ಹೊಟೆಲ್ ಉದ್ಯಮ ಆರಂಭಿಸಿದ ಬೆನ್ನಲ್ಲೇ ದಾಂಪತ್ಯ ಜೀವನಕ್ಕೆ ಚಂದನ್..

0 views

ಚಂದನ್ ಕುಮಾರ್.. ಕನ್ನಡ ಹಾಗೂ ತೆಲುಗು ಕಿರುತೆರೆಯ ಸ್ಟಾರ್ ನಟ ಹಾಗೂ ಕನ್ನಡ ಹಾಗೂ ತಮಿಳಿನ ಸಿನಿಮಾಗಳಲ್ಲಿಯೂ ಮಿಂಚಿದ ಹ್ಯಾಂಡ್ಸಮ್ ನಟನೂ ಆಗಿರುವ ಚಂದು.. ಸದ್ಯ ಬೆಂಗಳೂರಿನ ಸಹಕಾರನಗರದಲ್ಲಿ ದೊನ್ನೆ ಬಿರಿಯಾನಿ ಪ್ಯಾಲೆಸ್ ಹೊಟೆಲ್ ಉದ್ಯಮ ಆರಂಭಿಸಿ ಹೌಸ್ ಫುಲ್ ಸಂತೋಷದಲ್ಲಿದ್ದಾರೆ.. ಅಷ್ಟೇ ಅಲ್ಲದೇ  ಹೊಟೆಲ್ ಉದ್ಯಮ ಆರಂಭಿಸಿದ ಬೆನ್ನಲ್ಲೇ ನಟ ಚಂದನ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.. ಅಷ್ಟಕ್ಕೂ ಹುಡುಗಿ ಯಾರು ಎಂಬ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..

ಹೌದು ಪ್ಯಾಟೆ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಚಂದನ್ ನಂತರ ಹಿಂತಿರುಗಿ ನೋಡಿದ ಮಾತೇ ಇಲ್ಲ.. ಪ್ಯಾಟೆ ಮಂದಿ ಕಾಡಿಗ್ ಬಂದ್ರು ಶೋ ನಂತರ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ನಟಿಸಿ ಕನ್ನಡ ಕಿರುತೆರೆಯ ಸ್ಟಾರ್ ನಟನಾಗಿ ಗುರಿತಿಸಿಕೊಂಡರು.. ನಂತರ ಲಕ್ಷ್ಮೀ ಬಾರಮ್ಮ ಧಾರಾವಾಹಿ ಚಂದನ್ ಅವರಿಗೆ ನಟನಾ ಬದುಕಿಗೆ ದೊಡ್ಡದೊಂದು ಬ್ರೇಕ್ ನೀಡಿತು.. ಹೌದು ಈಗಲೂ ಲಕ್ಷ್ಮೀ ಬಾರಮ್ಮ ಚಂದನ್ ಎಂದೇ ಕರೆಯುವುದುಂಟು.. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಮೂರು ಮೂರು ಜನ ಚಂದನ್ ಗಳು ಬಂದರೂ ಸಹ ಮೂವರೂ ಪ್ರಖ್ಯಾತಿ ಪಡೆದು ಮನೆ ಮಾತಾಗಿದ್ದು ವಿಶೇಷ..

ಇನ್ನು ಲಕ್ಷ್ಮೀ ಬಾರಮ್ಮ ಧಾರಾವಾಹಿ ನಂತರ ಲವ್ ಯು ಆಲಿಯಾ.. ಬೇಂಗಳೂರು 13.. ಪ್ರೇಮ ಬರಹ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ‌ ಮಿಂಚಿದ ಚಂದನ್ ಮರಳಿ ಸರ್ವ ಮಂಗಳ ಮಾಂಗಲ್ಯ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಂಬ್ಯಾಕ್ ಮಾಡಿದರು.. ಅತ್ತ ತೆಲುಗಿನಲ್ಲಿ ಸಾವಿತ್ರಮ್ಮಾಗಾರಬ್ಬಾಯಿ ಧಾರಾವಾಹಿ‌ ಮೂಲಕ ತೆಲುಗಿನ ಕಿರುತೆರೆಗೂ‌ ಕಾಲಿಟ್ಟ ಚಂದನ್ ಅಲ್ಲಿಯೂ ಯಶಸ್ಸು ಪಡೆದರು..

ಸದ್ಯ ನಟನೆಯ ಜೊತೆಜೊತೆಯಲಿ ಉದ್ಯಮಿಯಾಗುವತ್ತ ಮನಸು ಮಾಡಿದ ಚಂದನ್ ಮೊನ್ನೆ ಮೊನ್ನೆಯಷ್ಟೇ ದೊನ್ನೆ ಬಿರಿಯಾನಿ ಪ್ಯಾಲೆಸ್ ಹೊಟೆಲ್ ಅನ್ನು ಬೆಂಗಳೂರಿನ ಸಹಕಾರ ನಗರದಲ್ಲಿ ಆರಂಭಿಸಿದರು.. ಹೌದು ಓದಿನಲ್ಲಿ ಇಂಜಿನಿಯರ್ ಆಗಿರುವ ಚಂದನ್ ನಟನೆಯನ್ನು ತಮ್ಮ ವೃತ್ತಿಯಾಗಿ ಮಾಡಿಕೊಂಡಿದ್ದರು.. ಇದೀಗ ಉದ್ಯಮಿಯಾಗಿದ್ದು ಸಿಕ್ಕಾಪಟ್ಟೆ ಸಂತೋಷದಲ್ಲಿದ್ದಾರೆ.. ಆಗಾಗ ಹೊಟೆಲ್ ನ ವೀಡಿಯೋಗಳನ್ನು ಹಂಚಿಕೊಳ್ಳುವ ಚಂದನ್ ವೀಡಿಯೀದಲ್ಲಿ ಹೊಟೆಲ್ ತುಂಬಾ ಜನ ತುಂಬಿ ಹೌಸ್ ಫುಲ್ ಆಗುತ್ತಿದ್ದು ಉದ್ಯಮಿಯಾಗಿಯೂ ಚಂದನ್ ಸಕ್ಸಸ್ ಆದರೆನ್ನಬಹುದು..

ಇನ್ನಿ ಚಂದನ್ ರ ಈ ಹೊಸ ಹೆಜ್ಜೆಗೆ ನಮ್ಮ ಹ್ಯಾಟ್ರಿಕ್ ಹೀರೋ ಶಿವಣ್ಣ ಸಾಥ್ ನೀಡಿದ್ದು ಖುದ್ದು ಅವರೇ ಆಗಮಿಸಿ ದೊನ್ನೆ ಬಿರಿಯಾನಿ ಪ್ಯಾಲೆಸ್ ಅನ್ನು ಉದ್ಘಾಟನೆ ಮಾಡಿದ್ದರು.. ವಸಿಷ್ಠ ಸಿಂಹ ಹಾಗೂ ಹಿರಿಯ ನಟಿ ಹಾಗೂ ಬಿಗ್ ಬಾಸ್ ನ ಸಹ ಸ್ಪರ್ಧಿಯಾಗಿದ್ದ ಶೃತಿ ಅವರೂ ಕೂಡ ಆಗಮಿಸಿ ಚಂದನ್ ನ ಹೊಸ ಉದ್ಯಮಕ್ಕೆ ಶುಭ ಕೋರಿದ್ದರು..

ಇನ್ನು ಸದ್ಯ ಹೊಟೆಲ್ ಉದ್ಯಮ ಆರಂಭಿಸಿದ ಬೆನ್ನಲ್ಲೇ ಇದೀಗ ಚಂದನ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.. ಹೌದು ಕಳೆದ ವರ್ಷ ಖುದ್ದು ಚಂದನ್ ಅವರೇ ಅಮ್ಮ ನೋಡಿರುವ ಮೈಸೂರು ಮೂಲದ ಹುಡುಗಿಯನ್ನು ಮದುವೆಯಾಗಲಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.. ಆದರೆ ಆನಂತರ ಆ ಬಗ್ಗೆ ಎಲ್ಲಿಯೂ ಸುದ್ದಿ ಕೇಳಿ ಬರಲಿಲ್ಲ.. ಅದು ಅಲ್ಲಿಗೆ ನಿಂತಿತು ಎನ್ನುವ ಮಾತು ಕೇಳಿಬಂತು.. ಆದರೆ ಆನಂತರ ಚಂದನ್ ಜೊತೆಗೆ ಕೇಳಿ ಬಂದ ಹೆಸರೇ ಕವಿತಾ ಗೌಡ..

ಹೌದು ಲಕ್ಷ್ಮೀ ಬಾರಮ್ಮ ಧಾರಾವಾಹಿ‌ ಮೂಲಕ ಹಿಟ್ ಆದ ಚಂದು ಚಿನ್ನು ಜೋಡಿ.. ಅಲಿಯಾಸ್ ಚಂದನ್ ಕವಿತಾ ಜೋಡಿ ನಿಜ ಜೀವನದಲ್ಲಿಯೂ ಒಂದಾದರೆ ಎಷ್ಟು ಚೆಂದವೆಂದು ಸಾವಿರಾರು ಅಭಿಮಾನಿಗಳು ಆಶಿಸಿದ್ದುಂಟು.. ಅದೇ ರೀತಿ ಇತ್ತೀಚೆಗೆ ಚಂದನ್ ಹಾಗೂ ಕವಿತಾ ಒಟ್ಟೊಟ್ಟಿಗೆ ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದವು.. ಆದರೆ ಈ ಬಗ್ಗೆ ಚಂದನ್ ಹಾಗೂ ಕವಿತಾ ಮಾತ್ರ ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ.. ಬದಲಿಗೆ ನಾನು ಇನ್ನಷ್ಟು ಕನ್ಫ್ಯೂಸ್ ಮಾಡುತ್ತೇನೆಂದು ಕವಿತಾ ಜೊತೆಗೆ ಬಹಳ ಕ್ಲೋಸ್ ಆಗಿರುವ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಚಮಕ್ ನೀಡುವುದರ ಜೊತೆಗೆ ಕುತೂಹಲವನ್ನೂ ಸಹ ಹೆಚ್ಚು ಮಾಡುತ್ತಿದ್ದರು.. ಇನ್ನು ಚಂದನ್ ಹಾಗೂ ಕವಿತಾರ ಫೋಟೋಗಳು ಲಕ್ಷ ಗಟ್ಟಲೆ ಲೈಕ್ಸ್ ಪಡೆದದ್ದೂ ಉಂಟು..

ಇನ್ನು ಸದ್ಯ ಹೊಟೆಲ್ ಉದ್ಘಾಟನೆಯ ದಿನದಂದು ಕವಿತಾ ಜೊತೆಗಿನ ಫೋಟೋ ಹಂಚಿಕೊಂಡಿರುವ ಚಂದನ್.. ನನಗೆ ನೀನು ನೀಡುತ್ತಿರುವ ನೈತಿಕ ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ.. ಅಷ್ಟೇ ಅಲ್ಲದೇ ಕೆಜಿಎಫ್ ನ ರಾಕಿ ಭಾಯ್ ಸ್ಟೈಲ್ ನಲ್ಲಿ‌ ಸಿನ್ಸ್ 2020 ಎಂದು ಬರೆದಿದ್ದು ಚಂದನ್ ಹಾಗೂ ಕವಿತಾರ ಲವ್ ಶುರುವಾದ ವರ್ಷವಾದ್ದರಿಂದ ಸಿನ್ಸ್ 2020 ಎಂದು ಹಾಕಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು..

ಅಷ್ಟೇ ಅಲ್ಲದೇ ಚಂದನ್ ಹಾಗೂ ಕವಿತಾ ಜೋಡಿ ಹೇಳಿ ಮಾಡಿಸಿದ ಜೋಡಿಯಾಗಿದ್ದು ದಯವಿಟ್ಟು ನೀವಿಬ್ಬರು ಮದುವೆಯಾಗಿ ಎಂದು ಅಭಿಮಾನಿಗಳು ಪ್ರತಿ‌ ಫೋಟೋದಲ್ಲಿಯೂ ಕಮೆಂಟ್ ಮಾಡಿತ್ತಿರುವುದು ವಿಶೇಷ.. ಇನ್ನು ಚಂದನ್ ಕಲ್ಯಾಣದ ವಿಚಾರಕ್ಕೆ ಬಂದರೆ ಮುಂದಿನ ವರ್ಷ ಚಂದನ್ ಮದುವೆಯಾಗಲಿದ್ದಾರೆ ಎಂಬ ವಿಚಾರ ತಿಳಿದುಬಂದಿದ್ದು ಹುಡುಗಿ ಕವಿತಾನೇ ಇರಬಹುದು ಎನ್ನಲಾಗುತ್ತಿದೆ.. ಅವರೇ ಆಗಿದ್ದರೆ ಕಿರುತೆರೆಯ ಮತ್ತೊಂದು ತಾರಾ ಜೋಡಿಯ ವಿವಾಹ 2021 ರಲ್ಲಿ ನಡೆಯಲಿದ್ದು ಸ್ಟಾರ್ ಕಪಲ್ ಎನಿಸಿಕೊಳ್ಳುವುದು ಕನ್ಫರ್ಮ್ ಎನ್ನಬಹುದು..