ಮದುವೆಗಾಗಿ ಸೀರಿಯಲ್ ಬಿಟ್ಟ ಚಂದನ್.. ಅಧಿಕೃತವಾಗಿ ಮದುವೆ ವಿಚಾರ ತಿಳಿಸಿದ ನಟ.. ಹುಡುಗಿ ಯಾರು ಗೊತ್ತಾ?

0 views

ಕಿರುತೆರೆಯ ಖ್ಯಾತ ನಟ ಚಂದನ್ ಸದ್ಯ ಮದುವೆಯಾಗುವ ಸಲುವಾಗಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇದ್ದ ಕಿರುತೆರೆ ನಟ ಚಂದನ್ ಅವರ ಮದುವೆ ವಿಚಾರಕ್ಕೀಗ ತೆರೆ ಬಿದ್ದಿದೆ.‌ ಸದ್ಯ ಖುದ್ದು ಚಂದನ್ ಅವರೇ ಮದುವೆ ವಿಚಾರವಾಗಿ ಅಧಿಕೃತವಾಗಿ ಮಾದ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ..

ಹೌದು ಮೂಲತಃ ಮೈಸೂರಿನವರಾದ ಚಂದನ್ ಇಂಜಿನಿಯರಿಂಗ್ ಮುಗಿಸಿ ಬಳಿಕ ಪ್ಯಾಟೆ ಮಂದಿ ಕಾಡಿಗ್ ಬಂದ್ರು ಶೋ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ನೀಡಿದ ಚಂದನ್ ನಂತರ ರಾಧಾ ಕಲ್ಯಾಣ ಧಾರಾವಾಹಿ ಮೂಲಕ ಮನೆ ಮಾತಾದರು.. ನಂತರದ ದಿನಗಳಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿ ಚಂದನ್ ಅವರಿಗೆ ನಿರೀಕ್ಷೆಗೂ ಮೀರಿ ಯಶಸ್ಸನ್ನು ತಂದುಕೊಟ್ಟಿತು.. ನಂತರ ಧಾರಾವಾಹಿಗಳು ಸಿನಿಮಾ ಅಂತ ಬ್ಯುಸಿಯಾದ ಚಂದನ್ ಸದ್ಯ ತೆಲುಗಿನ ಸಾವಿತ್ರಮ್ಮಾಗಾರು ಅಬ್ಬಾಯಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು.. ಆದರೀಗ ಮದುವೆಯ ಸಲುವಾಗಿ ಆ ಧಾರಾವಾಹಿಯಿಂದಲೂ ಹೊರ ಬಂದಿದ್ದಾರೆ..

ಹೌದು ಈ ಬಗ್ಗೆ ಮಾದ್ಯಮವೊಂದಕ್ಕೆ ಹೇಳಿಕೆ ನೀಡಿರುವ ಚಂದನ್ ಖಾಸಗಿ ಜೀವನಕ್ಕೆ ಗಮನ ನೀಡಬೇಕಿರುವುದರಿಂದ ಹಾಗೂ ಮದುವೆಯ ನಿರ್ಧಾರ ಮಾಡಿದ್ದು ಅದೇ ಕಾರಣಕ್ಕಾಗಿ ಧಾರಾವಾಹಿಯಿಂದ ಹೊರ ಬಂದಿದ್ದೇನೆ.. ಈ ಬಗ್ಗೆ ಈ ಮೊದಲೇ ಧಾರಾವಾಹಿ ತಂಡಕ್ಕೆ ತಿಳಿಸಿದ್ದೆ ಅದಕ್ಕಾಗಿಯೇ ಕತೆಯಲ್ಲಿ ಬದಲಾವಣೆ ತಂದುಕೊಂಡಿದ್ದಾರೆ.. ಮೊನ್ನೆಯಷ್ಟೇ ಕೊನೆಯದಾಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ ಎಂದಿದ್ದಾರೆ..

ಕೆಲವೇ ತಿಂಗಳ ಹಿಂದೆ ದೊನ್ನೆ ಬಿರಿಯಾನಿ ಪ್ಯಾಲೆಸ್ ಹೊಟೆಲ್ ಆರಂಭಿಸುವ ಮೂಲಕ ಹೊಟೆಲ್ ಉದ್ಯಮ ಶುರು ಮಾಡಿದ್ದ ಚಂದನ್ ಸದ್ಯ ಮದುವೆ ನಂತರ ಹೊಟೆಲ್ ಉದ್ಯಮವನ್ನು ಇನ್ನೂ ವಿಸ್ತರಿಸುವ ಪ್ಲಾನ್ ನಲ್ಲಿದ್ದಾರಂತೆ..

ಇನ್ನು ಮದುವೆಯಾಗುವ ಹುಡುಗಿ ಬಗ್ಗೆ ಮಾತನಾಡಿದ ಚಂದನ್.. ಅದಾಗಲೇ ಬಹಳಷ್ಟು ಬಾರಿ ಚಂದನ್ ಕವಿತಾ ಮದುವೆ ಬಗ್ಗೆ ಸುದ್ದಿಯಾಗಿದ್ದರ ಬಗ್ಗೆ ಮಾದ್ಯಮದವರು ಕೇಳಲಾಗಿ.. ಅದನ್ನು ಈಗಲೇ ಹೇಳೋದಿಲ್ಲ.. ಹೇಳಿದರೆ ದೊಡ್ಡ ಸುದ್ದಿ ಆಗಿಬಿಡುತ್ತದೆ ಎಂದರು.. ಅಷ್ಟೇ ಅಲ್ಲದೇ ಹುಡುಗಿ ಕವಿತಾ ಅಲ್ಲಾ ಎಂಬ ಮಾತನ್ನೂ ಸಹ ಹೇಳಲಿಲ್ಲ..

ಈ ಮುನ್ನವೂ ಕವಿತಾ ಚಂದನ್ ರ ಆತ್ಮೀಯವಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಆಗಾಗ ಸುದ್ದಿಯಾಗುತ್ತಲೇ ಜೋಡಿ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದು.. ತಾವು ಮದುವೆಯಾಗುತ್ತಿರುವ ಹುಡುಗಿ ಕವಿತಾ ಅಲ್ಲಾ ಎಂಬ ಮಾತನ್ನು ಹೇಳದ ಕಾರಣ ಚಂದನ್ ಕವಿತಾರನ್ನೇ ಮದುವೆಯಾಗಲಿದ್ದಾರೆ ಎಂಬ ಮಾತಿಗೆ ಮತ್ತಷ್ಟು ಪುಷ್ಟಿ ನೀಡಿದೆ..

ಅಷ್ಟೇ ಅಲ್ಲದೆ ಕಳೆದ ಫೆಬ್ರವರಿ ಹದಿನಾಲ್ಕರಂದು ನಡೆದ ಕೃಷ್ಣ ಹಾಗೂ ಮಿಲನ ಅವರ ಮದುವೆ ಸಮಾರಂಭದಲ್ಲಿಯೂ ಸಹ ಚಂದನ್ ಹಾಗೂ ಕವಿತಾ ಒಟ್ಟಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.. ಇನ್ನು ಅಭಿಮಾನಿಗಳು ಅದಾಗಲೇ ಶುಭಾಶಯವನ್ನು ತಿಳಿಸಿದ್ದು ನಿಮ್ಮಿಬ್ಬರ ಜೋಡಿ ಸೂಪರ್ ಆದಷ್ಟು ಬೇಗ ಮದುವೆಯಾಗಿ ಎಂದು ಕಮೆಂಟ್ ಮೂಲಕ ಶುಭ ಕೋರಿದ್ದಾರೆ..