ಬಾದಾಮ್ ಹಾಡು ಹಾಡಿದ್ದ ಗಾಯಕನ ಸ್ಥಿತಿ ಏನಾಗಿದೆ ನೋಡಿ..

0 views

ಸಾಮಾಜಿಕ ಜಾಲತಾಣವೇ ಹಾಗೆ ಅದರಿಂದ ಒಳ್ಳೆಯದೂ ಆಗುತ್ತದೆ.. ಕೆಟ್ಟದ್ದೂ ಆಗಿರುವ ಉದಾಹರಣೆಗಳಿವೆ.. ಇನ್ನು ಪ್ರತಿಭೆಗಳಿಗೆ ಒಂದೊಳ್ಳೆ ವೇದಿಕೆಯಾಗಿರುವ ಸಾಮಾಜಿಕ ಜಾಲತಾಣ‌ ರಾತ್ರೋ ರಾತ್ರಿ ಎಷ್ಟೋ ಜನರನ್ನು ಸ್ಟಾರ್ ಗಳನ್ನಾಗಿ ಮಾಡಿದೆ.. ಅದೇ ರೀತಿ ಸ್ಟಾರ್ ಗಳನ್ನು ಹಳ್ಳಕ್ಕೂ ತಳ್ಳಿದೆ.. ಈ ಹಿಂದೆ ಕಣ್ಸನ್ನೆಯ ಹುಡುಗಿ ಪ್ರಿಯಾ ಕೂಡ ಹೀಗೇ ರಾತ್ರೋ ರಾತ್ರಿ ಫೇಮಸ್ ಆಗಿದ್ದರು ಆದರೀಗ ಲೆಕ್ಕಕ್ಕಿಲ್ಲದಂತಾಗಿದ್ದಾರೆ.. ಇನ್ನು ರೈಲ್ವೇ ನಿಲ್ದಾಣದ ಬಳಿ‌ ಹಾಡು ಹೇಳಿ ಹಣ ಪಡೆದು ಜೀವನ ಸಾಗಿಸುತ್ತಿದ್ದ ರಾನು ಮಂಡಲ್ ಕತೆಯಂತೂ ಹೇಳತೀರದು.. ಅವರ ಹಾಡನ್ನು ನೋಡಿ ಆಲ್ಬಂಗಳಲ್ಲಿ ಹಾಡಿಸಿ ಲಕ್ಷಾಂತರ ರೂಪಾಯಿ ಹಣ ಕೊಟ್ಟರು.. ಕೊನೆಗೆ ರಾನು ಮಂಡಲ್ ಜೀವನ ಶೈಲಿಯನ್ನು ಬದಲಿಸಿಕೊಳ್ಳುವುದರ ಜೊತೆಗೆ ಅಹಂಕಾರವನ್ನೂ ಸಹ ಬೆಳೆಸಿಕೊಂಡು ಕೊನೆಗೆ ಮೊದಲು ಇದ್ದ ಸ್ಥಿತಿಗೆ ಬರುವಂತಾಯಿತು..

ಇನ್ನು ಅದೇ ರೀತಿ ಇದೀಗ ಕಳೆದ ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಪೇಮಸ್ ಆಗಿರುವ ಕಚ್ಚಾ ಬಾದಾಮ್ ಹಾಡು ಹಾಡಿರುವ ಗಾಯಕನ ಸ್ಥಿತಿ ನೋಡಿದರೆ ನಿಜಕ್ಕೂ ಮನಕಲಕುತ್ತದೆ.. ಹೌದು ಈತನ ಹೆಸರು ಬುಬನ್ ಬದ್ಯಾಕರ್.. ಕಚ್ಚಾ ಬಾದಾಮ್ ಹಾಡು ಹಾಡಿರುವ ನಿಜವಾದ ಗಾಯಕ.. ಕೊಲ್ಕತ್ತಾದ ನಿವಾಸಿಯಾಗಿರುವ ಬುಬನ್ ಅವರು ಕಡಲೇ ಕಾಯಿ ವ್ಯಾಪಾರ ಮಾಡುತ್ತಿದ್ದರು.. ಹಳೆ ಚೈನು ವಾಚುಗಳನ್ನು ಪಡೆದು ಅದರ ಬದಲಿಗೆ ಕಡಲೇ ಕಾಯಿ ನೀಡುತ್ತಿದ್ದರು.. ಈ ರೀತಿ ಕಡಲೇ ಕಾಯಿ ಮಾರುವ ಸಂದರ್ಭದಲ್ಲಿ ಬುಬನ್ ಹಾಡುತ್ತಿದ್ದ ಹಾಡೇ ಈ ಕಚ್ಚಾ ಬಾದಾಮ್.. ಈ ಹಾಡನ್ನು ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು.. ನಂತರ ಆ ಹಾಡಿಗೆ ಸಂಗೀತ ನೀಡಿ ಹರಿಬಿಡಲಾಯಿತು.. ನಂತರ ನಡೆದದ್ದೇ ಒಂದು ಮ್ಯಾಜಿಕ್.. ರಾತ್ರೋ ರಾತ್ರಿ ಕಚ್ಚಾ ಬಾದಾಮ್ ಹಾಡು ಬಹಳಷ್ಟು ಫೇಮಸ್ ಆಯಿತು..

ಮಿಲಿಯನ್ ಗಟ್ಟಲೇ ರೀಲ್ಸ್ ಆದವು.. ಭಾಷೆ ಗೊತ್ತಿಲ್ಲದಿದ್ದರೂ ಕಚ್ಚಾ ಬಾದಾಮ್ ಹಾಡಿಗೆ ಕೋಟ್ಯಾಂತರ ಜನ ಹೆಜ್ಜೆ ಹಾಕಿದರು.. ಇನ್ಸ್ಟಾಗ್ರಾಂ ಫೇಸ್ಬುಕ್ ಎಲ್ಲಿ ನೋಡಿದರೂ ಕಚ್ಚಾ ಬಾದಾಮ್ ಹಾಡಿನ ಸದ್ದೇ ಕೇಳಿ ಬರುತಿತ್ತು.. ಇನ್ನು ಹಾಡು ಮಾತ್ರವಲ್ಲ ಹಾಡಿನ ಜೊತೆಗೆ ಕಚ್ಚಾ ಬಾದಾಮ್ ಹಾಡು ಹಾಡುದ ವ್ಯಕ್ತಿ ಬುಬನ್ ಕೂಡ ಬಹಳ ಫೇಮಸ್ ಆದರು.. ರಾತ್ರೋ ರಾತ್ರಿ ಸ್ಟಾರ್ ಆದರು.. ಈ ಹಾಡಿನಿಂದ ಸಿನಿಮಾದಲ್ಲಿ ಹಾಡುವ ಅವಕಾಶವೂ ದೊರಕಿತು.. ಈ ಬಗ್ಗೆ ಮಾತನಾಡಿದ್ದ ಬುಬನ್ ನಾನು ಇಷ್ಟು ಫೇಮಸ್ ಆಗಿರೋದು ಬಹಳ ಖುಷಿ ಇದೆ ಎಂದಿದ್ದರು.. ಕೆಲ ದಿನಗಳ ಹಿಂದಷ್ಟೇ ಬುಬನ್ ಅವರನ್ನು ಕೊಲ್ಕತ್ತಾದ ಪಬ್ ನಲ್ಲಿ ಹಾಡಲು ಕರೆದಿದ್ದು ರಾಕ್ ಸ್ಟಾರ್ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ಬಂದು ಹಾಡು ಹಾಡಿ ಹೋಗಿದ್ದರು ಬುಬನ್..

ಇನ್ನು ಇವರ ಹಾಡಿಗೆ ಸಾಕಷ್ಟು ಮಂದಿ ಅಭಿಮಾನಿಗಳು ಸಹ ಆಗಿದ್ದು ಪಶ್ಚಿಮ ಬಂಗಾಳದ ಪೋಲೀಸರು ಸಹ ಬುಬನ್ ಅವರನ್ನು ಸನ್ಮಾನ ಮಾಡಿದ್ದರು.. ಆಲ್ಬಂ ಗಳಲ್ಲಿಯೂ ಹಾಡಿದ ಬುಬನ್ ಗೆ ಎರಡು ಲಕ್ಷ.. ಮೂರು ಲಕ್ಷ ಹೀಗೆ ಸ್ವಲ್ಪ ಹಣ ಸಂಭಾವನೆಯಾಗಿಯೂ ಬಂದಿತ್ತು.. ಆದರೆ ಹೆಸರು ಹಣ ಬಂದ ಕೂಡಲೇ ಇವರಿಗೆ ಆದ ಸ್ಥಿತಿ ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ.. ಹೌದು ಮೊದಲೇ ಬಡತನದಿಂದ ಬಂದಿದ್ದ ಬುಬನ್ ಗೆ ಈ ಸ್ಟಾರ್ ಗಿರಿ ಬಂದದ್ದು ಖುಷಿ ತರುವ ವಿಚಾರ.. ಆದರೆ ಈ ಸ್ಟಾರ್ ಗಿರಿ ಹೀಗೆ ಇರುತ್ತದೆ ಎಂದುಕೊಳ್ಳದೇ ಬಂದ ಹಣವನ್ನು ಜೀವನಕ್ಕಾಗಿ ಕೂಡಿಟ್ಟುಕೊಳ್ಳಬೇಕಿತ್ತು.. ಆದರೆ ನಡೆದದ್ದೇ ಬೇರೆ.. ಹೌದು ಬುಬನ್ ನಾನು ಇನ್ನು ಮುಂದೆ ಸಾಕಷ್ಟು ಸಿನಿಮಾಗಳಲ್ಲಿ ಹಾಡುವೆ..ಸಾಕಷ್ಟು ಅವಕಾಶಗಳು ಬರುತ್ತದೆ ಎಂದುಕೊಂಡರು.. ಇತ್ತ ಅಕ್ಕ ಪಕ್ಕದ ಜನರ ಮಾತು ಕೇಳಿ ಕೈಯಲ್ಲಿದ್ದ ಅಲ್ಪ ಸ್ವಲ್ಪ ಕಾಸಿನಲ್ಲಿ ಓಡಾಡಲು ಕಾರ್ ಒಂದನ್ನು ಕೊಂಡುಕೊಂಡು ಬರಿಗೈ ಮಾಡಿಕೊಂಡರು..

ಹೌದು ನಿನಗೇನು ಕಡಿಮೆ‌.. ನೀನು ದೊಡ್ಡ ಸ್ಟಾರ್ ಇವಾಗ.. ನೀನು ಕಾರಿನಲ್ಲಿಯೇ ಓಡಾಡಬೇಕು ಎಂದು ಜೊತೆಲಿದ್ದವರು ಬುಬನ್ ನ‌ ಕಿವಿಗೆ ಊದಿ ತಮಾಷೆ ನೋಡಿದರು.. ಇತ್ತಾ ಹೌದಲ್ವಾ ನಾನು ಯಾರಿಗೆ ಕಡಿಮೆ ಎಂದುಕೊಂಡ ಬುಬನ್ ತನ್ನ ಬಳಿ ಇದ್ದ ಹಣದಿಂದ ಕಾರ್ ಒಂದನ್ನು ಕೊಂಡುಕೊಂಡರು.. ಅದೇ ಅವರ ಜೀವನಕ್ಕೆ ಮುಳುವಾಗಿ ಹೋಯ್ತು.. ಹೌದು ಕಾರ್ ಒಂದನ್ನು ಕೊಂಡುಕೊಂಡ ಬುಬನ್ ಡ್ರೈವಿಂಗ್ ಕಲಿಯುವ ನಿರ್ಧಾರ ಮಾಡಿದರು.. ಅದೇ ಕಾರಣಕ್ಕೆ ಡ್ರೈವಿಂಗ್ ಕಲಿಯಲು ಮುಂದಾದರು.. ಇನ್ನೂ ಸಹ ಸರಿಯಾಗಿ ಕಲಿಯದಿದ್ದ ಸಮಯದಲ್ಲಿಯೇ ಕಾರ್ ಓಡಿಸಲು ಹೋದ ಬುಬನ್ ನಿನ್ನೆ ರಾತ್ರಿ ಗೋಡೆಯೊಂದಕ್ಕೆ ಕಾರ್ ಡಿಕ್ಕಿಯಾಯಿತು.. ಇದರ ಪರಿಣಾಮ ಬುಬನ್ ಅವರಿಗೆ ಬಲವಾದ ಪೆಟ್ಟು ಬಿದ್ದಿದೆ..

ಹೌದು ಬುಬನ್ ಕಾರ್ ಓಡಿಸುವುದ ಕಲಿಯುವ ಸಮಯದಲ್ಲಿ ಈ ಘಟನೆ ನಡೆದಿದ್ದು ಬಲವಾದ ಪೆಟ್ಟು ಬಿದ್ದು ಗಾಯಗೊಂಡಿದ್ದು ಅವರನ್ನು ಕೊಲ್ಕತ್ತಾದ ಸುರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.. ಇತ್ತ ಕೈಯಲ್ಲಿದ್ದ ಚೂರು ಪಾರು ಹಣವೂ ಹೋಯ್ತು.. ಕಾರ್ ಕೂಡ ಈ ಸ್ಥಿತಿ ಆಯ್ತು.. ಇತ್ತ ಬುಬನ್ ಅವರಿಗೂ ಗಂಭೀರವಾಗಿ ಪೆಟ್ಟಾಗಿ ಚಿಕಿತ್ಸೆ ಪಡೆಯುವಂತಾಯಿತು.. ಸಿಕ್ಜ ಹಣವನ್ನು ಯಾರ ಮಾತೂ ಕೇಳದೇ ಕೂಡಿಟ್ಟುಕೊಂಡು ಮುಂದಿನ ಜೀವನಕ್ಕೆ ದಾರಿ ಮಾಡಿಕೊಂಡಿದ್ದರೆ ಇಂತಹ ಯಾವ ಘಟನೆಯೂ ನಡೆಯುತ್ತಿರಲಿಲ್ಲ.. ಆದರೆ ಈಗ ಅವರಿವರ ಮಾತು ಕೇಳಿ ಇಂತಹ ಸ್ಥಿತಿ ತಂದುಕೊಳ್ಳುವಂತಾಗಿದ್ದು ಆದಷ್ಟು ಬೇಗ ಬುಬನ್ ಗುಣಮುಖರಾಗಲಿ.. ಸಾಮಾಜಿಕ ಜಾಲತಾಣದ ಎಂಬುದು ಗಾಜಿನ ಮನೆಯಂತೆ ಯಾವಾಗ ಬೇಕಾದರೂ ಕಲ್ಲು ಬೀಳಬಹುದು ಎಂಬ ಸತ್ಯ ಅರಿತಿರಲಿ..