ನೂರೆಂಟು ಔಷಧಿಯ ಗುಣಗಳನ್ನು ಹೊಂದಿದೆ ಪುಟಾಣಿ ಒಣದ್ರಾಕ್ಷಿ
ಒಣದ್ರಾಕ್ಷಿ ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುವಂತಹ ಒಂದು ಡ್ರೈ ಫ್ರೂಟ್! ಸುಮ್ಮನೆ ಕುಳಿತಲ್ಲಿಯೇ ಒಂದೊಂದನ್ನೆ ಬಾಯಲ್ಲಿ ಹಾಕಿಕೊಳ್ಳುತ್ತಿದ್ದರೆ ಸಮಯ ಕಳೆದಿದ್ದೂ ಗೊತ್ತಾಗುವುದಿಲ್ಲ, ಎಷ್ಟು ತಿಂದೆವೆಂದೂ ಅರಿವಿರುವುದಿಲ್ಲ! ಈ ಸಿಹಿಯಾದ ಒಣದ್ರಾಕ್ಷಿ ಸಾಕಷ್ಟು ಸಿಹಿ ತಿನಿಸುಗಳಲ್ಲಿ ಬಳಸುವಂಥದ್ದು. ಅಲ್ಲದೇ ಸಾಕಷ್ಟು ತಿನಿಸುಗಳಲ್ಲಿ ಅಲಂಕಾರಕ್ಕೆ ಗೋಡಂಬಿಯ ಜೊತೆ ಬಳಸಲಾಗುತ್ತದೆ. ಹಾಗೆಯೇ ಉತ್ತರ ಭಾರತೀಯ ಬಿರ್ಯಾನಿ ಅನ್ನದಲ್ಲಿಯೂ ಬಳಸಲಾಗುತ್ತದೆ. ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದೆ ಒಣದ್ರಾಕ್ಷಿ. ವಿವಿಧ ಬಗೆಯ ದ್ರಾಕ್ಷಿಯನ್ನು ಒಣಗಿಸಿ ಒಣದ್ರಾಕ್ಷಿಯನ್ನು ತಯಾರಿಸಲಾಗುತ್ತದೆ. ಇದು ಸುಲಭವಾಗಿ ಕೆಡುವುದಿಲ್ಲವಾದ್ದರಿಂದ ಮನೆಯಲ್ಲಿ ಸಾಕಷ್ಟು…