ಕೂದಲು ಕಪ್ಪಾಗಿಸಲು, ಹೊಟ್ಟು ನಿವಾರಿಸಲು ಈ ಒಂದು ಗಿಡದ ಎಲೆಗಳು ಸಾಕು..

0 views

ಆಧುನಿಕ ಯುಗದ ಜೀವನ ಶೈಲಿ ಹಾಗೂ ವಾತಾವರಣದ ಪ್ರದೂಷಣೆ, ಧೂಳು, ರಾಸಾಯನಿಕ ಪದಾರ್ಥಗಳಿಂದಾಗಿ ಈಗ ಅತ್ಯಂತ ಬೇಗ ನಮ್ಮ ಕೂದಲುಗಳು ಬೆಳ್ಳಗಾಗುತ್ತವೆ. ಎಷ್ಟೋ ಜನರಿಗೆ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗಿ ಚಿಂತೆಗೀಡು ಮಾಡುತ್ತದೆ. ಇವುಗಳ ಜೊತೆಗೆ ಕೂದಲು ಉದುರುವುದು, ತಲೆ ಹೊಟ್ಟು ಹೀಗೆ ನೂರಾರು ಸಮಸ್ಯೆಗಳು ನಮ್ಮನ್ನು ಕಾಡುತ್ತಿರುತ್ತವೆ. ಕೂದಲಿನ ಸಮಸ್ಯೆಯನ್ನು ನಿವಾರಿಸಲು ಜಾಹೀರಾತುಗಳನ್ನು ನೋಡಿಯೋ ಅಥವಾ ಬೇರೆ ಇನ್ಯಾವುದಾದರೂ ರೀತಿಯಲ್ಲಿ ನಾವು ರಾಸಾಯನಿಕ ಮಿಶ್ರಿತ ಶಾಂಪೂ ಹಾಗೂ ಇತರ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಇವುಗಳು ಕೂದಲಿನ ಸಮಸ್ಯೆಗಳನ್ನು ನಿವಾರಿಸುವ ಬದಲು ಸಮಸ್ಯೆಗಳನ್ನು ಹೆಚ್ಚು ಮಾಡುತ್ತವೆ.

ಈ ಸಮಸ್ಯೆಯನ್ನು ಕ್ರಮೇಣವಾಗಿ ಕಡಿಮೆ ಮಾಡಲು ಕೆಲವು ಮನೆಮದ್ದುಗಳು ಸಹಾಯಕವಾಗುತ್ತವೆ. ಅದರಲ್ಲೂ ನಮ್ಮ ಸುತ್ತ ಮುತ್ತಲಿರುವ ಕೆಲವು ಗಿಡಮೂಲಿಕೆಗಳು ಅತ್ಯುತ್ತಮ ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಅಂತಹ ಒಂದು ಗಿಡ ಸದಾ ಪುಷ್ಪ.. ಮಸಣದ ಹೂವು ಅಥವಾ ಸದಾ ಪುಷ್ಪ ಸಾಮಾನ್ಯವಾಗಿ ಎಲ್ಲಾ ಕಡೆ ಬೆಳೆಯುವಂತಹ ಒಂದು ಗಿಡ. ಇದರ ಹೂವು ದೇವರ ಪೂಜೆಗೆ ಮುಡಿಪಾಗಿದ್ದರೆ ಎಲೆಗಳು ಕೂದಲಿನ ಆರೋಗ್ಯವರ್ಧನೆಗೆ ಸಹಾಯಕ.
ಸದಾ ಪುಷ್ಫ ಎಲೆಗಳ ರಸ ತಯಾರಿಸಲು ಬೇಕಾಗುವ ಸಾಮಗ್ರಿಗಳು: ಸದಾ ಪುಷ್ಪ ಗಿಡದ ಎಲೆಗಳು, ನಿಂಬೆರಸ ಹಾಗೂ ಕೊಬ್ಬರಿ ಎಣ್ಣೆ.

ಇದನ್ನು ತಯಾರಿಸುವ ವಿಧಾನ ಹೀಗಿದೆ: ಮೊದಲಿಗೆ ಸದಾ ಪುಷ್ಪದ ಕೆಲವು ಎಲೆಗಳನ್ನು ತೆಗೆದುಕೊಂಡು, ಅದನ್ನು ರುಬ್ಬಿ ರಸವನ್ನು ತಯಾರಿಸಿಕೊಳ್ಳಿ. ಈ ರಸವನ್ನು ಒಂದು ಪಾತ್ರೆಗೆ ಹಾಕಿ. ಇದಕ್ಕೆ ನಿಂಬೆ ರಸ ಹಾಗೂ ಕೊಬ್ಬರಿ ಎಣ್ಣೆಯನ್ನು ಸೇರಿಸಿ. ನಂತರ ಈ ಮಿಶ್ರಣವನ್ನು ನಿಯಮಿತವಾಗಿ ನಿಮ್ಮ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. ಹೀಗೆ ಹಚ್ಚಿ ಅರ್ಧ ಗಂಟೆಯ ನಂತರ ಕೂದಲನ್ನು ಚೆನ್ನಾಗಿ ತೆಳೆಯಿರಿ. (ಈ ರಸವನ್ನು ತಯಾರಿಸುವಾಗ ನಿಮ್ಮ ಕೂದಲಿನ ಪ್ರಮಾಣಕ್ಕೆ ಅನುಸಾರವಾಗಿ ಸಾಮಗ್ರಿಗಳ ಪ್ರಮಾಣವನ್ನು ತೆಗೆದುಕೊಳ್ಳಿ.) ಈ ಮನೆಮದ್ದನ್ನು ನೀವು ಆಗಾಗ ಮಾಡಿ ಉಪಯೋಗಿಸುವುದರಿಂದ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು!