ನಾನು ಒಬ್ಬನಿಗೆ ಮಾತ್ರ ಹುಟ್ಟಿದ್ದೇನೆ ಎಂದ ಚಂದ್ರಚೂಡ.. ಆ ಮಾತು ಹೇಳಲು ಕಾರಣವೇನು ಗೊತ್ತಾ.. ಕೀಳು ಭಾಷೆಯಲ್ಲಿಯೇ ತಾರಕಕ್ಕೇರಿತು ಜಗಳ..

0 views

ಬಿಗ್ ಬಾಸ್ ಈ ಸೀಸನ್ ಹೊಸದರಲ್ಲಿ ಸ್ಪರ್ಧಿಗಳ ಆಯ್ಕೆಯ ವಿಚರಾವಾಗಿ ಕೊಂಚ ಇಷ್ಟವಾಗಿದ್ದರೂ ಅದ್ಯಾಕೋ ಬರುಬರುತ್ತಾ ರಾಯರ ಕುದುರೆ ಕತ್ತೆಯಾದಂತೆ ಸ್ಪರ್ಧಿಗಳು ನಡೆದುಕೊಳ್ಳುತ್ತಿರುವ ರೀತಿ ಕಿರಿಕಿರಿ ತರೋದಷ್ಟೇ ಅಲ್ಲದೇ ಮನೆಯಲ್ಲಿ ಎಲ್ಲರ ಮುಂದೆ ಕೂತು ಬಿಗ್ ಬಾಸ್ ನೋಡೋದು ಕೊಂಚ ಮುಜುಗರವನ್ನೂ ಸಹ ಉಂಟು ಮಾಡುತ್ತಿದೆ.. ಹೌದು ಇಂದೂ ಸಹ ಬಿಗ್ ಬಾಸ್ ನಲ್ಲಿ‌ ಕೀಳು ಮಟ್ಟದ ಭಾಷಾ ಪ್ರಯೋಗ ಮಾಡಿದ್ದಷ್ಟೇ ಅಲ್ಲದೇ ಒಬ್ಬನಿಗೆ ಹುಟ್ಟಿದ್ದೇನೆ ಎಂಬ ಮಾತು ಸಹ ಹೊರ ಬಂದಿದೆ.. ಅಪ್ಪ ಅಮ್ಮನ ವಿಚಾರಗಳನ್ನು ಎಳೆದು ತಂದು ಮಾತನಾಡೋದು ನಿಜಕ್ಕೂ ಒಂದು ರೀತಿ ಅಸಹ್ಯವೇ ಸರಿ.. ಹೌದು ಈ ಸೀಸನ್ ನಲ್ಲಿ ಜಗಳಗಳಿಗೇನೂ ಕಡಿಮೆ ಇಲ್ಲ.. ಸೀಸನ್ ಎಂಟರ ಮೊದಲ ಇನ್ನಿಂಗ್ಸ್ ನಲ್ಲಿ ಸಾಲು ಸಾಲು ಜಗಳಗಳು ಕಿರಿಕ್ ಗಳನ್ನು‌ ನೋಡಿ ಬೇಸರ ಪಟ್ಟುಕೊಂಡಿದ್ದ ಪ್ರೇಕ್ಷಕನಿಗೆ ಅದ್ಯಾಕೋ ಎರಡನೇ ಇನ್ನಿಂಗ್ಸ್ ನಲ್ಲಿಯೂ ಮನರಂಜನೆಗಿಂತ ಹೆಚ್ಚಾಗಿ ಜಗಳಗಳನ್ನು‌ ನೋಡುವುದೇ ಆಗಿ ಹೋಗಿದೆ..

ಹೌದು ಮೊದಲು ಪ್ರಶಾಂತ್ ಸಂಬರ್ಗಿ ಮಂಜು ಪಾವಗಡ.. ಪ್ರಶಾಂತ್ ಸಂಬರ್ಗಿ ಅರವಿಂದ್.. ಪ್ರಶಾಂತ್ ಸಂಬರ್ಗಿ ದಿವ್ಯಾ ಸುರೇಶ್.‌ ಹೀಗೆ ಸಾಕಷ್ಟು ಸ್ಪರ್ಧಿಗಳ ನಡುವೆ ವೈಮನಸ್ಸು ಮೂಡಿ ಜಗಳಗಳು ಆಗಿದ್ದವು.. ಆದರೆ ವೈಲ್ಡ್ ಕಾರ್ಡ್ ನಲ್ಲಿ ಚಕರವರ್ತಿ ಚಂದ್ರಚೂಡ ಅವರು ಎಂಟ್ರಿ ಕೊಟ್ಟ ಬಳಿಕ ಬಹುತೇಕ ಜಗಳಗಳಿಗೆ ಚಂದ್ರಚೂಡ ಅವರೇ ಕಾರಣರಾಗಿರೋದು ಸ್ಪಷ್ಟವಾಗಿ ಕಾಣಿಸುತ್ತಿದೆ.. ಆದರೆ ಇಷ್ಟು ದಿನ ಪ್ರಶಾಂತ್ ಅವರ ಬಳಿ ಅದು ಇದು ಮಾತನಾಡಿ ಜಗಳಗಳಿಗೆ ಕಾರಣರಾಗುತ್ತಿದ್ದ ಚಕ್ರವರ್ತಿ ಚಂದ್ರಚೂಡ ಅವರು ಇಂದು ಖುದ್ದಾಗಿ ಪ್ರಶಾಂತ್ ಅವರೊಟ್ಟಿಗೆಯೇ ಜಗಳವಾಡಿಕೊಂಡಿದ್ದು ಕೀಳು ಮಟ್ಟದ ಭಾಷಾ ಪ್ರಯೋಗವನ್ನು ಸಹ ಮಾಡಿದ್ದಾರೆ‌‌.. ಹೌದು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಹಣ ಸಂಪಾದಿಸುವ ಟಾಸ್ಕ್ ಏನೋ ನಡೆಯುತ್ತಿದೆ.. ಆದರೆ ಈ‌ ನಡುವೆ ಈ ವಾರ ನಾಮಿನೇಟ್ ಆದವರು ಎಲಿಮಿನೇಷನ್ ನಿಂದ ಸೃಫ್ ಆಗುವ ಸಲುವಾಗಿ ಒಂದಲ್ಲಾ ಒಂದು ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ..

ಇನ್ನು ಜಗಳಗಳನ್ನು ಆಡಿದರೆ ಬಿಗ್ ಬಾಸ್ ಮನೆಯಲ್ಲಿ‌ ಉಳಿಯಬಹುದು ಎಂಬ ಭ್ರಮೆಯಲ್ಲಿರುವ ಕೆಲ ಸ್ಪರ್ಧಿಗಳು ಅದನ್ನೇ ಪದೇ ಪದೇ ಪ್ರಯೋಗ ಮಾಡೋದು ಉಂಟು.. ಇನ್ನು ಕಳೆದ ವಾರ ವಾರದ ಕತೆಯಲ್ಲಿ ಮಂಜು ಹಾಗೂ ದಿವ್ಯಾ ಸುರೇಶ್ ಬಗ್ಗೆ ನೇರವಾಗಿ ಮಾತನಾಡಿದ್ದ ಚಂದ್ರಚೂಡ ಅವರ ನಡೆ ಬಹುತೇಕರಿಗೆ ಮೆಚ್ಚುಗೆಯಾಗಿತ್ತು.. ಆದರೆ ಒಂದೇ ವಾರದಲ್ಲಿ ಅದೇ ಜನರಿಗೆ ಚಂದ್ರಚೂಡ ಅವರ ನಡವಳಿಕೆ ಕಿರಿಕಿರಿಯನ್ನುಂಟು ಮಾಡಿದೆ.. ಹೌದು ಪ್ರಶಾಂತ್ ಅವರು ಕೊಂಚ ಹೇಳಿಕೆಯ ಮಾತುಗಳಿಗೆ ಇನ್ಫ್ಲೂಯೆನ್ಸ್ ಆಗಿ ಬಿಡುತ್ತಾರೆ ಎಂಬುದನ್ನು ಚೆನ್ನಾಗಿ ಅರಿತಿರುವ ಚಂದ್ರಚೂಡ ಅವರು.. ಆಗಾಗ ಪ್ರಶಾಂತ್ ಸಂಬರ್ಗಿ ಅವರ ಬಳಿ ತೆರಳಿ ಬೇರೆ ಬೇರೆ ಸ್ಪರ್ಧಿಗಳ ಬಗ್ಗೆ ಮಾತನಾಡೋದು ಎತ್ತಿಕಟ್ಟೋದು ಎಲ್ಲವೂ ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕಾಣುತ್ತಿದೆ..

ಇನ್ನು ಅದೇ ರೀತಿ‌ ಇಂದೂ ಸಹ ವೈಷ್ಣವಿ ವಿಚಾರವಾಗಿ ಪ್ರಶಾಂತ್ ಸಂಬರ್ಗಿ ಅವರ ಬಳಿ ಚಂದ್ರಚೂಡ ಅವರು ಮಾತನಾಡಿದ್ದು.. ದೊಡ್ಡ ಜಗಳಕ್ಕೆ ಕಾರಣವಾಗಿದೆ.. ಹೌದು ಮೊದಲು ಪ್ರಶಾಂತ್ ಸಂಬರ್ಗಿ ಅವರ ಬಳಿ ತೆರಳಿದ ಚಂದ್ರಚೂಡ ಅವರು ವೈಷ್ಣವಿಗೆ ಯಾಕೆ ನೀನು ಸಲಹೆ ಕೊಡ್ತೀಯಾ.. ಅವಳು ಅಲ್ಲಿ ಹೋಗಿ ಪ್ರಶಾಂತ್ ಅವರು ಹೇಳಿದ್ದನ್ನು ಬಿಟ್ಟು ಮಿಕ್ಕ ಎಲ್ಲದನ್ನೂ ಮಾಡಿದೆ ಎಂದಿದ್ದಾಳೆ ಎಂದು ಪ್ರಶಾಂತ್ ಅವರ ಬಳಿ ಹೇಳಿ ತಂದಿಟ್ಟಿದ್ದಾರೆ.. ಇನ್ನು ಈ ಬಗ್ಗೆ ನೇರವಾಗಿ ವೈಷ್ಣವಿ ಬಳಿ ಹೋದ ಪ್ರಶಾಂತ್ ಅವರು.. ನಾನು ಕೊಟ್ಟ ಸಲಹೆಯನ್ನು ಲೇವಡಿ ಮಾಡುದ್ಯೇನಮ್ಮಾ ಎಂದು ನೇರವಾಗಿ ಕೇಳಿದ್ದಾರೆ.. ಆಗಲೇ ಸತ್ಯ ಹೊರಬಂತು.. ಇತ್ತ ವೈಷ್ಣವಿ ಇಲ್ಲ ಸರ್ ಎಂದಿದ್ದಾರೆ.. ಇನ್ನು ಈ ಬಗ್ಗೆ ಚಂದ್ರಚೂಡ ಅವರನ್ನು ಯಾಕೆ ಸುಳ್ಳು ಹೇಳಿದೆ ಎಂದು ಕೇಳಿದ್ದಕ್ಕೆ.. ಚಂದ್ರಚೂಡ ಅವರೇ ತಿರುಗಿ ಬಿದ್ದಿದ್ದಾರೆ.. ಹೌದು ಹಲ್ಕಟ್ ಕೆಲಸ ಮಾಡಿಬಿಟ್ಟೆ ಎಂಬ ಪದಗಳನ್ನೆಲ್ಲಾ ಪ್ರಯೋಗ ಮಾಡಿ ಪ್ರಶಾಂತ್ ಅವರಿಗೆ ಬೈದಿದ್ದಾರೆ.. ಇತ್ತ ಪ್ರಶಾಂತ್ ಅವರೂ ಸಹ ಹಲ್ಕಟ್ ಕೆಲಸ ಮಾಡಿದ್ದು ನೀನು ಎಂದು ತಿರುಗಿದ್ದಾರೆ..

ಆದರೆ ಅಷ್ಟಕ್ಕೇ ನಿಲ್ಲದ ಮಾತುಕತೆ.. ಮಾತಿಗೆ ಮಾತು ಬೆಳೆದು ತಂದೆ ತಾಯಿಗೆ ಹುಟ್ಟಿರುವ ವಿಚಾರವನ್ನೆಲ್ಲಾ ತೆಗೆದು ಚಂದ್ರಚೂಡ ಅವರು ಮಾತನಾಡಿದ್ದಾರೆ.. ಹೌದು ವೈಷ್ಣವಿ ಬಗ್ಗೆ ಸುಳ್ಳು ಹೇಳಿ ತಂದಾಕೋ ಕೆಲಸ ಮಾಡ್ತಿದ್ದೀಯಾ ಎಂದು ಪ್ರಶಾಂತ್ ಬೇಸರ ವ್ಯಕ್ತಪಡಿಸಿದಾಗ.. ಚಂದ್ರಚೂಡ ಅವರು ತಂದಾಕೋ ಕೆಲಸ ಮಾಡ್ತಿರೋದು ನೀನು.. ನಾನು ಒಬ್ಬ ಅಪ್ಪ ಅಮ್ಮನಿಗೆ ಹುಟ್ಟಿದ್ದು.. ಅದು ಇದು ಎನ್ನುವ ಮಾತಿಗಳನ್ನಾಡಿದ್ದು.. ಇತ್ತ ಪ್ರಶಾಂತ್ ಅವರು ಕೈ ತೋರಿಸಿ ಮಾತನಾಡಬೇಡ ಕೈ ಇಳಿಸು ಎಂದು ಗುಡುಗಿದ್ದಾರೆ.. ಒಟ್ಟಿನಲ್ಲಿ ಆಪ್ತ ಸ್ನೇಹಿತರಾಗಿದ್ದ ಪ್ರಶಾಂತ್ ಹಾಗೂ ಚಕ್ರವರ್ತಿ ಚಂದ್ರಚೂಡ ಅವರ ನಡುವೆ ವೈಮನಸ್ಸು ಮೂಡಿದ್ದು ಇದೀಗ ಜಗಳ ತಾರಕ್ಕೇರಿದ್ದು ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರು ಈ ಬಗ್ಗೆ ಏನು ಹೇಳುವರೋ ಕಾದು ನೋಡಬೇಕಿದೆ..