ಅನುಪಮಾ ಹಾಗೂ ಇಷಿತಾ ಜೊತೆ ಗೋವಾಗೆ ಎಂಜಾಯ್‌ ಮಾಡಲು ಹೋದ ನೇಹಾ ಗೌಡ.. ಆದರೆ ಏನಾಗಿದೆ ನೋಡಿ..

0 views

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಹಾಗೂ ಅದೇ ಸಮಕಾಲಿನ‌ ಸಾಕಷ್ಟು ಧಾರಾವಾಹಿಗಳ ಕಲಾವಿದರು ಈಗಲೂ ಸಹ ಜನರ ಮನಸ್ಸಿಗೆ ಬಹಳ ಹತ್ತಿರ ಎನ್ನಬಹುದು.. ಆ ಧಾರಾವಾಹಿಯ ಕಲಾವಿದರುಗಳ ವಿಚಾರಗಳು ವ್ಯಯಕ್ತಿಕ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.. ಇನ್ನು ಅದೇ ರೀತಿ‌ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಖ್ಯಾತಿ ಪಡೆದಿದ್ದ ನಟಿಯರಲ್ಲಿ ಒಬ್ಬರು ನೇಹಾ ಗೌಡ.. ಈಗಲೂ ಸಹ ಬೊಂಬೆ ಎಂದೇ ಕೆಲ ಅಭಿಮಾನಿಗಳು ಕರೆಯೋದುಂಟು.. ಚಿನ್ನು ಹಾಗೂ ಬೊಂಬೆ ಜೋಡಿಯ ಜೊತೆಗೆ ಚಂದು ಸಹ ಆಗ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು.. ಇನ್ನೂ ನೇಹಾ ಗೌಡ ಅವರ ವಿಚಾರಕ್ಕೆ ಬಂದರೆ ಧಾರಾವಾಹಿ ನಡೆಯುತ್ತಿರುವಾಗಲೇ ಚಂದು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಧಾರಾವಾಹಿಯ ಚಂದನ್ ಅಲ್ಲ.. ಬದಲಿಗೆ ತಮ್ಮ ಬಾಲ್ಯದ ಗೆಳೆಯ ಚಂದನ್ ನನ್ನು ಕಳೆದ ಇಪ್ಪತ್ತು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು.. ಹೌದು ಚಂದನ್ ಹಾಗೂ ನೇಹಾ ಜೋಡಿ ನಿಜಕ್ಕೂ ಹೇಳಿ ಮಾಡಿಸಿದ ಜೋಡಿಯಾಗಿತ್ತು..

ಇತ್ತ ಚಿಕ್ಕ ವಯಸ್ಸಿನಿಂದಲೇ ಪ್ರೀತಿಸುತ್ತಿದ್ದರೂ ಸಹ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳದೇ ಜೀವನದಲ್ಲಿ ಒಳ್ಳೆಯ ರೀತಿ ಸೆಟಲ್ ಆಗಬೇಕೆಂದು ನಿರ್ಧರಿಸಿ ಚಂದು ಚೆನ್ನಾಗಿ ಓದಿ ವಿದೇಶಕ್ಕೆ ತೆರಳಿ ಅಲ್ಲಿ ಕೆಲಸಕ್ಕೆ ಸೇರಿಕೊಂಡು ಚೆನ್ನಾಗಿ ಸಂಪಾದಿಸಿ ಜೀವನದಲ್ಲಿ ಸೆಟಲ್ ಆಗಿ ನಂತರವೇ ಭಾರತಕ್ಕೆ ಬಂದು ನೇಹಾರನ್ನು ಮದುವೆಯಾಗಿದ್ದರು.. ಇತ್ತ ನೇಹಾ ಕೂಡ ಅದಾಗಳೆ ಕಿರುತೆರೆಯಲ್ಲಿ ತಮ್ಮ ವೃತ್ತಿ ಬದುಕನ್ನು ಕಟ್ಟಿಕೊಂಡು ಹೆಸರು ಮಾಡಿದ್ದರು.. ಇನ್ನೂ ಕೊರೊನಾ ಬಂದ ನಂತರ ಬೆಂಗಳೂರಿನಲ್ಲಿಯೇ ಉಳಿದ ಚಂದನ್.. ನೇಹಾ ಜೊತೆ ರಾಜಾ ರಾಣಿ ಶೋನಲ್ಲಿಯೂ ಕಾಣಿಸಿಕೊಂಡರು.. ಇವರಿಬ್ಬರ ಜೋಡಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು.. ಅವರ ಇಪ್ಪತ್ತೈದು ವರ್ಷದ ಪ್ರೇಮ ಕತೆ ಜನರಿಗೆ ಬಹಳ ಇಷ್ಟವಾಗಿತ್ತು.. ಯಾರನ್ನೇ ಕೇಳಿದರೂ ನಮ್ಮ ನೆಚ್ಚಿನ ಜೋಡಿ ಚಂದನ್ ನೇಹಾ ಎನ್ನುತ್ತಿದ್ದರು..

ಇತ್ತ ರಾಜಾ ರಾಣಿ ಶೋನ ಗೆಲುವಿನ ಕಿರೀಟವನ್ನೂ ಸಹ ಇದೇ ಜೋಡಿ ತಮ್ಮ ಮುಡಿಗೇರಿಸಿಕೊಂಡಿತ್ತು.. ರಾಜ್ಯಾದ್ಯಂತ ಅಭಿಮಾನಿಗಳನ್ನು ಹೊಂದಿದರು.. ನಂತರ ತಮ್ಮ ವಿದೇಶದ ಕೆಲಸವನ್ನು ಬಿಟ್ಟು ಇಲ್ಲಿಯೇ ನೇಹಾಗಾಗಿ ಸಮಯ ನೀಡಲು ಬೆಂಗಳೂರಿನಲ್ಲಿಯೇ ಸೆಟಲ್ ಆದರು.. ನಂತರ ಕಿರುತೆರೆಯಲ್ಲಿ ಅದಗಾಲೇ ಗುರುತಿಸಿಕೊಂಡಿದ್ದ ಚಂದನ್ ಗೆ ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿಯೂ ಅವಕಾಶ ಸಿಕ್ಕು ಸಧ್ಯ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಬ್ಯುಸಿ ಆಗಿದ್ದಾರೆ.. ಇತ್ತ ನೇಹಾ ಗೌಡ ಕೂಡ ತಮಿಳಿನ ಕಿರುತೆರೆಗೆ ಕಾಲಿಟ್ಟಿದ್ದು ಅಲ್ಲಿನ ಧಾರಾವಾಹಿಯಲ್ಲಿ ತೊಡಗಿಸಿಕೊಂಡಿದ್ದು ಅಲ್ಲಿಯೂ ಹೆಸರು ಹಣ ಎಲ್ಲವನ್ನೂ ಗಳಿಸುತ್ತಿದ್ದಾರೆ.. ಇನ್ನು ಚಂದನ್ ಹಾಗೂ ನೇಹಾ ಅವರದ್ದು ಬಹಳ ಜೋವಿಯಲ್ ಜೋಡಿಯೂ ಹೌದು.. ಎಷ್ಟೇ ದೂರವಿದ್ದರೂ ಪರಸ್ಪರ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಒಬ್ಬರ ಕೆರಿಯರ್ ಗೆ ಮತ್ತೊಬ್ಬರು ಬೆಂಬಲವಾಗಿ ನಿಂತು ಜೀವನ ಮುನ್ನಡೆಸುತ್ತಿರುವ ಜೋಡಿ ಇದು..

ಇಅಷ್ಟೇ ಪರಸ್ಪರ ಕಾಲೆಳೆಯುವ ಜೋಡಿಯೂ ಆಗಿದ್ದು ಬೇರೆ ಯಾವುದೇ ಸಣ್ಣ ಸಣ್ಣ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ಸಂತೋಷವಾಗಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆನ್ನಬಹುದು.. ಇನ್ನು ಇತ್ತ ಮೊನ್ನೆ ಮೊನ್ನೆಯಷ್ಟೇ ನೇಹಾ ಗೌಡ ಚಂದನ್ ನನ್ನು ಬಿಟ್ಟು ಅನುಪಮಾ ಗೌಡ ಹಾಗೂ ಇಶಿತಾ ಜೊತೆ ಗೋವಾ ಪ್ರವಾಸಕ್ಕೆ ತೆರಳಿದ್ದು ಗೋ ಗೋ ಗೋವಾ ಗರ್ಲ್ಸ್ ಎಂದು ಶೀರ್ಷಿಕೆ ಕೊಟ್ಟು ಪ್ರತಿದಿನವೂ ತಾವು ಗೋವಾದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು ಒಂದು ರೀತಿ ಪತಿಯನ್ನು ಕಾಡಿಸಿದ್ದೂ ಉಂಟು.. ನಾವು ಬಹಳ ಎಂಜಾಯ್ ಮಾಡುತ್ತಿದ್ದೇವೆ.. ನೀವೆಲ್ಲಾ ಪಾಪ ಬೆಂಗಳೂರಿನಲ್ಲಿ ಕೆಲಸದಲ್ಲಿ ತೊಡಗಿದ್ದೀರಾ.. ನಮ್ಮ ಲೈಫ್ ಸೂಪರ್ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡು ಅನುಪಮಾ ಹಾಗೂ ಇಷಿತಾರನ್ನು ಟ್ಯಾಗ್ ಮಾಡಿ ಒಂದು ರೀತಿ ಚಂದನ್ ಗೆ ತಮಾಷೆ ಮಾಡಲು ಪ್ರಯತ್ನ ಪಟ್ಟಂತೆ ಕಂಡಿತ್ತು..

ಆದರೆ ನೇಹಾ ಅಂದುಕೊಂಡದ್ದೇ ಬೇರೆ.‌. ಇಲ್ಲಿ ಆಗಿದ್ದೇ ಬೇರೆ.. ಹೌದು ನೇಹಾ ತಾವು ಇಲ್ಲದಿರುವ ಕಾರಣ ಚಂದನ್ ಬಹಳ ಬೇಸರವಾಗಿರುತ್ತಾರೆ ಎಂದುಕೊಂಡು ಗೋವಾದಲ್ಲಿ ಎಂಜಾಯ್ ಮಾಡುತ್ತಿದ್ದರು.. ಆದರೆ ಇತ್ತ ಚಂದನ್ ಮಾತ್ರ ತನ್ನ ಮಡದಿ ನೇಹಾಗೆ ಟಾಂಗ್ ಕೊಡುವ ರೀತಿಯಲ್ಲಿ ಇತ್ತ ನೇಹಾ ಅವರ ಅಕ್ಕ ಸೋನು ಗೌಡ ಹಾಗೂ ಇನ್ನು ಇಬ್ಬರು ಆತ್ಮೀಯ ಸ್ನೇಹಿತರ ಜೊತೆ ಮಂಗಳೂ ಚಿಕ್ಕ‌ಮಗಳೂರು ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ ಅಂತ ಟ್ರಿಪ್ ಮಾಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.. ಹೌದು ಅತ್ತ ಮಡದಿ ಗೋವಾದಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮಾಡುತ್ತಿದ್ದರೆ ಇತ್ತ ಚಂದನ್ ಮಾತ್ರ ನೇಹಾ ಅವರ ಅಕ್ಕ ಸೋನು ಗೌಡ ಹಾಗೂ ಸ್ನೇಹಿತರ ಜೊತೆ ದಕ್ಷಿಣ ಕರ್ನಾಟಕ ಟ್ರಿಪ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತಾವು ಪ್ರವಾಸದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಹಾಕಿ ನೇಹಾಗೆ ತಮಾಷೆಗಾಗಿ ಟಾಂಗ್ ನೀಡುತ್ತಿದ್ದಾರೆ..

ತಮಾಷೆಯನ್ನು ಹೊರತು ಪಡಿಸಿ ನೋಡುವುದಾದರೆ ನಿಜಕ್ಕೂ ಈ ಜೋಡಿಯ ನಡುವಿನ ಪ್ರಬುದ್ಧತೆ ಮೆಚ್ಚಿಕೊಳ್ಳಲೇ ಬೇಕು.. ಪರಸ್ಪರ ಒಬ್ಬರಿಗೊಬ್ಬರು ವೃತ್ತಿ ಜೀವನವನ್ನು ಬೆಂಬಲಿಸುತ್ತಾ ಅವರದ್ದೇ ಆದ ವ್ಯಯಕ್ತಿಕ ಸಮಯವನ್ನೂ ಸಹ ನೀಡುತ್ತಾ.. ಅವರವರ ಸ್ನೇಹಿತರ ಜೊತೆ ಸಮಯ ಕಳೆಯಲು ಸಹ ಅವಕಾಶ ಮಾಡಿಕೊಳ್ಳುತ್ತಾ ಜೀವನವನ್ನು‌ ನಿಜವಾದ ರೀತಿಯಲ್ಲಿ ಜೀವಿಸುತ್ತಿದ್ದಾರೆನ್ನಬಹುದು.. ದಿನ ಬೆಳಗೆದ್ದರೆ ವರದಕ್ಷಿಣೆಗಾಗಿ ಹೆಂಡತಿಯನ್ನು ಅದು ಮಾಡಿದ್ರು ಇದು ಮಾಡಿದ್ರು.. ಅಥವಾ ಗಂಡನನ್ನು ಬಿಟ್ಟು ಹೆಂಡತಿ ಮತ್ತೊಬ್ಬಮ ಜೊತೆ ಹೋದಳು.. ಇಂತಹುದೇ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುವಾಗ ಈ ರೀತಿ ಪ್ರೀತಿಸಿ ಬದುಕಿನಲ್ಲಿ ಸೆಟಲ್ ಆಗಿ ಪ್ರೀತಿಸಿದವರನ್ನೇ ಮದುವೆಯಾಗಿ ಇದೀಗ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತು ಅಷ್ಟೇ ಅಲ್ಲದೇ ಅವರದ್ದೇ ಆದ ಪರ್ಸನಲ್ ಸ್ಪೇಸ್ ಕೊಟ್ಟು ಸಂತೋಷವಾಗುರುವ ಈ ಜೋಡಿಯ ಪ್ರಬುದ್ಧ ಪ್ರೀತಿ ನಿಜಕ್ಕೂ‌ಮನಸ್ಸಿಗೆ ಬಹಳ ಸಂತೋಷವನ್ನುಂಟು ಮಾಡುತ್ತದೆ.. ಈ ಜೋಡಿ ನೂರ್ಕಾಲ ಹೀಗೆ ಸಂತೋಷವಾಗಿರುವಂತಾಗಲಿ..