ಕನ್ನಡತಿ ಧಾರಾವಾಹಿ ನಟಿ ರಂಜನಿ‌ ರಾಘವನ್‌ ಗೆ ಏನಾಗಿದೆ ನೋಡಿ..

0 views

ಸಾಮಾನ್ಯವಾಗಿ ಗೊತ್ತಿಲ್ಲದವರ ವಾಹನಗಳಲ್ಲಿ ಪ್ರಯಾಣ ಮಾಡಲು ಹೋಗಿ ನಮಗೆ ನಾವೇ ಕಷ್ಟ ತಂದುಕೊಂಡ ಅನೇಕ ಉದಾಹರಣೆಗಳು ಬಹಳಷ್ಟು ಜನರ ಜೀವನದಲ್ಲಿ ನಡೆದು ಹೋಗಿದೆ.. ಕೂದಲೆಳೆ ಅಂತರದಲ್ಲಿ ಪಾರಾಗಿ ಬಂದವರು ಇದ್ದಾರೆ.. ಇನ್ನು ಕೆಲವರ ಜೀವನದಲ್ಲಿ ಕೆಲ ನೆನಪಿಸಿಕೊಳ್ಳಲಾಗದ ಘಟನೆಗಳು ಸಹ ನಡೆದದ್ದೂ ಇದೆ.. ಅದೇ ರೀತಿ ಇದೀಗ ಕನ್ನಡತಿ ಧಾರಾವಾಹಿ ನಟಿ ರಂಜನಿ ರಾಘವನ್ ಅವರು ಸಹ ತಿಳಿಯದವರ ವಾಹನದಲ್ಲಿ ಪ್ರಯಾಣಿಸಲು ಹೋಗಿ ಎಂತಹ ಕೆಲಸ ಮಾಡಿಕೊಂಡಿದ್ದಾರೆ ನೋಡಿ..

ಹೌದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುದ್ದು ರಂಜನಿ ರಾಘವನ್ ಅವರೇ ಹಂಚಿಕೊಂಡಿದ್ದು ತಮಗಾದ ಅನುಭವವನ್ನು ವೀಡಿಯೋ ಮೂಲಕ ಹಂಚಿಕೊಂಡಿದ್ದಾರೆ.. ಹೌದು ಸಧ್ಯ ಕನ್ನಡದ ಎಲ್ಲಾ ಧಾರಾವಾಹಿಗಳ ಕಲಾವಿದರು ಹೈದರಾಬಾದಿನಲ್ಲಿದ್ದು ಅಲ್ಲಿಯೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.. ಅದೇ ರೀತಿ ರಂಜನಿ ರಾಘವನ್ ಸಹ ಚಿತ್ರೀಕರಣ ಮುಗಿಸಿ ಮರಳಿ ತೆರಳುವ ವೇಳೆ ಈ ಘಟನೆ ನಡೆದಿದ್ದು ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ತಮಗೆ ಏನಾಯಿತು ಎಂದು ತಿಳಿಸಿದ್ದಾರೆ..

ಇದು ನೈಜ್ಯ ಕತೆ.. ಇದರಲ್ಲಿ ಬರುವ ಪಾತ್ರಗಳು ಕಾಲ್ಪನಿಕವಲ್ಲ.. ನಮ್ಮ ಅನುಭವ.. ಇದಕ್ಕೆ ಈ ವೀಡಿಯೋವೇ ಸಾಕ್ಷಿ ಎಂದಿದ್ದಾರೆ.. ಜೊತೆಲಿ ಇರೋರಿಗೆ ನನ್ನ ಭಯ ಗೊತ್ತಾಗದೇ ಇರಲಿ ಅಂತ ಇಂಗ್ಲೀಷಿನಲ್ಲಿ ಮಾತನಾಡ್ತಾ ಇದ್ದೀನಿ‌ ಕ್ಷಮಿಸಿ.. ಎಂದಿದ್ದಾರೆ.. ಇವತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಬೇಗ ಮುಗಿದಿತ್ತು. ನಮ್ಮ ತಂಡದ ಚಿತ್ರೀಕರಣ ಇನ್ನೂ ಮುಗಿದಿರಲಿಲ್ಲ.. ಅಂದರೆ ನಮ್ಮ ಭಾಗದ ದೃಶ್ಯಗಳ ಚಿತ್ರೀಕರಣ ಮುಗಿದಿತ್ತು.. ಎಲ್ಲಾರೂ ಬರುವುದಕ್ಕೆ ಇನ್ನೂ ಸಮಯ ಇತ್ತು, ಒಟ್ಟಿಗೆ ಮರಳಿ ಹೋಟೆಲ್‍ಗೆ ಹೋಗೋಕೆ ಕಾಯುತ್ತಿದ್ದೆವು.. ಹಾಗೇ ಏನೋ ಮಾತಾಡ್ತಾ ಕೂತಿದ್ದೆ.. ಹೇ ಗಾಡಿ ಇದೆ ಬರ್ತೀರಾ? ಎಂದು ಕೃಷ್ಣರಾಜ್ ಕೇಳಿದರು.. ನೋಡಿದರೆ ಒಂದು ಸರಕು ಸಾಗಾಣಿಕೆಯ ವಾಹನ ನಿಂತಿತ್ತು.. ಇದರಲ್ಲಿ ಹೋಗೋಣ ಮಜಾ ಇರುತ್ತೆ ಅಂತ ನಾನು ಏನೂ ಯೋಚನೆ ಮಾಡದೇ ಗಾಡಿ ಹತ್ತಿದೆ. ಅಣ್ಣಾಯ್ಯ ಕೂಡ ಅದಾಗಲೇ ಗಾಡಿ ಹತ್ತಿದ್ರು. ಬೇಗ ರೂಮ್ ತಲುಪುತ್ತೇವೆ.. ಸುತ್ತ ಮುತ್ತ ಜಾಗವನ್ನು ತೆರೆದ ಗಾಡೀಲಿ ನೋಡಬಹುದು ಅಂತ ಸಂತೋಷದಿಂದಲೇ ಹೊರಟೆವು.. ಗಾಡಿ ನಾವಿದ್ದ ಜಾಗದಿಂದ ಒಂದೆರಡು ಕಿಲೋ ಮೀಟರ್ ದೂರ ಬಂತು. ಇವ್ರು ಎಲ್ಲಿಗೆ ಕರೆದುಕೊಂಡು ಹೋಗ್ತಿದ್ದಾರೆ..

ನನ್ನ ಬಳಿ ಸರ ಇದೆ ಎಂದು ಕಿರಣ್ ಗುಟ್ಟಾಗಿ ನನ್ನ ಬಳಿ ಹೇಳಿದ ತಕ್ಷಣ ನನಗೆ ಭಯವಾಯಿತು.. ನೋಡಿದರೆ ಗಾಡಿ ಎಲ್ಲೋ ಬೇರೆ ರಸ್ತೆಯಲ್ಲಿ ಹೋಗ್ತಿದೆ.. ಗಾಡಿಯಲ್ಲಿ ಒಬ್ಬ ಕನ್ನಡ ಮಾತನಾಡುವವನಿದ್ದ ಅಂತ ಅವನ ಹತ್ತಿರ ಮಾತಾಡಿಕೊಂಡು ಹೊರಟಿದ್ವಿ ನೋಡಿದ್ರೆ ಸ್ವಲ್ಪ ಹೊತ್ತಿನ ಮೇಲೆ ಗೊತ್ತಾಯ್ತು ಅವನು ಅದಾಗಲೇ ಗಂಟಲು ಪೂರ್ತಿ ಮಾಡಿಕೊಂಡಿದ್ದ ಅಂತ.. ರಾಮೋಜಿ ಫಿಲ್ಮ್ ಸಿಟಿಯ ಮಾಮೂಲಿ ರಸ್ತೆ ಬಿಟ್ಟು ಕತ್ತಲೇಲಿ ನಮ್ಮನ್ನ ಎಲ್ಲಿಗೆ ಕರೆದುಕೊಂಡು ಹೋಗ್ತಿದ್ದಾರೆ.. ಮುಂದೆ ಕೂತಿರೋ ಚಾಲಕ ಗೊತ್ತಿರೋದಿರಲಿ ಅವರ ಮುಖವನ್ನೂ ನೋಡಿಲ್ಲ.. ನಮೆಗೇನಾದರು ಮಾಡ್ಬಿಡ್ತಾರಾ.. ಹೊರ ರಾಜ್ಯದಲ್ಲಿ, ಗೊತ್ತಿಲ್ಲದಿರುವ ಗಾಡಿಯಲ್ಲಿ ಗೊತ್ತೂ ಗುರಿ ಇಲ್ದೇ ಹೊರಟಿದ್ದೀವಿ.. ಏನಪ್ಪಾ ಅಂತ ಈ ವಿಡಿಯೋ ಮಾಡಿದ್ದು..

ಅದೆಂತಹ ಪರಿಸ್ಥಿತಿ ತಂದುಕೊಂಡು ಬಿಟ್ವಾ ಗುರು ಅಂತ ಬಹಳ ಭಯ ಆಯ್ತು. ಮುಂದೇನಾಯ್ತು.. ಮತ್ತೊಮ್ಮೆ ತಿಳಿಸುವೆ ಎಂದು ಬರೆದು ಪೋಸ್ಟ್ ಮಾಡಿದ್ದು ಮುಂದೇನಾಯಿತು ಎಂದು ರಂಜನಿ ಅವರೇ ತಿಳಿಸಬೇಕಿದೆ.. ಆದರೆ ಯಾರೇ ಆಗಲಿ ತಿಳಿಯದವರ ವಾಹನಗಳಲ್ಲಿ ಸಂಚರಿಸುವ ಮೊದಲು ಅದರಲ್ಲಿಯೂ ಹೆಣ್ಣುಮಕ್ಕಳು ದಯವಿಟ್ಟು ಎಚ್ಚರಿಕೆ ವಹಿಸಿ..