ಮತ್ತೊಂದು ಸಿಡಿ ಕೇಸ್ ಬಯಲು.. ಖ್ಯಾತ ನಟಿ ಜೊತೆ ಮಾಜಿ ಸಚಿವನ ಲಿವ್ ಇನ್ ರಿಲೇಷನ್ ಷಿಪ್.. ಆ ಸಚಿವ ಯಾರು ಗೊತ್ತಾ?

0 views

ಕಳೆದ ಎರಡು ತಿಂಗಳಿಂದ ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಸಂಚಲನವನ್ನೇ ಮೂಡಿಸಿದ್ದ ರಮೇಶ್ ಜಾರಕಿಹೋಳಿ ಅವರ ಸಿಡಿ ಕೇಸ್ ಇನ್ನೂ ಸಹ ದಿನಕ್ಕೊಂದು ತಿರುವು ಪಡೆಯುತ್ತಿರುವ ಸಮಯದಲ್ಲಿಯೇ ಇದೀಗ ಮತ್ತೊಂದು ಸಿಡಿ ಕೇಸ್ ಬಯಲಾಗಿದೆ.. ಹೌದು ಖ್ಯಾತ ನಟಿಯ ಜೊತೆ ಮಾಜಿ ಸಚಿವನ ಲಿವ್ ಇನ್ ರಿಲೇಷನ್ ಷಿಪ್ ಇದೀಗ ಸದ್ದು ಮಾಡುತ್ತಿದ್ದು ನಟಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ..

ಹೌದು ಎರಡು ತಿಂಗಳ ಹಿಂದೆ ರಮೇಶ್ ಜಾರಕಿ ಹೋಳಿ ಅವರ ಪ್ರಕರಣ ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ದೊಡ್ಡ ಸುದ್ದಿಯಾಗಿತ್ತು.. ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವಿರುವ ಕಾರಣ ರಮೇಶ್‍ಜಾರಕಿ ಹೋಳಿ ಅವರು ಅದೇ ಪಕ್ಷದ ಮಂತ್ರಿಯಾಗಿದ್ದರಿಂದ ರಾಷ್ಟ್ರೀಯ ಮಾಧ್ಯಮಗಳಿ ಹಾಗೂ ಅಕ್ಕ ಪಕ್ಕದ ರಾಜ್ಯದ ಸುದ್ದಿ ಮಾಧ್ಯಮಗಳಲ್ಲಿಯೂ ರಮೇಶ್ ಜಾರಕಿಹೋಳಿ ಅವರ ಸಿಡಿ ರಾರಾಜಿಸಿತ್ತು.. ಇನ್ನು ಯುವತಿ ರಮೇಶ್ ಜಾರಕಿಹೋಳಿ ಅವರ ವಿರುದ್ಧ ದೂರು ದಾಖಲಿಸಿದ್ದ ಕಾರಣ ಎಸ್ ಐ ಟಿ ಪ್ರಕರಣದ ತಮಿಖೆ ನಡೆಸುತಿತ್ತು.. ಎಸ್ ಐ ಟಿ ಅಧಿಕಾರಿಗಳ ಮುಂದೆ ಯುವತಿ ಹಾಜರಾಗಿ ತನ್ನ ಹಾಗೂ ರಮೇಶ್ ಜಾರಕಿಹೋಳಿ ಅವರ ಸಂಬಂಧದ ಕುರಿತು ವಿವರಗಳನ್ನು ನೀಡಿದ್ದಳು.. ಆದರೆ ಕೊರೊನಾ ಕಾರಣದಿಂದ ರಮೇಶ್ ಜಾರಕಿಹೋಳಿ ಅವರು ಎಸ್ ಐ ಟಿ ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ..

ನಂತರ ಕೊರೊನಾ ಎರಡನೇ ಅಲೆಯಿಂದ ಜನರು ತತ್ತರಿಸಿ ಹೋದ ಸುದ್ದಿಗಳ ನಡುವೆ ರಮೇಶ್ ಜಾರಕಿಹೋಳಿ ಅವರ ಸಿಡಿ ಕುರಿತ ವಿಚಾರ ತೆರೆ ಮರೆಗೆ ಸರಿದಿತ್ತು.. ಆದರೆ ಎರಡು ದಿನಗಳ ಹಿಂದಷ್ಟೇ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು ಸಿಡಿಯಲ್ಲಿ ಇರೋದು ನಾನೆ.. ಇಬ್ಬರ ಪರಸ್ಪರ ಒಪ್ಪಿಗೆಯಿಂದಲೇ ಆ ಕೆಲಸ ನಡೆದಿದೆ ಎಂದು ಸತ್ಯ ಒಪ್ಪಿಕೊಂಡು ಪ್ರಕರಣದಲ್ಲಿ ತಮ್ಮ ತಪ್ಪು ಎನ್ನುವ ಮಾತಿನಿಂದ ಇದೀಗ ಜಾರಿಕೊಂಡರು.. ಹೌದು ಅದಾಗಲೇ ಸತ್ಯ ಜಗಜ್ಜಾಹೀರಾಗಿದೆ.‌ ಇಂತಹ ಸಮಯದಲ್ಲಿ ಸಿಡಿಯಲ್ಲಿರೋದು ಗ್ರಾಫಿಕ್ಸ್ ಎಂದರೆ ಯಾರೂ ಸಹ ನಂಬೋದಿಲ್ಲ ಎಂಬುದನ್ನು ಅರಿತ ರಮೇಶ್ ಜಾರಕಿಹೋಳಿ ಅವರೀಗ ಆ ಸಿಡಿಯಲ್ಲಿರೋದು ನಾನೇ ನನ್ನ ಹಾಗೂ ಆ ಯುವತಿಯ ಸಮ್ಮತಿಯಿಂದಲೇ ಒಟ್ಟಿಗೆ ಸೇರಿದ್ದೆವು ಎಂದು ಹೇಳಿಕೆ ನೀಡಿದ್ದಾರೆ.. ಇನ್ನು ಇದರ ಬೆನ್ನಲ್ಲೇ ಡಿಕೆಶಿವಕುಮಾರ್ ಅವರು ರಮೇಶ್ ಜಾರಕಿ ಹೋಳಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು ತಕ್ಷಣ ಅವರನ್ನು ಪೊಲೀಸರು ವಶಕ್ಕೆ ಪಡೆಯಬೇಕೆಂದು ಸುದ್ದಿಗೋಷ್ಟಿ ನಡೆಸಿ ತಿಳಿಸಿದ್ದರು..

ಇನ್ನು ರಮೇಶ್ ಜಾರಕಿಹೋಳಿ ಅವರ ಸಿಡಿ ಹಸಿಹಸಿಯಾಗಿರುವಾಗಲೇ ಇದೀಗ ಮತ್ತೊಂದು ಸಿಡಿ ಕೇಸ್ ಬಯಲಾಗಿದೆ.. ಹೌದು ಖ್ಯಾತ ನಟಿಯ ಜೊತೆ ಮಾಜಿ ಸಚಿವನ ಲಿವ್ ಇನ್ ರಿಲೇಶನ್ ಷಿಪ್ ಇದೀಗ ಸದ್ದು ಮಾಡುತ್ತಿದ್ದು ಆ ನಟಿ‌ ಕೋರ್ಟ್ ಮೆಟ್ಟಿಲೇರಿದ್ದಾರೆ.. ಹೌದು ತಮಿಳಿನ ಖ್ಯಾತ ನಟಿ ಚಾಂದಿನಿ ತಮಿಳುನಾಡಿನ ಮಾಜಿ ಸಚಿವ ಮಣಿಕಂದನ್ ಜೊತೆ ಐದು ವರ್ಷ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿ ಇದ್ದೆ.. ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.. ಹೌದು ಚಾಂದಿನಿ ಹಾಗೂ ಮಾಜಿ ಸಚಿವ ಮಣಿಕಂದನ್ ಅವರು ಐದು ವರ್ಷಗಳ ಕಾಲ ಒಟ್ಟಿಗೆ ಇದ್ದು ಇದೀಗ ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ..

ಮಣಿಕಂದನ್ ಅವರು ನಾನು ಸಂಬಂಧದಲ್ಲಿದ್ದೆವು.. ನಾನು ಮದುವೆಯಾಗಿ ಎಂದು ಒತ್ತಾಯಿಸುತ್ತಿದ್ದೇನೆ.. ಆದರೆ ಅವರು ಇದಕ್ಕೆ ನಿರಾಕರಿಸುತ್ತಿದ್ದಾರೆ.. ಅವರು ನನ್ನ ಜೊತೆ ಇದ್ದಾಗ ನನ್ನ ಎಲ್ಲಾ ಭಾಗಗಳ ಫೋಟೋ ಹಾಗೂ ವೀಡಿಯೋವನ್ನು ತೆಗೆದುಕೊಂಡಿದ್ದಾರೆ.. ಈಗ ಅವರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ತಿಳಿಸಿದ್ದಾರೆ.. ಅಷ್ಟೇ ಅಲ್ಲದೇ ನನ್ನ ಜೀವ ತೆಗೆಯುವುದಾಗಿಯೂ ನನ್ನನ್ನಿ ಹೆದರಿಸುತ್ತಿದ್ದಾರೆ‌.. ದಯವಿಟ್ಟು ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ನಟಿ ಚಾಂದಿನಿ ಪೊಲೀಸರಲ್ಲಿ ಮನವಿ‌ ಮಾಡಿಕೊಂಡಿದ್ದಾರೆ..

ಇನ್ನೂ ಸದ್ಯ ತಮಿಳು ನಾಡಿನ ರಾಜಕಾರಣದಲ್ಲಿ ಮಾಜಿ ಸಚಿವಮ ಲಿವ್ ಇನ್ ರಿಲೇಷನ್ ಷಿಪ್ ನದ್ದೇ ಸುದ್ದಿಯಾಗಿದ್ದು ಮಾಜಿ ಸಚಿವ ಚಾಂದಿನಿ‌ ಜೊತೆ ಇರುವ ಖಾಸಗಿ ಫೋಟೋಗಳು ಸದ್ಯ ವೈರಲ್ ಆಗಿವೆ.. ಈ ಪ್ರಕರಣ ಒಂದು ಕಡೆ ಇರಲಿ.. ಆದರೆ ಹೆಣ್ಣು ಮಕ್ಕಳು ದಯವಿಟ್ಟು ಒಂದನ್ನು ಅರ್ಥ ಮಾಡಿಕೊಳ್ಳಿ.. ನೀವು ನಿಮ್ಮ ಗಂಡನೇ ಆಗಲಿ ಪ್ರಿಯಕರನೇ ಆಗಲಿ ಖಾಸಗಿಯಾಗಿ ಸಮಯ ಕಳೆಯುತ್ತಿರುವಾಗ ಫೋಟೋ ವೀಡಿಯೋ ಮಾಡುವ ಅಗತ್ಯ ಏನಿದೆ.. ಒಬ್ಬ ಒಳ್ಳೆಯ ಪ್ರೇಮಿ ಅಥವಾ ಗಂಡ.. ಎಂದೂ ಸಹ ತಾನು ಪ್ರೀತಿಸಿದ ಪತ್ನಿಯ ಭಾಗಗಳನ್ನು ಮೊಬೈಲ್‌ ನಲ್ಲಿ ವೀಡಿಯೋ‌ ಮಾಡಲು ಇಷ್ಟ ಪಡುವುದಿಲ್ಲ.. ಮುಂದೆ ಎಂದಾದರೂ ಅದು ದುರ್ಬಳಕೆ ಆಗಬಹುದು ಎಂಬ ಕಾಳಜಿ ಇದ್ದೇ ಇರುತ್ತದೆ.. ಅಕಸ್ಮಾತ್ ಆತ ಅಂತಹ ಕೆಲಸಕ್ಕೆ ಮುಂದಾದರೆ ನಿಮ್ಮ ಪ್ರೀತಿ ನಿಜವಾಗಿದೆಯಾ ಎಂಬುದನ್ನು ದಯವಿಟ್ಟು ಪ್ರಶ್ನಿಸಿಕೊಳ್ಳಿ.. ಕಾರಣ ಪ್ರೀತಿ ಸಂಬಂಧ ಎನ್ನುವುದು ವೀಡಿಯೋಗಳ ಮೇಲೆ‌ ನಿಲ್ಲುವುದಲ್ಲ.. ದಯವಿಟ್ಟು ಯಾರೂ ಸಹ ಇಂತಹ ತಪ್ಪುಗಳನ್ನು ಮಾಡಿಕೊಂಡು‌ ಮುಂದೆ ಪಶ್ಚಾತ್ತಾಪ ಪಡಬೇಡಿ.. ನಿಮ್ಮ ಖಾಸಗಿ ಭಾಗಗಳನ್ನು ಪ್ರದರ್ಶನಕ್ಕಿಡಬೇಡಿ..