ಬಿಗ್ ಬಾಸ್ ಮನೆ ಒಂದು ರೀತಿ ಗುಟ್ಟುಗಳನ್ನು ರಟ್ಟು ಮಾಡುವ ಮನೆಯಾಗಿ ಹೋಗಿದೆ.. ಹೌದು ಪ್ರೇಕ್ಷಕರು ಇಷ್ಟ ಪಡುವ ಕಲಾವಿದರುಗಳು ಅದೆಷ್ಟೋ ಮಂದಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿ ಅಲ್ಲಿ ತಮ್ಮ ವ್ಯಯಕ್ತಿಕ ವಿಚಾರಗಳ ಬಗ್ಗೆ ಹಂಚಿಕೊಳ್ಳುತ್ತಿದ್ದು ಅದೆಷ್ಟೋ ಪ್ರೀತಿ ಪ್ರೇಮದ ವಿಚಾರಗಳು ಸಹ ಬಹಿರಂಗಗೊಂಡಿದ್ದು ಪ್ರೇಕ್ಷಕರಿಗೆ ಹೀಗೂ ಇರಬಹುದಾ ಎನಿಸಿದೆ.. ಹೌದು ಪ್ರತಿ ಸೀಸನ್ ನಂತೆಯೇ ಈ ಸೀಸನ್ ನಲ್ಲಿಯೂ ಬಿಗ್ ಬಾಸ್ ಮನೆಯ ಸದಸ್ಯರು ತಮ್ಮ ತಮ್ಮ ಜೀವನದ ಅನೇಕ ಗುಟ್ಟುಗಳನ್ನು ಬಿಗ್ ಬಾಸ್ ಮನೆಯೊಳಗೆ ತೆರೆದಿಡುತ್ತಿದ್ದಾರೆ..
ಅದರಲ್ಲೂ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದ ಅಗ್ನಿಸಾಕ್ಷಿ ಧಾರಾವಾಹಿಯ ನಟಿ ವೈಷ್ಣವಿ ತಮ್ಮ ಲವ್ ಮ್ಯಾಟರ್ ಅನ್ನು ಬಿಗ್ ಬಾಸ್ ಮನೆಯಲ್ಲಿ ತೆರೆದಿಟ್ಟಿದ್ದು ಪ್ರೇಕ್ಷಕರು ಅಬ್ಬೋ ನಮ್ ಸನ್ನಿಧಿ ಹೀಗೂ ಇದ್ಲಾ ಎಂದುಕೊಂಡಿದ್ದಾರೆ.. ಹೌದು ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಆರು ವರ್ಷಗಳ ಕಾಲ ಜನರನ್ನು ಮನರಂಜಿಸಿದ್ದ ನಟಿ ವೈಷ್ಣವಿ ಅದೆಷ್ಟೋ ಹುಡುಗರ ಹೃದಯಕ್ಕೆ ಎಂಟ್ರಿ ನೀಡಿದ್ದರು.. ಸಿಕ್ಕರೆ ಇಂತಹ ಹೆಂಡ್ರು ಸಿಗಲಿ ಅಂತ ಒಳಗೊಳಗೆ ನಮ್ ಗಂಡ್ ಹೈಕಳು ಧಾರಾವಾಹಿ ನೋಡುತ್ತಾ ಮನಸ್ಸಿನಲ್ಲಿಯೇ ಅಂದುಕೊಂಡದ್ದೂ ಉಂಟು..
ಇನ್ನು ವೈಷ್ಣವಿ ಅವರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಅದೇ ಧಾರಾವಾಹಿಯ ಸಿದ್ದಾರ್ಥ್ ಪಾತ್ರಧಾರಿ ವಿಜಯ್ ಸೂರ್ಯ ಅವರ ಹೆಸರಿನ ಜೊತೆ ತಳುಕು ಹಾಕಿಕೊಂಡು ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಬಹಳಷ್ಟು ಬಾರಿ ಸುದ್ದಿ ಹರಿದಾಡಿತ್ತು.. ಆದರೆ ವಿಜಯ್ ಸೂರ್ಯ ಹಾಗೂ ಸನ್ನಿಧಿ ಇಬ್ಬರು ಆನ್ ಸ್ಕ್ರೀನ್ ಮಾತ್ರ ಒಳ್ಳೆಯ ಜೋಡಿಯಾಗಿದ್ದರು.. ನಿಜ ಜೀವನದಲ್ಲಿ ಇಬ್ಬರು ಒಳ್ಳೆಯ ಸ್ನೇಹಿತರು ಮಾತ್ರವೇ ಆಗಿದ್ದರು.. ಇತ್ತ ವಿಜಯ್ ಸೂರ್ಯ ಅವರು ಅಮ್ಮ ತೋರಿದ ಹುಡುಗಿಯನ್ನು ಮದುವೆ ಆಗಿದ್ದೂ ಆಯ್ತು.. ಗಂಡು ಮಗುವಿಗೆ ತಂದೆ ಆಗಿದ್ದೂ ಆಯ್ತು.. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಗನೊಟ್ಟಿಗಿನ ಆಟಪಾಟಗಳ ಸಾಕಷ್ಟು ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ..
ಇನ್ನು ಇತ್ತ ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಸಾಕಷ್ಟು ಕಲಾವಿದರು ಸಾಲು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಆದರೆ ವೈಷ್ಣವಿ ಮಾತ್ರ ಅದ್ಯಾಕೋ ಮದುವೆಯಾಗೋ ಮನಸ್ಸೇ ಮಾಡಲಿಲ್ಲ.. ಅತ್ತ ಯಾವ ಹುಡುಗನ ಜೊತೆಯೂ ಡೇಟಿಂಗ್ ಗೀಟಿಂಗ್ ಅಂತ ಹೆಸರು ಸಹ ಕೇಳಿ ಬರಲಿಲ್ಲ.. ಆದರೀಗ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಿದ್ದಂತೆ ತನ್ನ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ..
ಹೌದು ಖುದ್ದು ವೈಷ್ಣವಿ ಅವರೇ ಹಂಚಿಕೊಂಡಿರುವ ಅವರ ಲವ್ ಕಹಾನಿ ಇಲ್ಲಿದೆ ನೋಡಿ.. “ನನ್ನ ಜೊತೆ ಇದ್ದವರೆಲ್ಲಾ ಲವ್ ಮಾಡುತ್ತಿದ್ದರು.. ನನ್ನ ಸ್ನೇಹಿತರೆಲ್ಲಾ ಕಮಿಟ್ ಆಗಿದ್ದರು.. ಅವರುಗಳನ್ನೆಲ್ಲಾ ನೋಡಿ ನನಗೂ ಸಹ ಯಾರನ್ನಾದರು ಲವ್ ಮಾಡಬೇಕು ಅನಿಸುತಿತ್ತು.. ಎಲ್ಲೇ ಹೋದರೂ ನಾನೂ ಸಹ ಯಾರಾದರು ಹುಡುಗರು ಚೆನ್ನಾಗಿದ್ದಾರಾ ಅಂತ ನೋಡಿ ಕಾಳ್ ಹಾಕುತ್ತಿದ್ದೆ.. ಆ ಸಮಯದಲ್ಲಿ ನಾನು ಜಿಮ್ ಗೆ ಹೋಗಲು ಶುರು ಮಾಡಿದೆ.. ಅಲ್ಲಿ ಒಬ್ಬ ಹುಡುಗನನ್ನು ನೋಡಿ ಬಹಳ ಇಷ್ಟ ಪಟ್ಟೆ.. ಪ್ರತಿ ದಿನವೂ ಅವನಿಗಾಗಿ ಜಿಮ್ ಗೆ ತೆರಳುತ್ತಿದ್ದೆ.. ಅವನನ್ನು ನೋಡಿದರೆ ಅದೇನೋ ಒಂದು ರೀತಿ ಸಂತೋಷ.. ಹೀಗೆ ಒಂದು ದಿನ ಅವನನ್ನು ನೋಡುತ್ತಾ ಜಿಮ್ ನಲ್ಲಿಯೇ ಆಯತಪ್ಪಿ ಬಿದ್ದು ಕೈ ಪೆಟ್ಟು ಮಾಡಿಕೊಂಡೆ..
ನಂತರ ಕೆಲ ದಿನಗಳು ನಾನು ಜಿಮ್ ಗೆ ಹೋಗಲು ಆಗಲಿಲ್ಲ.. ಅದಾದ ವಾರಗಳ ನಂತರ ಅವನನ್ನು ನೋಡಲು ಜಿಮ್ ಗೆ ಹೋದೆ.. ಆದರೆ ಅವನು ಅಲ್ಲಿಂದ ಬಿಟ್ಟು ಹೋಗಿದ್ದ.. ಇಷ್ಟೇ ನನ್ನ ಲವ್ ಕತೆ ಮುಗೀತು ಅಂದುಕೊಳ್ಳುವಷ್ಟರಲ್ಲಿ ಅವನನ್ನು ಮತ್ತೆ ನೋಡಿದೆ.. ನನ್ನ ಅಪ್ಪನ ಜೊತೆ ಹೋಗುವಾಗ ಅವನು ಒಂದು ಹುಡುಗಿ ಜೊತೆ ಹೋಗುತ್ತಿದ್ದ.. ಪಾಪ ಸ್ನೇಹಿತರಿರಬೇಕು ಅಂದುಕೊಂಡೆ.. ಜೊತೆಗೆ ಅವನನ್ನು ಮಾತನಾಡಿಸಲು ಮುಂದಾದೆ.. ಆದರೆ ಅಷ್ಟರಲ್ಲಿ ಅವನು ಆ ಹುಡುಗಿಯ ಕೈಗಳ ಜೊತೆ ಆಟವಾಡಲು ಶುರು ಮಾಡಿದ್ದ.. ಅದನ್ನು ನೋಡುತ್ತಿದ್ದಂತೆ ನನ್ನ ಮೊದಲ ಲವ್ ಕತೆ ಅಲ್ಲಿಗೆ ಮುಗಿದು ಹೋಯ್ತು.. ಮತ್ತೆಂದೂ ಅವನನ್ನು ನಾನು ನೋಡಲಿಲ್ಲ.. ಎಂದು ತಮ್ಮ ಒನ್ ಸೈಡ್ ಲವ್ ಸ್ಟೋರಿಯನ್ನು ಮನೆಯವರ ಮುಂದೆ ತೆರೆದಿಟ್ಟಿದ್ದಾರೆ..