ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಚಂದನ್ ಹಾಗೂ ಕವಿತಾ ಗೌಡ.. ಫೋಟೋ ಗ್ಯಾಲರಿ ನೋಡಿ..

0 views

ಕಳೆದ ವರ್ಷ ಲಾಕ್‌ ಡೌನ್‌ ಸಮಯದಲ್ಲಿ ಸಾಲು ಸಾಲು ಕಲಾವಿದರು ಸ್ಯಾಂಡಲ್ವುಡ್‌ ಸೇರಿದಂತೆ ಕಿರುತೆರೆಯ ಬಹಳಷ್ಟು ಕಲಾವಿದರು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇಈಗ ಈ ವರ್ಷದ ಲಾಕ್‌ ಡೌನ್‌ ನಲ್ಲಿ ಸದ್ದಿಲ್ಲದೆ ಕನ್ನಡ ಕಿರುತೆರೆಯ ಜನಪ್ರಿಯ ಜೋಡಿ ನೂತನ ಜೀವನಕ್ಕೆ ಕಾಲಿಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಿಳಿಸಿ ಸಂತೋಷ ಹಂಚಿ ಕೊಂಡಿದ್ದಾರೆ.. ಹೌದು ಈ ವರ್ಷದ ಕೊರೊನಾ ಎರಡನ ಅಲೆಯ ಆತಂಕದ ನಡುವೆ ಕನ್ನಡ ಕಿರುತೆರೆಯ ಖ್ಯಾತ ಜೋಡಿ ಚಂದನ್ ಹಾಗೂ ಕವಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಮಾಸ್ಕ್ ಧರಿಸಿಯೇ ಚಂದನ್ ಕವಿತಾಗೆ ತಾಳಿ ಕಟ್ಟಿದ್ದು ಇದೀಗ ನೂತನ ಜೀವನದ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ‌ ಮನೆ ಮಾತಾಗಿದ್ದ ಚಂದು ಹಾಗೂ ಕವಿತಾ ಜೋಡಿ ಇದೀಗ ನಿಜ ಜೀವನದಲ್ಲಿಯೂ ಒಂದಾಗಿದ್ದಾರೆ.. ಕಳೆದ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಚಂದನ್ ಹಾಗೂ ಕವಿತಾ ಸರಳವಾಗಿಯಾದರೂ ಆಪ್ತರನ್ನು ಕರೆದು ಮದುವೆಯಾಗುವ ಯೋಜನೆಯಲ್ಲಿದ್ದರು.. ಆದರೆ ಕೊರೊನಾ ಕಾರಣದಿಂದಾಗಿ ಕೇವಲ ಕುಟುಂಬ ಸದಸ್ಯರ ನಡುವೆ ಮಾತ್ರ ಮದುವೆ ಸಮಾರಂಭ ನೆರವೇರಿದ್ದು ಲಾಕ್ ಡೌನ್ ಎಲ್ಲಾ ಮುಗಿದು ಪರಿಸ್ಥಿತಿ ಸುಧಾರಿಸಿದರೆ ಮುಂದೆ ಸ್ನೇಹಿತರು ಸಿನಿಮಾ ಮಂದಿ ಹಾಗೂ ಆಪ್ತರಿಗಾಗಿ ಅರತಕ್ಷತೆ ಕಾರ್ಯಕ್ರಮ ಆಯೋಜಿಸಲಿದ್ದಾರೆ ಎಂದು ತಿಳಿದುಬಂದಿದೆ..

ಸದ್ಯ ಇದೀಗ ಬೆಂಗಳೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಈ ಜೋಡಿ ನೂತನ ಜೀವನಕ್ಕೆ ಕಾಲಿಟ್ಟಿದ್ದು ಸ್ನೇಹಿತರು ಹಾಗೂ ಕಿರುತೆರೆ ಬೆಳ್ಳಿತೆರೆ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿಯೇ ಶುಭಶಯ ತಿಳಿಸಿ ನೂತನ ಜೀವನಕ್ಕೆ ಶುಭ ಕೋರಿದ್ದಾರೆ.. ಇನ್ನು ಕಳೆದ ಒಂದಷ್ಟು ವರ್ಷಗಳಿಂದ ಅಭಿಮಾನಿಗಳು ಈ ಜೋಡಿಯನ್ನು ನಿಜಜೀವನದಲ್ಲಿಯೂ ಒಂದಾಗಿ ಎಂದು ಬಹಳಷ್ಟು ಮನವಿ ಮಾಡಿದ್ದೂ ಇದೆ.. ಆದರೆ ಸ್ನೇಹಿತರಷ್ಟೇ ಆಗಿದ್ದ ಚಂದನ್ ಕವಿತಾ ಕಳೆದ 2020 ರಲ್ಲಿ ಬಹಳ ಆತ್ಮೀಯರಾದರು.. ಪ್ರವಾಸಗಳು ಟ್ರೆಕ್ಕಿಂಗ್ ಹೀಗೆ ಬಹಳಷ್ಟು ಸಮಯ ಒಟ್ಟಿಗೆ ಕಳೆದ ಬಳಿಕ ನಾವ್ಯಾಕೆ ಮದುವೆ ಆಗಬಾರದೆಂದು ಆಲೋಚಿಸಿ ಇಬ್ಬರು ಮದುವೆಯಾಗಲು ನಿರ್ಧಾರ ಮಾಡಿದರು..

ಇನ್ನು ಸ್ನೇಹಿತರಿಗಷ್ಟೇ ತಿಳಿದಿದ್ದ ಇವರಿಬ್ಬರ ಪ್ರೀತಿಯ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದು ಮಾಡುತ್ತಲೇ ಇತ್ತು.‌ ಆದರೆ ಈ ಬಗ್ಗೆ ಯಾವುದೇ ವಿಚಾರವನ್ನು ಬಹಿರಂಗವಾಗಿ ಹೇಳಿಕೊಳ್ಳದ ಚಂದನ್ ಕವಿತಾ ನಿಶ್ಚಿತಾರ್ಥದ ಹಿಂದಿನ ದಿನ ಬಹಿರಂಗ ಪಡಿಸಿದರು.. ಇಬ್ಬರೂ ಸಹ ಮದುವೆಯಾಗುತ್ತಿರುವುದಾಗಿ ತಿಳಿಸಿದರು.. ಏಪ್ರಿಲ್ ಒಂದನೇ ತಾರೀಕಿನಂದು ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದು ಸಾಲು ಸಾಲು ಫೋಟೋಗಳ ಜೊತೆಗೆ ಸಂತೋಷ ಹಂಚಿಕೊಂಡಿದ್ದರು..

ಸದ್ಯ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಲಾಕ್ ಡೌನ್ ಇರುವ ಕಾರಣ ಈಗಿನ ಟ್ರೆಂಡ್ ಪ್ರಕಾರ ಫೇಸ್ಬುಕ್ ಲೈವ್ ಮೂಲಕ ಅಭಿಮಾನಿಗಳೊಟ್ಟಿಗೆ ಸಂತೋಷ ಹಂಚಿಕೊಳ್ಳಬಹುದು.. ಅದೇನಾದರೂ ಆಗಲಿ ತೆರೆ ಮೇಲೆ ಸೂಪರ್ ಹಿಟ್ ಆಗಿದ್ದ ಜೋಡಿ ಈಇಗ ನಿಜ ಜೀವನದಲ್ಲಿಯೂ ಒಂದಾಗಿದ್ದು ಇಲ್ಲಿಯೂ ಹಿಟ್ ಆಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.. ಇನ್ನು ಮದುವೆಯಲ್ಲಿ ಎಲ್ಲಾ ನಿಯಮಗಳನ್ನು ಪಾಲಿಸಿದ್ದು ಮಾಸ್ಕ್‌ ಧರಿಸಿಯೇ ಚಂದನ್‌ ಹಾಗೂ ಕವಿತಾ ಮದುವೆ ಮಾಡಿಕೊಂಡಿದ್ದು ವಿಶೇಷ ರೀತಿಯಲ್ಲಿ ಜಾಗೃತಿ ಮೂಡಿಸಿದರೆನ್ನಬಹುದು..