ತೂಕ ಇಳಿಸಲು ಒಂದೇ ಒಂದು ಲೋಟ ಚಕ್ಕೆ ನೀರು ಸಾಕು..

0 views

ಇಟ್ಟಿಚಿನ ದಿನಗಳಲ್ಲಿ ಎಲ್ಲರಿಗೂ ಇರುವ ಚಿಂತೆಯೇ ತೂಕದ ಬಗ್ಗೆ. ಅದರಲ್ಲೂ ಅತ್ಯಂತ ಸಣ್ಣ ವಯಸ್ಸಿನಲ್ಲಿಯೂ ಕೂಡ ದೇಹ ತೂಕ ಹೆಚ್ಚಾಗಿ ಇನ್ನಿಲ್ಲದಷ್ಟು ಪರದಾಡುತ್ತಾರೆ. ಎಷ್ಟೇ ಪ್ರಯತ್ನಪಟ್ಟರೂ ಯಾರ ಬಳಿ ಸಲಹೆ ಕೇಳಿದರೂ ಪ್ರಯೋಜನವಾಗದೆ ಕಡೆಗೆ ನಿರಾಸೆಗೊಂಡಿರುವವರೇ ಹೆಚ್ಚು. ಆದರೆ ನಿಮ್ಮಲ್ಲಿ ಒಂದು ಭರವಸೆಯನ್ನು ಮೂಡಿಸುವಂತ ಒಂದು ಅತ್ಯುತ್ತಮ ಪಾನೀಯವೊಂದರ ಬಗ್ಗೆ ಮಾಹಿತಿಯನ್ನು ನೀಡಲು ನಾವಿಲ್ಲಿದ್ದೇವೆ.

ಅದ್ಯಾವುದದು ಪಾನೀಯ ಅಂತಿರಾ? ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದಾದ ಹಾಗೂ ಆರೋಗ್ಯಕ್ಕೂ ಉತ್ತಮವಾದ ಒಂದು ಪಾನೀಯ ಇದಾಗಿದೆ. ಇದೇ ಚಕ್ಕೆ ನೀರು.. ಪಾನೀಯ ತಯಾರಿಸಲು ಬೇಕಾಗುವ ಸಾಮಗ್ರಿಗಳು: ಬೆಳ್ಳುಳ್ಳಿ – ಮೂರು ಎಸಳು, ಚಕ್ಕೆ -ಎರಡು ತುಂಡು ಒಂದು ಲೋಟ ನೀರು. ಮಾಡುವ ವಿಧಾನ: ದೇಹದ ತೂಕ ಇಳಿಸುವುದು ಎಂದರೆ ಕೇವಲ ಆಹಾರವನ್ನು ನಿಯಂತ್ರಿಸುವುದಾಗಲಿ, ವ್ಯಾಯಾಮಗಳನ್ನು ಮಾಡುವುದಾಗಲಿ ಅಲ್ಲ. ಇವುಗಳ ಜೊತೆಯಲ್ಲಿ ದೇಹದಲ್ಲಿನ ಬೇಡದ ಕೊಬ್ಬನ್ನು ಇಳಿಸಲು ಕೆಲವು ಮನೆಮದ್ದುಗಳನ್ನು ಕೂಡ ಮಾಡಿಕೊಂಡು ಸೇವಿಸಬೇಕು. ದಿನವೂ ಖಾಲಿ ಹೊಟ್ಟೆಯಲ್ಲಿ ಈ ಒಂದು ನೀರನ್ನು ಕುಡಿದರೆ ಸಾಕು ಕ್ರಮೇಣ ತೂಕ ಕಡಿಮೆ ಯಾಗುತ್ತಾ ಬರುವುದರಲ್ಲಿ ಎರಡು ಮಾತಿಲ್ಲ.
ಒಂದು ಲೋಟ ನೀರನ್ನು ಪಾತ್ರೆಗೆ ಹಾಕಿ ಕುದಿಯಲು ಬಿಡಿ.

ಇದಕ್ಕೆ ಎರಡು ತುಂಡು ಚೆಕ್ಕೆ ಯನ್ನು ಹಾಕಿ ಚೆನ್ನಾಗಿ ಕುದಿಸಿ. ಚಕ್ಕೆ ನೀರಿನಲ್ಲಿ ತನ್ನ ರುಚಿ ಹಾಗೂ ಗುಣವನ್ನೆಲ್ಲ ಬಿಟ್ಟು ನೀರಿನ ಬಣ್ಣ ಬದಲಾಗುವವರೆಗೆ ಕುದಿಸಿ ನಂತರ ಇದನ್ನು ಒಂದು ಲೋಟಕ್ಕೆ ಸೋಸಿ. ಮೂರು ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿಕೊಳ್ಳಿ. ನಂತರ ಈ ಬೆಳ್ಳುಳ್ಳಿ ಎಸಳುಗಳನ್ನು ಚೆನ್ನಾಗಿ ಅಗೆದು ತಿಂದು ಈ ನೀರನ್ನು ಕುಡಿಯಿರಿ.
ಹೀಗೆ ದಿನವೂ ಮಾಡುವುದರಿಂದ ದೇಹ ತೂಕ ತಾನಾಗಿಯೇ ಕಡಿಮೆ ಯಾಗುತ್ತಾ ಬರುತ್ತದೆ. ಬೆಳ್ಳುಳ್ಳಿಯಲ್ಲಿರುವ ವಿಟಮಿನ್ ಬಿ೬, ವಿಟಮಿನ್ ಸಿ, ಸೆಲೋನಿಯಮ್, ಫೈಬರ್ ಗುಣ ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ಸಕ್ಕರೆ ಖಾಯಿಲೆಯನ್ನೂ ಕಡಿಮೆ ಮಾಡುತ್ತದೆ. ಅಲ್ಲದೇ ದಿನವು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ರಕ್ತದೊತ್ತಡದ ಸಮಸ್ಯೆ ಕಡಿಮೆಯಾಗುತ್ತದೆ, ಅಲ್ಲದೆ ಥೈರಾಯ್ಡ್ ಕೂಡ ನಿಯಂತ್ರಣಕ್ಕೆ ಬರುತ್ತದೆ. ಇಷ್ಟೇಲ್ಲ ಪ್ರಯೋಜನಗಳನ್ನು ಹೊಂದಿರುವ ಈ ಒಂದೇ ಒಂದು ಪಾನೀಯ ದೇಹ ತೂಕ ಮಾತ್ರವಲ್ಲದೆ ಇತರ ಹಲವು ಸಮಸ್ಯೆಗಳನ್ನೂ ನಿವಾರಿಸುತ್ತದೆ.