ಶುರುವಾಗ್ತಿದೆ ಬಿಗ್ ಬಾಸ್ ಸೀಸನ್ 10.. ಸ್ಪರ್ಧಿಗಳ ಪಟ್ಟಿ ಇಲ್ಲಿದೆ ನೋಡಿ..

0 views

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ.. ಬಿಗ್ ಬಾಸ್ ತನ್ನ ಹೊಸ ಸೀಸನ್ ಅನ್ನು ಆರಂಭಿಸುತ್ತಿದೆ.. ಹೌದು ಸತತ ಒಂಭತ್ತು ಸೀಸನ್ ಗಳ ಯಶಸ್ಸಿನ ನಂತರ ಇದೀಗ ಬಿಗ್ ಬಾಸ್ ಸೀಸನ್ ಹತ್ತು ಆರಂಭವಾಗುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಗ್ರ್ಯಾಂಡ್ ಓಪನಿಂಗ್ ಕಾಣಲಿದೆ.. ಕಿಚ್ಚ ಸುದೀಪ್ ಸಾರಥ್ಯದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಈ ಬಾರಿ ಕೊಂಚ ವಿಭಿನ್ನವಾಗಿ ಮೂಡಿ ಬರಲಿದೆ ಎನ್ನಲಾಗಿದ್ದು ಈ ಸೀಸನ್ ನಲ್ಲಿ ಬರುವ ಅಷ್ಟೂ ಸ್ಪರ್ಧಿಗಳು ಸೆಲಿಬ್ರೆಟಿಗಳೇ ಆಗಲಿದ್ದಾರೆ.‌ ಇನ್ನು ಇತ್ತ ಪ್ರೋಮೋ ಚಿತ್ರೀಕರಣಕ್ಕೆ ಸಕಲ ತಯಾರಿ ನಡೆಸಿರುವ ಕಲರ್ಸ್ ಕನ್ನಡ ವಾಹಿನಿ ಮುಂದಿನ ವಾರ ಕಿಚ್ಚ ಸುದೀಪ್ ಅವರ ವಿಭಿನ್ನವಾದ ಪ್ರೋಮೋ ತೆರೆ ಮೇಲೆ ತರಲಿದೆ.. ಇಷ್ಟು ಸೀಸನ್ ಗಳನ್ನು ಈ ಹಿಂದೆ ಇದ್ದ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ಅವರೇ ವಿನ್ಯಾಸ ಮಾಡುತ್ತಿದ್ದು ಈ ವರ್ಷ ಅವರು ಜಿಯೋ ಸಿನಿಮಾದ ಜವಾಬ್ದಾರಿ ವಹಿಸಿಕೊಂಡಿದ್ದು ಇದೇ ಮೊದಲ ಬಾರಿಗೆ ಪರಮೇಶ್ವರ್ ಗುಂಡ್ಕಲ್ ಅವರ ಹೊರತಾಗಿ ಬೇರೆಯವರು ಬಿಗ್ ಬಾಸ್ ನ ಜವಾಬ್ದಾರಿ ತೆಗೆದುಕೊಂಡಿದ್ದು ಇದೇ ಕಾರಣಕ್ಕೆ ಕೊಂಚ ವಿಭಿನ್ನವಾಗಿಯೂ ಈ ಸೀಸನ್ ಮೂಡಿ ಬರಲಿದೆ ಎನ್ನಬಹುದು..

ಇನ್ನು ಇದೇ ಸೆಪ್ಟೆಂಬರ್ ಕೊನೆಯ ವಾರ ಹೊಸ ಸೀಸನ್ ಆರಂಭವಾಗಬೇಕಾಗಿದ್ದು ಕಾರಣಾಂತರಗಳಿಂದ ಅಕ್ಟೋಬರ್ ತಿಂಗಳಿಗೆ ಮುಂದೂಡಲಾಗಿದೆ.. ಹೌದು ಮುಂದಿನ ತಿಂಗಳು ಅಕ್ಟೋಬರ್ 8 ರಂದು ಬಿಗ್ ಬಾಸ್ ಸೀಸನ್ ಹತ್ತು ಅದ್ಧೂರಿಯಾಗಿ ಆರಂಭವಾಗಲಿದೆ.. ಇನ್ನು ಸ್ಪರ್ಧಿಗಳ ವಿಚಾರಕ್ಕೆ ಬಂದರೆ ಒಂದಷ್ಟು ಹೆಸರುಗಳು ಅದಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಸಂಭಾವ್ಯ ಸ್ಪರ್ಧಿಗಳ ದೊಡ್ಡ ಪಟ್ಟಿಯೇ ಇದೆ ಎನ್ನಬಹುದು.. ಈ ಮೇಲೆ ತಿಳಿಸಿದಂತೆ ಈ ಸೀಸನ್ ನ ಎಲ್ಲಾ ಸ್ಪರ್ಧಿಗಳೂ ಸಹ ಸೆಲಿಬ್ರೆಟಿಗಳೇ ಆಗಿದ್ದು ಎಂದಿನಂತೆ ಕಿರುತೆರೆ ಕೋಟಾದಿಂದ ಮೂವರು ಸ್ಪರ್ಧಿಗಳಿದ್ದು ಸಿನಿಮಾ ತಾರೆಯರು ಇಬ್ಬರು ಭಾಗವಹಿಸಲಿದ್ದಾರೆ.. ಇನ್ನು ಸಾಮಾಜಿಕ ಜಾಲತಾಣದಿಂದ ಖ್ಯಾತಿ ಪಡೆದ ಒಂದಷ್ಟು ಮಂದಿ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಆಗಮಿಸುತ್ತಿದ್ದು ಎಂದಿನಂತೆ ಪ್ರೀತಿ ಪ್ರೇಮದ ಜೋಡಿಗಳನ್ನು ಸಹ ಬಿಗ್ ಬಾಸ್ ಮನೆಗೆ ಆಯ್ಕೆ ಮಾಡಲಾಗಿದೆ..

ಇನ್ನು ಸ್ಪರ್ಧಿಗಳು ಯಾರ್ಯಾರು ಎಂಬ ವಿಚಾರಕ್ಕೆ ಬರುವುದಾದರೆ ಸಾಮಾಜಿಕ ಜಾಲತಾಣದಲ್ಲಿ ದೇ.. ತೋರಿಸಿ ಖ್ಯಾತಿ ಪಡೆದವರ ನಡುವೆ ದೇಶಗಳನ್ನು ತೋರಿಸಿ ಫೇಮಸ್ ಆಗಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ಯೂಟ್ಯೂಬರ್ ಡಾ.ಬ್ರೋ ಅವರನ್ನು ಸಹ ಬಿಗ್ ಬಾಸ್ ಮನೆಗೆ ಕರೆತರಲಿದ್ದಾರೆ ಎಂದು ತಿಳಿದು ಬಂದಿದೆ.. ಇದೇನಾದರು ಸತ್ಯವಾದರೆ ಬಿಗ್ ಬಾಸ್ ಮನೆ ಹೊಸ ರೀತಿಯಾದ ಅನುಭವಕ್ಕೆ ಸಾಕ್ಷಿಯಾಗೋದು ಮಾತ್ರವಲ್ಲ ಬಿಗ್ ಬಾಸ್ ಶೋ ನ ತೂಕ ಒಂದು ಪಟ್ಟು ಹೆಚ್ಚಾಗಲಿದೆ ಎನ್ನಬಹುದು.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಕಳೆದ ಒಂದಷ್ಟು ದಿನಗಳಿಂದ ಸಿಕ್ಕಾಪಟ್ಟೆ ಟ್ರೋಲ್‌ ಆಗಿ ಸದ್ದು ಮಾಡಿದ ಹಿರಿಯ ನಟ ಬುಲೆಟ್‌ ಪ್ರಕಾಶ್‌ ಅವರ ಮಗ ರಕ್ಷಕ್‌ ಬುಲೆಟ್‌ ಸಹ ಬಿಗ ಬಾಸ್‌ ಮನೆಗೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದೆ..

ಇನ್ನು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕ ಫೇಮಸ್ ಆಗಿರುವ ಒಂದಷ್ಟು ರೀಲ್ಸ್ ಸ್ಟಾರ್ ಗಳು ಸಹ ಬಿಗ್ ಬಾಸ್ ಮನೆಗೆ ಆಗಮಿಸಲಿದ್ದು ಆ ಪಟ್ಟಿಯಲ್ಲಿ ಭೂಮಿಕಾ ಬಸವರಾಜು.. ವರುಣ್ ಆರಾಧ್ಯ.. ವರ್ಷ ಕಾವೇರಿ ಇರಲಿದ್ದು ವರುಣ್ ಹಾಗೂ ವರ್ಷ ಪ್ರೇಮಿಗಳಾಗಿ ಇನ್ಸ್ಟಾ ಗ್ರಾಂ ನ ರೀಲ್ಸ್ ಮೂಲಕ ಫೇಮಸ್ ಆಗಿದ್ದರು.. ಆದರೆ ಇತ್ತೀಚೆಗೆ ಈ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದು ಈ ಜೋಡಿ ಬಿಗ್ ಬಾಸ್ ಮನೆಗೆ ಬಂದರೆ ಏನಾಗುವುದೋ ಕಾದು ನೋಡಬೇಕಿದೆ.. ಇನ್ನು ಕಿರುತೆರೆಯ ಕಲಾವಿದರ ಪೈಕಿ ಕಲರ್ಸ್ ಕನ್ನಡದ ಧಾರಾವಾಹಿಯ ಮೂವರು ಕಲಾವಿದರು ಹಾಗೂ ಜೀ ಕನ್ನಡ ವಾಹಿನಿಯ ಒಬ್ಬರು ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.. ಇನ್ನು ಸಿನಿಮಾ ನಟರುಗಳ ವಿಚಾರಕ್ಕೆ ಬರುವುದಾದರೆ ಈ ಹಿಂದೆಯೂ ಸಾಕಷ್ಟು ಬಾರಿ ಹೆಸರು ಕೇಳಿ ಬಂದಿರುವ ಎಕ್ಸ್ ಕ್ಯೂಸ್ ಮಿ ನಟ ಸುನೀಲ್ ರಾವ್ ಹಾಗೂ ಹಿರಿಯ ನಟ ಟೆನ್ನಿಸ್ ಕೃಷ್ಣ ಅವರ ಹೆಸರೂ ಸಹ ಕೇಳಿ ಬಂದಿದೆ.. ಒಟ್ಟಿನಲ್ಲಿ ಈ ಬಾರಿ ಬಿಗ್ ಬಾಸ್ ಸೀಸನ್ ಹತ್ತು ಒಂದು ರೀತಿ ವಿಭಿನ್ನವಾಗಿ ರಂಗೇರಲಿದ್ದು ಅಕ್ಟೋಬರ್ ಎಂಟರಿಂದ ಪ್ರತಿದಿನ ಒಂದೂವರೆ ಗಂಟೆಗಳ ಕಾಲ ಮನರಂಜನೆ ಪಕ್ಕಾ ಎನ್ನಬಹುದು..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.