ಯಡಿಯೂರಪ್ಪನವರಿಗೆ ನೇರವಾಗಿ ಭವಿಷ್ಯ ನುಡಿದ ಜೈನ ಮುನಿಗಳು.. ಕೆಲವೇ ದಿನಗಳಲ್ಲಿ ಸಿಎಂ ಸ್ಥಾನದಿಂದ ಏನಾಗ್ತಾರೆ ಗೊತ್ತಾ?

0 views

ಬೆಳಗಾವಿ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಪರ ಪ್ರಚಾರಕ್ಕೆ ತೆರಳಿದ ಸಮಯದಲ್ಲಿ ಯಡಿಯೂರಪ್ಪನವರಿಗೆ ಜೈನ ಮುನಿಗಳು ರಾಜಕೀಯ ಭವಿಷ್ಯವನ್ನು ನುಡಿದಿದ್ದಾರೆ‌‌.. ಅದರಲ್ಲೂ ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರು ಏನಾಗ್ತಾರೆ ಎಂದು ತಿಳಿಸಿದ್ದು ಯಡಿಯೂರಪ್ಪನವರು ದಿಲ್ ಖುಷ್ ಎನ್ನಬಹುದು..

ಹೌದು ಬೆಳಗಾವಿ ಉಪಚುನಾವಣೆ ಪ್ರಚಾರಕ್ಕೆ ತೆರಳಿದ್ದ ಯಡಿಯೂರಪ್ಪನವರು ಹಲಗಾ ಗ್ರಾಮದ ಬಾಲಾಲ ಆಚಾರ್ಯ ಸಿದ್ಧ ಸೇನಾ ಜೈನ ಬಸದಿಗೆ ಭೇಟಿ‌‌ ನೀಡಿ ಜೈನ‌ಮುನಿಗಳ ಆಶೀರ್ವಾದ ಪಡೆದರು.. ಯಡೀಯೂರಪ್ಪನವರನ್ನು ಆಶೀರ್ವದಿಸಿದ ಜೈನ ಮುನಿಗಳು ಯಡಿಯೂರಪ್ಪನವರ ಭವಿಷ್ಯ ನುಡಿದಿದ್ದು ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರು ರಾಷ್ಟ್ರಪತಿ ಆಗಲಿದ್ದಾರಂತೆ.. ಹೌದು ನೀವು ರೈತರಿಗೆ ಅನೇಕ ಸಹಾಯ ಮಾಡಿದ್ದೀರಿ.. ಅವರ ಪರವಾಗಿ ನಿಂತಿದ್ದೀರಿ.. ಇನ್ನು ಎಲ್ಲಾ ಮಠಗಳಿಗೆ ಅನುದಾನ ನೀಡುತ್ತಾ ರಕ್ಷಣೆ ಮಾಡುತ್ತಾ ಬಂದಿದ್ದೀರಿ.. ಎಲ್ಲ ಧರ್ಮ ಕಾರ್ಯಗಳು ನಿಮ್ಮನ್ನು ಕಾಪಾಡುತ್ತವೆ.. ನೀವು ಮುಂದಿನ ಎರಡೂವರೆ ವರ್ಷದ ಮುಖ್ಯಮಂತ್ರಿ ಪದವಿಯನ್ನು ಸಂಪೂರ್ಣಗೊಳಿಸುತ್ತೀರಿ..

ಅಷ್ಟೇ ಅಲ್ಲದೇ ನೀವು ರಾಜ್ಯಪಾಲರು.. ಉಪರಾಷ್ಟ್ರಪತಿಗಳು ಅಥವಾ ರಾಷ್ಟ್ರಪತಿಗಳು ಆಗುತ್ತೀರಿ.. ನಿಮಗೆ ನಾನು ಆಶೀರ್ವಾದ ಮಾಡುವೆ ಎಂದರು.. ತಕ್ಷಣ ಸಂತೋಷ ಪಟ್ಟ ಸಿಎಂ ಬಿಎಸ್ ವೈ ಅವರು ಸದ್ಯಕ್ಕೆ ಇಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಬೇಕು ಎಂದರು.. ಅದಕ್ಕೆ ಉತ್ತರ ನೀಡೊದ ಜೈನ ಮುನಿಗಳು ಅದರ ಚಿಂತೆ ನಿಮಗೆ ಬೇಡ.. ಮಂಗಳಾ ಅಂಗಡಿ ಅವರು ಗೆದ್ದೇ ಗೆಲ್ತಾರೆ.. ಅದರಲ್ಲೂ ಮೂವತ್ತರಿಂದ ನಲವತ್ತು ಸಾವಿರ ಮತಗಳ ಅಂತರದಿಂದ ಗೆದ್ದು ಬರ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ..

ಇನ್ನು ವಿಶೇಷ ಎಂದರೆ ಈ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕ ಡಿಕೆ ಶಿವಕುಮಾರ್ ಅವರೂ ಸಹ ಇದೇ ಬಸದಿಗೆ ಭೇಟಿ ನೀಡಿದ್ದರು.. ಆ ಸಮಯದಲ್ಲಿಯೂ ಡಿಕೆಶಿವಕುಮಾರ್ ಅವರ ಕುರಿತು ಭವಿಷ್ಯ ನುಡಿದಿದ್ದ ಜೈನ ಮುನಿಗಳು ಮುಂದೆ ಕರ್ನಾಟಕ ರಾಜ್ಯದ ಸಿಎಂ ಆಗ್ತೀರಾ.. ಎಂದು ಭವಿಷ್ಯ ನುಡಿದು ಆಶೀರ್ವಾದ ಮಾಡಿ ಕಳುಹಿಸಿದ್ದರು..

ಸದ್ಯ ರಾಜ್ಯದಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗುತ್ತಿದ್ದು ಅತ್ತ ಖುದ್ದು ಮುಖ್ಯಮಂತ್ರಿಗಳೇ ಚುನಾವಣಾ ಕಣಕ್ಕಿಳಿದು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದರೆ.. ಇತ್ತ ಡಿಕೆಶಿ ಉಪಚುನಾವಣೆಯನ್ನು ತಮ್ಮ ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದ್ದು ತಮ್ಮ ಪಕ್ಷವನ್ನು ಗೆಲ್ಲಿಸುವ ಪಣ ತೊಟ್ಟಿ ನಿಂತಿದ್ದಾರೆನ್ನಬಹುದು.. ಒಟ್ಟಿನಲ್ಲಿ ರಮೇಶ್ ಜಾರಕಿ ಹೋಳಿ ಅವರ ನೆಲದಲ್ಲಿ ಅವರೇ ಇಲ್ಲದೇ ಪಕ್ಷ ಪಕ್ಷಗಳ ಚುನಾವಣಾ ಪ್ರಚಾರ ಅಬ್ಬರವಾಗಿಯೇ ನಡೆಯುತ್ತಿದೆ ಎನ್ನಬಹುದು..