ಬಿಗ್ ಬಾಸ್ ಡಬಲ್ ಎಲಿಮಿನೇಷನ್ ನಿಂದ ಹೊರ ಬಂದ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಇವರೇ.. ನಿಜಕ್ಕೂ ಶಾಕಿಂಗ್..

0 views

ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಹನ್ನೊಂದನೇ ವಾರದ ಎಲಿಮಿನೇಷನ್ ಮುಕ್ತಾಯಗೊಂಡಿದ್ದು ಈ ವರಾ ಡಬಲ್ ಎಲಿಮಿನೇಷನ್ ನಡೆದಿದೆ.. ಅದರಲ್ಲೂ ಈ ವಾರದ ಎಲಿಮಿನೇಷನ್ ನಲ್ಲಿ ಇಬ್ಬರು ಘಟಾನುಘಟಿ ಸ್ಪರ್ಧಿಗಳನ್ನೇ ಎಲಿಮಿನೇಟ್ ಮಾಡಿದ್ದು ಒಂದು ರೀತಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಶಾಕ್ ನೀಡಿದ್ದಾರೆ ಎನ್ನಲಾಗಿದೆ.. ಹೌದು ಈ ವಾರ ಕಿಚ್ಚ ಸುದೀಪ್ ಅವರು ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಬ್ಯುಸಿ ಇದ್ದ ಕಾರಣ ವಾರಾಂತ್ಯದ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ..

ಬದಲಿಗೆ ಶನಿವಾರದ ವಾರದ ಕತೆಯ ಬದಲಗೈ ಬಿಗ್ ಬಾಸ್ ಸೀಸನ್ ಮೂರರಾ ವಿಜೇತರಾದಂತಹ ಶೃತಿ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದು ನ್ಯಾಯಾಲಯದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರ ತಪ್ಪು ಒಪ್ಪುಗಳನ್ನು ನ್ಯಾಯ ಪಂಚಾಯಿತಿ ಮಾಡಿದ್ದು ಪ್ರೇಕ್ಷಕರಿಗೆ ಒಂದು ರೀತಿ ಚೆನ್ನಾಗಿತ್ತು..

ಇನ್ನು ಎರಡನೇ ದಿನ ಶೈನ್ ಶೆಟ್ಟಿ ಹಾಗೂ ಶುಭಾ ಪೂಂಜಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಮನೆಯ ಸದಸ್ಯರಿಗೆ ಕೆಲವೊಂದು ಟಾಸ್ಕ್ ಗಳನ್ನು ಆಡಿಸಿ ಮನರಂಜನೆ ನೀಡಿದರು.. ಇನ್ನು ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯನ್ನು ಚಟುವಟಿಯ ಮೂಲಕ ನಡೆಸಿದ್ದು ಈ ವಾರ ಡಬಲ್ ಎಲಿಮಿನೇಷನ್ ನ ಶಾಕ್ ನೀಡಿದ್ದಾರೆ..

ಹೌದು ಈ ವಾರ ಮೈಕಲ್ ಅವಿನಾಶ್ ಸಂಗೀತಾ ಡ್ರೋನ್ ಪ್ರತಾಪ್ ಸಿರಿ ವರ್ತೂರು ಸಂತೋಷ್ ಸೇರಿದಂತೆ ಒಟ್ಟು ಆರು‌ ಮಂದಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು.. ಅದರಲ್ಲಿ ಮೊದಲಿಗೆ ಸಂಗೀತಾ ಅವರು ಸೇಫ್ ಆದರು.. ಇನ್ನುಳಿದಂತೆ ಕುತೂಹಲದ ರೀತಿಯಲ್ಲಿಯೇ ಚಟುವಟಿಕೆಗಳನ್ನು ನಡೆಸಿದ್ದು ಡಬಲ್ ಎಲಿಮಿನೇಷನ್ ನಲ್ಲಿ ಮೊದಲ ಸದಸ್ಯನಾಗಿ ಮನೆಯಿಂದ ಹೊರ ಹೋದದ್ದು ಮತ್ಯಾರೂ ಅಲ್ಲ ಅವಿನಾಶ್.. ಹೌದು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದ ಅವಿನಾಶ್ ನಾಲ್ಕೇ ವಾರಕ್ಕೆ ತಮ್ಮ ಬಿಗ್ ಬಾಸ್ ಜರ್ನಿ ಮುಗಿಸಿದ್ದಾರೆ.. ಆನೆಗೆ ಮಾವುತ ಬೇಕು ಎಂದು ಬಿಗ್ ಬಾಸ್ ಮನೆಗೆ ಬಂದಿರುವುದಾಗಿ ತಿಳಿಸಿದ ಅವಿನಾಶ್ ಅದ್ಯಾಕೋ ನಿರೀಕ್ಷೆಯಷ್ಟು ಬಿಗ್ ಬಾಸ್ ಮನೆಯಲ್ಲಿ ಆಡಲಿಲ್ಲ.. ಕಳೆದ ವಾರ ಟಾಸ್ಕ್ ಹಾಗೂ ಮನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೂ ಕೂಡ ಈ ವಾರ ಸೇಫ್ ಆಗುವಲ್ಲಿ ವಿಫಲರಾದರೆನ್ನಬಹುದು.. ಇನ್ನು ಅವಿನಾಶ್ ಅವರ ಎಲಿಮಿನೇಷನ್ ಅನ್ನು ಪ್ರೇಕ್ಷಕರು ಅದಾಗಲೇ ಲೆಕ್ಕಾಚಾರ ಹಾಕಿದ್ದರು.. ಆದರೆ ಈ ವಾರ ನಡೆದ ಎರಡನೇ ಎಲಿಮಿನೇಷನ್ ಪ್ರೇಕ್ಷಕರಿಗೆ ಮಾತ್ರವಲ್ಲದೇ ಬಿಗ್ ಬಾಸ್ ಮ್ನಎಯ ಸದಸ್ಯರಿಗೆ ಶಾಕ್ ನೀಡಿದೆ..

ಹೌದು ಈ ವಾರದ ಎರಡನೇ ಎಲಿಮಿನೇಷನ್ ಮತ್ಯಾರೂ ಅಲ್ಲ ಅದು ಮೈಕಲ್ ಅಜಯ್.. ಹೌದು ಬಿಗ್ ಬಾಸ್ ಮನೆಯಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಮೈಕಲ್ ಅಜಯ್ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.. ಮೈಕಲ್ ಅಜಯ್ ಫಿನಾಲೆ ವರೆಗೂ ಇರಲಿದ್ದಾರೆ ಎಂದು ಅಂದಾಜಿಸಲಾಗಿತ್ತು.. ಆದರೆ ಅದ್ಯಾಕೋ ಕಳೆದ ಎರಡು ವಾರಗಳಿಂದ ಕೊಂಚ ಅಹಂಕಾರದ ವರ್ತನೆ ತೋರಿದ್ದ ಮೈಕಲ್ ಗೆ ಶಾಕ್ ಕೊಟ್ಟಿರುವ ಬಿಗ್ ಬಾಸ್ ಮನೆಯಿಂಡ ಹೊರ ಕಳುಹಿಸಿದ್ದಾರೆ.. ಇನ್ನು ಈ ಎಲಿಮಿನೇಷನ್ ನಿಂದ ಮನೆಯಲ್ಲಿ ಯಾವ ಸ್ಪರ್ಧಿ ಬೇಕದರೂ ಹೊರ ಹೋಗಬಹುದೆಂದು ಉಳಿದ ಸ್ಪರ್ಧಿಗಳಿಗೆ ಸತ್ಯ ಅರಿವಾದಂತಿದೆ..