ಬಿಗ್ ಬಾಸ್ ನಲ್ಲಿ ದೊಡ್ಡ ಯಡವಟ್ಟು.. ಇದ್ದಕಿದ್ದ ಹಾಗೆ ಕಿಚ್ಚ ಸುದೀಪ್ ತೆಗೆದುಕೊಂಡ ನಿರ್ಧಾರ ನೋಡಿ..

0 views

ಬಿಗ್ ಬಾಸ್ ಇಷ್ಟು ಸೀಸನ್ ಗಳಲ್ಲಿ ಆಗದ ತಪ್ಪು ಈ ಬಾರಿಯ ಸೀಸನ್ ಎಂಟರಲ್ಲಿ ನಡೆದಿದ್ದು ಕಿಚ್ಚ ಸುದೀಪ್ ಅವರು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.. ಹೌದು ಈ ಬಗ್ಗೆ ವಾರದ ಕತೆಯ ವೇದಿಕೆಯಲ್ಲಿಯೇ ಕಿಚ್ಚ ಸುದೀಪ್ ಅವರು ಮಾತನಾಡಿ ಎಲ್ಲಾ ಸ್ಪರ್ಧಿಗಳಿಗೂ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದು ಸ್ಪರ್ಧಿಯೊಬ್ಬರಿಗೆ ಶಿಕ್ಷೆಯನ್ನೂ ಸಹ ನೀಡಿದ್ದಾರೆ..

ಹೌದು ಬಿಗ್ ಬಾಸ್ ಮನೆಯಲ್ಲಿ ನಿಯಮಗಳೇ ಬಹುಮುಖ್ಯವಾದ ಬಂಡವಾಳವೆನ್ನಬಹುದು.. ಬಿಗ್ ಬಾಸ್ ಮನೆಯಲ್ಲಿ ಇರಬೇಕಾದರೆ ಅಲ್ಲಿನ ನಿಯಮಗಳನ್ನು ಪಾಲಿಸಲೇ ಬೇಕು.. ಈ ಬಗ್ಗೆ ಬಿಗ್ ಬಾಸ್ ಗೂ ಹೋಗುವ ಮುನ್ನವೇ ಎಲ್ಲಾ ಸದಸ್ಯರಿಂದ ಅಗ್ರಿಮೆಂಟ್ ಗೆ ಸಹಿ ಕೂಡ ಮಾಡಿಸಿಕೊಳ್ಳಲಾಗುತ್ತದೆ.. ನಾವು ಬಿಗ್ ಬಾಸ್ ನ ಯಾವುದೇ ನಿಯಮವನ್ನು ಮುರಿಯುವುದಿಲ್ಲ.. ಹಾಗೂ ನಿಯಮ ಮುರಿದಲ್ಲಿ ತಕ್ಷಣ ಮನೆಯಿಂದ ಹೊರಗೆ ಕಳುಹಿಸಬಹುದೆಂದು ಒಪ್ಪಿ ಸಹಿ ಕೂಡ ಮಾಡಿರುತ್ತಾರೆ..

ಅದರಂತೆಯೇ ಇಷ್ಟೂ ಸೀಸನ್ ನ ಸ್ಪರ್ಧಿಗಳು ನಡೆದುಕೊಂಡೂ ಸಹ ಬಂದಿದ್ದರು.. ಮನೆಯ ಮೂಲ ನಿಯಮಗಳನ್ನು ಯಾರೂ ಸಹ ಮುರಿಯುವ ಪ್ರಯತ್ನ ಮಾಡಿರಲಿಲ್ಲ.. ಆದರೆ ಈ ಸೀಸನ್ ನಲ್ಲಿ ಬ್ರೋ ಗೌಡ ಖ್ಯಾತಿಯ ಶಮಂತ್ ಆ ಸಾಹಸ ಮಾಡಿದ್ದು ಕಿಚ್ಚ ಸುದೀಪ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.. ಹೌದು ಬಿಗ್ ಬಾಸ್ ಮನೆಯ ಮೂಲ ನಿಯಮದ ಪ್ರಕಾರ ಯಾರೂ ಸಹ ಕಿವಿಯಲ್ಲಿ ಮಾತನಾಡಬಾರದು.. ಬಿಗ್ ಬಾಸ್ ಸ್ಪರ್ಧಿಗಳ ಪ್ರತಿ ಮಾತು ಸಹ ಮೈಕ್ ನಲ್ಲಿ ರೆಕಾರ್ಡ್ ಆಗಬೇಕು ಅದು ಪ್ರೇಕ್ಷಕರ ಹಾಗೂ ಬಿಗ್ ಬಾಸ್ ನ ಅರಿವಿಗೆ ಬರಬೇಕು.. ಆದರೆ ಶಮಂತ್ ಪದೇ ಪದೇ ಇದೇ ಕೆಲಸವನ್ನು ಮಾಡಿದ್ದು ಕಿವಿಯಲ್ಲಿ ಮಾತನಾಡುತ್ತಿದ್ದರು.. ಇದನ್ನು ಗಮನಿಸಿ ಕಿಚ್ಚ ಸುದೀಪ್ ಅವರು ಶಮಂತ್ ಅವರನ್ನು ಮನೆಯಿಂದ ಹೊರ ಹಾಕುವ ಬಗ್ಗೆ ಮಾತನಾಡಿದ್ದಾರೆ..

ಅಷ್ಟೇ ಅಲ್ಲದೇ ಮುಂದಿನ ವಾರ ನೇರವಾಗಿ ನಾಮಿನೇಟ್ ಸಹ ಮಾಡಿದ್ದರು.. ಆದರೆ ಈ ಬಗ್ಗೆ ಶಮಂತ್ ಕ್ಷಮೆಯಾಚಿಸಲಾಗಿ ಸುದೀಪ್ ಅವರು ಶಮಂತ್ ಅವರಿಗೆ ಮತ್ತೊಂದು ಅವಕಾಶ ನೀಡಿ ಮನೆಯ ಇತರ ಸದಸ್ಯರು ಬೆಡ್ ರೂಂ ಏರಿಯಾ ಬಿಟ್ಟುಕೊಡಲು ಒಪ್ಪಿದರೆ ಮಾತ್ರ ನಾಮಿನೇಷನ್ ನಿಂದ ತಪ್ಪಿಸುವುದಾಗಿ ತಿಳಿಸಿದರು..

ನಂತರದಲ್ಲಿ ಶಮಂತ್ ಬಿಗ್ ಬಾಸ್ ಮನೆಯ ಪ್ರತಿ ಸದಸ್ಯರಲ್ಲಿಯೂ ತಮ್ಮನ್ನು ಉಳಿಸುವಂತೆ ಮನವಿ ಮಾಡಲಾಗಿ ಎಲ್ಲರೂ ಸಹ ಬೆಡ್ ರೂಂ ಏರಿಯಾ ಬಿಟ್ಟುಕೊಡಲು ಒಪ್ಪಿದರು.. ಮೊದಲಿಗೆ ಮನೆಯ ಕ್ಯಾಪ್ಟನ್ ಆಗಿರುವ ರಾಜೀವ್ ಅವರು ತನ್ನ ಬೆಡ್ ರೂಂ ಅನ್ನು ಬಿಟ್ಟುಕೊಡುವುದಾಗಿ ತಿಳಿಸಿದ್ದರು.. ನಂತರ ಎಲ್ಲಾ ಸದಸ್ಯರೂ ಸಹ ಈ ನಿರ್ಧಾರಕ್ಕೆ ಒಪ್ಪಿದ್ದು ಒಂದು ವಾರ ಬೆಡ್ ರೂಂ ನಿಂದ ಹೊರಗೆ ಮಲಗುವ ನಿರ್ಧಾರ ಮಾಡಿದ್ದಾರೆ.. ಒಟ್ಟಿನಲ್ಲಿ ಮನೆಯ ನಿಯಮ ಮುರಿದರೆ ಮುಂದಾಗಬಹುದಾದ ಘಟನೆಯ ಬಗ್ಗೆ ಸಣ್ಣ ಜಲಕ್ ತೋರಿಸಿದ್ದು ಮತ್ತೆ ಇನ್ಯಾವ ಸ್ಪರ್ಧಿಯೂ ನಿಯಮ ಮುರಿಯುವ ಸಾಹಸ ಮಾಡುವುದಿಲ್ಲವೆನ್ನಬಹುದು..