ರಾತ್ರಿ ನಡೆದ ಆ ಒಂದು ಘಟನೆ.. ಸಾಕಷ್ಟು ಬಾರಿ ಆಲೋಚಿಸಿ ಕಣ್ಣೀರಿನ ಜೊತೆಯೇ ಬರೆದಿರುವೆ.. -ರಮ್ಯ ಜಗತ್, ಮೈಸೂರು
ಮಳೆ ಬರುವ ಆ ರಾತ್ರಿ ಬಹಳ ಹೊಟ್ಟೆ ನೋವು.. ಹಸಿವೋ ನೋವೋ ತಿಳಿಯಲಾಗದಷ್ಟು ನೋವು.. ಕೊರೊನಾದಿಂದ ಅಪ್ಪ ಅಮ್ಮನನ್ನು ಕಳೆದುಕೊಂಡ ಹೆಣ್ಣು.. ಅತ್ತ ತಮ್ಮನ ಜವಾಬ್ದಾರಿ.. ಇಂತಹ ಸಮಯದಲ್ಲಿ ಈ ತಾಳಲಾಗದ ನೋವೇನು.. ಹೇಳಿಕೊಳ್ಳಲು ಅಮ್ಮನಿಲ್ಲ.. ಇರೋದು ಸ್ಲಂ ಒಂದರಲ್ಲಿ.. ದೂರದ ಶೌಚಾಲಯಕ್ಕೆ ಹೋಗಿ ನೋಡಿದರೆ ಒಳ ಉಡುಪೆಲ್ಲಾ ಕೆಂಪು ಬಣ್ಣ.. ಮಣ್ಣಲ್ಲಿ ಹಾಕಿ ಉಜ್ಜಿದರೂ ಹೋಗದ ಆ ಕಲೆ.. ಇದೆಲ್ಲವನ್ನು ಹೇಳಿದರೂ ಅರ್ಥವಾಗದ ತಮ್ಮ ಅಕ್ಕನ ಕಾಲಿನ ಬಳಿ ಹರಿಯುತ್ತಿದ್ದ ರಕುತವ ನೋಡಿ ಕಣ್ಣೀರಿಟ್ಟು ಅಸಹಾಯಕನಾಗಿ…