ಮದುವೆಗೆ ಮುನ್ನವೇ ನಾಗಾರ್ಜುನ್ ನನ್ನ ಜೊತೆ ಆ ಕೆಲಸ ಮಾಡಿದ್ದಾನೆ.. ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಚೈತ್ರಾ ಕೊಟ್ಟೂರ್ ಹೇಳಿರುವ ಮಾತು ನೋಡಿ..

0 views

ಬಿಗ್ ಬಾಸ್ ಕನ್ನಡ ಸೀಸನ್ ಏಳರ ಸ್ಪರ್ಧಿ.. ಸ್ಯಾಂಡಲ್ವುಡ್ ನಟಿ.. ನಿರ್ದೇಶಕಿ.. ಬರಹಗಾರ್ತಿ ಚೈತ್ರಾ ಕೊಟ್ಟೂರ್ ಇದೀಗ ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.. ಹೌದು ಚೈತ್ರಾ ಕೊಟ್ಟೂರ್ ಅವರು ಕಳೆದ ಮಾರ್ಚ್ 28 ರಂದು ಬೆಂಗಳೂರಿನ ಗಣಪತಿ ದೇವಸ್ಥಾನವೊಂದರಲ್ಲಿ ತಮ್ಮ ಗೆಳೆಯ ನಾಗಾರ್ಜುನ್ ಅವರೊಂದಿಗೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಮದುವೆಯ ವಿಚಾರ ತಿಳಿಸಿದ್ದ ಚೈತ್ರಾ ಕೊಟ್ಟೂರ್ ಅವರಿಗೆ ಸ್ನೇಹಿತರು ಹಾಗೂ ಆಪ್ತರಿಂದ ಶುಭಾಶಯಗಳ‌ ಮಹಾಪೂರವೇ ಹರಿದುಬಂದಿತ್ತು..

ಆದರೆ ಮದುವೆಯಾದ ಕೆಲವೇ ಗಂಟೆಯಲ್ಲಿ ಶಾಕಿಂಗ್ ಸಮಾಚಾರವೊಂದು ಹೊರ ಬಂದಿತ್ತು.. ಹೌದು ಸಂಜೆಯಾಗುತಲೇ ನಾಗಾರ್ಜುನ್ ಅವರು ಈ ಮದುವೆ ನನಗೆ ಇಷ್ಟವಿಲ್ಲ.. ಬಲವಂತವಾಗಿ ತಾಳಿ ಕಟ್ಟಿಸಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.. ನಾಗಾರ್ಜುನ್ ಅವರ ಪೋಷಕರು ಸಹ ಕೋಲಾರದ ಚೈತ್ರಾ ಕೊಟ್ಟೂರ್ ಅವರ ಮನೆಗೆ ತೆರಳಿ ಗಲಾಟೆ ಮಾಡಿದ್ದರು.. ಅಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.. ಆದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿ ಪೊಲೀಸ್ ಠಾಣೆಯಿಂದ ಎರಡೂ ಕುಟುಂಬಗಳು ತೆರಳಿದ್ದವು..

ಇತ್ತ ಕೋಲಾರದ ತವರು ಮನೆಯಲ್ಲಿ ಚೈತ್ರಾ ಕೊಟ್ಟೂರ್ ಇದ್ದರೆ.. ಅತ್ತ ನಾಗಾರ್ಜುನ್ ತನ್ನ ತಂದೆ ತಾಯಿಯ ಜೊತೆ ಮಂಡ್ಯಕ್ಕೆ ತೆರಳಿದ್ದರು.. ದಿನಗಳು ಕಳೆದವು.. ಆದರೆ ನಾಗಾರ್ಜುನ್ ಆಗಲಿ ಅವರ ಕುಟುಂಬವಾಗಲಿ ಮತ್ತೆ ಚೈತ್ರಾ ಅವರ ಸಹವಾಸಕ್ಕೆ ಹೋಗಲಿಲ್ಲ.. ತಮ್ಮ ಪಾಡಿಗೆ ತಾವು ಸುಮ್ಮನಾದರು..‌ಅತ್ತ ನನ್ನ ಗಂಡ ಬರ್ತಾನೆ ಬರ್ತಾನೆ ಅಂತ ಕಾಯುತ್ತಿದ್ದ ಚೈತ್ರಾ ಕೊಟ್ಟೂರ್ ಕೊನೆಗೆ ಬೇರೆಯ ರೀತಿಯ ನಿರ್ಧಾರವನ್ನೇ ಮಾಡಿದರು.. ಹೌದು ನಾಗಾರ್ಜುನ್ ಮರಳಿ ಬಾರದ ಕಾರಣ

ಇದರಿಂದ ಬೇಸತ್ತ ಚೈತ್ರಾ ಕೊಟ್ಟೂರ್ ಮದುವೆಯಾದ ಹತ್ತು ದಿನಗಳ ಬಳಿಕ ಫೆನಾಯಿಲ್ ಕುಡಿದು ಜೀವ ಕಳೆದುಕೊಳ್ಳುವ ಪ್ರಯತ್ನ ಮಾಡಿದ್ದರು.. ಆ ಕೆಲಸ ಮಾಡುವ ಮುನ್ನ ಅಳುತ್ತಾ ನಾಗಾರ್ಜುನ್ ಅವರಿಗಾಗಿ ವೀಡಿಯೋ ಮಾಡಿದ್ದರು.. ಕೊನೆಗೆ ಕೋಲಾರದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರು.. ಇನ್ನು ಇದೀಗ ಹೊಸ ಕತೆ ಶುರುವಾಗಿದೆ.. ಹೌದು ಚೈತ್ರಾ ಕೊಟ್ಟೂರ್ ಇದೀಗ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ..

ಹೌದು ಇಂದು ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ತೆರಳಿ ನಾಗಾರ್ಜುನ್ ವಿರುದ್ಧ ದೂರು ನೀಡಿದ್ದಾರೆ.. ಹೌದು ಬಸವನಗುಡಿ ಪೊಲೀಸ್ ಠಾಣೆಗೆ ತೆರಳಿರುವ ಚೈತ್ರಾ ಕೊಟ್ಟೂರ್ ತನ್ನ ಗಂಡನನ್ನು ಕರೆಸಿ ಬುದ್ದಿ ಹೇಳಿ ಎಂದು ಕೇಳಿಕೊಂಡಿದ್ದಾರಂತೆ..

ಅಷ್ಟೇ ಅಲ್ಲದೇ ನಾಗಾರ್ಜುನ್ ತನ್ನನ್ನು ಮದುವೆಗೆ ಮುನ್ನವೇಲೈಂ ಗಿಕವಾಗಿ ಬಳಸಿಕೊಂಡಿದ್ದಾರೆ.. ನಂತರ ಮದುವೆಯಾಗಿ ಇದೀಗ ನನ್ನ ಜೊತೆ ಸಂಸಾರ ಮಾಡೋದಿಲ್ಲ ಎನ್ನುತ್ತಿದ್ದಾರೆ.. ಅವರನ್ನು ಇಲ್ಲಿಗೆ ಕರೆಸಿ ಬುದ್ದಿ ಹೇಳಿ ಎಂದಿದ್ದಾರೆ.. ಸದ್ಯ ಬಸವನಗುಡಿಯ ಮಹಿಳಾ ಪೊಲೀಸರು ಎನ್ ಸಿ ಆರ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ..