ಆ ಒಂದು ಕಾರಣಕ್ಕಾಗಿ ಲಕ್ಷಾಂತರ ರೂಪಾಯಿ ಬಿಟ್ಟ ಚಂದನ್.. ಮಾಡಿರುವ ಕೆಲಸ ನೋಡಿ..

0 views

ಚಂದನ್ ಹಾಗೂ ನೇಹಾ ಜೋಡಿ ಸಧ್ಯ ರಾಜಾ ರಾಣಿ ಶೋ ಮೂಲಕ ಜನರ ಮನಗೆದ್ದು ಕೊನೆಗೆ ಸೀಸನ್ ನ ರಾಜಾ ರಾಣಿ ಪಟ್ಟವನ್ನೂ ಸಹ ಪಡೆದು ವಿಜೇತರಾದ ಚಂದನ್ ನೇಹಾ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.. ಅದರಲ್ಲೂ ಪತ್ನಿ ನೇಹಾಗಾಗಿ ಚಂದನ್ ಮಾಡಿರುವ ಕೆಲಸ ನೋಡಿದರೆ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುವುದು.. ಹೌದು ಸಧ್ಯ ರಾಜಾ ರಾಣಿ ಶೋ ಗೆದ್ದ ನಂತರ ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿಯೂ ಭಾಗವಹಿಸುತ್ತಿರುವ ಚಂದನ್ ತನ್ನ ಪತ್ನಿಯ ವಿಚಾರದಲ್ಲಿ ಬಹಳ ಭಾವುಕರಾಗುವುದು ಎಲ್ಲರಿಗೂ ತಿಳಿದೇ ಇದೆ.. ಅದೇ ನೇಹಾಗಾಗಿ ಚಂದನ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.. ಹೌದು ನೇಹಾ ಗೌಡ.. ಕನ್ನಡ ಕಿರುತೆರೆಯ ಖ್ಯಾತ ನಟಿ.. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸತತ ಎಂಟು ವರ್ಷಗಳ ಕಾಲ ಬೊಂಬೆಯಾಗಿ ಜನರ ಮನಸ್ಸಿಗೆ ಹತ್ತಿರವಾಗಿದ್ದ ನೇಹಾರನ್ನು ಕಿರುತೆರೆ ಪ್ರೇಕ್ಷಕರು ಬಹಳಷ್ಟು ಇಷ್ಟ ಪಡುತ್ತಿದ್ದರು..

ಲಚ್ಚಿ ಹಾಗೂ ಬೊಂಬೆ ಇಬ್ಬರನ್ನೂ ಸಹ ತಮ್ಮ ಮನೆಯ ಮಕ್ಕಳಂತೆ ಕಾಣುತ್ತಿದ್ದರು.. ಇನ್ನು ಎರಡು ವರ್ಷದ ಹಿಂದೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮುಗಿದ ಬಳಿಕ ನೇಹಾ ಮತ್ತೆ ಯಾವುದೇ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲಿಲ್ಲ.. ತಮಿಳು ಕಿರುತೆರೆಗೆ ಕಾಲಿಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತಾದರೂ ನಂತರ ಆ ಬಗ್ಗೆ ಎಲ್ಲಿಯೂ ಸುದ್ದಿಯಾಗಲಿಲ್ಲ.. ಇನ್ನು ಕೆಲ ತಿಂಗಳ ಬ್ರೇಕ್ ನ ನಂತರ ಮತ್ತೆ ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಹೊಸ ಶೋ ವೊಂದರ ಸ್ಪರ್ಧಿಯಾಗಿ ಬೊಂಬೆ ಕಾಲಿಟ್ಟರು.. ಅದರಲ್ಲೂ ತಮ್ಮ ಗಂಡ ಚಂದನ್ ಜೊತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದು ಜೋಡಿ ದೊಡ್ಡ ಮಟ್ಟದಲ್ಲಿ ಇಷ್ಟವಾಯಿತು.. ಹೌದು ರಾಜಾರಾಣಿ ಶೋ ಮೂಲಕ ಕಿರುತೆರೆಗೆ ಮತ್ತೆ ಕಂಬ್ಯಾಕ್ ಮಾಡಿದ ನೇಹಾ ಗೌಡ ಆ ಶೋ ಜರ್ನಿ ಉದ್ದಕ್ಕೂ ಜನರಿಗೆ ಇಷ್ಟವಾಗುತ್ತಲೇ ಬಂದರು.. ಬಹಳಷ್ಟು ಜನರು ತಮ್ಮ ಮೆಚ್ಚಿನ ಜೋಡಿ ಚಂದನ್ ನೇಹಾ.. ಇದ್ದರೆ ಅವರಂತೆ ಇರಬೇಕು ಎಂದಿದ್ದೂ ಉಂಟು..

ಇನ್ನು ಇತ್ತ ಸಂಕೋಚ ಸ್ವಭಾವದ ಚಂದನ್ ತನ್ನ ಪತ್ನಿಗಾಗಿ ಶೋ ಗೆ ಕಾಲಿಟ್ಟು ಸಕ್ಸಸ್ ಕಂಡರು.. ಇದೀಗ ಮತ್ತೊಂದು ಶೋನಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.. ಆದರೆ ಈ ನಡುವೆ ಚಂದನ್ ತನ್ನ ಪತ್ನಿಗಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.. ಹೌದು ಎಲ್ಲರಿಗೂ ತಿಳಿದಂತೆ ಚಂದನ್ ಹಾಗೂ ನೇಹಾ ಕಳೆದ ಇಪ್ಪತ್ತೈದು ವರ್ಷಗಳಿಂದ ಪ್ರೀತಿಸಿದ ಜೋಡಿ.‌. ನೇಹಾರನ್ನು ಮದುವೆಯಾಗುವ ಸಲುವಾಗಿ.. ಮೊದಲು ತಮ್ಮ ಜೀವನದಲ್ಲಿ ಸೆಟಲ್ ಆಗಬೇಕು ಎಂಬ ಕಾರಣಕ್ಕೆ ಚಿಕ್ಕ ವಯಸ್ಸಿಗೆ ಹೊರ ದೇಶಕ್ಕೆ ಹೋಗಿ ಅಲ್ಲಿ ಒಳ್ಳೆಯ ಕೆಲಸ ಪಡೆದು ಜೀವನದಲ್ಲಿ ಸೆಟಲ್ ಆಗಿ ನಂತರ ನಾಲ್ಕು ವರ್ಷದ ಹಿಂದೆ ಭಾರತಕ್ಕೆ ಮರಳಿ ನೇಹಾರ ಜೊತೆ ಸಪ್ತಪದಿ ತುಳಿದಿದ್ದರು.. ನಿಜಕ್ಕೂ ಒಂದು ಸಿನಿಮಾ ಸ್ಟೋರಿಯಂತೆ ನೇಹಾ ಹಾಗೂ ಚಂದನ್ ಲವ್ ಸ್ಟೋರಿ ಇತ್ತು..

ಇನ್ನು ಮದುವೆಯ ನಂತರ ಮತ್ತೆ ವಿದೇಶಕ್ಕೆ ಮರಳಿದ್ದ ಚಂದನ್ ತಮ್ಮ ವೃತ್ತಿಯಲ್ಲಿ ತೊಡಗಿಕೊಂಡಿದ್ದರೆ.. ಇತ್ತ ನೇಹಾ ನಟನೆಯಲ್ಲಿ ತೊಡಗಿಕೊಂಡಿದ್ದರು.. ನಂತರ ಕೊರೊನಾ ಬಂದ ನಂತರ ಭಾರತಕ್ಕೆ ಮರಳಿ ಇಲ್ಲಿಂದಲೇ ತಮ್ಮ ಕೆಲಸವನ್ನು ಮುಂದುವರೆಸಿದ್ದರು‌. ನಂತರ ನೇಹಾಗಾಗಿ ರಾಜಾ ರಾಣಿ ಶೋಗೂ ಬಂದರು.. ಬಹಳ ಪ್ರಬುದ್ಧತೆಯಿಂದ ಮಾತನಾಡುತ್ತಿದ ಚಂದನ್.. ಜೀವನದಲ್ಲಿ ಅವಶ್ಯಕತೆಗೆ ಏನೇನು ಬೇಕೋ ಎಲ್ಲವನ್ನೂ ದುಡಿಯಬೇಕು.. ಸುಮ್ಮನೆ ಪ್ರೀತಿ ಮಾಡ್ತೀನಿ ಅಂತ ಇವಳನ್ನು ಕರೆದುಕೊಂಡು ಹೋಗಿ ಚೆನ್ನಾಗಿ ನೋಡಿಕೊಳ್ಳಲಿಲ್ಲ ಅಂದರೆ ಏನು ಪ್ರಯೋಜನ.. ಅದೇ ಕಾರಣಕ್ಕೆ ನಾನು ಜೀವನದ ಬಗ್ಗೆ ಮೊದಲು ಕಾಳಜಿ ವಹಿಸಿ ಮುಂದಿನ ಜೀವನಕ್ಕೆ ಏನೇನು ಬೇಕೋ ಎಲ್ಲವನ್ನೂ ಮೊದಲು ಸಂಪಾದಿಸಿಕೊಂಡು ನಂತರ ಮದುವೆಯಾಗಿದ್ದೇನೆ ಎಂದಿದ್ದರು..

ಚಂದನ್ ನ ಮಾತುಗಳು ನಿಜಕ್ಕೂ ಬಹಳ ಅರ್ಥಪೂರ್ಣವಾಗಿದ್ದವು.. ಆ ದಿನ ಎಲ್ಲರೂ ಚಂದನ್ ನ ಪ್ರಬುದ್ಧ ಪ್ರೀತಿ , ಮಾತುಗಳಿಗೆ ಫಿದಾ ಆಗಿದ್ದರು..ಆದರೆ ಆನಂತರ ರಾಜಾ ರಾಣಿ ಶೋನಲ್ಲಿ ಸಾಕಷ್ಟು ಬಾರಿ ನನಗಾಗಿ ಸಮಯ ನೀಡೋದಿಲ್ಲ ಎಂದು ಬಹಳಷ್ಟು ಬಾರಿ ನೇಹಾ ಹೇಳಿಕೊಂಡಿದ್ದರು.. ಅದೇ ಕಾರಣಕ್ಕೆ ಚಂದನ್ ದೊಡ್ಡ ನಿರ್ಧಾರವನ್ನೇ ಮಾಡಿದರು.. ಹೌದು ಕಳೆದ ವರ್ಷ ಕೊರೊನಾ ನಿಯಂತ್ರಣಕ್ಕೆ ಬಂದ ಸಮಯದಲ್ಲಿ ತಮ್ಮ ಕೆಲಸದ ಸಲುವಾಗಿ ಮತ್ತೆ ವಿದೇಶಕ್ಕೆ ಮರಳಬೇಕಾದ ಸಂದರ್ಭ ಎದುರಾಯಿತು.. ಆದರೆ ಇತ್ತ ನೇಹಾಗೆ ತನ್ನ ಜೊತೆಯೇ ಚಂದನ್ ಇರಬೇಕು ಎನ್ನುವ ಆಸೆಯನ್ನು ಶೋನಲ್ಲಿ ವ್ಯಕ್ತ ಪಡಿಸಿದ್ದ ಕಾರಣ ಚಂದನ್ ಲಕ್ಷಾಂತರ ರೂಪಾಯಿ ಸಂಬಳ ಬರುತ್ತಿದ್ದ ತಮ್ಮ ಕೆಲಸವನ್ನೇ ಬಿಡುವ ನಿರ್ಧಾರ ಮಾಡಿದರು..

ಹೌದು ಅದಾಗಲೇ ತಮ್ಮ ಮುಂದಿನ ಜೀವನಕ್ಕೆ ಯಾವುದೇ ತೊಂದರೆ ಬಾರದಂತೆ ದುಡಿದಿದ್ದ ಚಂದನ್.. ಮುಂದಿನ ಜೀವನವನ್ನು ಬೆಂಗಳೂರಿನಲ್ಲಿಯೇ ನೇಹಾರ ಆಸೆಯಂತೆ ಅವರ ಜೊತೆಯೇ ಇರುವ ನಿರ್ಧಾರ ಮಾಡಿ ತಮ್ಮ ವಿದೇಶದ ಕೆಲಸಕ್ಕೆ ರಾಜಿನಾಮೆ ನೀಡಿದರು..ಇನ್ನು ಸಧ್ಯ ಅದಾಗಲೇ ರಾಜಾ ರಾಣಿ ಶೋ ಮೂಲಕ ಜನರ ಮನಗೆದ್ದಿದ್ದ ಚಂದನ್ ಗೆ ಇದೀಗ ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿಯೂ ಅವಕಾಶ ದೊರೆತಿದ್ದು ಸಧ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆನ್ನಬಹುದು.. ಇತ್ತ ಪತ್ನಿಯ ಜೊತೆ ಡ್ಯಾನ್ಸ್ ಮಾಡಲೇ ಬಹಳ ಸಂಕೋ‍ಚ ಪಡುತ್ತಿದ್ದ ಚಂದನ್ ಇದೀಗ ಬೇರೊನಬ್ಬ ಡ್ಯಾನ್ಸ್ ಪಾರ್ಟನರ್ ಜೊತೆ ಹೆಜ್ಜೆ ಹಾಕಬೇಕಿದ್ದು ಖುದ್ದು ನೇಹಾ ಅವರೇ ಚಂದನ್ ನನ್ನು ಪ್ರೋತ್ಸಾಹಿಸುತ್ತಿದ್ದು ಇಬ್ಬರ ಪರಸ್ಪರ ಪ್ರೀತಿ ಬಾಂಧವ್ಯ ಹಾಗೂ ಅರ್ಥ ಮಾಡಿಕೊಳ್ಳುವ ರೀತಿ ನಿಜಕ್ಕೂ ಮೆಚ್ಚುವಂತದ್ದು..