ಹೆಂಡತಿ ಜೊತೆ ಡ್ಯಾನ್ಸ್ ಮಾಡಿರುವ ಚಂದನ್ ಶೆಟ್ಟಿ ಖರ್ಚು ಮಾಡಿರುವ ಹಣವೆಷ್ಟು ಗೊತ್ತಾ? ಶಾಕ್ ಆಗ್ತೀರಾ‌‌..

0 views

ಮೊನ್ನೆಮೊನ್ನೆಯಷ್ಟೇ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರ ಧರ್ಮ ಪತ್ನಿ ನಿವೇದಿತಾ ಗೌಡ.. ಹಾಗೂ ನಟಿ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿರುವ ಪಾರ್ಟಿ ಫ್ರೀಕ್ ವೀಡಿಯೋ ಹಾಡೊಂದು ಬಿಡುಗಡೆಯಾಗಿ ಒಳ್ಳೆಯ ವೀಕ್ಷಣೆ ಪಡೆದುಕೊಳ್ಳುತ್ತಿದೆ.. ಇನ್ನು ಸಾಮಾನ್ಯವಾಗಿ ರ್ಯಾಪರ್ ಗಳು ಹೊಸ ವರ್ಷದ ಸಮಯದಲ್ಲಿ ಹಾಡುಗಳನ್ನು ಬಿಡುಗಡೆ ಮಾಡುವುದು ಸಾಮಾನ್ಯ ಸಂಗತಿ.. ಕನ್ನಡದಲ್ಲಿಯೂ ಅನೇಕರು ಹೊಸ ವರ್ಷದ ಪ್ರಯುಕ್ತ ಹಾಡುಗಳನ್ನು ಕಂಪೋಸ್ ಮಾಡಿ ಬಿಡುಗಡೆ ಮಾಡಿದ್ದಾರೆ‌.. ಅತ್ತ ಕನ್ನಡದ ಮತ್ತೊಬ್ಬ ಮೋಟಿವೇಷನಲ್ ರ್ಯಾಪರ್ ಎಂದೇ ಫೇಮಸ್ ಆಗಿರುವ ಆಲ್ ಓಕೆ ಅವರೂ ಕೂಡ ಕಳೆದ ತಿಂಗಳು ಬಿಡುಗಡೆ ಮಾಡಿದ ಹ್ಯಾಪಿ ಹಾಡು ಭರ್ಜರಿ ಯಶಸ್ಸು ಕಂಡಿದ್ದು ಹೊರದೇಶದ ಎಫ್ ಎಮ್‌ ಗಳಲ್ಲಿಯೂ ಕನ್ನಡದ ಹ್ಯಾಪಿ ಹಾಡು ಪ್ರಸಾರವಾಗಿತ್ತು..

ಇನ್ನು ಅದೇ ಯಶಸ್ಸಿನ ಸಂತೋಷದಲ್ಲಿ ನಾಲ್ಕು ದಿನದ ಹಿಂದೆ ಹೊಸ ವರ್ಷದ ಪ್ರಯುಕ್ತ ಕ್ರೇಜಿ ಎಂಬ ಹಾಡನ್ನು ಬಿಡುಗಡೆ ಮಾಡಿದ್ದು ಅದೂ ಸಹ ಎರಡು ದಿನಗಳು ನಂಬರ್ ಒನ್ ಟ್ರೆಂಡಿಂಗ್ ನಲ್ಲಿದ್ದು ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.. ಇನ್ನು ಚಂದನ್ ಶೆಟ್ಟಿ ಅವರೂ ಸಹ ತಿಂಗಳ ಹಿಂದೆಯೇ ಹೊಸ ವರ್ಷಕ್ಕೆ ಹೊಸದೊಂದು ಆಲ್ಬಂ ಹಾಡು ಮಾಡುವುದಾಗಿ ತಿಳಿಸಿದ್ದರು.. ಹಾಡಿನಲ್ಲಿ ನಿವೇದಿತಾ ಗೌಡ ಕೂಡ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿತ್ತು..

ಇದೀಗ ಪಾರ್ಟಿ ಫ್ರೀಕ್ ಹಾಡು ಬಿಡುಗಡೆಯಾಗಿದ್ದು ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ.. ಎರಡು ದಿನಕ್ಕೆ ಈ ಹಾಡು ಸಹ ಒಂದೂವರೆ ಮಿಲಿಯನ್ ವೀಕ್ಷಣೆ ಪಡೆದಿದ್ದು ಚಂದನ್ ಶೆಟ್ರು ಸಿಕ್ಕಾಪಟ್ಟೆ ಹ್ಯಾಪಿಯಾಗಿದ್ದಾರೆನ್ನಬಹುದು.. ಇನ್ನು ಈ ಹಾಡಿನಲ್ಲಿ ನಿವೇದಿತಾ ಗೌಡ ಸಹ ಸಖತ್ ಆಗಿಯೇ ಹೆಜ್ಜೆ ಹಾಕಿದ್ದು ಯಾರೋ ಮಗಳೋ ಕಾಣೆ.. ಇವಳು ಲೈಟು ವೇಯ್ಟು ಚಿಟ್ಟೆ.. ಸಿಕ್ಕಾಪಟ್ಟೆ ಕ್ಯೂಟು.. ಫ್ರಂ ಕರ್ನಾಟಕ ಸ್ಟೇಟು..‌ ಎಂದು ಹೆಂಡತಿಗಾಗಿ ಲಿರಿಕ್ಸ್ ಬರೆದಿರುವ ಚಂದನ್ ಶೆಟ್ರು ಹೆಂಡತಿ ಜೊತೆ ಸಖತ್ ಆಗಿಯೇ ಸ್ಟೆಪ್ ಹಾಕಿದ್ದಾರೆ.. ಇನ್ನು ಈ ಹಾಡಿಗೆ ಖರ್ಚು ಮಾಡಿರುವ ಹಣವೆಷ್ಟು ಎಂದು ಕೇಳಿದರೆ ಕೊಂಚ ಶಾಕ್ ಆಗೋದು ಖಂಡಿತ..

ಹೌದು ಆಲ್ಬಂ ಹಾಡುಗಳು ಸಾಮಾನ್ಯವಾಗಿ ಐದು ಲಕ್ಷದ ಒಳಗೆ ಎಲ್ಲಾ ಖರ್ಚುಗಳು ಮುಗಿದು ಹೋಗುತ್ತವೆ.. ಆದರೆ ಚಂದನ್ ಶೆಟ್ರು ಮಾಡಿರುವ ಹೊಸ ಹಾಡಿಗೆ ಬರೋಬ್ಬರಿ ಮೂವತ್ತೈದು ಲಕ್ಷ ಹಣ ಖರ್ಚು ಮಾಡಲಾಗಿದೆ.. ಹೌದು ಐಶಾರಾಮಿ ಹೊಟೆಲ್ ನಲ್ಲಿ ಹಾಡನ್ನು ಚಿತ್ರೀಕರಣ ಮಾಡಲಾಗಿದ್ದು 180 ಕ್ಕೂ ಹೆಚ್ಚು ನೃತ್ಯ ಗಾರರನ್ನು ಬಳಸಿಕೊಳ್ಳಲಾಗಿದೆ.. ಹೊಸ ವರ್ಷಕ್ಕೆ ಸದ್ಯ ಮನೆಯಲ್ಲಿಯೇ ಪಾರ್ಟಿ ಮಾಡುವ ಎಲ್ಲರಿಗೂ ಹೇಳಿ ಮಾಡಿಸಿದಂತಿರುವ ಹಾಡು ಬಹಳ ಕಲರ್ಫುಲ್ ಆಗಿಯೇ ಮೂಡಿ ಬಂದಿದ್ದು ಹಣವೂ ಕಲರ್ಫುಲ್ ಆಗಿಯೇ ಖರ್ಚಾಗಿದೆ ಎನ್ನಬಹುದು.‌ ಹೌದು

ಹೌದು ಐಶಾರಾಮಿ ಶೆರ್ಟನ್ ಹೊಟೇಲ್ ನಲ್ಲಿ ಮೂರು ದಿನಗಳ ಕಾಲ ಪಾರ್ಟಿ ಫ್ರೀಕ್ ಹಾಡನ್ನು ಚಿತ್ರೀಕರಣ ಮಾಡಲಾಗಿದೆ.. ಕನ್ನಡ ಮಾತ್ರವಲ್ಲದೇ ತೆಲುಗು ಭಾಷೆಯಲ್ಲಿಯೂ ಹಾಡನ್ನು ತಯಾರಿಸಲಾಗಿದೆ.. ಚಂದನ್ ಶೆಟ್ಟಿ ಸಂಯೋಜಿಸಿರುವ ಪೊಗರು ಸಿನಿಮಾದ ಖರಾಬು ಹಾಡು ತೆಲುಗಿನಲ್ಲಿಯೂ ಹಿಟ್ ಆದ ಕಾರಣ ಈ ಹಾಡನ್ನೂ ಸಹ ತೆಲುಗಿನಲ್ಲಿಯೂ ತಯಾರಿಸಿರಬಹುದಾಗಿದೆ.. ಒಟ್ಟಿನಲ್ಲಿ ಪಾರ್ಟಿ ಮೂಡ್ ನಲ್ಲಿರುವ ಚಂದನ್ ಹಾಗೂ ನಿವೇದಿತಾಗೆ ಹಾಡಿನ ಯಶಸ್ಸು ಮತ್ತಷ್ಟು ಸಂತೋಷ ನೀಡಿದೆ‌.. ಇನ್ನು ಈ ಹಾಡಿನಲ್ಲಿ 80 ರಷ್ಯನ್ ನೃತ್ಯಗಾರರಿದ್ದರೆ.. 100 ಕ್ಕೂ ಹೆಚ್ಚು ಮಂದಿ ಇಲ್ಲಿನ ನಮ್ಮ ನೃತ್ಯಗಾರರಿದ್ದಾರೆ..