ಸಾಕ್ಷಿ ಸಹಿತ ಬಯಲಾಯ್ತು ಚಂದ್ರಚೂಡ ಅವರ ನಿಜ ಮುಖ.. ಕಾದಿದೆ ಶಾಕ್..

0 views

ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ಶುರುವಾಗಿದ್ದು ಅದಾಗಲೇ ನಾಲ್ಕು ದಿನಗಳ ಬಿಗ್ ಬಾಸ್ ಮನೆವಾಸ ಸಂಪೂರ್ಣ ಗೊಂಡಿದ್ದು ಸ್ಪರ್ಧಿಗಳ ನಡುವೆ ಸಾಕಷ್ಟು ಮನಸ್ತಾಪಗಳು ಶುರುವಾಗಿವೆ.. ಅದರಲ್ಲಿಯೂ ಬಿಗ್ ಬಾಸ್ ನಲ್ಲಿ ಸಿಕ್ಕ ನಲವತ್ತೈದು ದಿನಗಳ ಬ್ರೇಕ್ ನಲ್ಲಿ ಮತ್ತೆ ಬಿಗ್ ಬಾಸ್ ಶುರು ಆಗೋದಿಲ್ಲ ಎಂದುಕೊಂಡು ಕೆಲವೊಬ್ಬರು ಮತ್ತೊಬ್ಬರ ಬಗ್ಗೆ ಮಾತನಾಡಿದ್ದು ಇದೀಗ ತಗಲಾಕಿಕೊಂಡ ಸನ್ನಿವೇಶ ಎದುರಾಗಿದೆ.. ಇನ್ನು ಬಿಗ್ ಬಾಸ್ ಸೀಸನ್ ಎಂಟರಲ್ಲಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ತಮ್ಮ ಮಾತಿನ ಮೂಲಕವೇ ಸಾಕಷ್ಟು ಸುದ್ದಿ ಮಾಡಿದ್ದ ಚಕ್ರವರ್ತಿ ಚಂದ್ರಚೂಡ ಅವರೀಗ ವಿಚಾರವೊಂದರಲ್ಲಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದು ಹೊರ ಬಂದ ನಂತರ ಅವರಿಗೆ ಶಾಕ್ ಒಂದು ಕಾದಿದೆ.. ಹೌದು ಬಿಗ್ಬ್ಬಾಸ್ ಶುರುವಾದ ನಾಲ್ಕೇ ದಿನಕ್ಕೆ ಸದ್ಯ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ನಲವತ್ತೈದು ದಿನಗಳಲ್ಲಿ ಯಾರ್ಯಾರು ಏನೇನು ಬದಲಾವಣೆ ಆಗಿದ್ದಾರೆ ಎಂಬುದನ್ನು ತಿಳಿಸಿ ಎಂದು ಚಕ್ರವರ್ತಿ ಚಂದ್ರಚೂಡ ಅವರನ್ನು ಪ್ರಶ್ನಿಸಿದರು..

ಇದಕ್ಕೆ ಉತ್ತರ ನೀಡಿದ ಚಕ್ರವರ್ತಿ ಚಂದ್ರಚೂಡ ಅವರು ವೈಷ್ಣವಿ ಅವರ ಬಗ್ಗೆ ಕೊಂಚ ವಿಭಿನ್ನವಾಗಿ ಮಾತನಾಡಿದರು.. ಅವರು ಹೊರಗೊಂದು ಒಳಗೊಂದು ಎನ್ನುವ ರೀತಿಯಲ್ಲಿ ಮಾತನಾಡಿದರು.. ಇದಕ್ಕೆಲ್ಲಾ ಕಾರಣ ಎರಡು ದಿನಗಳ ಹಿಂದೆಯಷ್ಟೇ ವೈಷ್ಣವಿ ಅವರು ಚಕ್ರವರ್ತಿ ಚಂದ್ರಚೂಡ ಅವರನ್ನು ಅವರು ಹೊರಗೆ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರ ಬಗ್ಗೆ ಪ್ರಶ್ನಿಸಿದ್ದು.. ಹೌದು ಚಕ್ರವರ್ತಿ ಚಂದ್ರಚೂಡ ಅವರು ಬಿಗ್ ಬಾಸ್ ಅರ್ಧಕ್ಕೆ ನಿಂತು ಹೊರ ಬಂದ ನಂತರ ಸಾಕಷ್ಟು ಸಂದರ್ಶನಗಳಲ್ಲಿ ಪಾಲ್ಗೊಂಡಿದ್ದರು.. ಆ ಸಮಯದಲ್ಲಿ ಮನೆಯ ಇತರ ಸ್ಪರ್ಧಿಗಳ ಬಗ್ಗೆ ಸಾಕಷ್ಟು ಮಾತನ್ನಾಡಿದ್ದರು.. ಆ ಸಮಯದಲ್ಲಿ ಮನೆಯಲ್ಲಿ ಮೂರು ಜೋಡಿಗಳಿವೆ.. ಅವರಿಗೆ ನಾನೇ ಒಂದು ಮಾತು ಹೇಳಿದ್ದೇನೆ.‌ ಮೂರು ಜೋಡಿಗಳಿಗೂ ತಾಳಿ ತಂದುಕೊಡ್ತೀನಿ.. ನಾನು ಈಗಾಗಲೇ ಏಳುನೂರು ಪ್ರೇಮ ವಿವಾಹಗಳನ್ನು ಮಾಡಿಸಿದ್ದೇನೆ.. ಆ ಲಿಸ್ಟ್ ಗೆ ಈ ಮೂರು ಸೇರತ್ತೆ ಎಂದಿದ್ದರು.. ಈ ಬಗ್ಗೆ ವೈಷ್ಣವಿ ಅವರು ಮೊನ್ನೆ ನೇರವಾಗಿಯೇ ಪ್ರಶ್ನೆ ಮಾಡಿದ್ದರು..

ಸುಮ್ಮ ಸುಮ್ಮನೆ ಯಾರ ಬಗ್ಗೆನೂ ಆ ರೀತಿ‌ ಮಾತನಾಡಬಾರದು.. ನಾನು ಒಬ್ಬರ ಜೊತೆ ಮಾತನಾಡ್ತೀನಿ ಅಂತ ಅಂದರೆ ಅವರ ಜೊತೆ ಸಂಬಂಧ ಇದೆ ಅಂತಲ್ಲಾ.. ನಿಮಗೆ ಹೇಗೆ ಕುಟುಂಬ ಇದೆಯೋ ಅದೇ ರೀತಿ ಬೇರೆಯವರಿಗೂ ಕುಟುಂಬ ಇದೆ ಅನ್ನೋದು ನಿಮ್ಮ ಜ್ಞಾನದಲ್ಲಿ ಇರಬೇಕು ಎಂದಿದ್ದರು.. ಆದರೆ ಆ ತಕ್ಷಣ ಪ್ರತಿಕ್ರಿಯೆ ನೀಡಿದ್ದ ಚಂದ್ರಚೂಡ ಅವರು ನಾನು ಆ ರೀತಿ ಹೇಳೇ ಇಲ್ಲ.. ನಾನು ಮೂವರು ಜೊತೆಯಾಗಿದ್ದಾರೆ.. ಒಬ್ಬರಿಗೊಬ್ಬರು ನೆರಳಾಗಿದ್ದಾರೆ ಎಂದಿದ್ದೆ ಅಷ್ಟೇ.. ಬೇಕಿದ್ದರೆ ಹೊರಗೆ ಹೋದ ಬಳಿಕ ಮತ್ತೆ ಆ ವೀಡಿಯೋ ಹುಡುಕಿ‌ ನೋಡಿ.. ನಾನು ಆ ರೀತಿ ಹೇಳೋಕೆ ಚಾನ್ಸೇ ಇಲ್ಲ.. ಹೇಳಿದ್ದರೆ ನೀವ್ ಹೇಳಿದಾಗೆ ಕೇಳ್ತೀನಿ ಎಂದೆಲ್ಲಾ ಹೇಳಿದ್ದರು..

ಬಿಗ್ ಬಾಸ್ ಮನೆಯಲ್ಲಿ ಮಂಜು ದಿವ್ಯಾ ಹಾಗೂ ಅರವಿಂದ್ ದಿವ್ಯಾ ಉರುಡುಗ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು ಪ್ರೇಕ್ಷಕರಿಗೂ ಹಾಗೂ ಮನೆಯ ಸದಸ್ಯರಿಗೂ ಸ್ಪಷ್ಟವಾಗಿ ಕಾಣುತ್ತಿದೆ ನಿಜ.. ಆದರೆ ವೈಷ್ಣವಿ ಹಾಗೂ ರಘು ಇಬ್ಬರು ಒಂದೊಳ್ಳೆ ಸ್ನೇಹಿತರಾಗಿಯಷ್ಟೇ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ.. ರಘು ಅವರಿಗೆ ಈಗಾಗಲೇ ಮದುವೆ ಆಗಿದೆ ಅನ್ನೋ ಪರಿಜ್ಞಾನವೂ ಇಲ್ಲದೇ ಚಕ್ರವರ್ತಿ ಚಂದ್ರ ಚೂಡ ಅವರು ಮಾತನಾಡಿದ್ದರು.. ಇತ್ತ ಸ್ನೇಹವನ್ನು ಈ ರೀತಿ ತಾಳಿ ಅದು ಇದು ಅಂತ ಬಾಯಿಗೆ ಬಂದ ಹಾಗೆ ಮಾತನಾಡೋದು ಎಷ್ಟು ಸರಿ ಅನ್ನೋ ಮಾತು ವೈಷ್ಣವಿ ಅವರ ಬಾಯಲ್ಲಿ ಕೇಳಿ ಬಂದಿತ್ತು.. ಆದರೆ ಇತ್ತ ಚಕ್ರವರ್ತಿ ಅವರು ಮಾತ್ರ ನಾನು ಹೇಳೇ ಇಲ್ಲ ಎಂದು ವಾದಿಸಿದ್ದರು..

ಆದರೆ ಅವರು ಹೇಳೇ ಇಲ್ಲ ಎಂದ ಮರುದಿನವೇ ಸಾಮಾಜಿಕ ಜಾಲತಾಣದಲ್ಲಿ ಅವರು ಈ ಹಿಂದೆ ಮಾತನಾಡಿದ್ದ ವೀಡಿಯೋ ವೈರಲ್ ಆಗಿದೆ.‌ ಹೌದು ಸಾಕ್ಷಿ ಸಮೇತ ಚಕ್ರವರ್ತಿ ಚಂದ್ರ ಚೂಡ ಅವರು ಸಿಕ್ಕಿಬಿದ್ದಿದ್ದು ವೈಷ್ಣವಿ ರಘು ಸೇರಿದಂತೆ ಮೂವರು ಜೋಡಿಗಳಿಗೆ ತಾಳಿ ತಂದುಕೊಡ್ತೀನಿ ಎಂದಿರುವ ಮಾತು ಸತ್ಯವಾಗಿದೆ.. ಇನ್ನು ಸದ್ಯ ಮನೆಯಿಂದ ಹೊರ ಬಂದ ನಂತರ ಇದೇ ವೀಡಿಯೋವನ್ನು ವೈಷ್ಣವಿ ಚಕ್ರವರ್ತಿ ಅವರಿಗೆ ತೋರಿದರೆ ಅಥವಾ ಅಕಸ್ಮಾತ್ ಬಿಗ್ ಬಾಸ್ ಮನೆಯಲ್ಲಿಯೇ ಆ ವೀಡಿಯೋ ವನ್ನು ಪ್ಲೇ ಮಾಡುವ ಅವಕಾಶ ದೊರೆತರೆ ಆ ಮಾತು ನನ್ನ ಬಾಯಿಂದ ಬಂದೇ ಇಲ್ಲ ಎಂದಿದ್ದ ಚಕ್ರವರ್ತಿ ಚಂದ್ರಚೂಡ ಅವರಿಗೆ ಎಲ್ಲರ ಮುಂದೆ ಮುಜುಗರ ಆಗೋದಂತೂ ಸತ್ಯ.. ಯಾರೇ ಆಗಲಿ ಇಬ್ಬರು ವ್ಯಕ್ತಿಗಳ ಬಗ್ಗೆ ಅದರಲ್ಲಿಯೂ ಒಂದು ಹೆಣ್ಣಿನ ಬಗ್ಗೆ ಕೆಲವೊಬ್ಬರ ಜೊತೆ ಇಲ್ಲದ ಸಂಬಂಧಗಳನ್ನು‌ ಮಾತನಾಡುವ ಮುನ್ನ ಜಾಗ್ರತೆ ವಹಿಸಿದರೆ ಒಳ್ಳೆಯದು ಎನ್ನುವ ಮಾತು ಅಕ್ಷರಶಃ ಸತ್ಯ..