ಹುಡುಗಿ ಸಪ್ಲೈ ಮಾಡ್ತಾರಾ ಪ್ರಶಾಂತ್ ಸಂಬರ್ಗಿ.. ಹೊರಗೆ ನಡೆಯೋ ವಿಚಾರ ಬಿಚ್ಚಿಟ್ಟಿದ್ದು ಯಾರು ಗೊತ್ತಾ?

0 views

ಬಿಗ್ ಬಾಸ್ ಈ ಸೀಸನ್ ನಲ್ಲಿ ಪ್ರಶಾಂತ್ ಸಂಬರ್ಗಿ ಒಂದು ರೀತಿಯಲ್ಲಿ ನೋಡಿದರೆ ಸ್ಟ್ರಾಂಗ್ ಕಂಟೆಸ್ಟೆಂಟ್ ಕೂಡ ಹೌದು. ಮತ್ತೊಂದು ರೀತಿಯಲ್ಲಿ ನೋಡಿದರೆ ಮೊದಲು ಬಿಗ್ ಬಾಸ್ ಮನೆಯಿಂದ ಹೊರ ಬರಲಿ ಅನ್ನೋದು ನಿಜ.. ಅದರಲ್ಲೂ ಮನೆಯ ಇತರ ಸದಸ್ಯರಿಗೆ ಪ್ರಶಾಂತ್ ಸಂಬರ್ಗಿ ಕಿರಿಕಿರಿಯಾಗಿರೋದು ಸತ್ಯ.. ಪ್ರಶಾಂತ್ ರಿಂದ ಬಹುತೇಕ ಮನೆಯ ಹಳೆಯ ಸದಸ್ಯರೆಲ್ಲಾ ದೂರಾಗಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.‌ ಹೌದು ಬಿಗ್ ಬಾಸ್ ಶುರುವಾಗಿ ಐದು ವಾರಗಳು ಕಳೆಯಿತು‌.. ಮೊದಲ ವಾರ ಬಹಳ ಕೋಪ ಕೋಪವಾಗಿಯೇ ಇದ್ದ ಪ್ರಶಾಂತ್ ಸಂಬರ್ಗಿ ಬರುಬರುತ್ತಾ ಮನೆಯವರೊಂದಿಗೆ ಹೊಂದಾಣಿಕೆಯಿಂದ ಇದ್ದರು.. ಟಾಸ್ಕ್ ಸಮಯದಲ್ಲಿ ಮಾತ್ರ ಆಗಾಗ ಕಿರಿಕ್ ಮಾಡಿಕೊಳ್ಳುತ್ತಿದ್ದರು.. ಆನಂತರ ಮತ್ತೆ ಎಲ್ಲರೊಟ್ಟಿಗೆ ಚೆನ್ನಾಗಿಯೇ ಇರುತ್ತಿದ್ದರು..

ಆದರೆ ಕಳೆದ ವಾರ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಬರಹಗಾರ ಚಕ್ರವರ್ತಿ ಚಂದ್ರಚೂಡ ಎಂಟ್ರಿ ಕೊಟ್ಟ ಬಳಿಕ ಮನೆಯ ವಾತಾವರಣವೇ ಬದಲಾಗಿ ಹೋಗಿದೆ.. ಹೌದು ಇತ್ತ ಪ್ರಶಾಂತ್ ಸಂಬರ್ಗಿಗೆ ಎತ್ತಿಕಟ್ಟಿ ಮನೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುತ್ತಿರುವುದು ಎದ್ದು ಕಾಣುತ್ತಿದೆ.. ಚಂದ್ರಚೂಡ ಮತ್ತು ಪ್ರಶಾಂತ್ ಸಂಬರ್ಗಿ ಇಬ್ಬರೂ ಸ್ನೇಹಿತರೇ ಆಗಿದ್ದರೂ ಸಹ ಬಿಗ್ ಬಾಸ್ ಮನೆಯೊಳಗೆ ಬಂದ ಮೊದಲ ಎರಡು ದಿನ ಪ್ರಶಾಂತ್ ಸಂಬರ್ಗಿ ಚಂದ್ರಚೂಡರನ್ನು ಕಂಡರೆ ಇಷ್ಟವಿಲ್ಲದವರಂತೆ ಇದ್ದರು.. ವಾರದ ಕತೆಯಲ್ಲಿ ಚಂದ್ರಚೂಡ ಅವರಿಗೆ ಮೈನಸ್ ಒಂದು ಅಂಕವನ್ನೂ ಸಹ ನೀಡಿದ್ದರು..

ಆದರೆ ಆನಂತರ ಇಬ್ಬರೂ ಸಹ ಹೊಂದಾಣಿಕೆಗೆ ಬಂದು ನಾವಿಬ್ಬರು ಈ ಮನೆಯಲ್ಲಿ ಹೆಚ್ಚು ದಿನ ಇರಬೇಕು ಎಂದು ನಿರ್ಧರಿಸಿ ಎಲ್ಲರ ಬಗ್ಗೆ ಮಾತು ಹಾಗೂ ಜಗಳಗಳನ್ನು ತಂದಿಡುವ ಕೆಲಸ ಶುರು ಮಾಡಿಕೊಂಡರು.. ಆದರೆ ಇದೀಗ ಆದ ಬದಲಾವಣೆಗಳೇ ಬೇರೆ.. ಹೌದು ನಿನ್ನೆ ಬಿಗ್ ಬಾಸ್ ಮನೆಯಲ್ಲಿ ನಡೆದ ಮಂಜು ಹಾಗೂ ಪ್ರಶಾಂತ್ ನಡುವಿನ ದೊಡ್ಡ ಜಗಳಕ್ಕೆ ಕಾರಣ ಬೇರೆಯೇ ಇದೆ.. ಹೌದು ಸ್ವಿಮ್ಮಿಂಗ್ ಪೂಲಿನಲ್ಲಿ ಹಾಡೇಳುತ್ತಿದ್ದ ಪ್ರಶಾಂತ್ ಹಾಗೂ ಚಂದ್ರಚೂಡ ಅವರನ್ನು ಸೌಂಡ್ ಕಡಿಮೆ ಮಾಡುವಂತೆ ದಿವ್ಯಾ ಸುರೇಶ್ ಹೇಳಿದ್ದರು.. ಅದಕ್ಕೆ ತಿರುಗಿಸಿ ಮಂಜು ಸೌಂಡ್ ಮಾಡಿದ್ರೆ ಚೆನ್ನಾಗಿರತ್ತಾ ಎಂದಿದ್ದಾರೆ..

ಆ ಬಳಿಕ ಮಾತಿಗೆ ಬಂದ ಮಂಜು.. ನನ್ನ ವಿಷಯ ತೆಗಿಬೇಡಿ ಎಂದಿದ್ದಾರೆ.. ನಿನಗಲ್ಲ ನಿನ್ನ ಡೌವ್ ಗೆ ಗೆ ಹೇಳಿದ್ದು ಎಂದು ಪ್ರಶಾಂತ್ ಹೇಳಿದ್ದು.. ಇತ್ತ ದಿವ್ಯಾ ಕೂಡ ನನ್ನ ಡವ್ ಅನ್ನೋಕೆ ನೀನ್ಯಾರು ಎಂದಿದ್ದಾರೆ.. ಇತ್ತ ಮಂಜು ಪ್ರಶಾಂತ್ ರನ್ನು ಮಾವ ಎಂದು ಕರೆದಕ್ಕಾಗಿ ಕುಟುಂಬದವರ ವಿಚಾರವನ್ನೆಲ್ಲಾ ಎಳೆದು ತಂದು ಜಗಳವಾಗಿದೆ.. ಆದರೆ ಇಷ್ಟು ವಾರ ಮಾವ ಎಂದು ಕರೆದಾಗ ಸುಮ್ಮನಿದ್ದ ಪ್ರಶಾಂತ್ ಸಂಬರ್ಗಿ ಇದೀಗ ಮಾವ ಎಂದ ಕೂಡಲೇ ಕೋಪಗೊಳ್ಳುವುದಕ್ಕೆ ಕಾರಣವೂ ಇದೆ.. ಹೌದು ಇದಕ್ಕೆಲ್ಲಾ ಕಾರಣ ಚಂದ್ರಚೂಡ.. ಚಂದ್ರ ಚೂಡ ಅವರು ಪ್ರಶಾಂತ್ ಸಂಬರ್ಗಿ ಅವರ ಬಳಿ ತೆರಳಿ ನಿನ್ನನ್ನು ಮಾವ ಅನ್ನೋದು ಹುಡುಗಿ ಸಪ್ಲೈ ಮಾಡ್ತಾನೆ ಅನ್ನೋ ಅರ್ಥ.. ಹೊರಗೂ ಕೂಡ ನಿನ್ನನ್ನು ಹಾಗೆ ಕರಿತಿದ್ದಾರೆ..

ಮಂಜುಗೆ ಹೋಗಿ ಹಾಗೆ ಕರಿಬೇಡ ಅಂತ ಹೇಳು ಎಂದು ಎತ್ತಿಕಟ್ಟಿದ್ದಾರೆ.. ಅಷ್ಟೇ ಅಲ್ಲದೇ ಹೊರಗೆ ನಡೆಯುತ್ತಿರುವ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆಗಿನ ಚರ್ಚೆಗಳ ಬಗ್ಗೆ ಪ್ರಶಾಂತ್ ಅವರಿಗೆ ಚಂದ್ರಚೂಡ ತಿಳಿಸಿದ್ದು ಮನೆಯ ನಿಯಮವನ್ನೂ ಸಹ ಉಲ್ಲಂಘನೆ ಮಾಡಿದಂತಾಗಿದೆ.. ವೈಲ್ಡ್ ಕಾರ್ಡ್ ಮೂಲಕ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಹೋಗುವ ಪ್ರತಿಯೊಬ್ಬರಿಗೂ ಮೊದಲೇ ಹೇಳಲಾಗಿರುತ್ತದೆ.. ಹೊರಗಿನ ವಿಚಾರಗಳನ್ನು ಮನೆಯೊಳಗೆ ಹೇಳುವಂತಿಲ್ಲ ಎಂದು.. ಆದರೆ ಚಂದ್ರಚೂಡ ಇದೇ ಕೆಲಸ ಮಾಡಿ ಮನೆಯವರ ನಡುವೆ ಜಗಖ ಹತ್ತಿಸಿದ್ದು ಅವರನ್ನು ಮನೆಯಿಂದ ಹೊರ ಹಾಕ್ತಾರಾ ಕಾದು ನೋಡಬೇಕಿದೆ‌‌..