ಸದ್ಯ ಸಾಮಾನ್ಯ ಜನರು ಮನರಂಜನೆಗಾಗಿ ಅತಿಹೆಚ್ಚು ಅವಲಂಬಿತರಾಗಿರುವುದು ಟಿವಿ ಹಾಗೂ ಸಿನಿಮಾಗಳಿಗೆ.. ಆದರೆ ಕೊರೊನಾ ಕಾರಣದಿಂದ ಅನೇಕ ತಿಂಗಳಿನಿಂದ ಸಿನಿಮಾಗಳು ಬಿಡುಗಡೆ ಕಾಣಲಿಲ್ಲ.. ಈಗ ಬಿಡುಗಡೆಗೊಳ್ಳುತ್ತಿದ್ದರೂ ಸಹ ಮುಂಚಿನಂತೆ ಜನ ಥಿಯೇಟರ್ ಗೆ ಬರುತ್ತಿಲ್ಲ.. ಇನ್ನು ಮನೆಯಲ್ಲಿಯೇ ಕೂತು ನೋಡುವ ಮನರಂಜನಾ ಕಾರ್ಯಕ್ರಮಗಳಿಗೆ ಬೇಡಿಕೆ ಹೆಚ್ಚಾಗಿದ್ದು ಸದ್ಯ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನ್ನಲಾಗುವ ಬಿಗ್ ಬಾಸ್ ಈ ವರ್ಷದ ಹೊಸ ಸೀಸನ್ ಶುರುವಾಗಲು ಅಂತೂ ಕಾಲ ಕೂಡಿ ಬಂದಿದ್ದು ಚಾನಲ್ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ಅವರು ಅದಿಕೃತವಾಗಿ ಹೇಳಿಕೆ ನೀಡಿದ್ದಾರೆ.. ಹೌದು 2020 ರಲ್ಲೇ ಶುರುವಾಗಬೇಕಿದ್ದ ಬಿಗ್ ಬಾಸ್ ಸೀಸನ್ 8 ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು.. ಆದರೆ ಪರಿಸ್ಥಿತಿ ಸುಧಾರಿಸಿದ ಬಳಿಕ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಶುರುವಾಗುತ್ತಿದೆ.. ದಿನಾಂಕವೂ ನಿಗದಿಯಾಗಿದೆ..
ಹೌದು ಯಶಸ್ವಿಯಾಗಿ ಸತತ ಏಳು ಸೀಸನ್ ಗಳನ್ನು ಪೂರೈಸಿದ ಬಿಗ್ ಬಾಸ್ ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ಹೊಸ ಸೀಸನ್ ಶುರುವಾಗಬೇಕಿತ್ತು.. ಆದರೆ ಮಾರ್ಚ್ ನಲ್ಲಿ ಆದ ಲಾಕ್ ಡೌನ್ ನಿಂದಾಗಿ ಸತತ ಒಂದೂವರೆ ತಿಂಗಳು ಕಿರುತೆರೆಯ ಯಾವುದೇ ಚಿತ್ರೀಕರಣಗಳು ನಡೆಯಲಿಲ್ಲ.. ಹೀಗಿರುವಾಗ ಬಿಗ್ ಬಾಸ್ ತಯಾರಿ ಹೇಗೆ ನಡೆಸುವುದೆಂದು ಸುಮ್ಮನಾದರು.. ಕನಿಷ್ಟ ಎರಡರಿಂದ ಮೂರು ತಿಂಗಳು ತಯಾರಿ ನಡೆಸಿ ನಂತರವಷ್ಟೇ ಶೋ ಶುರು ಮಾಡಬೇಕಿದ್ದ ಕಾರಣ ಅಕ್ಟೋಬರ್ ನಲ್ಲಿ ಬಿಗ್ ಬಾಸ್ ನಡೆಯುವುದಿಲ್ಲ ಎಂಬುದನ್ನು ತಿಳಿಸಲಾಗಿತ್ತು..
ಆದರೆ ಬೇರೆ ಭಾಷೆಗಳಲ್ಲಿ ಎಂದಿನಂತೆ ಬಿಗ್ ಬಾಸ್ ನ ಹೊಸ ಸೀಸನ್ ಗಳನ್ನು ಶುರು ಮಾಡಿ ಅದಾಗಲೇ ಡಿಸೆಂಬರ್ ನಲ್ಲಿಯೇ ಮುಕ್ತಾಯವೂ ಆಗಿ ಹೋಯಿತು.. ಆದರೆ ಕನ್ನಡದಲ್ಲಿ ಮಾತ್ರ 2020 ಅದ್ಯಾಕೋ ಸರಿ ಬಾರದ ಕಾರಣ ಈ ವರ್ಷ ಅಂದರೆ 2021 ರ ಫೆಬ್ರವರಿ ತಿಂಗಳಿನಲ್ಲಿ ದಿನಾಂಕ ನಿಗಧಿ ಮಾಡಲಾಗಿದ್ದು ಸುದೀಪ್ ಅವರ ಪ್ರೋಮೋ ಚಿತ್ರೀಕರಣ ನಡೆಯುತ್ತಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ಕಲರ್ಸ್ ಕನ್ನಡ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ಅವರು ಅಧಿಕೃತವಾಗಿ ಫೆಬ್ರವರಿಯಲ್ಲಿ ಬಿಗ್ ಬಾಸ್ ಶುರುವಾಗಲಿದೆ ಎಂದು ತಿಳಿಸಿದ್ದಾರೆ..
ಹೌದು ಅದಾಗಲೇ ಬಿಗ್ ಬಾಸ್ ಮನೆಯೂ ಹೊಸ ರೀತಿಯಲ್ಲಿ ತಯಾರಾಗಿದ್ದು ಸತತ ಎರಡು ತಿಂಗಳ ಕಾಲ ಒಂದು ತಂಡ ಬಿಗ್ ಬಾಸ್ ಮನೆಯ ಸಂಪೂರ್ಣ ನವೀಕರಣ ಮಾಡಿದ್ದಾರೆ.. ಇನ್ನು ಸ್ಪರ್ಧಿಗಳ ಆಯ್ಕೆಯೂ ಸಹ ಅದಾಗಲೇ ಆಗಿ ಹೋಗಿದ್ದು ಅಂತಿಮ ಹಂತದವರೆಗೂ ಸ್ಪರ್ಧಿಗಳ ಹೆಸರು ಬಹುತೇಕ ಯಾರಿಗೂ ತಿಳಿಯದಂತೆ ನೋಡಿಕೊಂಡಿದ್ದಾರೆ..
ಇನ್ನು ಬಿಗ್ ಬಾಸ್ ಶುರುವಾಗುವುದರ ಬಗ್ಗೆ ಅದಾಗಲೇ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ಅವರು ಅಧಿಕೃತವಾಗಿ ತಿಳಿಸಿದ್ದು ಕೆಲ ದಿನಗಳ ಹಿಂದೆ ವಾಸುಕಿ ವೈಭವ್ ಅದಾಗಲೇ ಬಿಗ್ ಬಾಸ್ ನ ಹೊಸ ಮನೆಗೆ ಕಾಲಿಟ್ಟು ವೀಡಿಯೋ ಬೈಟ್ ಚಿತ್ರೀಕರಣ ಮಾಡಿಕೊಂಡಿದ್ದಾರೆ.. ಇನ್ನು ಬಿಗ್ ಬಾಸ್ ಮನೆಗೆ ಹೋದ ಕೆಲ ಫೋಟೋಗಳನ್ನು ವಾಸುಕಿ ವೈಭವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹಳೆಯ ದಿನಗಳನ್ನು ನೆನೆದಿದ್ದಾರೆ..
ಇನ್ನು ಸದ್ಯ ಕಿಚ್ಚ ಸುದೀಪ್ ಅವರೂ ಸಹ ತಮ್ಮೆಲ್ಲಾ ಸಿನಿಮಾ ಚಿತ್ರೀಕರಣದಿಂದ ಬ್ರೇಕ್ ಪಡೆದಿದ್ದು ಬಿಗ್ ಬಾಸ್ ಕೆಲಸಗಳಲ್ಲಿಯೇ ತೊಡಗಿಕೊಂಡಿದ್ದಾರೆ.. ಇದೇ ಫೆಬ್ರವರಿಯಲ್ಲಿ ಬಿಗ್ ಬಾಸ್ ನ ಹೊಸ ಸೀಸನ್ ಶುರುವಾಗಲಿದ್ದು ಕಳೆದ ಸಲದಂತೆ ಈ ಬಾರಿಯೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.. ಜೊತೆಗೆ ಹೊಸ ಸೀಸನ್ ನಲ್ಲಿ ಸೆಲಿಬ್ರೆಟಿಗಳಿಗೆ ಮಾತ್ರ ಭಾಗವಹಿಸುವ ಅವಕಾಶ ದೊರೆತಿದೆ..