ಬಿಗ್ ಬಾಸ್ ಮನೆಗೆ ಬಂದಿರುವ ಚಕ್ರವರ್ತಿ ಚಂದ್ರಚೂಡ್ ನಿಜಕ್ಕೂ ಯಾರು ಗೊತ್ತಾ?

0 views

ನಿನ್ನೆಯಷ್ಟೇ ಬಿಗ್ ಬಾಸ್ ಸೀಸನ್ ಎಂಟರಲ್ಲಿ ವೈಲ್ಡ್ ಕಾರ್ಡ್ ಮೂಲಕ‌ ಹೊಸ ಸದಸ್ಯರ ಎಂಟ್ರಿಯಾಗಿದ್ದು ಮನೆಮಂದಿಯೆಲ್ಲಾ ಶಾಕ್ ಆಗಿರೋದಂತೂ ಸತ್ಯ.. ಅದರಲ್ಲೂ ಪ್ರಶಾಂತ್ ಸಂಬರ್ಗಿ ಎಲ್ಲರಿಗಿಂತ ತುಸು ಹೆಚ್ಚೇ ಗೊಂದಲದಲ್ಲಿ ಇದ್ದಾರೆನ್ನಬಹುದು.. ಇದಕ್ಕೆ ಕಾರಣವೂ ಇದೆ.. ಸಂಪೂರ್ಣವಾಗಿ ನೋಡಿ.. ಇನ್ನು ಈ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ ನಿಜಕ್ಕೂ ಯಾರು.. ಎಂಬ ವಿಚಾರ ಎಲ್ಲರಲ್ಲಿಯೂ ಸಣ್ಣ ಕುತೂಹಲವೊಂದನ್ನು ಮೂಡಿಸಿದೆ.. ಅದಕ್ಕೆ ಉತ್ತರ ಇಲ್ಲಿದೆ ನೋಡಿ..

ಚಕ್ರವರ್ತಿ ಚಂದ್ರಚೂಡ್.. ಇವರು ವೃತ್ತಿಯಲ್ಲಿ ಬರಹಗಾರ.. ಪತ್ರಕರ್ತ.. ಸಾಮಾಜಿಕಹೋ ರಾಟಗಾರ ಹೀಗೆ ಸಾಕಷ್ಟು ಕೆಲಸಗಳನ್ನು ಮಾಡುತ್ತಿರುತ್ತಾರೆ.. ಆದರೆ ಈ ಹಿಂದೆ ಇವರು ಸುದ್ದಿಯಾಗಿದ್ದು ಮಾತ್ರ ಮದುವೆ ವಿಚಾರಕ್ಕೆ.. ಹೌದು ಕನ್ನಡದ ಖ್ಯಾತ ನಟಿ ಶೃತಿ ಅವರೊಡನೆ ಎರಡನೇ ಮದುವೆಯಾದ ವ್ಯಕ್ತಿ ಮತ್ಯಾರೂ ಅಲ್ಲ ಇವರೇ ಚಂದ್ರಚೂಡ.. ಹೌದು ಶೃತಿ ಹಾಗೂ ಮಹೇಂದರ್ ಅವರು ದೂರಾದ ನಂತರ ಶೃತಿ ಅವರು ಅದ್ಧೂತಿಯಾಗಿ ಚಕ್ರವರ್ತ್ಜ್ ಚಂದ್ರಚೂಡ್ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು..

ಆದರೆ ಅದಾಗಲೇ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮಂಜುಳ ಎಂಬುವವರ ಜೊತೆ ಮದುವೆಯಾಗಿತ್ತು.. ಆದರೆ ಶೃತಿ ಅವರನ್ನು ಮದುವೆಯಾಗುವ ಸಮಯದಲ್ಲಿ ಮಂಜುಳ ಅವರ ಅನುಮತಿ ಪಡೆದಿರಲಿಲ್ಲ.. ಈ ಕಾರಣಕ್ಕೆ ಮಂಜುಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.. ಆನಂತರ ಶೃತಿ ಹಾಗೂ ಚಂದ್ರಚೂಡ್ ಅವರು ಇಬ್ಬರೂ ಸಹ ಸಮ್ಮತಿಸಿ ಕೋರ್ಟ್ ಗೆ ಹಾಜರಾಗಿ ತಮ್ಮ ಮದುವೆಯನ್ನು ಅಸಿಂಧು ಮಾಡಿಕೊಂಡರು.. ಈ ರೀತಿ ಎರಡು ಬಾರಿ ವೈವಾಹಿಕ ಜೀವನದಲ್ಲಿ ಸೋತ ಚಂದ್ರಚೂಡ ಅವರು ಮತ್ತೆ ಮದುವೆಯಾಗುವ ಪ್ರಯತ್ನ ಮಾಡಲಿಲ್ಲ..

ಎರಡು ಬಾರಿ ನಾನು ವೈವಾಹಿಕ ಜೀವನದಲ್ಲಿ ಸೋತೆ ಎಂಬ ವಿಚಾರವನ್ನು ಬಿಗ್ ಬಾಸ್ ಮನೆಯಲ್ಲಿಯೂ ಸಹ ಹೇಳಿಕೊಂಡರು.. ಇನ್ನು ಪ್ರಶಾಂತ್ ಸಂಬರ್ಗಿ ಹಾಗೂ ಚಂದ್ರಚೂಡ ಅವರಿಗೆ ಮೊದಲಿನಿಂದಲೂ ಸಂಬಂಧವಿದೆ.. ಹೌದು ಈ ಇಬ್ಬರೂ ಬಹಳ ಆತ್ಮೀಯರು ಹೌದು.. ಪ್ರಶಾಂತ್ ಸಂಬರ್ಗಿ ಅವರ ಎಲ್ಲಾ ವಿಚಾರಗಳು ಚಂದ್ರಚೂಡ ಅವರಿಗೆ ತಿಳಿದಿದೆ.. ಅವರ ಪಾಸಿಟಿವ್ ನೆಗಟಿವ್ ಎಲ್ಲವೂ ಸಹ ಚಂದ್ರಚೂಡ ಅವರಿಗೆ ಗೊತ್ತಿದೆ.‌. ಅಷ್ಟೇ ಅಲ್ಲದೇ ಪ್ರಶಾಂತ್ ಸೇರು ಎಂದರೆ ಚಂದ್ರಚೂಡ ಸವಾಸೇರು ಎನ್ನುವ ವ್ಯಕ್ತಿ.. ಮಾತಿನ ಮಲ್ಲನೂ ಹೌದು.. ಈ ಹಿಂದೆ ಚಂದ್ರಚೂಡ ಅವರು ಬರೆದ ಕತೆ ಸಿನಿಮಾ ಆಗುತಿತ್ತು ಅದನ್ನು ಪ್ರಶಾಂತ್ ಸಂಬರ್ಗಿ ಅವರೇ ನಿರ್ಮಾಣ ಮಾಡುತ್ತಿದ್ದರು.. ಆದರೆ ಸಿನಿಮಾದ ನಿರ್ದೇಶಕರು ಇಲ್ಲವಾದ ಬಳಿಕ ಸಿನಿಮಾ ನಿಂತಿತ್ತು..

ಇನ್ನು ಅದಾಗಲೆ ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ಮನೆಮಂದಿಗೆಲ್ಲಾ ಅಂಕಗಳನ್ನು ಕೊಟ್ಟು ವಿವರಣೆ ನೀಡಿರುವ ಚಂದ್ರಚೂಡ ಶಂಕರ್ ಅಶ್ವತ್ಥ್ ಅವರಿಗೆ ಸೊನ್ನೆ.. ರಾಜೀವ್ ಅವರಿಗೆ ಒಂದು.. ಶುಭ ಪೂಂಜಾರಿಗೆ ಎರಡು.. ವಿಶ್ವನಾಥ್ ಗೆ ಅರ್ಧ.. ಶಮಂತ್ ಗೆ ಅರ್ಧ.. ಹೀಗೆ ಎಲ್ಲರಿಗೂ ಮುಖಕ್ಕೆ ಹೊಡೆದಂತೆ ಎರಡರ ಒಳಗೆ ಅಂಕ ಕೊಟ್ಟು ಮನೆಯ ಸ್ಪರ್ಧಿಗಳು ಮುಖ ಮುಖ ನೋಡಿಕೊಳ್ಳುವಂತೆ ಮಾಡಿದ್ದಾರೆ.. ಒಟ್ಟಿನಲ್ಲಿ ಇನ್ನೆರೆಡು ದಿನ ಮನೆಯ ತುಂಬೆಲ್ಲಾ ಚಂದ್ರಚೂಡರದ್ದೇ ಚರ್ಚೆ ಎಂದರೂ ತಪ್ಪಾಗಲಾರದು..