ಮೈಸೂರಿನಲ್ಲಿ ಹೆಲ್ಮೆಟ್ ತಪಾಸಣೆ ವೇಳೆ ಜೀವ ಕಳೆದುಕೊಂಡ ಯುವಕ.. ಪೊಲೀಸರಿಗೆ ಹಿಗ್ಗಾ ಮುಗ್ಗಾ ತಳಿಸಿದ ಸಾರ್ವಜನಿಕರು..

0 views

ಹೆಲ್ಮೆಟ್ ತಪಾಸಣೆ ವೇಳೆ ಸಾರ್ವಜನಿಕರಿಗೆ ತೊಂದರೆ ನೀಡಬಾರದೆಂದು ಮಾನ್ಯ ಸಚಿವರು ಸೂಚನೆ ನೀಡಿದ್ದರೂ ಸಹ ಟ್ರಾಫಿಕ್ ಪೊಲೀಸರು ಮಾತ್ರ ಅಲ್ಲಲ್ಲಿ ನಿಂತು ಹೆಲ್ಮೆಟ್ ತಪಾಸಣೆ ಮಾಡುವ ಸಮಯದಲ್ಲಿ ಸಾರ್ವಜನಿಕರಿಗೆ ಒಂದಿಲ್ಲೊಂದು ತೊಂದರೆಯಾಗುತ್ತಲೇ ಇದೆ.. ಕಾನೂನಿನಂತೆ ಫೋಟೋ ತೆಗೆದು ಮನೆಗಳಿಗೆ ನೊಟಿಸ್ ನೀಡಿ ದಂಡ ಕಟ್ಟಿಸಲಿ.. ಅದನ್ನು ಬಿಟ್ಟು ರಸ್ತೆಯಲ್ಲಿ ಅಡ್ಡಗಟ್ಟಿ ವಾಹನದಲ್ಲಿ ಮಕ್ಕಳು ಇದ್ದರೂ ಸಹ ಜೊತೆಗೆ ಮಹಿಳೆಯರು ಎನ್ನದೇ ಎಲ್ಲರಿಗೂ ತೊಂದರೆ ನೀಡಬಾರದೆಂಬುದು ಸಾರ್ವಜನಿಕರು ಆಗಾಗ ಮನವಿ ಮಾಡುತ್ತಲೇ ಇದ್ದಾರೆ..

ಆದರೆ ಇಂದು ಮೈಸೂರಿನಲ್ಲಿ ಹೆಲ್ಮೆಟ್ ತಪಾಸಣೆ ವೇಳೆ ಯಾರೂ ಊಹಿಸಿರದ ಘಟನೆ ನಡೆದಿದ್ದು ಕ್ಷಣ ಮಾತ್ರದಲ್ಲಿ ಯುವಕನ ಜೀವವೇ ಹೋಗಿದೆ‌‌.. ಹೌದು ಆತನ ಕುಟುಂಬವೀಗ ಬೀದಿಗೆ ಬಿದ್ದಿದೆ.. ಹೆಲ್ಮೆಟ್ ಹಾಕಿದ್ದರೂ ಸಹ ಪೊಲೀಸರು ತಪಾಸಣೆ ಮಾಡುವ ವೇಳೆ ಆ ಯುವಕ ಆಯ ತಪ್ಪಿ ಬಿದ್ದಿದ್ದು ಹಿಂದಿನಿಂದ ಬಂದ ವಾಹನ ಡಿಕ್ಕಿ ಹೊಡೆದ ಪರಿಣಾಮ ಆ ಯುವಕ ಸ್ಥಳದಲ್ಲಿಯೇ ಜೀವ ಕಳೆದುಕೊಂಡಿದ್ದಾನೆ..

ಮೈಸೂರಿನ ಬೋಗಾದಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು.. ಆ ಯುವಕನ ಜೀವ ಹೋಗಲು ಪೊಲೀಸರೇ ಕಾರಣವೆಂದು ಸಾರ್ವಜನಿಕರು ಸಂಚಾರಿ ಪೊಲೀಸರಿಗೆ ಹಿಗ್ಗಾ ಮುಗ್ಗಾ ತಳಿಸಿ ಪೊಲೀಸರ ವಾಹನ ಜಖಂ ಗೊಂಡಿದೆ.‌. ಸ್ಥಳದಲ್ಲಿದ್ದ ಸಂಚಾರಿ ಪೊಲೀಸರನ್ನು ಸಾರ್ವಜನಿಕರು ಸುತ್ತುವರೆದು ಎತ್ತ ಹೋಗಲು ದಾರಿ ನೀಡದೇ ಸಿಕ್ಕ ಸಿಕ್ಕ ವಸ್ತುಗಳಲ್ಲಿ ಥಳಿಸಿದ್ದಾರೆ..

ರಸ್ತೆಯಲ್ಲಿ ಕ್ಷಣ ಮಾತ್ರದಲ್ಲಿ ನೂರಾರು ಜನರು ಸೇರಿದ್ದು ಪೊಲೀಸರಿಗೆ ಹಿಗ್ಗಾಮುಗ್ಗಾ ಥಳಿಸಿ ನಿಮ್ಮ ಮನೆಗಳು ಉದ್ಧಾರ ಆಗಲ್ಲ ಎಂದು ನೊಂದ ಜನರು ಹಿಡಿ ಶಾಪ ಹಾಕಿದ್ದಾರೆ.. ಆಫೀಸಿಗೆಂದೋ ಅಥವಾ ಇನ್ಯಾವುದೋ ಕೆಲಸಕ್ಕೋ ಹೋಗಿದ್ದ ಮಗನೀಗ ಮನೆಗೆ ಗುರುತು ಸಿಗದ ರೀತಿಯಲ್ಲಿ ಮರಳಿ ಹೆ ಣವಾಗಿ ಬಂದಿರುವುದ ಕಂಡು ಆ ತಾಯಿ ತಂದೆಯ ಮನಸ್ಸು ಏನಾಗಬೇಕು.. ಕಾನೂನು ಇರುವುದು ಜನರ ರಕ್ಷಣೆಗಾಗಿ ಆದರೆ ಇಲ್ಲಿ ಜನರ ಜೀವವೇ ಹೋಗುತ್ತಲಿದೆ ಎನ್ನುತ್ತಿದ್ದಾರೆ ಸಾರ್ವಜನಿಕರು..

ಇನ್ನಿ ಸದ್ಯ ಪೊಲೀಸರು ಅಲ್ಲಿದ್ದ ಜನರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ರಸ್ತೆ ಬ್ಲಾಕ್ ಮಾಡಿದ್ದ ಜನರನ್ನು ಅಲ್ಲಿಂದ ಚದುರುಸಿ ಘಟನೆಯ ಬಗ್ಗೆ ವಿವರ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.‌. ಆದರೆ ಹೋದ ಜೀವ ಮತ್ತೆ ಬರುವುದಾ? ಆ ಕುಟುಂಬಕ್ಕೀಗ ಆಸರೆ ಯಾರು? ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ಆ ತಾಯಿಯ ಸಂಕಟ ಯಾರಿಗೆ ಅರ್ಥವಾಗುವುದು? ಕಾನೂನು ಆ ಯುವಕನನ್ನು ಮರಳಿ ಆ ತಾಯಿಗೆ ಕೊಡುವುದಾ? ಎಂಬುದೇ ಯಕ್ಷ ಪ್ರಶ್ನೆ.. ಆದರೆ ಇಂದು ಮೈಸೂರಿನಲ್ಲಿ ನಡೆದ ರೀತಿಯಲ್ಲಿ ಬೇರೆ ಯಾರ ಜೀವವೂ ಹೋಗದಿರಲಿ ಎಂಬುದಷ್ಟೇ ನಮ್ಮ ಮನವಿ..