಾವಾಹಿ ಕಡಿಮೆ ಸಮಯದಲ್ಲಿ ಜನರ ಮೆಚ್ಚುಗೆ ಗಳಿಸಿತ್ತು.‌ ಇತ್ತ ಬೇರೆ ಧಾರಾವಾಹಿಗಳಂತೆ ಅತ್ತೆ ಸೊಸೆ ಕಿರಿಕಿರಿ ಅಥವಾ ಅತಿಯಾದ ರೊಮ್ಯಾನ್ಸ್ ಅಥವಾ ಅತಿರೇಕ ತುಂಬಿದ ದೃಶ್ಯಗಳು ಹೀಗೆ ಇದ್ಯಾವುದೂ ಸಹ ಇಲ್ಲದೇ ಸಹಜವಾಗಿ ಸುಂದರ ಎನಿಸುವಂತೆ ಧಾರಾವಾಹಿ ಮೂಡಿ ಬರುತಿತ್ತು‌. ಧಾರಾವಾಹಿಯಲ್ಲಿ ಮನರಂಜನೆ ಮಾತ್ರವಲ್ಲದೇ ಕನ್ನಡ ಪದಗಳ ಕಲಿಕೆಯೂ ಆಗುತಿತ್ತು.. ಹೌದು ಕನ್ನಡ ಟೀಚರ್ ಆಗಿರುವ ಹಸಿರುಪೇಟೆ ಭುವಿಯಿಂದ ಪ್ರತಿದಿನ ಸಂಚಿಕೆ ಮುಗಿದ ಮೇಲೆ ಸರಿಗನ್ನಡಂ ಗೆಲ್ಗೆ ಎನ್ನುವ ಸಣ್ಣ ವೀಡಿಯೋ ಮೂಲಕ ಅದರಲ್ಲಿ ಕನ್ನಡದಲ್ಲಿ ಪ್ರತಿದಿನ ಬಳಸುವ ಪದಗಳಿಗೆ ಅರ್ಥ.. ಹಾಗೂ ತಪ್ಪಾದ ಕನ್ನಡವನ್ನು ಬಳಸಿದರೆ ಅದನ್ನು ತಿದ್ದುವ ಪ್ರಯತ್ನ ಹೀಗೆ ಕನ್ನಡದ ಪದಗಳ ನಿಜ ಅರ್ಥವನ್ನು ಜನರಿಗೆ ತಿಳಿಸುವ ಧಾರಾವಾಹಿಯ ನಡೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು..

ಇನ್ನು ಧಾರಾವಾಹಿಯಲ್ಲಿ ಭುವಿಯಾಗಿ ಕಾಣಿಸಿಕೊಂಡಿರುವ ರಂಜನಿ ರಾಘವನ್ ಹಾಗೂ ಹರ್ಷನಾಗಿ ಕಾಣಿಸಿಕೊಂಡಿರುವ ಕಿರಣ್ ರಾಜ್ ತಮ್ಮ ಸಹಜವಾದ ಅಭಿನಯದ ಮೂಲಕ ಜನರ ಮನಗೆದ್ದರೆನ್ನಬಹುದು.. ಜೀವನದಲ್ಲಿ ಅದರಲ್ಲೂ ನಟನಾಗಿ ಒಂದು ದೊಡ್ಡ ಸಕ್ಸಸ್ ನ ನಿರೀಕ್ಷೆಯಲ್ಲಿದ್ದ ಕಿರಣ್ ರಾಜ್ ಅವರಿಗೆ ಈ ಧಾರಾವಾಹಿ ಬಹುದೊಡ್ಡ ಯಶಸ್ಸನ್ನು ತಂದುಕೊಟ್ಟಿತೆನ್ನಬಹುದು.. ಇನ್ನು ಇತ್ತ ನಮ್ಮ ಕನ್ನಡ ಟೀಚರ್ ಭುವಿಯ ಪಾತ್ರ ಮನಸೂರೆಗೊಂಡಿದ್ದು ಇವರ ಅಭಿನಯ ನೋಡಿ ಸಾಕಷ್ಟು ಸಿನಿಮಾಗಳಲ್ಲಿಯೂ ಅವಕಾಶ ದೊರೆತಿದೆ.. ಇನ್ನು ಇದೀಗ ಇದೆಲ್ಲವನ್ನು ಹೊರತು ಪಡಿಸಿ ನೋಡುವುದಾದರೆ ಸಧ್ಯ ನಮ್ ಕನ್ನಡ ಟೀಚರ್ ಭುವಿಯ ಲವ್ ಕಹಾನಿ ಮಾಧ್ಯಮಗಳಲ್ಲಿ ವೈರಲ್ ಆಗುವಂತೆ ಕಾಣುತ್ತಿದೆ..

ಹೌದು ಭುವಿಯ ಲವ್ ಸ್ಟೋರಿ ಮಾಧ್ಯಮಗಳ ಬ್ರೇಕಿಂಗ್ ನ್ಯೂಸ್ ಆಗುವಂತೆ ಕಾಣುತ್ತಿದೆ.. ಅಷ್ಟಕ್ಕೂ ಯಾರು ಭುವಿಯ ಮನಗೆದ್ದ ಆ ಹುಡುಗ ಎಂದುಕೊಳ್ಳಬೇಡಿ.. ಆತ ಮತ್ತಿನ್ಯಾರೂ ಅಲ್ಲ ಅದು ಮಾಲಾ ಕಾಫಿ ಡೇ ಸಿ ಇ ಓ ಹರ್ಷ.. ಹೌದು ಭುವಿ ಹಾಗೂ ಹರ್ಷನ ಲವ್ ಸ್ಟೋರಿ ವೈರಲ್ ಆಗುತ್ತಿರುವುದು ಕನ್ನಡತಿ ಧಾರಾವಾಹಿಯಲ್ಲಿ.. ಇತ್ತ ತನ್ನ ಪ್ರೀತಿಯನ್ನು ಬಹಳ ವಿಶೇಷವಾಗಿ ಹೇಳಿಕೊಂಡಿರುವ ಹರ್ಷ ಭುವಿಯ ಒಪ್ಪಿಗೆಗಾಗಿ ಕಾದು ಕುಳಿತಿದ್ದಾನೆ.. ಇತ್ತ ಮನಸ್ಸಿನ ತುಂಬೆಲ್ಲಾ ಹರ್ಷನ ಮೇಲೆ ಪ್ರೀತಿ ಇದ್ದರೂ ಸಹ ತನ್ನ ಸ್ನೇಹಿತೆ ವರೂವಿನ ಮನಸ್ಸಿಗೆ ನೋವಾಗಬಹುದೆಂದು ತನ್ನ ಪ್ರೀತಿಯನ್ನು ಹೇಳಿಕೊಳ್ಳದೇ ಹಾಗೆಯೇ ಸುಮ್ಮನಿದ್ದು ತ್ಯಾಗಮಯಿಯಾಗಲು ಹೊರಟಿದ್ದಾರೆ ಭುವಿ..

ಆದರೆ ಇತ್ತ ಹರ್ಷನ ತಾಳ್ಮೆ ಹಾಗೂ ಭುವಿ ಯಾಕೆ ಒಪ್ಪಿಗೆ ಸೂಚಿಸಿಲ್ಲ ಎನ್ನುವ ಮನಸ್ಸಿನ ತೊಳಲಾಟ ಹೆಚ್ಚಾಗಿ ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಕಾರ್ಯಕ್ರಮವೊಂದರಲ್ಲಿ ತನ್ನಿಷ್ಟಕ್ಕೆ ತಾನು ಡ್ಯಾನ್ಸ್ ಮಾಡುತ್ತಿದ್ದು ಸಧ್ಯ ಅಲ್ಲಿಯೇ ಇದ್ದ ಮಾಧ್ಯಮದವರ ಫೋನ್ ಗಳಲ್ಲಿ ಎಲ್ಲವೂ ಸೆರೆಯಾಗುತ್ತಿದೆ.. ಹೌದು ಕಾರ್ಪೋರೆಟ್ ಕಂಪನಿಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಕ್ಕೆ ಆಗಮಿಸಿರುವ ಭುವಿ ಹಾಗೂ ಹರ್ಷ ಒಟ್ಟಿಗೆ ಊಟ ಮಾಡುವ ಸಮಯದಲ್ಲಿ ತನ್ನ ಪ್ರೀತಿಗೆ ಇನ್ನು ಉತ್ತರ ದೊರೆತಿಲ್ಲ ಎಂದರೂ ಸಹ ಭುವಿ ಯಾವುದೇ ಉತ್ತರ ನೀಡದೇ ಸುಮ್ಮನಾದಳು..

ಪ್ರೀತಿಯ ಬಗ್ಗೆ ಭುವಿ ಉತ್ತರ ನೀಡದ್ದನ್ನು ನೋಡಿದ ಹರ್ಷ ತನ್ನ ಒತ್ತಡ ಕಡಿಮೆ ಮಾಡಿಕೊಳ್ಳಲು ಡ್ಯಾನ್ಸ್ ಮಾಡಲು ಶುರು ಮಾಡುತ್ತಾನೆ.. ಇತ್ತ ಭುವಿ ಹರ್ಷನನ್ನು ಕಂಟ್ರೋಲ್ ಮಾಡಲು ಮುಂದಾಗಿದ್ದು ಎಲ್ಲವೂ ಹತ್ತಿರದಲ್ಲಿದ್ದ ಮಾಧ್ಯಮದವರ ಫೋನ್ ಗಳಲ್ಲಿ ಸೆರೆಯಾಗಿದೆ.. ಸಧ್ಯದಲ್ಲಿಯೇ ಹೊಸ ಸಂಚಿಕೆಗಳಲ್ಲಿ ಹರ್ಷ ಭುವಿಯ ಲವ್ ಕಹಾನಿ ಮಾಧ್ಯಮಗಳಲ್ಲಿ ವೈರಲ್ ಆಗಲಿದೆ.. ಇನ್ನಾದರೂ ಇವರಿಬ್ಬರ ಪ್ರೇಮ ಕತೆ ಟ್ರ್ಯಾಕ್ ಗೆ ಬರುವುದಾ ಅಥವಾ ಮತ್ತೆ ಅದೇ ಮುಂಗಾರುಮಳೆ ಸಿನಿಮಾದಂತೆ ಪ್ರೀತಿ ಮಧುರ ತ್ಯಾಗ ಅಮರ ಎನ್ನುತ್ತಾ ಸ್ನೇಹಿತೆಗಾಗಿ ಭುವಿ ತನ್ನ ಪ್ರೀತಿಯನ್ನು ತ್ಯಾಗ ಮಾಡುವರಾ ಮುಂದಿನ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ..