ಬಿಗ್ ಬಾಸ್ ಖ್ಯಾತಿಯ ಆಡಂ ಪಾಶಾ‌‌ನಿಗೆ ಏನಾಯ್ತು ನೋಡಿ..

0 views

ಬಿಗ್ ಬಾಸ್ ಶೋ ಕೇವಲ ಸೆಲಿಬ್ರೆಟಿಗಳನ್ನು‌‌ ಮಾತ್ರವಲ್ಲ.. ಬದಲಿಗೆ ಅನೇಕ ಬೇರೆ ಬೇರೆ ವೃತ್ತಿರಂಗದ ಜನರನ್ನು ಸಹ ಪ್ರೇಕ್ಷಕರಿಗೆ ಪರಿಚಯ ಮಾಡುತ್ತದೆ. ಅಷ್ಟೇ ಅಲ್ಲದೇ ಶೋ ಮೂಲಕ ಪ್ರಖ್ಯಾತಿಯನ್ನೂ ಸಹ ಪಡೆಯುತ್ತಾರೆ.. ನಂತರ ಕೆಲವರು ಸಿಕ್ಕ ಖ್ಯಾತಿಯನ್ನು ಬಳಸಿಕೊಂಡು ಜೀವನ ರೂಪಿಸಿಕೊಂಡರೆ.. ಮತ್ತಷ್ಟು ಜನ ನಮ್ಮ ಭಾಗ್ಯಕ್ಕೆ ಬಂದದ್ದು ಇಷ್ಟೇ ಎಂದುಕೊಂಡು ಇದ್ದಷ್ಟು ದಿನಕ್ಕೆ ಸಂಭಾವನೆ ಪಡೆದು ನಂತರ ಕಣ್ಮರೆಯಾಗಿ ಹೋಗ್ತಾರೆ..

ಜನರೂ ಸಹ ಒಂದು ಶೋ ಮುಗಿದ ಕೂಡಲೇ ಬಹಳಷ್ಟು ಸ್ಪರ್ಧಿಗಳನ್ನು ಮರೆತೇ ಹೋಗ್ತಾರೆ.. ಆದರೆ ಕೆಲ ವ್ಯಕ್ತಿಗಳು ಮಾತ್ರ ಕಣ್ಮರೆಯಾದರೂ ಇಂತವನೊಬ್ಬ ಬಿಗ್ ಬಾಸ್ ಗೆ ಬಂದಿದ್ದ ಎನ್ನುವುದು ನೆನಪಿನಲ್ಲಿ ಇರುತ್ತದೆ.. ಅದೇ ರೀತಿ ಜನರ ನೆನಪಿನಲ್ಲಿ ಹಾಗೂ ಕೆಲವರ ಮನಸ್ಸಿನಲ್ಲಿ ಇರುವ ವ್ಯಕ್ತಿ ಆಡಂ ಪಾಶಾ.. ಹೌದು ಬಿಗ್ ಬಾಸ್ ಮೂಲಕ ಜನರಿಗೆ ಪರಿಚಯವಾದರೂ ಸಹ ಪ್ರೇಕ್ಷಕರು ಒಬ್ಬ ಸೆಲಿಬ್ರೆಟಿಗಿಂತಲೂ ಈತನನ್ನು ಹೆಚ್ಚು ಇಷ್ಟ ಪಟ್ಟಿದ್ದರು.. ಇಂತವರು ಬೆಳೆಯಬೇಕೆಂದು ಪ್ರೋತ್ಸಾಹ ನೀಡಿ ಸಾಕಷ್ಟು ವಾರಗಳು ಈತನನ್ನು‌ ನಾಮಿನೇಷನ್ ನಿಂದ ಉಳಿಸಿದ್ದರು.. ಆದರೆ ಇದೀಗ ಆಡಂ ಪಾಶ ಎಲ್ಲಿದ್ದಾನೆ ಅಂತ ತಿಳಿದರೆ ನಿಜಕ್ಕೂ ಬೇಸರ ಆಗುತ್ತದೆ..

ಹೌದು ಕೆಲವೊಮ್ಮೆ ಜೀವನದಲ್ಲಿ ಮಾಡಿಕೊಳ್ಳುವ ಸಣ್ಣ ಪುಟ್ಟ ಯಡವಟ್ಟುಗಳು ಸಂಪೂರ್ಣ ಜೀವನವನ್ನೇ ಹಾಳು ಮಾಡಿ ಬಿಡುತ್ತದೆ.. ಅದೇ ರೀತಿ ಇದೀಗ ಆಡಂ ಪಾಶಾರ ಕತೆ ಸಹ ಆಗಿದೆ.‌ ಹೌದು ಸ್ಯಾಂಡಲ್ವುಡ್ ನ ಪ್ರಚಲಿತ ವಿಚಾರಕ್ಕೆ ಸಂಬಂಧಪಟ್ಟಂತೆ ಅನಿಕಾ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಹಳೆಯ ವಿಚಾರವೇ.. ಆದರೆ ಇದಕ್ಕೀಗ ಹೊಸ ನಂಟು ಹುಟ್ಟಿಕೊಂಡಿದೆ.. ಹೌದು ಆಡಂ ಪಾಶಾ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಾನೆ.. ಹೀಗೆ ಒಅಬ್ ಗಳಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುವ ಸಮಯದಲ್ಲಿ ಆಡಂ ಪಾಶಾರಿಗೆ ಅನಿಕಾ ಪರಿಚಯವಾಗಿದ್ದಾಳೆ..

ಆಡಂ ಗೆ ಕ್ಯಾಬ್ ಗೆ ಹಣವಿಲ್ಲದಿದ್ದಾಗಲೂ ಸಹ ಅನಿಕಾಳೆ ದುಡ್ಡು ಕೊಡುತ್ತಿದ್ದಳು ಎಂದು ಈ ಹಿಂದೆಯೇ ಆಡಂ ತಿಳಿಸಿದ್ದರು.. ಹೀಗೆ ಇಬ್ಬರೂ ಪರಿಚಯವಿದ್ದರು ಎಂಬುದನ್ನು ಈ ಹಿಂದೆ ಮಾದ್ಯಮದ ಮುಂದೆ ಬಹಿರಂಗವಾಗಿ ಆಡಂ ಪಾಶಾ ಹೇಳಿಕೊಂಡಿದ್ದರು.. ಆದರೀಗ ಇದಕ್ಕೆ ಸಂಬಂಧಪಟ್ಟಂತೆ ಅನಿಕಾಗೂ ಆಡಂ ಗೂ ವ್ಯವಹಾರಿಕವಾಗಿ ನಂಟಿದೆ ಎಂದು ಪೊಲೀಸರಿಗೆ ತಿಳಿದುಬಂದಿದೆ..

ಹೌದು ವಿಚಾರ ತಿಳಿಯುತ್ತಿದ್ದಂತೆ ಆಡಂ ಗೆ ಸಮನ್ಸ್ ನೀಡಲಾಗಿತ್ತು.. ವಿಚಾರಣೆಗೆ ಹಾಜರಾದ ಆಡಂ ಪಾಶಾನನ್ನುಎನ್ ಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.. ಸದ್ಯ ಪೊಲೀಸರ ವಶದಲ್ಲಿಯೇ ಆಡಂ ಇದ್ದು.. ಇನ್ನಷ್ಟು ದಿನಗಳು ಪೊಲೀಸ್ ಕಸ್ಟಡಿಯಲ್ಲಿಯೇ ಇರಲಿದ್ದಾರೆ ಎನ್ನಲಾಗುತ್ತಿದೆ..

ಬಿಗ್ ಬಾಸ್ ಗೆ ಬಂದ ಸಮಯದಲ್ಲಿ ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದ ಆಡಂ‌ನ ಜೀವನದ ಕತೆ ಕೇಳಿ ಅದೆಷ್ಟೋ ಜನರು ಮರುಗಿದ್ದರು.. ಈತನಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದರು.. ಆದರೆ ಜೀವನದಲ್ಲಿ ಕಷ್ಟ ಬಂತೆಂದು ಕೆಟ್ಟ ಹಾದಿ ತುಳಿದರೆ ಒಂದಲ್ಲಾ ಒಂದು ದಿನ ನಮ್ಮ ತಪ್ಪಿನ ಅರಿವಾದರೂ ಏನೂ ಮಾಡದ ಸ್ಥಿತಿ‌ ನಿರ್ಮಾಣವಾಗಿ ಬಿಡುತ್ತದೆ.. ಈ ಘಟನೆಗಳಿಂದ ಯುವ ಜನತೆ ಒಂದು ಪಾಠವಾಗಿ ಕಲಿತು‌ ಕೆಟ್ಟ ಆಲೋಚನೆ ಮಾಡುವ ಮುನ್ನ ನೂರು ಬಾರಿ ಯೋಚಿಸುವಂತಾಗಬೇಕಷ್ಟೇ..