ನಿರೂಪಕಿ ವಿಚಾರದಲ್ಲಿ ಊಹಿಸಿರದ ತಿರುವು.

0 views

ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ವಿಚಾರವಾಗಿ ಇದೀಗ ಹೊಸ ತಿರುವೊಂದು ದೊರೆತಿದ್ದು ನಿರೂಪಕಿ ಪರವಾಗಿ ಖ್ಯಾತ ವ್ಯಕ್ತಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ.. ಹೌದು ಕಳೆದ ಕೆಲ ದಿನಗಳ ಹಿಂದೆ ನಿರೂಪಕಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮನೆಗಳನ್ನು ಕಟ್ಟಿದ್ದಾರೆ ಎಂಬೆಲ್ಲಾ ಮಾತು ಹೊರ ಬಂತು. ಆದರೀಗ ನಿರೂಪಕಿ ಪರವಾಗಿ ಹೊಸ ವ್ಯಕ್ತಿಯೊಬ್ಬರು ಎಂಟ್ರಿ ಕೊಟ್ಟಿದ್ದು ಪೊಲೀಸರಲ್ಲಿ ದೂರನ್ನು ಸಹ ಸಲ್ಲಿಸಿದ್ದಾರೆ. ಹೌದು ನಿರೂಪಕಿ ಹೆಸರು ಮತ್ತೊಮ್ಮೆ ಕೇಳಿ ಬರುತ್ತಿದ್ದಂತೆ ಅವರು ಮುಂಬೈ ಗೆ ತೆರಳಿದ್ದರು. ಇತ್ತ ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಎಂದಿನಂತೆ ಮಾಧ್ಯಮದ ಮುಂದೆ ಬಂದು ಈ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೊರತಂದು ತಮ್ಮ ಬಳಿ ದಾಖಲೆಗಳು ಇವೆ ಎಂದಿದ್ದರು. ಹೌದು ನಿರೂಪಕಿ ಅವರಿಗೆ ಬೆಂಗಳೂರಿನಲ್ಲಿ ನಾಲ್ಕು ಕೋಟಿಯ ಮನೆ, ಮಂಗಳೂರಿನಲ್ಲಿ ಎಂಟು ಕೋಟಿಯ ಮನೆ ಇದೆ ಇದೆಲ್ಲಾ ಹೇಗೆ ಬಂತು ನಿರೂಪಕಿಗೆ ಒಬ್ಬರ ಒಡನಾಟ ಇದೆ.

ಅವರೇ ಇವರನ್ನು ಕಾಪಾಡುತ್ತಿದ್ದಾರೆ. ಮಾಜಿ ಒಬ್ಬರ ಜೊತೆ ಅನು ಸಂಪರ್ಕದಲ್ಲಿದ್ದಾರೆ ಎಂದೆಲ್ಲಾ ವಿಚಾರಗಳು ಹೊರ ಬಂದವು. ನಂತರ ಕೆಲ ದಿನಗಳ ಕಾಲ ದೊಡ್ಡದಾಗಿಯೇ ಸುದ್ದಿಯಾಯಿತು. ಮೂರ್ನಾಲ್ಕು ದಿನಗಳ ನಂತರ ಮುಂಬೈನಿಂದ ಬಂದ ನಿರೂಪಕಿ ಈ ಬಗ್ಗೆ ಮಾದ್ಯಮದ ಮುಂದೆ ಮಾತನಾಡಿ ತಮ್ಮ ಮೊಬೈಲ್ ತೋರಿಸಿ ನೋಡಿ ಸರ್ ನಾನು ಕೆಲಸದ ನಿಮಿತ್ತ ಮುಂಬೈಗೆ ಹೋಗಿದ್ದು ಯಾರಿಗೂ ಯಾವುದಕ್ಕೂ ನಾನು ಹೋಗಿರಲಿಲ್ಲ. ಅದೇ ದಿನ ಮುಂಬೈ ನಿಂದ ವಾಪಸ್‌ ಬರಲು ಸಹ ಟಿಕೆಟ್‌ ಬುಕ್‌ ಮಾಡಿದ್ದೆ. ನನ್ನ ಬಗ್ಗೆ ಸಾಕಷ್ಟು ಮಾತುಗಳು ಬಂದಿವೆ. ನಾನು‌ ನಿಂತಿರುವುದು ನಾನಿರುವ ಮನೆಯ ಮುಂದೆಯೇ. ಈ ಮನೆಯ ಮಾಲಿಕರನ್ನು ಕೇಳಿ ನಾನು ಎಷ್ಟು ವರ್ಷದಿಂದ ಎಷ್ಟು ಬಾಡಿಗೆ ಕಟ್ಟುತ್ತಿದ್ದೇನೆ ಅಂತ. ಅಷ್ಟು ಕೋಟಿ ಮನೆ ಇಷ್ಟು ಕೋಟಿ ಮನೆ ಅಂತ ಸುಮ್ಮನೆ ಮಾತನಾಡುವ ಮುನ್ನ ಸರಿಯಾಗಿ ತಿಳಿದುಕೊಂಡು ಮಾತನಾಡಿ. ಬೆಂಗಳೂರಿನಲ್ಲಿ ಇರೋದು ಬಾಡಿಗೆ ಮನೆಯಲ್ಲಿ. ಮಂಗಳೂರಿನಲ್ಲಿ ಮನೆ ಇದೆ.

ಹೋಗಿ ನೋಡಿ ಅದು ನಿಜವಾಗಲು ಎಂಟು ಕೋಟಿ ಎಂದು ನೀವೆ ಹೋಗಿ ನೋಡಿ‌‌. ನನ್ನ ಅಮ್ಮನಿಗೆ ವಯಸ್ಸಾಗಿದೆ ಇದರಿಂದ ಅವರಿಗೇನಾದರು ಆದರೆ ಅದು ಯಾರೇ ಆಗಿರಲಿ ಎಷ್ಟು ದೊಡ್ಡ ವ್ಯಕ್ತಿಯೇ ಆಗಿರಲಿ‌ ನಾನು ಮಾತ್ರ ಬಿಡೋದಿಲ್ಲ ಎಂದಿದ್ದರು. ಆ ಬಳಿಕ ವಿಚಾರ ತಣ್ಣಗಾಗಿತ್ತು ಆದರೀಗ ನಿರೂಪಕಿ ಪರವಾಗಿ ವ್ಯಕ್ತಿಯೊಬ್ಬರು ಬಂದಿದ್ದು ಖುದ್ದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹೌದು ಆ ವ್ಯಕ್ತಿ ಮತ್ಯಾರೂ ಅಲ್ಲ ಅದು ಬಿಗ್ ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಹೌದು ಪ್ರಶಾಂತ್ ಸಂಬರ್ಗಿ ಅವರ ಸ್ನೇಹಿತನಾಗಿದ್ದ ಚಕ್ರವರ್ತಿ ಚಂದ್ರಚೂಡ್ ಅವರೇ ಇದೀಗ ಪ್ರಶಾಂತ್ ಸಂಬರ್ಗಿ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ.‌ ಹೌದು ಇದುವರೆಗೂ ಪ್ರಶಾಂತ್ ಸಂಬರ್ಗಿ ಚಿತ್ರರಂಗದವರ ಮೇಲೆ ಸಾಕಷ್ಟು ವಿಚಾರ ಮಾತನಾಡಿದ್ದಾರೆ. ಆದರೆ ಯಾವುದಕ್ಕೂ ಸಹ ದಾಖಲೆ ನೀಡಿಲ್ಲ.

ಅದರಲ್ಲೂ ನಿರೂಪಕಿ ಬಗ್ಗೆ ಹನ್ನೆರೆಡು ಕೋಟಿಯ ಮನೆ ಇದೆ ಎಂದಿದ್ದರು ಆದರೆ ಅವರು ಯಾವುದೇ ದಾಖಲೆಗಳನ್ನು ನೀಡಲಿಲ್ಲ. ಅಷ್ಟೇ ಅಲ್ಲದೇ ಆಕೆಗೆ ಒಬ್ಬರು ಇದ್ದಾರೆ ಎಂದರು. ಅದಕ್ಕೂ ಸಹ ಯಾವುದೇ ದಾಖಲೆ ನೀಡಲಿಲ್ಲ. ಅಷ್ಟೇ ಅಲ್ಲದೇ ಇನ್ನೂ ಅನೇಕ ವಿಚಾರಗಳನ್ನು ಪ್ರಸ್ತಾಪ ಮಾಡಿ ಪ್ರಶಾಂತ್ ಸಂಬರ್ಗಿ ಅವರ ಮೇಲೆ ಚಕ್ರವರ್ತಿ ಚಂದ್ರಚೂಡ ಅವರು ಪೊಲೀಸ್ ಠಾಣೆಯಲ್ಲಿ ಇಂದು ದೂರು ನೀಡಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಚಾರ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಬಿಗ್ ಬಾಸ್ ಸೀಸನ್‌ ಎಂಟರ ಎರಡನೇ ಇನ್ನಿಂಗ್ಸ್ ನಿಂದಲೂ ಪ್ರಶಾಂತ್ ಹಾಗೂ ಚಕ್ರವರ್ತಿ ಚಂದ್ರಚೂಡ ನಡುವೆ ಮನಸ್ತಾಪ ಶುರುವಾಗಿದ್ದು ಹೊರಗೆ ಬಂದ ಬಳಿಕ ಪ್ರಶಾಂತ್ ಅವರ ಮೇಲೆ ಸಾಕಷ್ಟು ವಿಚಾರ ಮಾತನಾಡಿದ್ದರು. ಅರವಿಂದ್ ಹಾಗೂ ನನ್ನ ವೀಡಿಯೋವನ್ನು ತನ್ನ ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡಿದ್ದಾನೆ ಹಾಗೆ ಇನ್ನು ಅನೇಕ ವಿಚಾರಗಳನ್ನು ತಿಳಿಸಿದ್ದರು. ಆದರೀಗ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಖುದ್ದಾಗಿ ದೂರು ನೀಡಿದ್ದು ಮುಂದೆ ಯಾವ ರೀತಿ ತಿರುವು ಪಡೆಯುವುದೋ ಕಾದು ನೋಡಬೇಕಿದೆ.